ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ..
“ಮುಗುಳ್ನಗೆ ಮಲ್ಲಿಗೆ “


ಪ್ರೇಮ ದೇವತೆ ಎನುತ
ನಗುತಾ ನಗುತಾ ನೀ ಬಂದೆ
ಬಳಿ ನಿಂದೆ ಮೌನ ತಬ್ಬಿ
ಕನಸಿನಲಿ ಕಂಡ ಬಿಂಬ
ಕನವರಿಕೆ ಸದಾ ಕಂಗಳಲಿ
ನಿನ್ನೆದೆಯ ರಾಗದಲಿ ಅವಿತೆ.
ಇಂದೇಕೋ ಒಂದೇ ಹಠ
ಕನಸಿನ ಕನ್ನಿಕೆಯ ಕಾಣಲು
ಹೃದಯವಿದು ಹಬ್ಬಿದೆ ಅಂಬರ
ಬಂಗಾರಿ ಧರಿಸಿಹ ಮುಗುಳ್ನಗೆ
ಮಲ್ಲಿಗೆ ಅಧರದಿ ಆರದಿರಲಿ
ಅಂಬಾರಿ ಅರಸಿಯೇ ಅರಸುತಿಹೆ.
ಅಲಿಯುತ್ತಿದ್ದೆ.ಅನಾಮಿಕನಾಗಿ
ಹುಡುಕುವ ಬಳ್ಳಿ ಕಾಲ್ತೊಡಕಿ
ಒಲವ ಬಯಕೆ ನೀಗುತ..
ಮಲ್ಲಿಗೆ ಮಾಲೆಯ ಹೆರಳಲಿ
ಮುಡಿದು.ನಕ್ಕವಳೆ ಹೆಸರ್ಹೆಳೆ
ನಾಗವೇಣಿ ಎನಲೆ.ಕೋಮಲೆ
ಕಾಮನಬಿಲ್ಲು ಬಾನಿನಲಿ
ಮಾಯ ನಿನ್ನಂದ ನೋಡಿ
ಶಶಿ ತೆರಳಿದ ಮೋಡದ ಹಿಂದೆ..
ಮಾಟಗಾತಿ ಆಡಿಸಬೇಡವೇ
ಅಂಗಳದ ಚಪ್ಪರದಿ ಮೆಲ್ಲಗೆ
ಅರಳು ಮುಗುಳ್ನಗೆ ಮಲ್ಲಿಗೆ
ಜಯಶ್ರೀ.ಭ.ಭಂಡಾರಿ.

.



