ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆ
ಗಣೇಶಭಟ್
ಮಾನ್ಯ ಪ್ರಧಾನಿಯವರು ಸ್ವಾವಲಂಬಿ ಭಾರತ, ಗ್ರಾಮಮಟ್ಟದಿಂದ ರಾಜ್ಯ ಮಟ್ಟದವರೆಗೂ ಸ್ವಾವಲಂಬನೆಯ ಕುರಿತು ಟ್ವೀಟಿಸಿದ್ದಾರೆ. https://twitter.com/PMOIndia/status/1253562403544915970
ಇಂದು ದೇಶ ಅನುಸರಿಸುತ್ತಿರುವ ಬಂಡವಾಳವಾದ ನೀತಿಯಿಂದ ಈ ಉದ್ದೇಶ ಈಡೇರಲು ಸಾಧ್ಯವಿಲ್ಲ.ಲಕ್ಷ ಲಕ್ಷ ಕೋಟಿ ಹಣ ಸುರಿದರೂ ಅಷ್ಟೇ. ಮಿಶ್ರ ಆರ್ಥಿಕನೀತಿ, ಗಾಂಧೀವಾದ,ಸರ್ವೋದಯ,ಜೆಪಿ ಚಿಂತನೆ,ಸಮಾಜವಾದ ಮುಂತಾದವುಗಳೆಲ್ಲವೂ ಬಂಡವಾಳವಾದದ ವಿವಿಧ ರೂಪಗಳು. ಕಮ್ಯೂನಿಸಮ್ ಎಂಬುದು state capitalism.
ಪ್ರಾದೇಶಿಕ ಸ್ವಾವಲಂಬನೆಗೆ ಬೇಕಾದುದು ನವ ಆರ್ಥಿಕ ಚಿಂತನೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಆಧರಿಸಿ ರೂಪುಗೊಳ್ಳುವ ತಳ ಮಟ್ಟದ ಯೋಜನೆಗಳು.
ಕಳೆದ ಹಲವು ವರ್ಷಗಳಿಂದಲೂ ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆಯ ಕುರಿತು ಪ್ರಉತ(ಪ್ರಗತಿಶೀಲ ಉಪಯೋಗ ತತ್ವ)ದ ಅಧಾರದ ಮೇಲೆ ಬರೆಯುತ್ತಿದ್ದೇನೆ. ಒಂದೆರಡು ಸ್ಯಾಂಪಲ್ ಗಳು:
ಆಗಸ್ಟ್ 10, 2018 ·
ಪ್ರಾದೇಶಿಕ ಅಸಮಾನತೆ ದೂರೀಕರಿಸುವ ಪರಿ
ಪ್ರತಿಯೊಂದು ಪ್ರದೇಶದ ಭೌಗೋಳಿಕ ಪರಿಸ್ಥಿತಿ, ನದಿ ಕೊಳ್ಳಗಳ ಸ್ಥಿತಿ, ಪರಿಸರ, ಮಣ್ಣಿನ ಗುಣ ಲಕ್ಷಣ, ಮಳೆ, ಹವಾಮಾನ ಮುಂತಾದವುಗಳ ಜೊತೆಗೆ ಜನರ ಮಾನಸಿಕತೆಯನ್ನು ಪರಿಗಣಿಸಿ ಯೋಜನೆಗಳು ರೂಪುಗೊಳ್ಳಬೇಕು.
ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳು ತಾಲೂಕು ವಾರು ರೂಪುಗೊಂಡು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕೃತಗೊಳ್ಳಬೇಕು. ಪ್ರತಿಯೊಂದು ರಾಜ್ಯವೂ ತನ್ನ ಎಲ್ಲ ನಾಗರಿಕರಿಗೆ ಉದ್ಯೋಗ ಸೃಷ್ಟಿಸುವ, ತಾನು ಆರ್ಥಿಕವಾಗಿ ಸ್ವಾವಲಂಬಿಯಾಗುವಂತಹ ಪ್ರಯತ್ನ ನಡೆಸಬೇಕು. ಈ ಉದ್ದೇಶದಿಂದಲೇ ಅಭಿವೃದ್ಧಿ ಯೋಜನೆಗಳು ರೂಪುಗೊಳ್ಳಬೇಕು.
13 ಫೆಬ್ರವರಿ ·
ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ ..
ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು.
2 ಏಪ್ರಿಲ್ 2020
ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು
ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ.
24 ಏಪ್ರಿಲ್ ರಂದು, 10:31 ಪೂರ್ವಾಹ್ನ ಸಮಯಕ್ಕೆ ·
ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ
ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆರ್ಥಿಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ ..
ಮಾನವತೆಯ ಹಿತ ಬಯಸುವವರು ಪರ್ಯಾಯ ವ್ಯವಸ್ಥೆಯ ಕುರಿತು ಚಿಂತಿಸಲೇಬೇಕಾದ ಸಂದರ್ಭವಿದು.
********