ಗಾಳೇರ್ ಬಾತ್
ಅಂಕಣ ಗಾಳೇರ ಬಾತ್-01 ಮೊದಲ ಬಾರಿ ರಾಜಧಾನಿಗೆ….. ಇವತ್ತಿನ ನನ್ನ present situation ನೋಡಿದರೆ ರಾಜಧಾನಿಯ ನನ್ನ ಮೊದಲ ಭೇಟಿ, ಹೀಗೆ ಇತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದು ಅಷ್ಟೊಂದು ಭಯಾನಕರೂ ಅಲ್ಲ. ಅದು ಅಷ್ಟೊಂದು ಆನಂದಮಯನೂ ಅಲ್ಲ. ಅದೊಂತರ ವಿಶಿಷ್ಟವಾದ ಬೇಟಿ ಎನ್ನಬಹುದು. ಆದರೆ ಈ ತರದ ಬೇಟಿ ಯಾವ ಮಕ್ಕಳಿಗೂ ಆಗಬಾರದು ಎನ್ನುವುದು ನನ್ನ ಈ ಲೇಖನದ ಆಕಾಂಕ್ಷೆ ಆಗಿದೆ. ನನ್ನ ನೆನಪಿನ ಬುತ್ತಿ ಬಿಚ್ಚಿ ಒಮ್ಮೆ ಹೊರಳಿ ನೋಡಿದಾಗ, ಬೆಂಗಳೂರಿನ ಬೇಟಿ […]
ಕಾವ್ಯಯಾನ
ಅಯ್ಯೋ… ಸಂತೇಬೆನ್ನೂರು ಫೈಜ್ನಾಟ್ರಾಜ್ ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ ನೆಲದ ಮೇಲೆ ಆಕಾಶ ನೋಡ್ತಾ ನಾಲ್ಕು ದಿನ ಹೇಗೋ ಬಾಳುತ್ತಿತ್ತು ಅಯ್ಯೋ ಹರಿದು ಹಾಕಿದಿರಾ…ಛೆ ಮನವರಳೋ ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು ಕಿತ್ತೇಕೆ ಎಸೆದಿರಿ…ಛೆ ಮಳೆ ಬಂದಿದ್ದರೆ ಮೈ ಮುರಿದು ಚಿಗುರುತ್ತಿತ್ತೇನೋ ಪಾಪ ಏನಂದಿರಿ….ಛೆ ತುಸು ಕಾದು ನೋಡಿದ್ದರೆ ನಿಮ್ಮಂತೆಯೇ ಇರುತ್ತಿದ್ದರೋ…ಏನೋ… ಮುಖ ತಿರುವಿ ಬಿಟ್ಟಿರಾ… ಛೆ ನಗ್ತಾ ಒಂದೆರಡು ಮಾತಾಡಿದ್ದರೆ ಹೂ ನಗೆ ಕೊಡುತ್ತಿದ್ದರೇನೋ….! ಬಾಗಿಲು ಹಾಕಿಯೇ ಬಿಟ್ಟಿರಾ…ಛೆ ಒಲವ ಒಲವಿಂದ ನೋಡದೇ ಹಳದಿ ಕಣ್ಣೇಕೆ ಬಿಟ್ಟಿರಿ ಪಾಪ […]
ಪ್ರಸ್ತುತ
ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆ ಗಣೇಶಭಟ್ ಮಾನ್ಯ ಪ್ರಧಾನಿಯವರು ಸ್ವಾವಲಂಬಿ ಭಾರತ, ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆಯ ಕುರಿತು ಟ್ವೀಟಿಸಿದ್ದಾರೆ. https://twitter.com/PMOIndia/status/1253562403544915970 ಇಂದು ದೇಶ ಅನುಸರಿಸುತ್ತಿರುವ ಬಂಡವಾಳವಾದ ನೀತಿಯಿಂದ ಈ ಉದ್ದೇಶ ಈಡೇರಲು ಸಾಧ್ಯವಿಲ್ಲ.ಲಕ್ಷ ಲಕ್ಷ ಕೋಟಿ ಹಣ ಸುರಿದರೂ ಅಷ್ಟೇ. ಮಿಶ್ರ ಆರ್ಥಿಕನೀತಿ, ಗಾಂಧೀವಾದ,ಸರ್ವೋದಯ,ಜೆಪಿ ಚಿಂತನೆ,ಸಮಾಜವಾದ ಮುಂತಾದವುಗಳೆಲ್ಲವೂ ಬಂಡವಾಳವಾದದ ವಿವಿಧ ರೂಪಗಳು. ಕಮ್ಯೂನಿಸಮ್ ಎಂಬುದು state capitalism. ಪ್ರಾದೇಶಿಕ ಸ್ವಾವಲಂಬನೆಗೆ ಬೇಕಾದುದು ನವ ಆರ್ಥಿಕ ಚಿಂತನೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಳ್ಳುವ ತಳ ಮಟ್ಟದ […]
ಪುಸ್ತಕ ಸಂಗಾತಿ
ಬರ್ಫದ ಬೆಂಕಿ ನಾಗರೇಖಾ ಗಾಂವಕರ್ ಗೆಳತಿ ನಾಗರೇಖಾ ಗಾಂವಕರ ಅವರ ಪುಸ್ತಕಗಳು ತಲುಪಿ ಬಹಳ ದಿನಗಳಾದರೂ ಓದಿದ್ದು ಈ ವಾರ..ಭರವಸೆಯ ಕವಯಿತ್ರಿ, ಕತೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡದವರು. “ಬರ್ಫದ ಬೆಂಕಿ” ಹೆಸರೇ ಹೇಳುವಂತೆ ಹೊಸ ರೀತಿಯ ಕಾವ್ಯ ಕಟ್ಟುವಿಕೆಯ ಪ್ರಯತ್ನ. ನನಗೆ ಸ್ವಲ್ಪ ಸಂಕೀರ್ಣವೆನಿಸಿದ ಕವಿತೆಗಳನ್ನು ಶ್ರೀ ಸುಬ್ರಾಯ ಚೊಕ್ಕಾಡಿಯವರ ಮುನ್ನುಡಿಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಇಲ್ಲಿನ ಕವಿತೆಗಳು ಭಾವ, ಅನುಭವದ ಹಿನ್ನೆಲೆಯಲ್ಲಿ ಸಹಜವಾಗಿ ಹೊಮ್ಮಿದಂಥವು. ಮಾಗುವುದೆಂದರೆ ಅವಳ ಕವಿತೆಗಳು ಕಾಲಾತೀತ ಕವಿತೆಗಳು ಬಾನ್ಸುರಿಯ ನಾದ […]
ಅನುವಾದ ಸಂಗಾತಿ
ಮೌನ ಕನ್ನಡ ಕವಿತೆ: ನಾಗರಾಜ ಹರಪನಹಳ್ಳಿ ಇಂಗ್ಳಿಷಿಗೆ: ನಾಗರೇಖಾ ಗಾಂವಕರ್ ನಾಗರಾಜ ಹರಪನಹಳ್ಳಿ ನಾಗರೇಖಾ ಗಾಂವಕರ್ ಕನ್ನಡ ಕವಿತೆ ಮೌನ ಮೌನದಲ್ಲೂ ನಾನು ಸುಳಿದಾಡುವೆ ಒಬ್ಬಳೇ ಇರುವೆ ಎಂದು ಭಾವಿಸಬೇಡ ಸುಳಿಯುವ ಗಾಳಿಯಲ್ಲಿ ಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ ಕಣ್ಣಲ್ಲಿ ನಕ್ಷತ್ರಗಳು ಹಾಡಲಿ ಕಾಲ್ಗೆಜ್ಜೆಗಳಲ್ಲಿ ಏಳು ಸುತ್ತಿನ ಮಲ್ಲಿಗೆ ಅರಳಲಿ ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತು ತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ […]
ಕಾವ್ಯಯಾನ
ಹಸಿರು ಕುದುರೆ ನೀ.ಶ್ರೀಶೈಲ ಹುಲ್ಲೂರು ಹಸಿರು ಕುದುರೆ ರಾಜನೊಂದು ಸಂಜೆ ತನ್ನ ರಾಜ ತೋಟದಲ್ಲಿ ಬರಲು ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು ಹಚ್ಚಹಸಿರು ಕಂಡ ತಾನು ಮೆಚ್ಚಿ ಹರುಷ ಸೂಸುತಿರಲು ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು ಹಸಿರು ಸಿರಿಯ ನಡುವೆ ನಲಿದು ಹೊಸತನೊಂದ ಯೋಚಿಸುತಲಿ ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು ಬೀರಬಲ್ಲನನ್ನು ಕರೆದು ಕೊರೆವ ಆಸೆ ಹೇಳಿಕೊಂಡು ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ ಉಕ್ಕಿಬರುವ ನಗೆಯ ತಡೆದು ಅಕ್ಕರೆಯಲಿ ಒಪ್ಪಿಕೊಂಡು ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ […]
ಕಾವ್ಯಯಾನ
ನನ್ನೂರಲಿ ಏನಿದೆ….? ರೇಖಾವಿ.ಕಂಪ್ಲಿ ನನ್ನೂರಲಿ ಏನಿದೆ….? (ನನ್ನದು ಪ್ರಾಸವಿಲ್ಲದ ಹಾಡು) ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ ನನ್ನೂರಲಿ ಏನಿದೆ ಎಂದೆನುತ ಊರಕೇರಿ ಬಿಟ್ಟು ದೂರದೂರಿಗೆ ಪಯಣ ಬೆಳಸಿದರು ನನ್ನನ್ವ ನನ್ನಪ್ಪ ತಮ್ಮನೊಂದಿಗೆ……… ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ… ಅದಾವ ಮಸಣದ ಕರೆಯೊ ತಿಳಿಯೆ ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ ಕರೋನಾ ಎನ್ನುವ ರೋಗದ ರೂಪದಲಿ ತಪ್ಪಿತಸ್ಥನಂತು ಖಂಡಿತ ಅಲ್ಲ […]
ಗಝಲ್
ಗಝಲ್ ರತ್ನರಾಯಮಲ್ಲ ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’ ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ
ಕಾವ್ಯಯಾನ
ತೋರಣ ಕಟ್ಟುವೆವು ಸುಜಾತ ಗುಪ್ತ ಜಗನ್ನಾಥನು ಜೊತೆ ನಿವಸಿಸಿ ನಮ್ಮನ್ನು ಕಾಯಲು ಅನವರತ ಹೃದಯದ ಭಾವಕೆ ಮಾನವತಾ ತೋರಣ ಕಟ್ಟುವೆವು.. ಜಗದಂಬೆಯ ಮನ ಒಲಿಸಿ ಹಸನ್ಮುಖಿಯಾಗಿರಿಸಲು ಮನದ ದ್ವಾರಕೆ ನೀತಿಯ ತೋರಣ ಕಟ್ಟುವೆವು… ಬಾಳಲಿ ಹಿನ್ನಡೆಸುವ ಸೋಲಿನ ಸಾಲಿಗೆ ನಾವ್ ಚೇತನಾಪ್ರದ ಗೆವುವಿನ ತೋರಣ ಕಟ್ಟುವೆವು. ಕಂದನ ಖುಷಿಯ ಸಿರಿಗೆ ಹರಸುತ ಹರುಷದೆ ಮುತ್ತಂತ ತ್ಯಾಗದ ತೋರಣ ಕಟ್ಟುವಳಮ್ಮ ********
ಪುಸ್ತಕ ಸಂಗಾತಿ
ಮಗರಿಬ್ ಗಜಲ್ ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ* ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದುಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ. ಗಜಲ್ ರಾಣಿಯ […]