ಕಾವ್ಯ ಸಂಗಾತಿ
ಸವಿತಾ ದೇಶಮುಖ
“ಬಿಚ್ಚಿಕೊಳ್ಳುತ್ತಿದೆ ಕನಸು”


ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸು
ಕೊಚ್ಚಿ ಹರಿದು ಹೋದ ಹಾಸು
ಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!!
ಕನಸು ನನಸಾಗುವ ಕನವರಿಕೆ
ಕಳೆದು ಹೋದವೆಷ್ಟೋ ಮನದ ಅರಿಕೆ
ಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!!
ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂ
ಅದೆಂದೊ ಕಾಲ ಗರ್ಭದಿ ಅವಿತವು
ಮರೆಯಾದವೆಂದು ವಿಷಾದದಿ ಕುಳಿತಿರೆ..!!೩!!
ಅದು ಎಲ್ಲಿಯೋ ಎನಿತೋ ಹೊಳೆದ
ಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದ
ಥಳುಕು..ಕರೇಯುತಿರೆ ಅಕ್ಕರದಿ….!!೪!!
ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆ
ತರುತ್ತೀವಿ ಸಕಾರತೆ ಋಣ ಹೊತ್ತು
ಹರಡಿವೆ ಉಡಿ ತುಂಬ ನುಡಿ ಮುತ್ತು!!೫!!
ಎದೆ ತುಂಬಿ ಬಂದ ನುಡಿ ಬೆಳಕು,
ಪ್ರಕಾಶಮಾನ ಹೊಂಬೆಳಕಿನ ತುಳುಕು
ನುಡಿ ಅಮ್ಮನ ಶಬ್ದಗಳ ಚಳಕು…!!೬!!
ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನ
ಗಂಟಿನ ನಂಟು ನೋಡಿ ನಿಬ್ಬೆರಗಾಗಿ
ಹರುಷದಿ ಮತ್ತೆ ನಲಿದಾಡುತ!!೭!!
ಕಂಡ ಕಿರು ಗನಸು ಹೆಮ್ಮರವಾಗಿ
ಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿ
ಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!!
ಪಡೆದ ಸನ್ಮಾನದ ಸುಮ್ಮಾನವಾಗಲು..
ಸವಿತಾ ದೇಶಮುಖ




‘ಬಿಚ್ಚಿ ಕೊಳ್ಳುತ್ತಿದೆ ಕನಸು’ ಕನ್ನಡಾಂಬೆ ಕೂಗಿದ ಥಳಕು ಕರೆಯುತ್ತಿದೆ ಅಕ್ಕರದಿ….. ಅದ್ಭುತ ಕವನ ಹೊರ ಹೊಮ್ಮಿದೆ. ಮೇಡಂ.sooooper…
Thanku soooooo much