ಎದಿಹಿಗ್ಗು ಕಡೆತನಕ.

ಎದಿಹಿಗ್ಗು ಕಡೆತನಕ.

ಭಾವಲಹರಿ. ಎದಿಹಿಗ್ಗು ಕಡೆತನಕ. ರಶ್ಮಿ .ಎಸ್. ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬. ಬ್ಯಾಸಗಿ ಝಳ ತಾಕಲಾರ್ದ […]

ಕನಸು

ಕವಿತೆ ಕನಸು ಮೋಹನ್ ಗೌಡ ಹೆಗ್ರೆ ಜಗದಗಲವ ಅಳೆದ ಕಣ್ಗಳುಎದೆಯದವ ತಟ್ಟಿದ ಮೌನ ಮಾತುಗಳುಅಮೂರ್ತ ವಿಸ್ಮಯಗಳ ಮೂಟೆ ಕಟ್ಟಿ ಮುದ್ದಾಡುತ್ತವೆನಮ್ಮೊಳಗೆ ಹೊಸ ಕನಸಿನ ಪರಪಂಚದೊಂದಿದೆ…….. ಕಣ್ಣಲ್ಲಿ ನೋಡದೇ ಇದ್ದರೂಕೈಯಲ್ಲಿ ಮುಟ್ಟದಿದ್ದರೂಅಲ್ಲೊಂದು ಕ್ಷಣಿಕ ಮೂರ್ತ ಸ್ಥಿತಿಪರಿಚಿತ ಅಪರಿಚಿತ ವ್ಯಕ್ತಿ ಜಾಗೆಗಳ ಅನಾವರಣ ಕನಸುಗಳಿಗೋ ಸಾಕಷ್ಟು ಕವಲುಗಳುಹೌದೆನಿಸುವ, ಬೇಕು, ಬೇಡವೆನಿಸೋನಮ್ಮದೇ ವಸ್ತು ವಿಷಯಗಳೇ ಕನಸಿನ ಒಡಲಾಳಆದರೂ ಹೋಲಿಕೆಯಾಗದ ಕನಸುಗಳೂ ಒಮ್ಮೊಮ್ಮೆ ಕನಸಿನ ನೂರು ಮುಖಗಳಲ್ಲಿಪ್ರೀತಿ, ಖುಷಿ, ಭಯ, ನಿರೀಕ್ಷೆಗಳಿದ್ದರೂಕಂಡು ಕಾಣದಾದ ಕನಸನೂಕ್ಷಣಿಕ ಮನದಾಳದಲ್ಲಿ ಇರಿಸಿಕೊಂಡಿದ್ದಿದೆ ಕನಸಿನ ವಿಳಾಸ ಪಡೆದು ಮಾತಾಡಬೇಕಿದೆಭ್ರಷ್ಟತೆ, […]

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7 ಅಲಗೇರಿಯಲ್ಲಿ ಬೆಂಕಿ ಮತ್ತು ಮೊಲ             ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, […]

ಬಿಳಿ ಸಾಹೇಬನ ಭಾರತ

ಪುಸ್ತಕ ಸಂಗಾತಿ ಬಿಳಿ ಸಾಹೇಬನ ಭಾರತ ಪುಸ್ತಕ: ಬಿಳಿ ಸಾಹೇಬನ ಭಾರತಲೇಖಕರು: ಜಗದೀಶ್ ಕೊಪ್ಪಪ್ರಕಾಶನ: ಮನೋಹರ ಗ್ರಂಥಮಾಲೆ ‌ಬೆಲೆ: 90 ರೂಲಭ್ಯತೆ : ಸಂಗಾತ ಪುಸ್ತಕ, ಧಾರವಾಡ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು .ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ,ಕಾಡಿನ ಅನುಭವದ ಹೊತ್ತಿಗೆ ಅಲ್ಲ ಪುಸ್ತಕ ಅವರ ವೈಯಕ್ತಿಕ ಬದುಕಿನ ಅನುರೂಪ ಮಾಹಿತಿ ನೀಡುತ್ತದೆ . […]

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಮಾಯಾವಿ 2020

ಕವಿತೆ ಮಾಯಾವಿ 2020 ರಜಿಯಾ ಕೆ ಭಾವಿಕಟ್ಟಿ ಅಳಿದು ಉಳಿದದ್ದು ಎಲ್ಲವೂನಿಗೂಢತೆಯ ಸಾರವನ್ನು ಹೊತ್ತು ತಂದು ತೇಲುವ ದೋಣಿಯಲ್ಲಿ ಜಲದ ಸುಳಿಯೇ ಇಲ್ಲದೆ ಮುಳುಗಿ ಸತ್ತಂತೆ ಭಾಸವಾಗಿತ್ತು ಅಂಧನಿಗೂ ಕುರಡನೆಂಬ ಹಣೆಪಟ್ಟಿ ಮೊದಲೇ ಇದ್ದರು ಹೊಸತರಹದ ಮುಖವಾಡದನೇತ್ರಗಳಿಗೆ ಬಣ್ಣಗಳ ಲೇಪಿಸಲಾಗಿತ್ತು ಕಾಣದಾ ಜೀವಯು ಎಂಬ ಸುಳ್ಳುಗಳ ಸೋಗಿಗೆ ಕಾಲವೇನಿಂತು ಮುನ್ನುಡಿ ಬರೆದಿತ್ತುಅದಕೆ ಸತ್ಯವೆಂಬಂತೆ ಸಮಯಸಾತು ನೀಡಿ ಗರ್ವಪಟ್ಟಿತ್ತು. ಬಿತ್ತಿದವನು ಬರೀಗೈಲಿ ಬೆತ್ತಲಾಗಿ ನಿಂತು ಪರರ ಪಾಲಿಗೆಹುಚ್ಚನಂತೆ ಕಂಡು ಬದುಕುವ ಪಾಡು ಬಂದು ನಿಂತಿತ್ತು. ಗುಡಿ ಗುಂಡಾರ ಮಸೀದಿಗಳನದೇವರಿಗೂ […]

ಅಂಕಣ ಬರಹ ಶಾಲಾರಂಗದೊಳಗೊಂದು ಕೋಲಾಟ ಠಣ್…ಠಣ್… ಠಣ್.. ಗಂಟೆಯ ಸದ್ದು ಒಂಭತ್ತು ಸಾರಿ  ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ.   ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಅದು ನಮ್ಮ ಶಾಲೆ.  ನಮ್ಮ ಹಳ್ಳಿಯ ಶಾಲೆ.  ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, […]

ಅಂಕಣ ಬರಹ ಅರಿವಿನ ನಾವೆಯ ಮೇಲೆ ಸುಖ ಪಯಣ… “Every human being lives in a perpetual state of insuffiency. No matter who you are or what you have achieved, you still want a little more than what you have right now…“ -Sadhguru (Inner Engineering) ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ […]

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

ನನ್ನವನು

ಕವಿತೆ ನನ್ನವನು ಅನಿಲ ಕಾಮತ ಮದಿರೆಯ ಅಮಲಿನಲ್ಲಿದ್ದಾಗಕೈಹಿಡಿದು ಕುಳುಣಿಸಿದ್ದೇನೆಹಸಿವಿನಿಂದ ಒಡಲುಉರಿ ಎದ್ದರುಒಡಲು ತುಂಬಿದವರಂತೆನಟಿಸಿರುವೆ ಮಾನನಿಯರ ಸಂಘದಲ್ಲಿಮುಳುಗಿದರುಮೌನ ಮುರಿಯದಿರುವೆಮೈಯ ಮೇಲಿನಬರೆ ಸರಿಕರಿಗೆಸಣ್ಣ ಗುಮಾನಿಯೂಬರೆದ ಹಾಗೆಸೀರೆಯಿಂದಸುತ್ತಿಕೊಂಡಿರುವೆರಂಡೆ ಮುಂಡೆಯಬೈಗಳಿಗೆ ದಿನಂಪ್ರತಿಆಹಾರವಾಗಿರುವೆನಿನ್ನ ಸಿಟ್ಟಿಗೆ ಅದೆಷ್ಟು ಸಲನಾನು ಆಹುತಿಯಾಗಿರುವೆಏಕೆಂದರೆ ನೀನುನನ್ನವನು…………. ******************************************************

Back To Top