ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು ಮೂಲ ರಚನೆ – ವೈದೇಹಿ ಗಣೇಶ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ವೃತ್ತಿ -ಪ್ರವೃತ್ತಿಜೀವನದ ಬಂಡಿಗೆಚಕ್ರಗಳಂತೆವೃತ್ತಿಗೊ ನಿವೃತ್ತತೆಪ್ರವೃತ್ತಿ ಸಾರ್ಥಕತೆ Profession – dispositionTwo wheels of chariotCalled the lifeRetirement ceases oneAccomplishment graces the other. ಬೇವು ಬಾಗಿತುಸಂಪಿಗೆಯಾಸರೆಗೆ,ಪ್ರಕೃತಿ ಸಾರಿಹೇಳಿತು, ಒಲವಿಗೆಗುಣ ಗಣತಿ ಬೇಕೇ? Bitter neem lentRecourse to fragrant magnoliaThe nature proclaimsFor the endearmentNot to census the virtues ಕರ್ಮದ ಆಟಕಾಲ ಕಲಿಸೋ ಪಾಠಸುಕರ್ಮಗಳಅರಿತು ನಡೆದರೆಗೆದ್ದೆ ಜೀವನದಾಟ […]

ಬುದ್ಧ ಬುರಡಿ

ಬುದ್ಧ ಬುರಡಿ ಎ.ಎಸ್. ಮಕಾನದಾರ ನನ್ನ ಮೊಹಲ್ಲಾದಮನೆ ಮನಗಳಲ್ಲೂಬುದ್ಧ ಬೆಳಕಿನ ಬುರಡಿ ಅಂಗಾತ ಬಿದ್ದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂಅಲ್ಲಾಹನಿಗೆ ಸ್ಮರಿಸಲೂಉದ್ದಾಣಿನ ಬೆOಕಿ ನಂದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂವಚನ ಸಾರಕೆ ಗೆದ್ದಿಲು ಹಿಡಿದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲಿಬೇವರಘಾಟು ನಾಶವಾಗಿಅತ್ತರಿನ ಘಮಲು ಸುತ್ತಲೂ ಹರಡಿದೆ ನನ್ನ ಮೊಹಲ್ಲಾದಲ್ಲಿತುoಬಿರುವ ನೆತ್ತರಗೇರಿಹೂಳೆತ್ತಲು ಪಂಚವಾರ್ಷಿಕ ಯೋಜನೆ ರೂಪುಗೊOಡಿದೆ *********

ಒಲವಿನೋಲೆ

ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು […]

ಇಕೊ ಕ್ಲಬ್ ಗಳ ಅನುಷ್ಠಾನ

ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ […]

ಕಾವ್ಯಯಾನ

ಸೋಂಕು ವೀಣಾ ರಮೇಶ್ ನಾ ನಡೆದ ಹೂಗಳಹಾದಿಯಲಿ ಯಾಕೋಚುಚ್ಚುತ್ತಿದೆನೋವಿನ ಮುಳ್ಳುಗಳುನನಗೊಂದು ಶಂಕೆಕಾಡಿದೆ ಹಪಹಪಿಸುವ ಪ್ರೀತಿಗೆನನ್ನದೇ ದೃಷ್ಟಿಯ ಸೋಂಕುತಗಲಿರಬಹುದುನನ್ನ ಭಾವನೆಗಳು ಸುರಿಸುವ ನಿಟ್ಟುಸಿರಿಗೆನೆಮ್ಮದಿಯಮುಖ ಗವಸುಬೇಕಿರಬಹುದು ಹೃದಯಕ್ಕೂ ಮನಸಿನಯೋಚನೆಗಳಿಗೂಅಂತರ ಕಾಯುವುದುಬೇಕಿದೆ. ಈಗಒಂದಷ್ಟು ದಿನಗಳುಮೌನದೊಳಗೆ ಕಾಮನೆಗಳ ಬಂಧಿಸಿಎದೆಯ ಗೂಡೊಳಗೆಕಾವಲಿರಿಸಿ ಒಂದಷ್ಟು ಕಾಲಮನಸ್ಸು ಕ್ವಾರಂಟೈನ್ಆದರೆ ಸಾಕಿತ್ತುಆಗಲಾದ್ರೂ ಕಾಡುವವೈರಸ್ಗಳುಕಡಿಮೆಯಾಗಿಸೋಂಕು ಬಾರದೆ ಇರಬಹುದು ************

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನ್ನೂ. ಕವಿತೆಯ ಪ್ರತಿಸಾಲನ್ನೂನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲು ಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನುಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆಎಲ್ಲಿ ಹೋದೆಯಾರಿರುವರು ಜೊತೆಗೆಕೇಳಬಾರದಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರ ಬಯಲು ಸೀಮೆಯ ಕುರುಚಲು ಬಯಲುಗಳಲ್ಲಿಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! […]

ಘಾಚರ್ ಘೋಚರ್

ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು‌. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. […]

ಕಾವ್ಯಯಾನ

ನಮ್ಮೂರ ಮಣ್ಣಿನಲಿ ವಿನುತಾ ಹಂಚಿನಮನಿ ನಮ್ಮೂರ ಬೀಸು ಗಾಳಿಯಲಿಮಾಸದ ಸಂಸ್ಕೃತಿಯ ಸುಗಂಧನನ್ನ ಉಸಿರ ಪರಿಮಳದಲಿಇಂದಿಗೂ ಸೂಸತಾವ ಘಮಘಮ ನಮ್ಮೂರ ಕಾಡ ಹಾದಿಯಲಿನಾ ಮೂಡಿಸಿದ ಹೆಜ್ಜೆ ಗುರುತುನಡೆದ ದಾರಿಯ ತೋರಿಸುತಲಿಇಂದಿಗೂ ಬೆನ್ಹತ್ತತಾವ ಎಡಬಲ ನಮ್ಮೂರ ಕೆರೆಯ ನೀರಿನಲಿನಾ ಒಗೆದ ಕಲ್ಲು ಹರಳುಅಲೆಗಳ ಮಾಲೆ ಹೆಣೆಯುತಲಿಇಂದಿಗೂ ನಗತಾವ ಕಿಲಕಿಲ ನಮ್ಮೂರ ನಿಷ್ಠ ಮಣ್ಣಿನಲಿಕಷ್ಟ ಎದುರಿಸುವ ಕೆಚ್ಚುಕನಸಿಗೆ ಎಣ್ಣಿ ಹೊಯ್ಯತಲಿಇಂದಿಗೂ ಮಿನಗತಾವ ಮಿಣಮಿಣ ********** ನಮ್ಮೂರ ಚಿಕ್ಕ ಆಗಸದಲಿಅಕ್ಕರೆಯ ಚೊಕ್ಕ ಚುಕ್ಕೆಗಳುಸಕ್ಕರೆಯ ಕಥೆ ಹೇಳುತಲಿಇಂದಿಗೂ ನೀತಿ ಹೇಳತಾವ ಚಕಚಕ ನಮ್ಮೂರ ಜನರ […]

ದಿಕ್ಸೂಚಿ

ವಿಶಾಲ ಗೋಲದೊಳಗೆ ಎಂದೆಂದಿಗೂ ಅನಿಶ್ಚತತೆ ಜಯಶ್ರೀ ಜೆ.ಅಬ್ಬಿಗೇರಿ . ಅನಿಶ್ಚಿತತೆ ಎಂದ ಕೂಡಲೇ ನನಗೆ ನೆನಪಿಗೆ ಬರೋದು ತತ್ವಜ್ಞಾನಿಯೊಬ್ಬನ ಜೀವನದ ನೈಜ ಘಟನೆ.ಆತ ಪ್ರಸಿದ್ಧ ಪಾಶ್ಚಿಮಾತ್ಯ ತತ್ವಜ್ಞಾನಿ ನರ‍್ಮನ್ ಕಸಿನ್ಸ್.ಆತನ ದಿ ಅನಾಟಮಿ‌‌ ಆಫ್ ಇಲ್ನೆಸ್ ಎಂಬ ಗ್ರಂಥ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ.ಇಂಥ ಸಾಧಕನಿಗೆ ರಕ್ತ ಕ್ಯಾನ್ಸರ್ ಎಂದು ಗೊತ್ತಾಯಿತು.ಇದನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು.ಆದರೆ ಅವನು ತನ್ನ ಮನೋಭಾವನೆ ಯಿಂದ ಅದನ್ನು ಗುಣಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಾಸ್ಯ ಚಲನಚಿತ್ರಗಳನ್ನು ನೋಡತೊಡಗಿದ.ಸುಮಾರು ೫೦೦ ಹಾಸ್ಯ ಚಲನಚಿತ್ರಗಳನ್ನು ನೋಡಿದ್ದರ ಪರಿಣಾಮ […]

ಸ್ವಾತ್ಮಗತ

ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯ ಕೃಷಿಯೂ..!ಮತ್ತವರ ಉಧೋ ಉಧೋ ಎನ್ನುವ ಉತ್ತರ ಕರ್ನಾಟಕದ ಭಾಷೆಯೂ.!! ಬಾಳಾಸಾಹೇಬ ಲೋಕಾಪುರ ಇವರು ನವ್ಯೋತ್ತರ ಸಾಹಿತಿಗಳು. ಬಾಗಲಕೋಟದ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದಾರೆ… ಇವರ ಕೃತಿಗಳು ಹೀಗಿವೆ– ಕಥಾಸಂಕಲನಗಳು– ಕವಣಿಗಲ್ಲು,ಹಾರುವ ಹಕ್ಕಿ ಮತ್ತು ಆಕಾಶ,ತನು ಕರಗದವರಲ್ಲಿ,ಕಂಗಳು ತುಂಬಿದ ಬಳಿಕ, ಇವರ ಕಾದಂಬರಿಗಳು– ಉಧೊ ಉಧೊಹುತ್ತಬಿಸಿಲುಪುರನೀಲಗಂಗಾ. ಇವರ ಕವನ ಸಂಕಲನಗಳು– ಭ್ರಮರಂಗೆ. ಇವರು ಪಡೆದ ಪ್ರಸಸ್ತಿಗಳು– ಕನ್ನಡ ಸಾಹಿತ್ಯ ಅಕಾಡಮಿ ಪ್ರಸಸ್ತಿಚದುರಂಗ ಪ್ರಸಸ್ತಿಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ […]

Back To Top