ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಹಾಯ್ಕುಗಳು


ಅನುದಿನವು
ನವ ನವೀನ ಕಂದ
ನಲಿಯುವಾಗ
ಆಟ ಚಂದವು,
ತೋದಲ್ನುಡಿ ಸಂಗೀತ
ಮಗು ಆಡಲು
ಇರುವಂತಿಗೆ
ಅರಳಿದಾಗ, ಮನ
ಮನೆ ಸೌರಭ.
ಈಶ ಗೌರೀಶ
ರಕ್ಷಿಸು ಭಗವಂತ
ಬಿಸಿಲ ಬೇಗೆ
ಉತ್ತರ ಇದೆ
ಪ್ರತಿ ಗೂಢ ಪ್ರಶ್ನೆಗೆ
ಅರಿಸು ನೋಡು
ಊಸರವಳ್ಳಿ
ಬಣ್ಣವು ಕೆಲವರ
ನಡೆ ನುಡಿಲಿ
ಎದೆಯಾಳದಿ
ದಾವನಲ, ನಯನ
ನಗುತಿರಲು,
ಏಕೆ ಮನಸ್ಸೆ?
ನಿನ್ನದಲ್ಲದ ಸಿರಿಯು
ಎಂದೂ ಸಿಗದು
ಐಶ್ವರ್ಯ ಅಂಧ
ಕಾಣನು ಯಾವದನ್ನೂ
ದೇವರೇ ಗತಿ
ಒಲವೇ ಸಿರಿ
ಅರಿತ ಮನಗಳು
ಜೊತೆ ಸಾಗಲು
ಓರೆ ನೋಟಕೆ
ಸೋತು ಶರಣು, ನವ್ಯ
ಪ್ರೇಮ ಕವನ
ಔಷಧ ನೋಡು
ನಿನ್ನ ನಗು ಕಂಡಾಗ
ನೋವು ಶಮನ
ಭಾರತಿ ರವೀಂದ್ರ



