ಕನ್ನಡ ಸಂಗಾತಿ
ಗಾಯತ್ರಿ ಸುಂಕದ
ಸರಕಾರಿ ಕನ್ನಡ ಶಾಲೆ ಬಲ ಪಡಿಸುವುದು ಹೇಗೆ?


ನವೆಂಬರ್ ಬಂತೆಂದರೆ ಎಲ್ಲಡೆ ಕನ್ನಡ ರಾಜ್ಯೋತ್ಸವದ ಭರಾಟೆ ಜೋರಾಗಿರುತ್ತದೆ. ಎಲ್ಲಡೆ ಕನ್ನಡ. ಗೀತೆಗಳ ಗಾಯನ.ಎಷ್ಟೋ ಸಂಘಟನೆಗಳ ಕಾರುಬಾರು ಜೋರಾಗಿರುತ್ತದೆ.ಆದರೆ ಬಹುತೇಕ ಮಂದಿ ರಾಜ್ಯೋತ್ಸವ ಎಂದರೆ ಅದು ಕೇವಲ ಸರಕಾರಿ6 ಕಾರ್ಯಕ್ರಮವಾಗಿ ಪರಿಗಣಿಸಲ್ಪಡುತ್ತದೆ.
ಆದರೆ. ಕನ್ನಡ ಭಾಷೆ ಕಲಿಯುವ ಸರಕಾರಿ ಶಾಲೆಗಳ ಬಗ್ಗೆ ನಾವು ಗಮನ ಹರಿಸುವುದೇ ಇಲ್ಲ.
ನಮ್ಮಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಪರಿಗಣಿಸಲಾಗುತ್ತದೆ. ಅಂದರೆ ಇಂಗ್ಲಿಷ್ ನಂತರದ ಸ್ಥಾನಮಾನವನ್ನು ಕನ್ನಡಕ್ಕೆ ನೀಡಲಾಗುತ್ತದೆ.
ಆದರೆ ಸರಕಾರಿ ಶಾಲೆಗಳು ಕನ್ನಡ ಮಾಧ್ಯಮ ಹೊಂದಿದ್ದರೂ ಸ್ವಲ್ಪ ಅಸಡ್ಡೆಗೆ ಒಳಗಾಗಿವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳು ಮೇಕಪ್ ಮಾಡಿಕೊಂಡ ಯುವತಿಯಂತೆ ಕಂಗೊಳಿಸಿದರೆ, ಕನ್ನಡ ಮಾಧ್ಯಮ ಶಾಲೆಗಳು ಬಿಚ್ಚೋಲ್ಲೆ. ಗೌರಮ್ಮನಂತೆ ಕಾಣಿಸುತ್ತವೆ.
ಸರಕಾರಿ ಶಾಲೆಗಳು ಕನ್ನಡ ಭಾಷೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲೂ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಎಷ್ಟೋ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಿಇಟಿ ಪಾಸಾದ ಪ್ರತಿಭಾವಂತ ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಣ್ಗಾವಲು, ಸ್ಮಾರ್ಟ್ ಕ್ಲಾಸ್, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವಿಕೆ, ಕೆಲವೊಂದು. ದಾನಿಗಳ ಉತ್ತೇಜನ ಇದಕ್ಕೆಲ್ಲಾ ಕಾರಣ ಎನ್ನಬಹುದು.
ಆದರೂ, ಮಿತಿ ಮೀರಿದ ಕಾರ್ಯ ಬಾಹುಳ್ಯದಿಂದ ಸರ್ಕಾರಿ ಶಾಲೆಗಳಲ್ಲಿ. ಕಲಿಕೆಯನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳನ್ನು. ಕೇಳಿ ಬಂದಿದೆ.
ಕೆಲವೊಂದು ಕ್ರಮಗಳನ್ನು ಅಳವಡಿಸಿ ಕೊಂಡರೆ, ನಮ್ಮ ಸರ್ಕಾರಿ ಶಾಲೆಗಳು ಹೆಮ್ಮೆಯ ಶಾಲೆಗಳಲ್ಲಿ ಮಾರ್ಪಾಡಾಗುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಕಲಿಸುವುದನ್ನು ಬಿಟ್ಟು ಬೇರೆ ಕಡೆಗೆ. ಗಮನ ಹರಿಸು ವಂತಿಲ್ಲ ಎಂಬ ನಿಯಮವನ್ನು ಅಳವಡಿಸುವುದು.
ಸರ್ಕಾರಿ ಶಾಲೆಗಳಲ್ಲಿ ಆನ್ಲೈನ್ ಕೆಲಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು.
ಚಿತ್ರಕಲೆ, ಸಂಗೀತ, ಕಲೆಗೆ ಸಂಬಂಧಿಸಿದಂತೆ ಶಿಕ್ಷಕರ ನೇಮಕ ಕಡ್ಡಾಯ ಮಾಡುವುದು.
ಬಹುತೇಕ ಸರ್ಕಾರಿ ಶಾಲೆಗಳು ಹಳ್ಳಿಯಲ್ಲಿ, ಇರುವುದರಿಂದ ಉತ್ತಮ ಸಾರಿಗೆ ವ್ಯವಸ್ಥೆ ಮಾಡುವುದು.
ಹೊಸದಾಗಿ ನೇಮಕ ಗೊಂಡ. ಶಿಕ್ಷಕರು ಕನಿಷ್ಠ ಮೂರು ವರ್ಷ ಹಳ್ಳಿಯಲ್ಲಿ ಮಾಡಬೇಕೆಂಬ ನಿಯಮ ರೂಪಿಸುವುದು.
ಶಿಕ್ಷಕರನ್ನು ಜನಗಣತಿ, ಬಿಸಿಯೂಟ,, ಚುನಾವಣೆ ಮುಂತಾದ ಕಾರ್ಯಗಳಿಂದ ಬಿಡುಗಡೆ ಗೊಳಿಸುವುದು,.
SDMC ರಾಜಕೀಯದಿಂದ ಶಿಕ್ಷಕರನ್ನು ಬಿಡಿಸಿ ಕೇವಲ ಅಧ್ಯಯನಕ್ಕೆ ಉತ್ತೇಜಿಸುವುದು.
ಶಿಕ್ಷಕರು ಉನ್ನತ ಅಧ್ಯಯನ, ಪಿಚ್.ಡಿ ಮಾಡುವವರಿಗೆ ಉತ್ತೇಜಿಸುವುದು.
ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಲ್ಯಾಬ್ ಗಳನ್ನು ವ್ಯವಸ್ಥೆ ಗೊಳಿಸುವುದು.
ನನಗೆ ಅನಿಸುವ ಮಟ್ಟಿಗೆ ಇದರಿಂದ ಸರ್ಕಾರಿ ಶಾಲೆಗಳು ಯಾರಿಗೂ ಏನು ಕಡಿಮೆ ಇಲ್ಲ ಎಂದು ಆಗ ಬಹುದಲ್ಲವೇ?.
ಏನಂತೀರಾ?
ಗಾಯತ್ರಿ ಸುಂಕದ



