ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅವಳಿಗೂ ಹೃ’ದಯ’ವಿದೆ
ಅದರೊಳಗೆ ಆರದಷ್ಟು ಗಾಯಗಳಿವೆ
ವಿಧಿಯಾಟದಿಂದ ಅಷ್ಟು
ಅತಿಬುದ್ಧಿ ಅವಿವೇಕದಿಂದಷ್ಟು
ಆಪ್ತರಿಂದ ಒಂದಷ್ಟು
ಆಗದವರಿಂದ ಒಂದಿಷ್ಟು

ಒಟ್ಟಾರೆ ಸುತ್ತ ಸೋಲಿಸುವ ಕೆಲಸ
ಕಾಠಿಣ್ಯಕ್ಕುಂಟೆ ಪ್ರೀತಿಯ ದಾಕ್ಷಿಣ್ಯ
ಸುರಿದ ನೆತ್ತರ ಭೋರ್ಗರೆವಧಾರೆ
ಉಕ್ಕುಕ್ಕುವ ಅಳುವಿಗೋ ತೆರೆಮರೆ
ಪಯಣಿಸಿಹುದು ಇರುಳು ಹಗಲು
ಬದುಕಲಿ ಪೈಪೋಟಿಯ ಮೇಲೆ

ಸಿಪ್ಪೆಯಂತಿದೆ ಜೀವವೇ ಹೋಗಿ
ಇರುವಳು ಕಾರುಣ್ಯದ ಕಡಲೊಳು ಮುಳುಗಿ
ಜಗವ ಉದ್ಧರಿಸುವ ಜೋಗಿ
ನಗುತಿದೆ ಮನ ಒಳಗೆ ಮರುಗಿ
“ನೀನೇನು ದೇವರಲ್ಲ” ಗದರುತ್ತದೆ
ಮರುಕ್ಷಣವೇ ಮರುಗುತ್ತದೆ

ಎಲ್ಲ ಗಾಯಗಳೂ ಒಟ್ಟಾಗಿವೆ
ಭಯವಿರದ ಹೃ’ದಯ’ವ ಅಲುಗಿಸಿವೆ
ಭರವಸೆಯ ಗಾಸಿಗೊಳಿಸ ತೊಡಗಿವೆ  
ಚಿಂತಿಸಿ ಚಿತ್ರಿಸಿ ಹಿಂಸಿಸಿದರೂ ಕೊನೆಗೆ
ತನ್ನನ್ನು ತಾನೇ ಸಂತೈಸಿ ಸಹಕರಿಸಿ
ಹೃದಯದ ಗಾಯ‌ ನಗುನಗುತಿದೆ


About The Author

3 thoughts on “ರೋಹಿಣಿ ಜೆ. ಅವರ ಕವಿತೆ “ನಗುವ ಗಾಯ””

Leave a Reply

You cannot copy content of this page

Scroll to Top