ದಿಕ್ಸೂಚಿ

ವಿಶಾಲ ಗೋಲದೊಳಗೆ ಎಂದೆಂದಿಗೂ ಅನಿಶ್ಚತತೆ

ಜಯಶ್ರೀ ಜೆ.ಅಬ್ಬಿಗೇರಿ

.

ಅನಿಶ್ಚಿತತೆ ಎಂದ ಕೂಡಲೇ ನನಗೆ ನೆನಪಿಗೆ ಬರೋದು ತತ್ವಜ್ಞಾನಿಯೊಬ್ಬನ ಜೀವನದ ನೈಜ ಘಟನೆ.ಆತ ಪ್ರಸಿದ್ಧ ಪಾಶ್ಚಿಮಾತ್ಯ ತತ್ವಜ್ಞಾನಿ ನರ‍್ಮನ್ ಕಸಿನ್ಸ್.ಆತನ ದಿ ಅನಾಟಮಿ‌‌ ಆಫ್ ಇಲ್ನೆಸ್ ಎಂಬ ಗ್ರಂಥ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ.ಇಂಥ ಸಾಧಕನಿಗೆ ರಕ್ತ ಕ್ಯಾನ್ಸರ್ ಎಂದು ಗೊತ್ತಾಯಿತು.ಇದನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು.ಆದರೆ ಅವನು ತನ್ನ ಮನೋಭಾವನೆ ಯಿಂದ ಅದನ್ನು ಗುಣಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಾಸ್ಯ ಚಲನಚಿತ್ರಗಳನ್ನು ನೋಡತೊಡಗಿದ.ಸುಮಾರು ೫೦೦ ಹಾಸ್ಯ ಚಲನಚಿತ್ರಗಳನ್ನು ನೋಡಿದ್ದರ ಪರಿಣಾಮ ಭಾರಿ ಆಗಿತ್ತು.ಆತ ರಕ್ತ ಕ್ಯಾನ್ಸರ್‌ನಿಂದ ಗುಣ ಮುಖ ಆಗು ವುದು ಅಷ್ಟೇ ಅಲ್ಲ.ಮುಂದೆ ಇಪ್ಪತ್ತು ವರ್ಷಗಳ ಕಾಲ ಸು ಖವಾಗಿ ಬದುಕಿದ.ನರ‍್ಮನ್‌ನ ಕಥೆ ಓದಿ ಅರೆ! ಅನಿಶ್ಚಿತತೆ ಯ ಮನೋಭಾವನೆಯಿಂದ ಇಷ್ಟು ಸಲೀಸಾಗಿ ಗೆಲ್ಲಬಹು ದೇ ಅಂತೆನಿಸಿತಲ್ಲವೇ? ಶತಾಯುಷಿಗಳಾಗಿ ಬದುಕಿದವರ ಜೀವನ ಚರಿತ್ರೆಯ ಅಧ್ಯಯನ ಮಾಡಿದವರು ಮತ್ತು ಸ ಮೀಕ್ಷೆಗಳು ಪ್ರಕಟಿಸಿದ ವರದಿ ‘ಸಂತೋಷದಾಯಕ ಮ ನೋಭಾವವೇ ಶತಾಯಿಷಿಗಳನ್ನು ಎಂಥ ಕಡುಕಷ್ಟ ಕಾಲ ದ ಪರಿಸ್ಥಿತಿಯಲ್ಲಿ ಮತ್ತು ಅನಿಶ್ಚಿತತೆಯಲ್ಲಿ ರಕ್ಷಿಸಿತು’ ಎಂದು ಹೇಳುತ್ತದೆ.ಅನಿಶ್ಚಿತತೆ ಜೀವನದ ಒಂದು ಭಾಗ

ಎಲ್ಲವೂ ನಾವೆಂದಕೊಂಡಂತೆ ನಡೆದರೆ ಬದುಕು ನಮ್ಮ ನಿಯಂತ್ರಣದಲ್ಲಿದೆ ಅಂತ ಖುಷಿಯಾಗುತ್ತದೆ.ಯಾವುದೇ ಒಂದು ದಿನ ಹೀಗೆಲ್ಲ ಆಗುತ್ತೆ ಅಂತ ನಾವೆಲ್ಲ ನಿರೀಕ್ಷಿಸಿರು ವುದಿಲ್ಲ.ಅಷ್ಟೇ ಅಲ್ಲ ಆ ದಿಸೆಯಲ್ಲಿ ಎಳ್ಳಷ್ಟು ಯೋಚಿಸಿರು ವುದಿಲ್ಲ. ಅಂಥ ಸಂದರ್ಭದಲ್ಲಿ ಒಂದು ಅನಿಶ್ಚಿತತೆ ನಮಗೆ ಹೇಳದೇ ಕೇಳದೇ ಒಮ್ಮೆಲೇ ಧುತ್ ಎಂದು ಪ್ರತ್ಯಕ್ಷವಾಗಿ ಬಿಡುತ್ತದೆ.ಅದು ನೈಸರ್ಗಿಕ ವಿಕೋಪದ ದಿನಗಳಲ್ಲಿ ಆದ ರಂತೂ ಮುಗಿದೇ ಹೋಯಿತು. ಅಯ್ಯೋ! ಇದನ್ನು ಇನ್ನು ಹೇಗೆ ನಿಭಾಯಿಸಬೇಕೆಂದು ತಲೆಗೆ ಕೈ ಹಚ್ಚಿಕೊಂಡು ಅಸ ಹಾಯಕರಾಗಿ ಕೂತು ಬಿಡುತ್ತೇವೆ.ಕೆಲವರು ಇದು ಹೀಗೆ ಒಂದು ದಿನ ಆಗಬಹುದು ಅಂತ ಅಂದುಕೊಂಡಿದ್ದೆ ಅಂತ ಹೇಳುವುದನ್ನೂ ಕೇಳುತ್ತೇವೆ.ಅದು ಮೊದಲೇ ಗೊತ್ತಿದ್ದರೆ, ಏನಾದರೂ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ನಮ್ಮ ಮುಖಕ್ಕೆ ಮುಖ ಮಾಡಿ ನಿಲ್ಲುತ್ತದೆ.ಅಂದರೆ ಅದೆಲ್ಲ ನಾವೆಷ್ಟು ಜಾಣರು ಅಂತ ತೋರಿಸಿಕೊಳ್ಳುವ ನಂಬ‌ಲಾಗ ದ ತಂತ್ರ ಅಷ್ಟೇ.ಕೆಲವೊಮ್ಮೆ ಬರೀ ಸಮಾಧಾನಕ್ಕೆ ಹಾಗೆ ಹೇಳಿಕೊಳ್ಳುತ್ತೇವೆ.ಅಂದ್ಹಾಗೆ ಅನಿಶ್ಚಿತತೆ ಜೀವನದ ಒಂದು ಭಾಗ.ಅನ್ನುವುದನ್ನು ನಾವು ಬಹಳಷ್ಟು ಸಲಮರೆತು ಬಿಡು  ತ್ತೇವೆ.ಹಾಗೆ ಕೂಲಂಕುಷವಾಗಿ ಗಮನಿಸಿದರೆ ಅನಿಶ್ಚಿತತೆ ಯ ಬಗ್ಗೆ ನಾವು ಆತಂಕ ಪಡಬೇಕಿಲ್ಲ.ಏಕೆಂದರೆ ‘ಅನಿಶ್ಚಿತ ತೆಯ ಸನ್ನಿವೇಶದಲ್ಲಿ ಸಾಧ್ಯತೆಗಳು ಮತ್ತು ಆಯ್ಕೆಗಳು ಹೆಚ್ಚಾಗಿರುತ್ತವೆ’

.

ಬದಲಾವಣೆಯ ಆಗರ ಅನಿಶ್ಚಿತತೆ ಆವರಿಸಿದಾಗ ಎಷ್ಟೇ ಗಟ್ಟಿಗರಾಗಿದ್ದರೂ ಅರಿವಿಗೆ ಬರದೇ ಭಯ ಆವರಿಸಿಕೊ ಳ್ಳುತ್ತದೆ.ಉಳಿದ ಸಮಯದಲ್ಲಿ ಅತಿ ಚುರುಕಾಗಿ ಕೆಲಸ ಮಾಡುವ ಮೆದುಳು ಮಂಕಾಗಿ ಬಿಡುತ್ತದೆ.ಹಿಂಡನ್ನು ಅಗ ಲಿದ ಮರಿ ಆನೆಯಂತಾಗುತ್ತದೆ.ಬಿದ್ದರೂ ಮೀಸೆ ಮಣ್ಣಾಗಿ ಲ್ಲ ವೆಂದು ತೋರಿಸಿಕೊಳ್ಳುವ ಜಾಯಮಾನ.ಅಷ್ಟು ಸುಲ ಭ ವಾಗಿ ಒಪ್ಪಿಕೊಳ್ಳುವುದಿಲ್ಲ.ಇದೇನು ಮಹಾ ಅದೆಷ್ಟೋ ಕಷ್ಟಗಳ ಮೂಟೆಗಳನ್ನು ಎತ್ತಿ ಬಿಸಾಕಿದ್ದೀನಿ.ಇದು ಯಾವ ಲೆಕ್ಕ ಬಿಡಿ ಎನ್ನುವ ಅಹಂಕಾರದ ಮಾತುಗಳನ್ನೂ ಆಡು ತ್ತೇವೆ.ಆದರೆ ವಾಸ್ತವ ಬೇರೆಯೇ ಇರುತ್ತದೆ.ನಮ್ಮೆದುರು ದೊಡ್ಡದೊಂದು ಶೂನ್ಯ ನಗುತ್ತ ನಿಂತಿರುತ್ತದೆ.ಸಣ್ಣ ವಿಷ ಯಗಳು ಸಣ್ಣ ಮನಸ್ಸುಗಳಿಗೆ ಸಂತೋಷ ನೀಡುತ್ತವೆ. ಎನ್ನುತ್ತ ದೊಡ್ಡದರತ್ತ ಚಿತ್ತ ಹರಿಸಿದರೆ ಮುಂದೇನು ಅಂತ ದಿಕ್ಕೇ ತೋಚದ ಹಾಗೆ ಕೂತಲ್ಲೇ ಕಣ್ಣೀರು ಹರಿಯುತ್ತದೆ. ಕೆಲವೊಮ್ಮೆ ದೇವರ ಮನೆಗೆ ಓಡಿ ಹೋಗಿ ಕಾಪಾಡಪ್ಪಾ ಅಂತ ಗಲ್ಲ ಗಲ್ಲ ಬಡಿದುಕೊಳ್ಳುವುದೂ ಉಂಟು.ಹಾಗಾದ ರೆ ಈ ಅನಿಶ್ಚಿತತೆ ಸನ್ನಿವೇಶದಲ್ಲಿ ಏನೆಲ್ಲ ಮಾಡಬಹುದು? ಚಿನ್ನದಂಥ ಕನಸನ್ನು ಮತ್ತೆ ಮತ್ತೆ ಕಂಡು ಹತಾಶರಾಗುತ್ತೇ ವೆ. ಹಾಗೆ ನೋಡಿದರೆ ಬದುಕು ಬದಲಾವಣೆಯ ಆಗರವೇ ಅಲ್ಲವೇ? ಪ್ರತಿನಿತ್ಯ ಅನಿಶ್ಚತತೆ ನಮ್ಮ ಸುತ್ತಲೂ ಸುತ್ತುತ್ತ ಲೇ ಇರುತ್ತದೆ. ಅದರಿಂದ ಪಾರಾಗವುದು ಸುಲಭವಲ್ಲ. ಸುಲಭವಲ್ಲ ಅಂದ ಮಾತ್ರಕ್ಕೆ ಅಸಾಧ್ಯ ಅಂತ ಅರ್ಥವಲ್ಲ. ‘ನಾವು ವಿಶಾಲವಾದ ಗೋಲದೊಳಗೆ ಪ್ರಯಾಣಿಸುತ್ತೇವೆ. ಎಂದೆಂದಿಗೂ ಅನಿಶ್ಚಿತತೆಯಿಂದ ಚಲಿಸುತ್ತೇವೆ’.ಎನ್ನುತ್ತಾ ನೆ ಬ್ಲೇಸ್ ಫಾಸ್ಕಲ್.ಅನಿಶ್ಚಿತತೆಯನ್ನು ಎದುರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ,ಗುರಿ ಸ್ಪಷ್ಟಪಡಿಸಿಕೊಳ್ಳಿ.

‘ಬರೆದಿಡಲಾರದ ಗುರಿಯು ಕೇವಲ ಒಂದು ಆಸೆ.ಎನ್ನುತ್ತಾ ರೆ ಬಲ್ಲವರು.ಆದ್ದರಿಂದ ಗುರಿಯನ್ನು ಸ್ಪಷ್ಟವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿಡಿ.ಅದು ಮೇಲಿಂದ ಮೇಲೆ ನಿಮ್ಮ ಕಣ್ಣಿಗೆ ಬೀಳುವಂತಿರಲಿ.ನಿಮ್ಮ ಗಮನ ಸೆಳೆಯುವಂತಿರಲಿ ಸ್ಪಷ್ಟತೆ ಇರದೇ ಇದ್ದಾಗ ಸಮಯವು ಹೇಗೇಗೋ ವ್ಯರ್ಥ ವಾಗಿ ಕಳೆದು ಹೋಗಿ ಬಿಡುತ್ತದೆ.ಇಲ್ಲದ ಅನಿಶ್ವಿತತೆಗಳ ರಾಶಿಯನ್ನು ತಂದು ನಮ್ಮ ಮುಂದೆ ಚೆಲ್ಲುತ್ತದೆ. ಒಂದು ವೇಳೆ ಸಾಗುವ ದಾರಿ ಇದೇ ಅಂತ ಗೊತ್ತಾದರೆ ನಿಶ್ವಿತತೆಗೆ ದೊಡ್ಡ ಮಣೆ ಸಿಗುತ್ತದೆ. ಗುರಿಯೊಂದಿಗೆ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಂಡರೆ ನಡೆಯುವ ದಾರಿ ಅನಿಶ್ಚತತೆಯಿಂದ ಪರ‍್ತಿ ಸರಳಗೊಳಿಸಬಹುದು. ಯೋಜನೆಗಳ ಮೂಲಕ ಕೈಗೆತ್ತಿಕೊಳ್ಳಬಹುದು.ಎದೆಗಪ್ಪಿಕೊಳ್ಳಬಹುದು.ನಿರ್ಧಿಷ್ಟ

ದಿಕ್ಸೂಚಿ ಬದಲಾವಣೆಗೆ ಪ್ರತಿರೋಧಿಸುವ ಗುಣ ನಮ್ಮ ಜೀನ್ಸಗಳಲ್ಲಿದೆ.ಗುರಿಯತ್ತ ಸಾಗಲು ಒತ್ತಡ ನೋವುಗಳ ನ್ನು ತಾಳಿಕೊಳ್ಳಲಾರದೇ ಪ್ರಯತ್ನಕ್ಕೆ ಮಂಗಳ ಹಾಡುತ್ತೇವೆ ನಡುವೆ ಕೈ ಬಿಡುವ ಜಾಯಮಾನಕ್ಕೆ ಒಗ್ಗಿಕೊಂಡ ಮನಸ್ಸಿ ಗೆ ಇದೆಲ್ಲ ಬೇಡವಾಗುತ್ತದೆ.ಕೂಲಂಕಷವಾಗಿ ಅವಲೋಕಿ ಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಅನಿಶ್ಚಿತತೆಯು ಭಾವನೆಗಳಿಗೆ ಮತ್ತು ಆಲೋಚನೆಗಳಿಗೆ ಲಗ್ಗೆ ಇಡುತ್ತದೆ.ಹೀಗಾಗಿ ಭಾವ ಲೋಕವನ್ನು ಪರಿಶುದ್ಧವಾ ಗಿ ಇಟ್ಟುಕೊಳ್ಳಬೇಕಾಗುತ್ತದೆ.ಗೊತ್ತಿಲ್ಲದ ಪ್ರದೇಶಗಳಿಗೆ ಭೇ ಟಿ ನೀಡುವಾಗ ಅಲ್ಲಿಗೆ ಹೋಗಿ ಬಂದವರನ್ನು ಕೇಳುತ್ತೇವೆ.  ಅದರೊಂದಿಗೆ ಹೋಗುವ ದಾರಿಯ ವಿವರಣೆಯನ್ನು ತಿಳಿ ದುಕೊಳ್ಳುತ್ತೇವೆ ಅಲ್ಲವೇ? ಹಾಗೆಯೇ ನಿಶ್ಚಿತಗೊಳಿಸಿದ ಗುರಿಯಲ್ಲಿ ನೀವೀಗ ಎಲ್ಲಿದ್ದೀರಿ. ಅದನ್ನು ತಲುಪಲು ದಿನ ನಿತ್ಯ ಮಾಡಬೇಕಾದ ಕಾರ‍್ಯಗಳ ಪಟ್ಟಿಯನ್ನು, ಮಾಡುವ ಕೆಲಸದ ವೇಳಾ ಪಟ್ಟಿಯನ್ನು ತಯಾರಿಸಿಕೊಳ್ಳುವುದರಿಂದ ಅನಿಶ್ಚಿತತೆಯಿಂದ ದೂರ ಬರಬಹುದು. ವೇಳಾ ಪಟ್ಟಿಯು ನಿಮ್ಮನ್ನು ನಿರ‍್ದೇಶಿಸುತ್ತದೆ. ಯೋಜನೆಗಳಲ್ಲಿ ಮಾಡಿಕೊಳ್ಳ ಬೇಕಾದ ಬದಲಾವಣೆಗಳು ಅದರಲ್ಲಿ ತೊಡಗಿಕೊಂಡ ಮೇಲೆ ದಿನೇ ದಿನೇ ಸ್ಪಷ್ಟವಾದ ಚಿತ್ರವನ್ನು ನೀಡುತ್ತ ಹೋ ಗುತ್ತವೆ.ಆದ್ದರಿಂದ ಒಂದು ವೇಳಾ ಪಟ್ಟಿಯನ್ನು ನಿರ‍್ಧಿಷ್ಟ   ದಿಕ್ಸೂಚಿಯಂತೆ ಬಳಸುವುದು ಉತ್ತಮ ಮಾರ್ಗವೆಂದರೆ ಏಕಾಗ್ರತೆ.

ಬದುಕಿನಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ.ಕೆಲವು ಸಂಗತಿಗಳು ನಿಯಂತ್ರಣದಾಚೆಗೆ ಇವೆ.ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಉಚಿತ.ಸಾಮಾಜಿಕ ಜಾಲ ತಾಣ ಗಳಲ್ಲಿ ಕಳೆಯುವ ಬಹುತೇಕ ಸಮಯ ಕೃತಕ ಖುಷಿ ನೀಡ ಡುತ್ತದೆ.ಅಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸು ವುದು ನಮ್ಮ ನಿಯಂತ್ರಣದಲ್ಲಿದೆ.ಅನಿಶ್ಚತತೆಯನ್ನು ನೀಗಿ ಸಲು ಅನೇಕ ಹಂತಗಳು ನಮ್ಮ ಕೈಯಲ್ಲೇ ಇವೆ.ಕೆಲವು ಸಮಯ ನೀವು ವಾಟ್ಸಪ್ ಫೇಸ್ ಬುಕ್ ನೋಡದಿದ್ದರೆ ರಾತ್ರೋ ರಾತ್ರಿ ಏನೂ ಆಗಿ ಬಿಡಲ್ಲ.ಕಾರ‍್ಯದೆಡೆಗಿನ ಸರಳ ಶಿಸ್ತು,ನಿರ‍್ಧಿಷ್ಟವಾದುದರ ಮೇಲಿನ ಕೇಂದ್ರೀಕರಿಸುವಿಕೆ ಫಲಿತಾಂಶವನ್ನು ಎತ್ತರಕ್ಕೇರಿಸುತ್ತದೆ.ಉತ್ಕೃಷ್ಟತೆ ಎಂದರೆ ಕೇಂದ್ರೀಕರಿಸುವಿಕೆ ಪರಿಣಾಮಕಾರಿಯಾಗಿ ಕಾರ‍್ಯ ನಿರ‍್ವಹಿ ಸಲು ಪ್ರಯತ್ನ ಮಾಡುವುದು.ಒಮ್ಮೆ ನೆಪೋಲಿಯನ್ ಹೀ ಗೆ ಹೇಳಿದನು: ‘ಏಕಾಗ್ರತೆಯಿಂದ ಯಾವನು ಪ್ರಯತ್ನಿಸು ವುದಿಲ್ಲವೋ, ಅವನು ಎಂದೂ ಯಶಸ್ವಿಯಾಗಲಾರನು.

ಸಮಯ ಅಮೂಲ್ಯ ಸಮಯವನ್ನು ಹೆಚ್ಚು ಸಮರ್ಥವಾ ಗಿ ನಿರ‍್ವಹಿಸಲು ಬದ್ಧರಾಗಬೇಕು. ‘ಸಮಯವೇ ಜೀವನ.’ ಒಮ್ಮೆ ಕಳೆದು ಹೋದರೆ ಮರಳಿ ಸಿಗದ ಸಂಪತ್ತು ಎಂಬ ಗಾಢ ಭಾವವನ್ನು ಬೆಳೆಸಿಕೊಳ್ಳಬೇಕು.ಇತರರು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಬಿಡಬೇಡಿ. ಬರೀ ಚಟುವಟಿಕೆಯಿಂದ ಕೂಡಿದ ಕೆಲಸಗಳಲ್ಲಿ ತೊಡಗಿ ಕೊಳ್ಳುವುದನ್ನು ಬಿಟ್ಟು ಉತ್ಪಾದನಶೀಲ ಕಾರ‍್ಯಕ್ಕೆ ಒತ್ತು ಕೊಡಬೇಕು.‘ಕಾಲದ ಪ್ರಯೋಜನ ಗೊತ್ತಿರದವರಿಗೆ ದಿನ ವು ಬಹು ದುಗರ್ಮವಾಗುತ್ತದೆ’.ಎನ್ನುತ್ತಾನೆ ಬುದ್ಧ.ಅನಿಶ್ಚಿ ತ ಸಮಯದಲ್ಲಿ ಕೈಯಲ್ಲಿರುವ ಸಮಯ ಒಂದು ಅವಕಾ ಶದಂತೆ ಅದನ್ನು ಸಿದ್ಧತೆಗಾಗಿ ಬಳಸಿಕೊಳ್ಳಬೇಕು.ಇದನ್ನೇ ಡಿಸ್ರೆಲ್ ಹೀಗೆ ಹೇಳುತ್ತಾನೆ,’ಅವಕಾಶವು ಎದುರಾದಾಗ ಅದನ್ನು ಎದುರುಗೊಳ್ಳುವ ಸಿದ್ಧತೆಯಲ್ಲಿರುವುದೇ ಯಶ ಸ್ವಿ ಜೀವನದ ರಹಸ್ಯವಾಗಿದೆ’.ಅಚ್ಚರಿಗಳಿಗೆ ಮುಕ್ತ ವಾಗಿರಿ

‘ಸುಂದರ ಬದುಕು ಒಂದು ಆಕಸ್ಮಿಕವಲ್ಲ.’ ಬದುಕು ಸುಂದ ರವಾಗಿಲ್ಲ ಅದನ್ನು ನಾವೇ ಸುಂದರವಾಗಿವಾಗಿಸಿ ಕೊಳ್ಳ ಬೇಕು.ಬದುಕು ಅಚ್ಚರಿಗಳ ಆಗರವೂ ಹೌದು. ಹೀಗಾಗಿ ಅಚ್ಚರಿಗಳು ನಡದೇ ಇರುತ್ತವೆ.ಆದ್ದರಿಂದ ಅಚ್ಚರಿಗಳನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇ ಕು.ಅಚ್ಚರಿಗಳಿಗೆ ಸಿದ್ದತೆ ಮಾಡಿಕೊಳ್ಳಲು ಕಲಿಯಬೇಕು. ಅದನ್ನು ಹಿರಿಯರ ಹಿತೋಪದೇಶದಿಂದಲೂ ಕಲಿಯಬ ಹುದು.ಅಚ್ಚರಿಗಳು ಅದ್ಭುತವನ್ನು ನೀಡುತ್ತವೆ.’ಯಾಕೋ ಏನೋ ಈ ಪ್ರಪಂಚದಲ್ಲಿ ಉಪದೇಶವೆಂದರೆ ಯಾರೂ ಇಷ್ಟ ಪಡುವುದಿಲ್ಲ.ನಿಜಕ್ಕೂ ಅವುಗಳ ಅಗತ್ಯ ಹೆಚ್ಚಾಗಿರು ವವರು ಅವುಗಳನ್ನು ತೀರಾ ಕಡಿಮೆ ಇಷ್ಟ ಪಡುತ್ತಿರುತ್ತಾರೆ  ಎಂದಿದ್ದಾನೆ ಜಾನ್ಸನ್.ಅನಿಶ್ಚತತೆಯ ಸವಾಲುಗಳನ್ನು ತೊಡೆದು ಹಾಕಲಾಗುವುದಿಲ್ಲ ಸ್ವೀಕರಿಸಲೇಬೇಕು. ಅನಿಶ್ಚಿತತೆಯನ್ನು ಎದುರಿಸುವಲ್ಲಿ ತಪ್ಪುಗಳಾಗಬಹುದು ಆದರೆ ನಿಂತಲ್ಲೇ ಕೊಳೆಯುವುದಕ್ಕಿಂತ ತಪ್ಪು ಮಾಡಿ ಅನಿಶ್ಚತತೆಯನ್ನು ಎದುರಿಸುವುದು ಉತ್ತಮವಲ್ಲವೇ?

***************

4 thoughts on “ದಿಕ್ಸೂಚಿ

Leave a Reply

Back To Top