ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಪ್ರೇಮ ದೇವತೆ ಎನುತ
ನಗುತಾ ನಗುತಾ ನೀ ಬಂದೆ
ಬಳಿ ನಿಂದೆ ಮೌನ ತಬ್ಬಿ

ಕನಸಿನಲಿ  ಕಂಡ ಬಿಂಬ
ಕನವರಿಕೆ ಸದಾ ಕಂಗಳಲಿ
ನಿನ್ನೆದೆಯ ರಾಗದಲಿ ಅವಿತೆ.

ಇಂದೇಕೋ ಒಂದೇ ಹಠ  
ಕನಸಿನ ಕನ್ನಿಕೆಯ ಕಾಣಲು 
ಹೃದಯವಿದು ಹಬ್ಬಿದೆ ಅಂಬರ

ಬಂಗಾರಿ ‌‌‌‌‌‌ ಧರಿಸಿಹ ಮುಗುಳ್ನಗೆ 
ಮಲ್ಲಿಗೆ ಅಧರದಿ ಆರದಿರಲಿ 
ಅಂಬಾರಿ ಅರಸಿಯೇ ಅರಸುತಿಹೆ.

ಅಲಿಯುತ್ತಿದ್ದೆ.ಅನಾಮಿಕನಾಗಿ
ಹುಡುಕುವ ಬಳ್ಳಿ ಕಾಲ್ತೊಡಕಿ
ಒಲವ ಬಯಕೆ ನೀಗುತ..

ಮಲ್ಲಿಗೆ ಮಾಲೆಯ ಹೆರಳಲಿ
ಮುಡಿದು.ನಕ್ಕವಳೆ ಹೆಸರ್ಹೆಳೆ
ನಾಗವೇಣಿ ಎನಲೆ.ಕೋಮಲೆ

ಕಾಮನಬಿಲ್ಲು ಬಾನಿನಲಿ
ಮಾಯ ನಿನ್ನಂದ‌ ನೋಡಿ
ಶಶಿ ತೆರಳಿದ ಮೋಡದ ಹಿಂದೆ..

ಮಾಟಗಾತಿ ಆಡಿಸಬೇಡವೇ
   ‌        ಅಂಗಳದ ಚಪ್ಪರದಿ ಮೆಲ್ಲಗೆ 
           ‌ಅರಳು ಮುಗುಳ್ನಗೆ ಮಲ್ಲಿಗೆ  


About The Author

Leave a Reply

You cannot copy content of this page

Scroll to Top