ಹಾಯ್ಕುಗಳು
ಭಾರತಿ ರವೀಂದ್ರ
1)ಹೆಣ್ಣಲ್ಲವೇ ನೀ :
ಕಲ್ಲು ರೂಪದಿ ಕೂಡಾ
ಮಮತೆ ಸೆಲೆ.
2)ಕಲ್ಲಾಗಿ ಹೋದೆ :
ಸ್ವಾರ್ಥಿ ಜಗವು ಕೊಟ್ಟ
ನೋವು ಕಾಣಿಕೆ.
3)ಹಣೆಯ ಬೊಟ್ಟು
ಅವನಿಟ್ಟ ನೆನಪು
ಹೃದಯೋಡೆಯ
4)ಕಾದು ಕಲ್ಲಾದೆ :
ನಲ್ಲನ ಆಗಮನ
ಕಾಮನಬಿಲ್ಲು.
5)ಅಹಲ್ಯ ರೂಪ
ಶ್ರೀ ರಾಮ ಬರುವನೇ,
ಕಲಿಯುಗದಿ.
6)ಗಂಭೀರ ಮೊಗ
ಕಂದನಂದದ ಮನ
ಬಾಳು ನಂದನ.
7)ಮೌನದ ತಾಣ
ಹೆಣ್ಣು ಜೀವದ ಕಣ್ಣು,
ತೀರದ ಋಣ.
*************************************