ಅಂಬೇಡ್ಕರ್ ವಿಶೇಷ ಬರಹ ಭಾರತದ ಸಂವಿಧಾನದ ಪೀಠಿಕೆಯೂ..! ಭಾರತದ ಸಂವಿಧಾನದ ಪೀಠಿಕೆಯೂ..! ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ (೧೯೭೬ರಲ್ಲಿ ಇಂದಿರಾಗಾಂಧಿಯವರಿಂದ ಸೇರಿಸಲ್ಪಟ್ಟದ್ದು). ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ– ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ […]

ಅಂಬೇಡ್ಕರ್ ಜಯಂತಿ ವಿಶೇಷ ಬರಹ ಅಸ್ಪೃಶ್ಯತೆಯ ವಿರುದ್ದ ಅಂಬೇಡ್ಕರ್ ರವರ ಹೋರಾಟ ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ […]

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-5 ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ.  ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು. ನಾವು ತಿರುಗಿ ಬಂದರೂ ಮಕ್ಕಳಿಗೆ […]

ಹಬ್ಬದ ಸಂತೆ

ಕವಿತೆ ಹಬ್ಬದ ಸಂತೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಇನ್ನೇನುಹತ್ತಿರ ಹಬ್ಬದ ಕಾಲಸಂತೆಗಳಲಿ ಮಾರಾಟಕೆಪಂಚೆ ಸೀರೆ ಒಂದೆರಡು ಪಿಂಡಿಮುತುವರ್ಜಿ ವಹಿಸಿನೇಯತೊಡಗಿರುವನುನೇಕಾರ ಹಗಲು ರಾತ್ರಿ ಎನ್ನದೆಮುಂದಿನ ನಾಲ್ಕಾರು ತಿಂಗಳಹೊಟ್ಟೆಪಾಡಿಗೆ! ಇನ್ನು ವಾರದಲ್ಲೆಸಂತೆಗಳ ಸುರಿಮಳೆ…ಅಷ್ಟರಲ್ಲಿ ಅದೆಂಥದೋ ಕಾಯೆಲೆಜಗಕೆಲ್ಲ ಸುಂಟರಗಾಳಿಯ ಹಾಗೆಹಬ್ಬಿಅದೇನೋ ಸಂಜೆ ಕರ್ಫ್ಯೂಅಂತ ಹೇರಿದರುಜೊತೆಜೊತೆಗೆ ಘಂಟೆ ಜಾಗಟೆಬಾರಿಸಿರೆಂದರುದೀಪ ಬೆಳಗಿಸಿ ಕುಣಿಸಿದರುಎಲ್ಲರೊಡನೆ ತಾವೂ ಕೂಡಿಕೊಂಡರುಈ ನೇಕಾರರುಅಮಾಯಕರು… ಹಾಗೆ ಕುಣಿಕುಣಿದುದೀಪ ಜಾಗಟೆಗಳಶಬ್ದ ಬೆಳಕಿನಾಟದ ನಡುವೆಯಲಿದಿಢೀರನೆ ಸಿಡಿಲು ಬಡಿದುಮರಗಳು ಬೆಂದು ಉರಿದ ಹಾಗೆಲಾಕ್ ಡೌನ್! ಲಾಕ್ ಡೌನ್!ಎಂದು ಗುಡುಗಿದರುನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!ಮತ್ತೆ ಗುಡುಗುಟ್ಟಿದರು… […]

ಹೊಸ ಹಿಗ್ಗು…..!!

ಕವಿತೆ ಹೊಸ ಹಿಗ್ಗು…..!! ಯಮುನಾ.ಕಂಬಾರ ಎಲ್ಲಿಹುದು ಹೊಸಹಿಗ್ಗು – ಕ್ಷಣ ನಾನುಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆಬೆಳ್ಳಿ ಮೋಡದಕಪ್ಪಿನಲ್ಲೋ …ಇಲ್ಲಾಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ// ನೀಲಿ ಆಗಸದಎದೆ ತುಂಬಿತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿಅದೇ ಆ ಎಂದಿನಕಲುಷಿತ ಹವೆಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ// ಋಷಿ ಮುನಿಯತಪದಂತೆ ಏಕವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳುಹೊಸ ಚಿಗುರುಹಸಿರೆಲೆಯು ಕಳೆಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ// […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1)ಹೆಣ್ಣಲ್ಲವೇ ನೀ :ಕಲ್ಲು ರೂಪದಿ ಕೂಡಾಮಮತೆ ಸೆಲೆ. 2)ಕಲ್ಲಾಗಿ ಹೋದೆ :ಸ್ವಾರ್ಥಿ ಜಗವು ಕೊಟ್ಟನೋವು ಕಾಣಿಕೆ. 3)ಹಣೆಯ ಬೊಟ್ಟುಅವನಿಟ್ಟ ನೆನಪುಹೃದಯೋಡೆಯ 4)ಕಾದು ಕಲ್ಲಾದೆ :ನಲ್ಲನ ಆಗಮನಕಾಮನಬಿಲ್ಲು. 5)ಅಹಲ್ಯ ರೂಪಶ್ರೀ ರಾಮ ಬರುವನೇ,ಕಲಿಯುಗದಿ. 6)ಗಂಭೀರ ಮೊಗಕಂದನಂದದ ಮನಬಾಳು ನಂದನ. 7)ಮೌನದ ತಾಣಹೆಣ್ಣು ಜೀವದ ಕಣ್ಣು,ತೀರದ ಋಣ. *************************************

ಯುಗ ಯುಗಾದಿ ಕಳೆದರೂ..!

ಯುಗಾದಿ ವಿಶೇಷ ಬರಹ ಯುಗ ಯುಗಾದಿ ಕಳೆದರೂ..! ಯುಗ ಯುಗಾದಿ ಕಳೆದರೂ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.                     ಹೊಂಗೆ ಹೂವ ತೊಂಗಳಲಿ,                     ಭೃಂಗದ ಸಂಗೀತ ಕೇಳಿ                     ಮತ್ತೆ ಕೇಳ ಬರುತಿದೆ.                     ಬೇವಿನ ಕಹಿ ಬಾಳಿನಲಿ                     ಹೂವಿನ ನಸುಗಂಪು ಸೂಸಿ                     ಜೀವಕಳೆಯ ತರುತಿದೆ. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೇ ಒಂದು […]

ಗಜಲ್

ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು […]

ಒಳಿತಿನ ಉಣಿಸಿನ ಕಥೆಗಳು…

ಪುಸ್ತಕ ಸಂಗಾತಿ ಒಳಿತಿನ ಉಣಿಸಿನ ಕಥೆಗಳು… “ಚಮತ್ಕಾರಿ ಚಾಕಲೇಟ” “ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.ಲೇಖಕರು: ಸೋಮು ಕುದರಿಹಾಳ.ಬೆಲೆ:100ರೂ.ಪ್ರಕಟಣೆ:2020.ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798 ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ […]

ಕವಿತೆ ಮತ್ತೆ ಯುಗಾದಿ ಹೊಸ ವರ್ಷವ ಸ್ವಾಗತಿಸುತ ಬಂದಿದೆ ಯುಗಾದಿಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ. ಮಾರನ ಹೂ ಬಾಣದ ಜುಮ್ಮೆನ್ನುವ ಅಮಲುಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು. ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡುಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು. ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತುಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು! ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತುವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು. ಪ್ರತಿ ಕಾಡಲು […]

Back To Top