ಅನುವಾದ ಸಂಗಾತಿ

ಮೌನ

On Ganesh Pyne's creative links with Rembrandt, Abanindranath and ...

ಕನ್ನಡ ಕವಿತೆ: ನಾಗರಾಜ ಹರಪನಹಳ್ಳಿ

ಇಂಗ್ಳಿಷಿಗೆ: ನಾಗರೇಖಾ ಗಾಂವಕರ್

ನಾಗರಾಜ ಹರಪನಹಳ್ಳಿ

ನಾಗರೇಖಾ ಗಾಂವಕರ್

ಕನ್ನಡ ಕವಿತೆ

ಮೌನ

ಮೌನದಲ್ಲೂ ನಾನು ಸುಳಿದಾಡುವೆ
ಒಬ್ಬಳೇ ಇರುವೆ ಎಂದು ಭಾವಿಸಬೇಡ
ಸುಳಿಯುವ ಗಾಳಿಯಲ್ಲಿ
ಎರಡು ನಿಟ್ಟುಸಿರುಗಳಿವೆ
ಅವು ಪ್ರೇಮದ ಪಲ್ಲವಿಗಳಾಗಿ
ಬದಲಾಗಿ ಬಿಡಲಿ
ಕಣ್ಣಲ್ಲಿ ನಕ್ಷತ್ರಗಳು ಹಾಡಲಿ
ಕಾಲ್ಗೆಜ್ಜೆಗಳಲ್ಲಿ
ಏಳು ಸುತ್ತಿನ ಮಲ್ಲಿಗೆ ಅರಳಲಿ

ನೀನುಟ್ಟ ಸೀರೆ ಸೆರಗ ತಾಗಿದ ಗಾಳಿ
ಪ್ರೇಮದ ನವಿರು ಹೊತ್ತು ತಂತು
ಆಡಿದ ಆಡದೇ ಉಳಿದ ಮಾತು
ಮೌನಗಳ ಸಂಕಲನ ಮೋಡಗಳಲ್ಲಿ
ಚಿತ್ರ ಬಿಡಿಸಿತು
ನೀನಿಡುವ ಪ್ರತಿ ಹೆಜ್ಜೆಯಲಿ
ಕನಸು ಇಣುಕುತ್ತಿದೆ ಗೆಳತಿ
ಮನಸುಗಳ ಅಗಣಿತ ತರಂಗಗಳು
ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ?

ನಿನ್ನ ದನಿ ಕೇಳದ ಭೂಮಿಗೆ
ಆಕಳಿಕೆ ಸಮಯ
ಅದಕ್ಕೆ ಮಗ್ಗಲು ಬದಲಿಸುತ್ತಿದೆ
ಮುಗಿಲಿಗೆ ದಿಗಿಲು ಬಡಿದಿದೆ
ಎಲ್ಲಿ ಹೋದೆ ?
ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ

*******

ಇಂಗ್ಲೀಷ್ ಅನುವಾದ

Silence

I can roam even in silence
Dont think that im sequestered.
Two sighs are there
In the wind sauntering across.
Let them to be changed
Like love refrains
let the stars to twinkle in eyes.
Seven folding jasmine
to bloom in the jingle of leg chain

The wind touched
By the veil of your sari
Carried the gentle love,
Told and untold words,
Collection of silences
Drew an image in clouds.

Dream appears in every steps of yours my dear.
Uncountable wavelets of hearts
touching me.
What can i say for this wonder?

For not being heard of Your voice
The Earth is yawning and changing its axis
The sky is perplexed
Where had you gone?
A flower, blossoming in the jingle is
Also silent.

*********

One thought on “ಅನುವಾದ ಸಂಗಾತಿ

  1. ಥ್ಯಾಂಕ್ಸ ಟು ಸಾಹಿತ್ಯ ಸಂಗಾತಿ…ಮಧುಸೂದನ್ ಸರ್ ಹಾಗೂ ಆಂಗ್ಲ ಭಾಷಾ ಉಪನ್ಯಾಸಕಿ, ಕವಯಿತ್ರಿ ನಾಗರೇಖಾ ಗಾಂವ್ಕರ್ ಅವರಿಗೆ..

Leave a Reply

Back To Top