ಗಜಲ್‌

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ‌ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ […]

ವಾರದ ಕವಿತೆ

ಹೊಸ್ತಿನ ಹಗಲು ಫಾಲ್ಗುಣ ಗೌಡ ಅಚವೆ ಬಯಲು ಗದ್ದೆಯ ಹೊಸ ಭತ್ತದ ಕದರುರೈತರ ಬೆವರ ಬಸಿಯುವ ಕಯಿಲುಕಂಬಳಕಿಂಪಿನ ಪಾಂಗಿನ ಅಮಲುಹೊಡತಲೆ ಹಗಣದ ಕವಳದ ಸಾಲುಆಚರಿಸುತಿದೆ ಹೊಸ್ತಿನ ಹಗಲು. ನೇಗಿಲ ಮೊನೆಯಲಿ ಸಸಿಬುಡ ಬೇರುಕದರಿನ ನಡುವಲಿ ಗಂಧದ ಹೂವುಮಣ್ಣಲಿ ಹುದುಗಿದ ಎರೆಹುಳ ಪಾಡುಹರಡಿದ ಗಿಣಿಗಳ ಹಾಡಿನ ಜಾಡುಆಚರಿಸುತಿದೆ ಹೊಸ್ತಿನ ಹಗಲು. ಮಣ್ಣಿನ ಬಣ್ಣದ ಮನಸಿನ ತೆವಲುಕೆಂದರಕಿ ಹೂವಿನ ಕಮಾನು ಹೊಸಿಲುಹೂಡುವ ಎತ್ತಿನ ಅಡಸಲ ಕವಲುಹೂನೀರಾಡಿದ ಹೊಸ ಭತ್ತದ ತೆನೆಗಳುಆಚರಿಸುತಿದೆ ಹೊಸ್ತಿನ ಹಗಲು. ಒಳಗಿನ ಅಕ್ಕಿಯ ಮಡಕೆಯ ಕೊರಳುಅಂಗಳದಲ್ಲಿನ ಒನಕೆಯ […]

ಕೊನೆ ಆಗುವ ಮೊದಲು

ಕವಿತೆ ಕೊನೆ ಆಗುವ ಮೊದಲು ಅಕ್ಷತಾ‌ ಜಗದೀಶ ಬಿಸಿಲು‌‌ ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು‌ ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು‌ ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ‌ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ‌ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು‌ ಬರೆದೆ ಈ ಕವಿತೆಕಳಿಸಿ‌ಕೊಡುವೆ ದೇವ ಈ ಬರಹ‌ ನಿನಗೆಹೊಸ‌ ಚಿಲುಮೆ ‌ಉಕ್ಕಲಿ‌ಬಾಳಿಗೆ‌ ಪೂರ್ಣವಿರಾಮ ಇಡುವ […]

ನಾನು ದೀಪ ಹಚ್ಚುತ್ತೇನೆ

ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆ‌ಅತ್ಯಾಚಾರ ನಿಲ್ಲಲೆಂದು‌ ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ […]

ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ […]

ಯಾತ್ರೆ

ಕವಿತೆ ಯಾತ್ರೆ ರಾಜೇಶ್ವರಿ ಚನ್ನಂಗೋಡು ಮುಗಿವಾಗ ನೀನುನನ್ನೆದೆ ಧುತ್ತಂದುನಿಂದುಮುನ್ನಡೆದಿದೆ.ಎದೆಗಿನ್ನೇನು ದಾರಿ?ಇನ್ನೆಷ್ಟು ಮಂದಿ ನನ್ನವರುನನ್ನ ನಾನಾಗಿಸಿದವರುಹೋದಾಗಲೂ ಹೀಗೇ ಮುನ್ನಡೆಯುತಿರುವುದು…ಅರ್ಥಹೀನವೀ ಯಾತ್ರೆಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆಅಂದವ ಹುಡುಕಿ ಚಂದವ ಹುಡುಕಿನಡೆದಷ್ಟೂ ಹಿಂದಿನಂದುಗಳೇನೀನಿದ್ದಾಗಿನ ಅವರಿದ್ದಾಗಿನಂದುಗಳೇಸೊಗಸೆಂದರಿತೂಮುಂದಡಿಯಿಡುವ ಯಾತ್ರೆನಾಳೆ ಇವನೂ ಅವಳೂ ಇಲ್ಲದಕಂದರಗಳಿಹವೆಂದರಿತೂನಿಲ್ಲಿಸಲಾಗದ ಯಾತ್ರೆಬೆಳಕಿತ್ತ ನೀನಾರಿದಾಗಇನ್ನಾರೂ ಆರುವ ಮುನ್ನನಾನಾರಿದರೇ ಚೆನ್ನವೆಂದನಿಸುವ ಯಾತ್ರೆಹೇಗೆ ಕಲ್ಪಿಸಿಕೊಳಬೇಕು?ಯಾಕೆ ನಡೆಯಲೆ ಬೇಕೀ ಯಾತ್ರೆ?

ವಸುಂಧರಾ

ವಸುಂಧರಾ ಕಾದಂಬರಿ ಕುರಿತು ಬಾಳೆಯ ಹಣ್ಣನ್ನು ತಿಂದವರೆಸೆವರು, ಸಿಪ್ಪೆಯ ಬೀದಿಯ ಕೊನೆಗೆ ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ. ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ […]

“ಬೆಳಕಾಗಲಿ ಬದುಕು”

ಕವಿತೆ ಬೆಳಕಾಗಲಿ ಬದುಕು ಪ್ರೊ.  ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ  ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ  ಕತ್ತಿಯಂಚಿನಲಿ ಕತ್ತರಿಸಿಕೊಂಡು  ಹೆಣವಾಗಿರುವ ಜೀವಕೋಶಗಳ ಮೇಲೆ  ಸಾವೊಂದು ಬದುಕಾಗಿದೆ ನನಗೆ ಬದುಕೊಂದು ಸಾವಾಗಿದೆ ಕೊನೆಗೆ ಪಯಣವಿನ್ನು ಯಾರದೋ ಮನೆಗೆ ನೇತುಹಾಕಿರುವ ಅಂಗಡಿಯೊಳಗೆ  ಒಡಲುಗೊಂಡದ್ದೆಲ್ಲವೂ ಬಿಕರಿಗೆ ಕಾಲು ಕೈ ಕಣ್ಣು ತೊಡೆಗಳೆಲ್ಲ ಮಾಗಿದ ಹಣ್ಣುಗಳ ಬನದ ಬೆಲ್ಲ ತನುವ ತುಂಬಿಕೊಳ್ಳಿ […]

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು […]

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ […]

Back To Top