ಗಜಲ್

ಗಜಲ್

ಅಶೋಕ ಬಾಬು ಟೇಕಲ್

Eagle, Bird, Flying, Flight

ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗ
ಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ

ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆ
ಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ

ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆ
ಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ

ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !
ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ

ಈಚಲು ಮರದ ನೆರಳು ಮಜ್ಜಿಗೆಗೆ ಯೋಗ್ಯವಲ್ಲ ಎಂದು ಅಬಾಟೇ ಗೆ ಹೇಳಿದ್ದೆ
ಕಂಡವರ ಕಣ್ಣು ನಶೆ ಕುಡಿದು ಅಮಲೇರಿ ಬೊಬ್ಬೆ ಇಡುತ್ತಿದೆ ಈಗ.

*************************************

4 thoughts on “ಗಜಲ್

Leave a Reply

Back To Top