ಕಾವ್ಯಯಾನ
ಅವಳು ನಾಗರೇಖಾ ಗಾಂವಕರ ಅವಳು -1 ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ ಮೂಡಿಸುವ ಕನ್ನಡಿಯ ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು ಕನ್ನಡಿ ಹೇಳುತ್ತಲೇ ಇರುವ ಬಿಂಬ ಪ್ರತಿಬಿಂಬದ ಸರಳ ಸೂತ್ರ ಆಕೆಗೇನೂ ಅರ್ಥವಾಗುವುದಿಲ್ಲ. ತಲ್ಲಣಗಳ ತಕ್ಕಡಿ ಹಿಡಿದೇ ಎದುರು ಬದುರಾಗುವ ಮುಖಗಳು ಬಿಂಬ ಪ್ರತಿಬಿಂಬವಾದರೂ ಒಂದನ್ನೊಂದು ಬೆಂಬಲಿಸುವುದೇ ಇಲ್ಲ ಬಿಂಬದ ಎಡಕೈ ಎತ್ತಿದರೆ ಕನ್ನಡಿಯಲ್ಲಿ ಏರುವ ಬಲಗೈ ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ ಅಲ್ಲಲ್ಲಿ ಕಿತ್ತು ಹೋಗಿದೆ ಈಗೀಗ ಬಿಂಬ ಪ್ರತಿಬಿಂಬ ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ. ಆದರೂ ಆ ಕನ್ನಡಿಯಲ್ಲಿಯೇ […]
ಕಾವ್ಯಯಾನ
ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. […]
ಕಾವ್ಯಯಾನ
ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ […]
ಕಾವ್ಯಯಾನ
ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ […]
ಗಝಲ್
ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು […]
ಕಾವ್ಯಯಾನ
ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ […]
ಇತರೆ
ಸಂಸ್ಕೃತಿ ಉಳಿಸಿ ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು ಸಹಜ. ಮಕ್ಕಳು ತೋಟದಲ್ಲಿ ಅರಳಿ […]
ಕಾವ್ಯಯಾನ
ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು […]
ಗಝಲ್ ಲೋಕ
‘ಗಝಲ್ ಲೋಕ’ ಬಸವರಾಜ್ ಕಾಸೆಯವರ ಹೊಸ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಮೊದಲ ಅದ್ಯಾಯ ಒಲವಿನ ಅಧಿವೇಶನವೇ ಈ ಗಜಲ್ ಗಜಲ್ ಎನ್ನುವ ಪದ ಕೇಳಿದರೆ ಸಾಕು ಇದರಲ್ಲಿ ಏನೋ ಇದೆ ಎಂದು ತನ್ನಷ್ಟಕ್ಕೇ ತಾ ಹಿಡಿದಿಟ್ಟು ಕಾಡುವ ಒಂದು ಭಾವ ಕಣ್ಣು ಮುಂದೆ ಬರುತ್ತದೆ. ಹೌದು ಗಜಲ್ ಎಂದರೆ ಹಾಗೆ ಮನಸ್ಸಿಗೆ ಮುಟ್ಟಿ ಬಿಟ್ಟ ನಂತರವೂ ಸಹ ಆವರಿಸುವ ಒಂದು ಬೆಚ್ಚನೆ […]
ಸ್ವಾತ್ಮಗತ
ನಾಳೆ ಬಪ್ಪುದು ಕೆ.ಶಿವುಲಕ್ಕಣ್ಣವರ ಹಲವಾರು ಪಲ್ಲಟಗಳನ್ನು ಹೊಂದಿರುವ ‘ನಾಳೆ ಬಪ್ಪುದು’ ಎಂಬ ಹನುಮಂತ ಹಾಲಿಗೇರಿಯವರ ನಾಟಕವೂ..! ಸಾಹಿತಿ ಹನುಮಂತ ಹಾಲಿಗೇರಿಯವರು ತಮ್ಮ ‘ಏಪ್ರಿಲ್ ಫೂಲ್’ ಕಥೆಗಳ ಸಂಕಲನದ ‘ಏಪ್ರಿಲ್ ಪೂಲ್’ ಕಥೆಯನ್ನು ಆಧರಿಸಿ ‘ನಾಳೆ ಬಪ್ಪುದು’ ಎಂಬ ನಾಟಕವನ್ನು ಬರೆದಿದ್ದಾರೆ… ಈ ನಾಟಕವನ್ನು ಓದುತ್ತಿದ್ದಂತೆ, ಇದು ಮುಖ್ಯವಾಗಿ ನಾಟಕಕಾರ ಹನುಮಂತ ಹಾಲಿಗೇರಿಯವರ ಫ್ಯಾಂಟಸಿ ನಾಟಕದಂತೆ ನನಗೆ ಭಾಸಾವಾಯಿತು… ಯಾರಿಗೆ ಗೊತ್ತು ಇದು ಮುಂದೆ ವಾಸ್ತವವಾಗಲೂಬಹುದು. ಇರಲಿ. ಮುಂದೆ ಈ ನಾಟಕದ ಹಂದರ ನೋಡೋಣ… ಇಲ್ಲಿ ಮುಖ್ಯವಾಗಿ ನನಗೆ […]