ಕವಿತೆ
ಮತ್ತೆ ಯುಗಾದಿ
ಹೊಸ ವರ್ಷವ ಸ್ವಾಗತಿಸುತ ಬಂದಿದೆ ಯುಗಾದಿ
ಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ.
ಮಾರನ ಹೂ ಬಾಣದ ಜುಮ್ಮೆನ್ನುವ ಅಮಲು
ಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು.
ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡು
ಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು.
ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತು
ಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು!
ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತು
ವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು.
ಪ್ರತಿ ಕಾಡಲು ಬರಿ ಬಯಲಲು ಹೂ ಹಣ್ಣಿನ ರಾಶಿ
ಹಕ್ಕಿಗಳುಲಿ ಇಂಪಲು ಸವಿ ಕಂಪನು ಸೂಸಿ.
ಯುಗ ಯುಗಾದಿಯು ಬರುತಿರಲಿ ನಮ್ಮಯ ಹೊಸತನಕೆ
ನಾಳೆಯ ಸದ್ವಿಕಾಸಕೆ ನವ ಚೈತನ್ಯದ ಹರಕೆ
************************************************************
ಫಾಲ್ಗುಣ ಗೌಡ ಅಚವೆ
ಚನ್ನಾಗಿದೆ.ಶುಭಾಶಯಗಳು
ಥ್ಯಾಂಕ್ಯೂ ಸರ್
ಪ್ರತಿಗಿಡವೂ ಹಸಿರುಟ್ಟಿವೆ ಹೂ ಬಟ್ಟೆಯ ನೋಡು
….ಪ್ರಕೃತಿಯ ಧ್ಯಾನವೇ ಕವಿತೆ