ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಸ್ವಲ್ಪ ಮಾತು, ಸ್ವಲ್ಪ ಮೌನ ಎಷ್ಟು ಚಂದ ನಿನ್ನ ಪ್ರೀತಿ
ತುಸು ಸರಸ, ತುಸು ವಿರಸ ಎಷ್ಟು ಅಂದ ನಿನ್ನ ಪ್ರೀತಿ
ಅಪೂರ್ಣವಿದ್ದರೂ ಅಮೋಘ ಚಂದ್ರನಂತೆ ಪ್ರೇಮ
ಕ್ಷಣ ನಕ್ಕು , ಕ್ಷಣ ಅಳುವ ಮುದ್ದಾದ ಕಂದ ನಿನ್ನ ಪ್ರೀತಿ
ಮಳೆಬಿಲ್ಲಿನ ಮೂಲಕವೇ ಭುವಿ ಬಾನುಗಳ ಮಾತು
ಮೋಡ ಸರಿಸಿ ಸುರಿದ ಮಳೆಯ ಗಂಧ ನಿನ್ನ ಪ್ರೀತಿ
ಬಳಲುತ ಬೇಸರಿಸುತಿದ್ದವು ನನ್ನ ಹಗಲು ರಾತ್ರಿಗಳು
ಹೊಳೆಯುತ ಹೊಸ ಹುರುಪು ತಂದ ನಿನ್ನ ಪ್ರೀತಿ
ಎಲ್ಲರ ಅಂಗಳದಿ ಅರಳದ ಹೂವಿದು ವಾಣಿ
ನನ್ನ ಬಾಳು ಘಮಿಸಲು ಬಂದ ನಿನ್ನ ಪ್ರೀತಿ
ವಾಣಿ ಯಡಹಳ್ಳಿಮಠ




ಸುಂದರ ಕವನ
ಧನ್ಯವಾದಗಳು