ಯುಗ ಯುಗಾದಿ ಕಳೆದರೂ..!

ಯುಗಾದಿ ವಿಶೇಷ ಬರಹ

ಯುಗ ಯುಗಾದಿ ಕಳೆದರೂ..!

ಯುಗ ಯುಗಾದಿ ಕಳೆದರೂ

ಯುಗ ಯುಗಾದಿ ಕಳೆದರೂ

ಯುಗಾದಿ ಮರಳಿ ಬರುತಿದೆ

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

                    ಹೊಂಗೆ ಹೂವ ತೊಂಗಳಲಿ,

                    ಭೃಂಗದ ಸಂಗೀತ ಕೇಳಿ

                    ಮತ್ತೆ ಕೇಳ ಬರುತಿದೆ.

                    ಬೇವಿನ ಕಹಿ ಬಾಳಿನಲಿ

                    ಹೂವಿನ ನಸುಗಂಪು ಸೂಸಿ

                    ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ.

ಒಂದೇ ಒಂದು ಜನ್ಮದಲಿ

ಒಂದೇ ಬಾಲ್ಯ, ಒಂದೇ ಹರೆಯ

ನಮಗದಷ್ಟೇ ಏತಕೋ.

                    ನಿದ್ದೆಗೊಮ್ಮೆ ನಿತ್ಯ ಮರಣ,

                    ಎದ್ದ ಸಲ ನವೀನ ಜನನ,

                    ನಮಗೆ ಏಕೆ ಬಾರದು?

                    ಎಲೆ ಸನತ್ಕುಮಾರ ದೇವ,

                    ಎಲೆ ಸಾಹಸಿ ಚಿರಂಜೀವ,

                    ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ

ಯುಗಾದಿ ಮರಳಿ ಬರುತಿದೆ.

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ.

              # ಅಂಬಿಕಾತನಯದತ್ತ

…………………………………………….

ಯುಗಾದಿ ಹಬ್ಬದ ಮಹತ್ವವೂ..!

ಯುಗಾದಿ ಹಬ್ಬ ಆಗಲೇ ಬಂದಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ…

ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಿಸುವ ವಿಧಾನ..!

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಯುಗಾದಿ ಆಚರಣೆ ಎದುರಿಗಿದೆ. ಮುಂಬರುವ ಮಂಗಳವಾರ ಏಪ್ರಿಲ್​ 13 ನೇ ತಾರೀಕಿನಂದು ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.  ತಮಿಳುನಾಡು ಮತ್ತು ಕೇರಳದಲ್ಲಿ ವಿಷು ಎಂದು ಈ ಹಬ್ಬವನ್ನು ಕರೆಯಲಾಗುತ್ತದೆ. ಇನ್ನು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದು ಕರೆಯುತ್ತಾರೆ.

ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದರೆ, ಪಾಡ್ಯಮಿ ದಿವಸ ಗುಡಿ ಏರಿಸುವುದು ಎಂದರ್ಥ. ಅಂದರೆ, ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವ ಸಂಪ್ರದಾಯವಿದೆ. ಇದು ಹೊಸ ವರ್ಷದ ಆಗಮಕ್ಕೆ ಸಂಕೇತವಾಗಿದೆ. ಜೊತೆಗೆ ಮನೆಯಲ್ಲಿ ವೀಶೆಷ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ. ಪೂಜೆ ಅಂದರೆ ಬೇರೇನೂ ಅಲ್ಲ. ನಮ್ಮ ಬದುಕಿನ ಹೊಸ ಜೀವನದ ಮುಖ್ಯ ವಿಚಾರಗಳು ಹೇಗಿರಬೇಕೆಂಬ ವಿಧಾನದ ಕ್ಯಾಲೆಂಡರ್ ಅಷ್ಟೇ.

ಯುಗಾದಿ ಹಬ್ಬ ಅಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ. ಹೊಸ ವರ್ಷದ ಜೊತೆಗೆ ಹೊಸ ಭರವಸೆ ಮತ್ತು ಹೊಸ ಚೈತನ್ಯ ತುಂಬುವ ದಿನ. ಯುಗ, ಅಂದರೆ ವಯಸ್ಸು ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿ ‘ಯುಗಾದಿ’ ಎಂಬ ಹೆಸರೂ ಬಂದಿದೆ.

ಯುಗಾದಿ ಆಚರಣೆ–

ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಮೊದಲ ದಿನವೂ ಹೌದು. ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭದಲ್ಲಿ ಯುಗಾದಿ ಹಬ್ಬ ಬರುವುದು.

ಚಂದ್ರಮನ ಯುಗಾದಿ 2021 ದಿನಾಂಕ ಮತ್ತು ಮುಹೂರ್ತ ಸಮಯವೂ–

ಯುಗಾದಿ ಹಬ್ಬ 2021 ರ ಏಪ್ರಿಲ್ 12 ನೇ ತಾರೀಕು ಪ್ರತಿಪದ ತಿಥಿಯಂದು ಬೆಳಿಗ್ಗೆ 7:59 ಕ್ಕೆ ಆರಂಭಗೊಳ್ಳುತ್ತದೆ. ಮರುದಿನ ಏಪ್ರಿಲ್​ 13 ನೇ ತಾರೀಕು ಬೆಳಿಗ್ಗೆ 10.16 ರ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ ಹಿಂದೂ ಸಾಂಪ್ರದಾಯದಂತೆ. ಈ ಆಚರಣೆ ಗೊಡ್ಡು ಆಚರಣೆ ಆದರೆ ಯಾವ ಫಲವೂ ಇಲ್ಲ. ಸರ್ವವಿಧದ, ಸರ್ವ ಜಾತಿ ಜನಾಂಗದ ಜನರ ಒಗೂಡಿಕೆವೊಂದೆಗೇ ಆಚರಣೆ ಆಗಬೇಕು.

ಹಬ್ಬಕ್ಕೆ ಸಿದ್ಧತೆಗಳು–

ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಹಬ್ಬಕ್ಕೆ ಬೆಳಿಗ್ಗೆಯಿಂದಲೇ ಮೆರಗುಗೊಳಿಸಲಾಗುತ್ತದೆ. ಯುಗಾದಿಯಂದು ಹೊಸ ಬಟ್ಟೆ, ಹೊಸ ವಿಚಾರ ಹೊಸ ಭರವಸೆಯತ್ತ ಇಡೀ ವರ್ಷ ಸಾಗಲಿ ಎಂಬ ನಂಬಿಕೆಯ ಜೊತೆ ಮುನ್ನಡೆಯವ ಹೆಜ್ಜೆಯಾಗಿರುತ್ತದೆ ಯುಗಾದಿ.

ಯುಗಾದಿ ಹಬ್ಬದ ಆಚರಣೆ ಹೇಗೆ?–

ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸಡಗರ, ಸಂಭ್ರಮ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗಿನ ರಂಗೋಲಿ ಬಿಡಿಸುತ್ತಾರೆ. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆಯ ಎದುರಿನ ಬಾಗಿಲು, ದೇವಾಲಯದ ಬಾಗಿಲಿಗೆ ಮಾವಿನ ಎಲೆಗಳ ಹಾರ (ತಳಿರು ತೋರಣ) ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದವಾಗಿ ಸೇವಿಸುತ್ತಾರೆ.

ಇದಿಷ್ಟೇ ಆದರೆ ಸಾಲದು ಹೊಸ ಸವಂತವನು ಹೊಸ ಜೀವನದ ಭರವಸೆಯೊಂದಿಗೆ ಆಚರಣೆಯಾಗಬೇಕು. ಸರ್ವರಳೊಂದುಗೂಡಿ ಬದುಕಿನ ಆಚರಣೆ ಆಗಬೇಕು. ಆ ಮಾತ್ರ ಈ ಯುಗಾದಿ ಆಚರಣೆಗೆ ಮಹತ್ವ ಬರುವುದು..!

************************

ಕೆ.ಶಿವು.ಲಕ್ಕಣ್ಣವರ

Leave a Reply

Back To Top