ಕಾವ್ಯಯಾನ
ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು […]
ಕಾವ್ಯಯಾನ
ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. […]
ಪ್ರಸ್ತುತ
ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ […]
ಕಾವ್ಯಯಾನ
ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********
ಅನುವಾದ ಸಂಗಾತಿ
ಮೂಲ: ಮೇರಿ ಆಲಿವರ್(ಅಮೇರಿಕನ್) ಕನ್ನಡಕ್ಕೆ: ಕಮಲಾಕರ ಕಡವೆ ಪ್ರಾರ್ಥನೆ ಏನೆಂದು ಅರಿಯೆ ನಾನು” ಪ್ರಾರ್ಥನೆ ಏನೆಂದು ಸರಿಯಾಗಿ ತಿಳಿಯದು ನನಗೆನನಗೆ ತಿಳಿದಿದ್ದೆಂದರೆ, ಹೇಗೆ ಲಕ್ಷ್ಯವಿಟ್ಟು ಕೇಳುವದು, ಹೇಗೆ ಬೀಳುವದುಹುಲ್ಲಿನ ಮೇಲೆ, ಹೇಗೆ ಮಂಡಿಯೂರಿ ಹುಲ್ಲ ಮೇಲೆ ಕೂರುವದುಹೇಗೆ ಸೋಮಾರಿಯಾಗಿದ್ದು ಖುಷಿಯಾಗಿರುವದುಹೇಗೆ ಹೊಲದ ಉದ್ದ ನಡೆಯುವದು, ಇವುಗಳೇ ನಾನು ದಿನವಿಡೀ ಮಾಡುತ್ತಲಿರುವದು.ಹೇಳಿ, ಮತ್ತೇನ ಮಾಡ ಬೇಕಿತ್ತು?ಎಲ್ಲವೂ ಕೊನೆಗೆ ಕೊನೆಯಾಗುತ್ತಾವಲ್ಲವೇ, ಸ್ವಲ್ಪ ಬೇಗನೆ?ಹೇಳಿ, ನೀವೇನ ಮಾಡುವಿರಿ ನಿಮ್ಮ ಇರುವ ಒಂದು ಅಮೂಲ್ಯ ಅಪಕ್ವ ಬಾಳಿನಲ್ಲಿ? “I Don’t Know What […]
ಕಾವ್ಯಯಾನ
ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ […]
ಕಥಾಯಾನ
ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಟಿ. ಎಸ್. ಶ್ರವಣ ಕುಮಾರಿ ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು. ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ […]
ಕಾವ್ಯಯಾನ
ತೋಳ ಉಯ್ಯಾಲೆ ಶಾಂತಾ ಜೆ ಅಳದಂಗಡಿ ತೋಳ ಉಯ್ಯಾಲೆ ಅಂದದ ಸುಂದರ ಬಂಧುರ ಭಾವದ ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ ಕಾವ್ಯದ ನವ್ಯತೆ ಬಲು ನಾವೀನ್ಯತೆ ಬೆಳಗಿತು ನನ್ನಯ ಹೃದಯದ ಹಣತೆ ಚೆಲ್ಲುವೆ ನನ್ನವ ನಡೆಯುವ ಹಾದಿಗೆ ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ ಜತೆಯಾಗಿ ಕುಳಿತು ಜೋಕಾಲಿ ಆಡುವೆ ಸ್ವರ್ಗವೆ ಇರಲಿ ನರಕವೆ ಬರಲಿ ಹೂವು ನಾರಿನ ಬಂಧವು ಬೆಸೆಯಲಿ ******
ಕಥಾಯಾನ
ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ […]
ಕಥಾಯಾನ
ರಾಮರಾಯರು ಜಿ. ಹರೀಶ್ ಬೇದ್ರೆ ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು. ಮೂರನೆಯವಳ ಮದುವೆಯಾಗಲಿಕ್ಕೂ ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ […]