ಸಂಗಾತಿ ಬುದ್ದ
ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ […]
ಯಾರೊಬ್ಬರಾದರೂ…
ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು […]
ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ
ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ ಚೆಕ್‌ಮೇಟ್ ಜೀವನವೇ ಒಂದು ಚದುರಂಗಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀಕಪ್ಪು ಬಿಳುಪಿನ ಚೌಕದ ಸಾಲು ಸಾಲುಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲದ್ವಂಸಗೈದ ಬಿಳಿಯ ಸೈನ್ಯವನ್ನುಬರೀ ಪದಾತಿದಳವೊಂದರಿಂದಲೇಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಬದುಕಲೆಂದೇ ಇದೆ ಕ್ಯಾಸ್‌ಲಿಂಗ್ರಾಜನೊಬ್ಬ ಬದುಕಿದರೆ ಸಾಕುಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ? ಒಬ್ಬ ರಾಜನನ್ನುಳಿಸಲುಸೈನ್ಯದ ಪ್ರತಿಯೊಬ್ಬನೂಜೀವದ […]
ಗಝಲ್
ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ […]
ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ
ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ ಒಂದು ಹೆಣ್ಣಿನ ಸ್ವಗತ. ನನಗಾರ ಭಯ..!ನಾನು ಜನ್ಮ ಕೊಡುವ ಹೆಣ್ಣು ಮಗುವನ್ನುಈ ಲೋಕದಿ ತರಲು ನನಗಾರ ಭಯ..ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವಧೈರ್ಯ ನನಗಿಲ್ಲದಿರುವದು..ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳುಅವಳು ಅನುಭವಿಸುವದು ಬೇಡವೆಂದೇ…ಕೆಟ್ಟ ಕಾಮುಕರಿಗೆ ಬಲಿಯಾದೀತೆಂದುದಿಗಿಲುಗೊಂಡೇ…ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದುಭಯಗೊಂಡೆ…ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.ಹೆಣ್ಣು ಗಳಿಲ್ಲದೆ […]
ವಿಶಾಲಾ ಆರಾಧ್ಯ ಕಾವ್ಯಗುಚ್ಛ
ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು […]
ಕವಿತೆಯೆಂದರೆ
ಕವಿತೆ ಪ್ರೇಮಶೇಖರ ಕವಿತೆಯೆಂದರೆ ಏನು?ಏನಲ್ಲ? ಕವಿತೆಯೆಂದರೆ ಕತ್ತಲೆಬೆಳಕಿನಾಟದ ಜೀವನರಂಗಮಂಚ. ಕವಿತೆಯೆಂದರೆ ಸಮುದ್ರತೀರದ ಸತ್ತ ಮೀನುಅರಳಿಸುವ ಮಲ್ಲಿಗೆಸುವಾಸನೆ, ಕವಿತೆಯೆಂದರೆ ಹೆಣ್ಣುನಾಗರಇಟ್ಟ ನೂರೊಂದು ಮೊಟ್ಟೆಗಳೊಡೆದು ಬಂದನವಿಲುಗರಿಗಳು. ಕವಿತೆಯೆಂದರೆ ಪ್ರೇಯಸಿಕೊಟ್ಟ ಮುತ್ತುಒಡೆದುಹೋಗಿಧಾರಾವಾಹಿಯಾದ ನಿರೀಕ್ಷೆ. ಕವಿತೆಯೆಂದರೆ ಬೀಸಣಿಗೆಯ ಬಣ್ಣದ ರೆಕ್ಕೆಯ ಗಿಣಿಮರಿಗೆ ಮಾತು ಕಲಿಸಹೊರಟಮಗು. ಕವಿತೆಯೆಂದರೆ ನಾಳೆಹಾರಿ ಹೋಗುತ್ತದೆಎಂದು ಗೊತ್ತಿದ್ದರೂ ಇಂದುಗುಟುಕು ನೀಡುವತಾಯಿಹಕ್ಕಿ. ಕವಿತೆಯೆಂದರೆ ಅಕ್ಷತಯೋನಿಒಂಬತ್ತು ಹೆತ್ತು ಮೂಲೆಯಲ್ಲಿಕೂತ ಅಡುಗೂಲಜ್ಜಿಕತೆ. ಕವಿತೆಯೆಂದರೆ ತಾಯಿಹುಲ್ಲೆಯನು ಕೊಂದುತಿಂದುಎಳೆಹುಲ್ಲೆಗೆ ತಾಯಿಯಾಗಿ ಹಾಲೂಡಿಸಿದ ಹೆಣ್ಣುಹುಲಿ. ಕವಿತೆಯೆಂದರೆಕೊನೆಗೂ ಏನುಂಟು?ಏನಿಲ್ಲ? ಅಹ್ ಕವಿತೆಯೇ ಅಂತಿಮವಾಗಿ ನೀನೇ ಎಲ್ಲ,ನಾನೆಲ್ಲೂ ಇಲ್ಲ. **********************
ಚೈತ್ರಾ ಕಾವ್ಯಗುಚ್ಛ
ಚೈತ್ರಾ ಶಿವಯೋಗಿಮಠ ಕಾವ್ಯಗುಚ್ಛ ಕೊರೋನಾ ಖೈದಿ ದಿನ ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲಉದಯಾಸ್ತಮಾನಗಳ ನಡುವೆಭೂಮ್ಯಾಕಾಶದ ಅಂತರ.ಗಡಿಯಾರದ ಮುಳ್ಳುಗಳುಅಪೌಷ್ಟಿಕತೆಯಿಂದ ನರಳುತ್ತಿವೆಚಲನೆ ಅದೆಷ್ಟು ಕ್ಷೀಣವೆಂದರೆಒಂದು ಹೆಜ್ಜೆ ಇಡಲೂ ಆಗದ,ಕೀಲಿಲ್ಲದ ಮುದುಕಿಯ ಹಾಗೆಕೈಲಾಗದಿದ್ದರೂ ಬೊಬ್ಬಿಡುವುದಕೇನೂಕಡಿಮೆ ಇಲ್ಲ ‘ಟಿಕ್’ ಎಂಬ ಶಬ್ದಮಾತ್ರ ಕಿವಿಯೊಳಗೆ ಕಾದ ಸೀಸಹೊಯ್ದಷ್ಟು ಕಠೋರ. ಆಗೊಮ್ಮೆ-ಈಗೊಮ್ಮೆನರ್ಸಗಳ ಅಡ್ಡಾಡುವಿಕೆ ಮಾತ್ರನಾನಿನ್ನೂ ಮನುಷ್ಯರ ನಡುವಿರುವುದಕೆಪುರಾವೆ.ಖಾನೆಯೊಳಗೆ ಖಾಲಿತನ ತುಂಬಿಉಸಿರಾಟದ ಭದ್ರತೆ ಕಾಯ್ದುಕೊಂಡು ಏಳು ದಿನಗಳನ್ನಏಳು ವರ್ಷಗಳಂತೆ ಕಳೆದು ಬರುವ ಖೈದಿ! ಕಣ್ಣಾಮುಚ್ಚಾಲೆ ತಪ್ಪಿಸಿಕೊಳ್ಳುವುದಕ್ಕೆ ಹೇಳುತ್ತಿದ್ದ ಕುಂಟುನೆಪಗಳಿಂದು ಬಂಧಿಸುವುದಕ್ಕೆಬರುವ ಭಟನಂತೆ.ಜ್ವರವೆಂದು ನರಳುವ ಹಾಗಿಲ್ಲರಾಕ್ಷಸನಂತೆ ಹಗಲಿರುಳೆನ್ನದೆ ದುಡಿದುಒಂದೆರಡು ದಿನವೂ […]
ಇತರೆ
ರೈತರ ಆಪತ್ಭಾಂದವ ಜೋಕಪ್ಪನೂ..! ಮಳೆ ತರುವ ದೇವರು ಜೋಕುಮಾರಸ್ವಾಮಿ. ಗಣೇಶ ಶಿಷ್ಟ ಪರಂಪರೆಯ ದೇವರು. ಅಲ್ಲದೇ ಜಾನಪದರ ದೇವರು ಜೋಕುಮಾರಸ್ವಾಮಿ.ಗಣೇಶ ಹೊಟ್ಟೆ ತುಂಬ ಉಂಡು ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆತಾಯಿಗಳಾದ ಶಿವ-ಪಾರ್ವತಿಯರಿಗೆ ವರದಿ ಒಪ್ಪಿಸಿದರೆ, ಜಾನಪದರ ದೇವರು ಜೋಕುಮಾರಸ್ವಾಮಿ ಇಲ್ಲಿ ಮಳೆ, ಬೆಳೆ ಇಲ್ಲದೇ ಕಂಗಾಲಾಗಿರುವ ಜನತೆಯ ಕಷ್ಟ ಕಾರ್ಪಣ್ಯಗಳ ವರದಿ ನೀಡಿ ಮಳೆ ಸುರಿಸಲು ವಿನಂತಿಸಿಕೊಳ್ಳುತ್ತಾನೆ. ಹೀಗಾಗಿಯೇ ಜೋಕುಮಾರಸ್ವಾಮಿ ಒಕ್ಕಲಿಗರಿಗೆ ಮಳೆ ತರುವ ನಂಬಿಗಸ್ತ ದೇವರು. ‘ಜೋಕುಮಾರಸ್ವಾಮಿ ಮಳಿ ಕೊಡಾವ ನೋಡ್ರೀ’ ಎಂದು […]
ಪ್ರಸ್ತುತ
ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ 2018ರಲ್ಲಿ ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ ಇರುವ ಎರಡು ಲೇಖನಗಳಲ್ಲಿ ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ […]