ಕಾವ್ಯಸಂಗಾತಿ
ಜ್ಯೋತಿ ಮಾಳಿ ಬೆಳಗಾವಿ
ಗಜಲ್


ಒಂದು ಹಣತೆ ಮನದಿ ಉರಿಸಿ ಇಟ್ಟು ಹೋಗುತ್ತಾಳೆ
ಮತ್ತೆ ಹೊರಳಿ ನೋಡಿ ಕಣ್ಣ ನೆಟ್ಟು ಹೋಗುತ್ತಾಳೆ
ಅವಳಂತಹ ಸುಂದರಿ ಮತ್ತಾರನೂ ನಾ ಕಾಣಲಾರೆನು
ಹುಟ್ಟಿಸಿದ ಆಸೆಗಳ ಆಭರಣ ತೊಟ್ಟು ಹೋಗುತ್ತಾಳೆ
ಹೋಗುವುದಾದರೆ ಹೋಗಬೇಕಿತ್ತು ಮತ್ತೆ ಬಾರದಂತೆ
ಮರಳಿ ಬಂದು ಸುರಿವ ಕಣ್ಣೀರನು ಸುಟ್ಟು ಹೋಗುತ್ತಾಳೆ
ಅವಳಿಗೆ ನೋಯಿಸುವುದೆ ಪರಮ ಗುರಿಯಾಗಿದೆ ಜ್ಯೋತಿ
ಹಸಿ ಫಲಗಳನು ಕಿತ್ತು ಕೈಯೊಳಗೆ ಕೊಟ್ಟು ಹೋಗುತ್ತಾಳೆ
ಬದುಕಲಾರೆ ಸಾಯಲಾದರೆ ತೊಳಲಾಡುತಿರುವೆನು
ಸಂಸ್ಕರಿಸಲಾಗದ ನೆನಪಿಗೆ ತರ್ಪಣ ಬಿಟ್ಟು ಹೋಗುತ್ತಾಳೆ
ಜ್ಯೋತಿ ಮಾಳಿ ಬೆಳಗಾವಿ



