ಗಜಲ್

ಗಜಲ್

ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ

ನಿರುತ್ತರ

ಪುಸ್ತಕ ಸಂಗಾತಿ ಒಂದೇ ಗುಟುಕಿಗೆ ಅಮಲೇರುವ ಕಾವ್ಯ ಅರಿವಿನ ಹರಿಗೋಲು ಮೂಲಕ ಕಾವ್ಯದ ಪಯಣ ಆರಂಭಿಸಿದ ಕೆ‌.ಬಿ.ವೀರಲಿಂಗನಗೌಡರು ಹಲವು ಅಗ್ನಿದಿವ್ಯ ಗಳನ್ನು ದಾಟಿಕೊಂಡು ಬಂದಿರುವವರು ಸದ್ಯ ಸಾಸಿವೆಯೊಳಗೆ ಸಾಗರ ಕಾಣುವ ಅವರ ಕವಿತೆಗಳು ಹುಸಿ ಲೋಕದ ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗುತ್ತವೆ ಹೇಳುವ ಸಾಲು ಎರಡಾದರೂ ದೀರ್ಘ ಕವಿತೆಯ ಎಲ್ಲ ಕಸುವನ್ನು ಆ ಸಾಲುಗಳಲ್ಲಿ ತುಂಬಿದ್ದಾರೆ, ಅಕ್ಕನಿಗೆ ಚನ್ನಮಲ್ಲಿಕಾರ್ಜುನನಂತೆ ,ಕೆ.ಬಿ ಅವರು ‘ಸಾಕಿ’ ಎನ್ನುವ ತಮ್ಮ ಆತ್ಮಸಂಗಾತದ ದನಿಯನ್ನು ನಿವೇದಿಸಿಕೊಳ್ಳುವ ಮುಖೇನ ಲೋಕಕ್ಕೆ ಹೇಳಬೇಕಾದ ಎಲ್ಲ ಸಂಕಟಗಳ ದ್ರವ್ಯ […]

ಮಾಂತ್ರಿಕ ಬದುಕು

ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ

ಬರೆಯಬೇಕಾದ ಹಾಡು…

ಇತಿಹಾಸದ ಯಾವ‌ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ‌ ಹಿಡಿದು‌
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು

ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?

ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ

ಮುಸ್ಸಂಜೆ

ಕೊರಡಿನ ಆಸನ ಕೂಡಾ
ನಿನ್ನ ತೋಳ ದಿಂಬಿಗೆ
ನಾ ತಲೆ ಆನಿಸಲು
ರೇಶಿಮೆ ಸುಪ್ಪತ್ತಿಯ
ಸ್ಪರ್ಶ ಆಗಿದೆ

ಮಾತು ಮತ್ತು ಹೂ

ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು […]

ನುಡಿ – ಕಾರಣ

ಮೌನಮೇಲನೋಯಿ ಈ ಮರಪುರಾನಿ ರೇಯಿ
ಎದೆಲೋ ವೆನ್ನೆಲ ಕಲಿಗೇ ಕನ್ನುಲ
ತಾರಾಡೆ ಹಾಯಿಲಾ.
( ಮೌನವೇ ಹಿರಿದೆನಗೆ,
ಮರೆಯಲಾಗದೀ ರಾತ್ರಿ
ಮನ ಹೀರುವ ,ಬೆಳದಿಂಗಳು
ಕಂಗಳಲ್ಲಿ ಸೂಸುತಿರೆ,
ತೂರಾಡುವೆ ಹಾಯಾಗಿ ) .

ಬಡಕಲು ಶರೀರ ಮುಗ್ದ ನಡೆಯ ಅವರನ್ನ ದೊಡ್ಡಕ್ಕಾ ಅಂತಾನೇ ಕರೆಯಲು ಶುರು ಮಾಡಿದಳು ಕಾವ್ಯ. ಆಗೊಮ್ಮೆ ಈಗೊಮ್ಮೆ ಪ್ರೀತಿಯಿಂದ ‘ಪ್ರೇಮಕ್ಕ’ ಅಂತ ಹೆಸರಿಡಿದು ಕೂಗುತ್ತಿದ್ದಳು . ರಂಗೋಲಿ ಯಾವ ದಿಕ್ಕಿಗೆ ಹಾಕಬೇಕು, ದೇವರಪೂಜೆ, ಉಪವಾಸ ವೃತ ಕಲಿಸಿದವರೇ ಪ್ರೇಮಕ್ಕಾ.ಬರಬರುತ್ತ ಕಾವ್ಯಳೊಂದಿಗೆ ತುಂಬಾ ಆತ್ಮೀಯರಾಗಿ ಬಿಟ್ಟರು.ವಾರದಲ್ಲಿ

ಜೈಲಿನಂತಿರುವ ಕೋಣೆಯಲಿ
ಮಾಂಸದಂಗಡಿಯ ಮಟನ್ ನಂತೆ
ನೇತುಬಿಟ್ಟಿರಬೇಕಿತ್ತು
ಹೊತ್ತಿಗೊಂದು ಕೈಗೆ ಸಿಕ್ಕು
ಧರಿಸಬಹುದಿತ್ತು

Back To Top