ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


            1
ಇದ್ದಾಗ ಮೆರಿಬ್ಯಾಡ
ಬಿದ್ದಾಗ ಅಳಬ್ಯಾಡ
ಸದ್ದು ಗದ್ದಲದೊಳಗ
ಇರಬ್ಯಾಡ ಮರುಳೆ
ಬುದ್ಧ ಬಸವರ ನೆನೆ ನೀನು
ಗೆದ್ದಲಕೆ ಮುದ್ದಿಯಾಗ ಬ್ಯಾಡ
ಎದ್ದು ಹೋಗಾಗ
ಶರಣರ ಸಂಗದಲ್ಲಿರು ಎಂದ
ಬಸವ ಪ್ರಿಯ ಶಶಿಕಾಂತ

               2
ಹಾಸಿ ದುಡಿಯಲು ಬೇಕು
ಹಂಚಿ ತಿನ್ನಲು ಬೇಕು
ಬಡವ ಬಲ್ಲಿದರಿಗೆ ನೀನು
ಬೆಲ್ಲವಾಗಲು ಬೇಕು
ಇದ್ದಾಗ ಕರೆದು ದಾಸೋಹ ಮಾಡಿ
ಅಪ್ಪ ಬಸವನ ನಿತ್ಯ
ನೆನೆಯ ಬೇಕೆಂದ ನಮ್ಮ
ಬಸವ ಪ್ರಿಯ ಶಶಿಕಾಂತ

              3
ಬಸವ ಬಸವಾ ಎಂದೆನ್ನುತ್ತಾ
ದೊಡ್ಡವರಾದರಯ್ಯ ಸ್ವಾಮಿಗಳು
ಬಸವ ಬಸವಾ ಎಂದೆನ್ನುತ್ತಾ
ಅಧಿಕಾರ ಹಿಡಿದು ಕೊಂಡರಯ್ಯ
 ರಾಜಕಾರಣಿಗಳು
ಬಸವ ಬಸವಾ ಎಂದೆನ್ನುತ್ತಾ
ಪ್ರಶಸ್ತಿ ಪಡೆದರಯ್ಯಾ ಸಾಹಿತಿ
 ಸಂಶೋಧಕರು.
ಬಸವ ಬಸವಾ ಎಂದೆನ್ನುತ್ತಾ
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ
ಎಂದು ಘೋಷಿಸಿದರಯ್ಯ ಮಂತ್ರಿಗಳು
ಬಸವನ ನಾಡಿನಲ್ಲಿ ಬಸವ ಧರ್ಮಕ್ಕೆ
 ಅಸ್ಮಿತೆ ಇಲ್ಲದಿರುವುದು ಕಂಡು
ಮಮ್ಮಲ ಮರುಗಿದೇನಯ್ಯಾ
 ಬಸವ ಪ್ರಿಯ ಶಶಿಕಾಂತ


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ “ಸ್ವರಚಿತ ವಚನಗಳು””

  1. ಬಸವ ತತ್ವದ ಬಗೆಗೆ ಅಪಾರವಾದ ಕಾಳಜಿ ಕಳಕಳಿ ಇರುವ ವಚನಗಳು ಮತ್ತು ಎಲ್ಲರನ್ನೂ ಎಚ್ಚರಿಸುವ ನುಡಿಗಳು ಸರ್

    ಸುತೇಜ

Leave a Reply

You cannot copy content of this page

Scroll to Top