ಗಝಲ್

ಗಝಲ್

ರತ್ನರಾಯಮಲ್ಲ

ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ
ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ

ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ
ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ

ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ
ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ

ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು
ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ

ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’
ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ

Leave a Reply

Back To Top