ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಯ್ಯೋ…

Closeup Photography of Purple Silk Flowers With Dewdrops

ಸಂತೇಬೆನ್ನೂರು ಫೈಜ್ನಾಟ್ರಾಜ್

ಮುರಿದು ಬಿಟ್ಟಿರಾ…ಛೆ..ಬಿಟ್ಟಿದ್ದರೆ
ನೆಲದ ಮೇಲೆ ಆಕಾಶ ನೋಡ್ತಾ
ನಾಲ್ಕು ದಿನ ಹೇಗೋ ಬಾಳುತ್ತಿತ್ತು

ಅಯ್ಯೋ ಹರಿದು ಹಾಕಿದಿರಾ…ಛೆ
ಮನವರಳೋ
ನಾಲ್ಕಕ್ಷರ ಬರೆದು ಹಾಕಿದ್ದರೆ ಸಾಕಿತ್ತು

ಕಿತ್ತೇಕೆ ಎಸೆದಿರಿ…ಛೆ
ಮಳೆ ಬಂದಿದ್ದರೆ
ಮೈ ಮುರಿದು ಚಿಗುರುತ್ತಿತ್ತೇನೋ ಪಾಪ

ಏನಂದಿರಿ….ಛೆ
ತುಸು ಕಾದು ನೋಡಿದ್ದರೆ
ನಿಮ್ಮಂತೆಯೇ ಇರುತ್ತಿದ್ದರೋ…ಏನೋ…

ಮುಖ ತಿರುವಿ ಬಿಟ್ಟಿರಾ… ಛೆ
ನಗ್ತಾ ಒಂದೆರಡು ಮಾತಾಡಿದ್ದರೆ
ಹೂ ನಗೆ ಕೊಡುತ್ತಿದ್ದರೇನೋ….!

ಬಾಗಿಲು ಹಾಕಿಯೇ ಬಿಟ್ಟಿರಾ…‌ಛೆ
ಒಲವ ಒಲವಿಂದ ನೋಡದೇ ಹಳದಿ
ಕಣ್ಣೇಕೆ ಬಿಟ್ಟಿರಿ ಪಾಪ ದೂರಾಗುತ್ತಿರಲಿಲ್ಲವೇನೋ!

ಛೆ…ಬಿಡಿ, ನಾನೂ ಹಾಗೆಯೇ
ಬದಲಾಗಿದ್ದರೆ…ನನಗೂ
ಹೊಸ ನೋಟ ಕಾಣುತ್ತಿತ್ತೇನೋ!!

*******

About The Author

1 thought on “ಕಾವ್ಯಯಾನ”

  1. H.K.Subbalakshmi

    ಛೆ,ಬರೆದೇಬಿಟ್ಟಿರಾ…ಕಿವಿಯಲ್ಲಿ ಉಸುರಿದ್ದರಾಗಿತ್ತು
    ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಿತ್ತು…

Leave a Reply

You cannot copy content of this page

Scroll to Top