ನನ್ನೂರಲಿ ಏನಿದೆ….?
ರೇಖಾವಿ.ಕಂಪ್ಲಿ
ನನ್ನೂರಲಿ ಏನಿದೆ….?
(ನನ್ನದು ಪ್ರಾಸವಿಲ್ಲದ ಹಾಡು)
ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ
ನನ್ನೂರಲಿ ಏನಿದೆ ಎಂದೆನುತ ಊರಕೇರಿ
ಬಿಟ್ಟು ದೂರದೂರಿಗೆ ಪಯಣ ಬೆಳಸಿದರು
ನನ್ನನ್ವ ನನ್ನಪ್ಪ ತಮ್ಮನೊಂದಿಗೆ………
ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ
ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ
ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ…
ಅದಾವ ಮಸಣದ ಕರೆಯೊ ತಿಳಿಯೆ
ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ
ಕರೋನಾ ಎನ್ನುವ ರೋಗದ ರೂಪದಲಿ
ತಪ್ಪಿತಸ್ಥನಂತು ಖಂಡಿತ ಅಲ್ಲ ನನ್ನಪ್ಪ……
ಮಾಯೆಗೆ ಕಣ್ಣ ರೆಪ್ಪೆ ಮುಚ್ಚಿಬಿಟ್ಟ ನನ್ನಪ್ಪ
ನನ್ನನ್ವನ ಗೋಳು ಕೇಳುವ ಕಿವಿಗಳಿಲ್ಲ
ಪುಡಿಗಾಸು ದುಡಿವವನ ಕಳೆದುಕೊಂಡು
ಬಿಡಿಗಾಸು ಇಲ್ಲದೆ ಮತ್ತೆ ನಮ್ಮೂರಿನತ್ತ ಪಯಣ…
ಬರಿಗಾಲಿನಲಿ ಬಿಸಿಲ ಧಗೆಯಲಿ
ತಮ್ಮನೊತ್ತು ಕಣ್ಣ ಹನಿ ನುಂಗಿಕೊಂಡು
ಕಾದ ಹೊಟ್ಟೆಗೆ ಬಟ್ಟೆ ಕಟ್ಟಿ ದುಃಖದ ಬುಟ್ಟಿ
ಹೊತ್ತು ಬರುವ ದಾರಿಯಲಿ ಬೇಡಿ ತಿನ್ನುತಾ……
ಮುಳ್ಳು ಕಲ್ಲುಗಳ ತುಳಿಯುತಾ ಧೂಳು
ದುಮ್ಮು ವರಸಿಕೊಳ್ಳುತಾ ಬೇವರ ಹನಿ
ಸೆರಗಲಿ ವರಸಿ ಹೊತ್ತ ತಮ್ಮನ ಸರಸಿಕೊಳ್ಳುತಾ
ರಕ್ತಗಾಲಲಿ ಬಂದು ಸೇರಿದಳು ನನ್ನನ್ವ ನನ್ನೂರನು..
********