ಡಾ ಫ ಗು ಹಳಕಟ್ಟಿ.-ಒಂದು ನೆನಪು .

ಡಾ ಫ ಗು ಹಳಕಟ್ಟಿ.-ಒಂದು ನೆನಪು .

ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ರ‍್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು ‘ವಚನ ಪಿತಾಮಹ’ ಎಂಬ ಬಿರುದು ನೀಡಿ ಗೌರವಿಸಿದೆ

ಇದರ ಕತೆ ಸುತ್ತುವುದೇ, ತಾಯಿಯ ಪಾತ್ರದ ಸುತ್ತ. ಮನೆಯ ಜವಾಬ್ದಾರಿಗಳನ್ನೆಲ್ಲ ಪ್ರೀತಿಯಿಂದ ನಿರ್ವಹಿಸುವ ತಾಯಿ. ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿಸುತ್ತಾಳೆ. ಜವಾಬ್ದಾರಿ ಹೊರಲು ಹಿಂದೇಟು ಹಾಕುವ ಪತಿ. ಮಕ್ಕಳೂ ಮದುವೆಯಾಗಿ ಸೊಸೆಯಂದಿರು ಮನೆ ತುಂಬಿದರೂ ಅಮ್ಮನಿಗೆ ಮುಗಿಯದ ಕೆಲಸ. ಅಪ್ಪ ರಿಟೈರ್ ಆಗಿ ವಿಶ್ರಾಂತ ಜೀವನ

ಹೊಂಗನಸು

ಕವಿತೆ ಹೊಂಗನಸು ಶಂಕರಾನಂದ ಹೆಬ್ಬಾಳ ರಾತ್ರಿ ಹೊತ್ತು ದೀಪಹಚ್ಚದೆ ಕುಳಿತಿದ್ದೇನೆನಿನ್ನ ಕಣ್ಣ ಬೆಳಕಿನಲ್ಲಿಜಗ ನೋಡಬೇಕೆಂದು ಹಪಹಪಿಸುವ ಮನದಲ್ಲಿಮೂಲೆಗೊರಗಿದ್ದೇನೆನೀ ಸಾಂತ್ವನ ಹೇಳಲುಬಂದೆ ಬರುವೆಯೆಂದು ಕಣ್ಣು ಕಾಣಿಸದಿದ್ದರೂನಡೆಯುತ್ತಿದ್ದೇನೆನೀನು ಈ ಕುರುಡನಕೈಹಿಡಿಯುವೆಯೆಂದು ಸ್ತಬ್ಧ ಹೃದಯದ ಬಡಿತದಲಿನಿನ್ನ ಅರಸಿ ನಿಂತಿದ್ದೇನೆಒಳಗೆ ನೀ ರಾಣಿಯಾಗಿಜೊತೆಯಿರುವೆಯೆಂದು ಕನಸುಗಳನು ಕಾಣುವದನ್ನೆಬಿಟ್ಟಿದ್ದೇನೆನೀನೆ ಬಾಳಿನ ಹೊಂಗನಸಾಗಿಬಂದಿರುವೆಯೆಂದು… ಜೀವವನ್ನು ಅಂಗೈಯಲ್ಲಿಹಿಡಿದಿದ್ದೇನೆನೀನೆ ನನ್ನ ಜೀವವಾಗಿಇರುವೆಯೆಂದು |*************

ಹರಿಯುವ ನೀರು

ಆದರೆ ಕೆಲವು ಸಲ ಸಾಮಾಜಿಕ ಬದಲಾವಣೆಗಳು ಭಾವನಾತ್ಮಕ ಬದಲಾವಣೆಗೆ, ಮೌಲ್ಯಗಳ ಬದಲಾವಣೆಗೆ ಎಡೆಮಾಡಿ ಕೊಡುತ್ತವೆ. ಪ್ರಾಚೀನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕುಟುಂಬದ ವ್ಯವಸ್ಥಗೆ ವಿಶೇಷ ಸ್ಥಾನವಿದ್ದಿತು. ಸಂಬಂಧಗಳು ನಿಕಟವಾಗಿದ್ದವು. ಉದ್ಯೋಗಗಳು ಕುಟುಂಬಕ್ಕೆ ಸೀಮಿತವಾಗಿದ್ದವು, ಸ್ಥಳೀಯವಾಗಿದ್ದವು. ಮಕ್ಕಳು ತಾಯಿಯಿಂದ ದೂರವಾಗುವ ಕಾರಣಗಳಿರಲಿಲ್ಲ. ಹೆಣ್ಣು ಮಗುವನ್ನು ಕುಲಕ್ಕೆ ಹೊರಗೆ ಎನ್ನುತ್ತ ಚಿಕ್ಕಂದಿನಿಂದಲೇ ಮಾನಸಿಕವಾಗಿ ದೂರವಿಡಲಾಗುತ್ತಿತ್ತು.

ಭಾವಗೀತೆ

ಮೇಘಗಳ ಅಂಚಲಿ ತುಂತುರು ಹನಿಯು
ಮಣ್ಣಿನ ಘಮ್ಮನೆ ವಾಸನೆಯು ತರುತಿದೆ
ನಿನ್ನದೇ ನೆನಪಿನ ದೋಣಿಯೊಂದು
ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ

ಗಜಲ್

ಮಡಿಲ ಕಂದನ ಲೀಲೆಗಳಲ್ಲಿ ತನ್ಮಯಳಾಗಿ ಮರೆತಿಹಳು ತಾಯಿ ಜಗವೆಲ್ಲ.
ಎದೆಗವುಚಿಕೊಂಡು ಹಾಲೂಡಿಸುವ ತಾಯಿಯ ತದೇಕ ನೋಟದಿ ಅದೇನ ಚಂದವೇ ನೀ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಪುಟ್ಟಪಾದ

ಕವಿತೆ ಪುಟ್ಟಪಾದ ಡಾ. ನಿರ್ಮಲಾ ಬಟ್ಟಲ ಪುಟ್ಟ ಪಾದಗಳಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!ಈ ರಾಮನಾಗಿ…..ನಾನು ಕೌಸಲ್ಯೆಯಾಗಿ….!! ಅರಮನೆ…. ,ಅಂಗಳದಲ್ಲೆಲ್ಲಾಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ ಹಿಡಿದು ನಡೆಸಿದನಾನು ಮರೆತೆಬಿಟ್ಟೆ…ಬೆತ್ತಲೆ ಪಾದಗಳಲ್ಲಿ ಹದಿನಾಲ್ಕುವರುಷ ಕಾನನದ ಕಲ್ಲುಮುಳ್ಳುಗಳಲ್ಲಿಸುತ್ತುವಾಗ ನಿನ್ನ ಕೊಮಲ ಪಾದನೊಯುವುದೆಂದು….!! ಈ ಪಾದಗಳು …ಗರ್ಭ ಬಿಟ್ಟು ಭೂಮಿಸೊಕಲುಮರೆತೆಬಿಟ್ಟೆ ಸೆರೆಮನೆಯನ್ನಾ….!!ಈ ಶಾಮನಿಗಾಗಿನಾ ದೇವಕಿಯಾಗಿ…..!! ಕರುಳಿಗಷ್ಟೆ ಅಲ್ಲಾ ಮಮತೆಗೂ ಕತ್ತರಿಹಾಕಿ…..!!ಸಾವಿನ ಸೆರೆಮನೆಯಿಂದ ಹೊರನೂಕಿನಿನ್ನ ಬಾಲ ಲೀಲೆಗಳನೆಲ್ಲಾಯಶೋಧೆಯ ಮಡಿಲಿಗೆ ಹಾಕಿನೀ ಮತ್ತೆ ಬರುವ ದಾರಿಯನ್ನೇಕಾಯುತ್ತ ಕುಳಿತೆನಲ್ಲಾ….ನೀನೆ ದೈವವೆಂದು…..!! ಈ ಪುಟ ಪಾದದ ಮಯೆಯಲ್ಲಿಮತ್ತೆ ಕಳೆದು ಹೊಗಿದ್ದೇನೆ….!ನೆನಪುಗಳ ಆಳದಲ್ಲಿ….ನೀನೆ […]

ವಿದ್ಯಾರ್ಥಿಗಳೆಂಬ ಮರುಜವಣಿಗಳು

ಲೇಖನ ವಿದ್ಯಾರ್ಥಿಗಳೆಂಬ ಮರುಜವಣಿಗಳು ಕಾಂತರಾಜು ಕನಕಪುರ ಒಬ್ಬ ಅಧ್ಯಾಪಕನಾಗಿ,  ಖಾಲಿಯಾದ ಕಾಲೇಜು ಆವರಣಗಳು, ವಿದ್ಯಾರ್ಥಿಗಳ ಕಲರವವಿರದ ನೀರವ ಮೊಗಸಾಲೆಗಳು, ಧೂಳು ತಿನ್ನುತ್ತಿರುವ ಬೆಂಚು-ಡೆಸ್ಕ್ ಗಳನ್ನು ನೋಡುವ ಸಂದರ್ಭ ಮತ್ತೆ ಯಾವತ್ತಿಗೂ ಬಾರದಿರಲಿ ಎಂದು ಆಶಿಸುತ್ತೇನೆ. ಕೋವಿಡ್-19ರ ಕಾರಣಕ್ಕಾಗಿ ವಿದ್ಯಾರ್ಥಿಗಳು ಆಗಮಿಸದಂತಾಗಿ ಈಗ ಕಾಲೇಜು ಕೇವಲ ನಿಸ್ತೇಜ ಕಟ್ಟಡವಾಗಿದೆ, ಅದಕ್ಕೆ ಜೀವ ಸಂಚಾರವಾಗುವುದು ವಿದ್ಯಾರ್ಥಿಗಳೆಂಬ ಮರುಜವಣಿಗಳ ಪ್ರವೇಶವಾದಾಗ ಮಾತ್ರ. ಈ ಸಂದರ್ಭದಲ್ಲಿ ಶ್ರೀಪಾದರಾಯರ “ಕಂಗಳಿದ್ಯಾತಕೋ ಕಾವೇರಿರಂಗನ ನೋಡದ” ಗೀತೆಯನ್ನು ಅವರ ಕ್ಷಮೆಕೋರಿ ಬದಲಾಯಿಸಿಕೊಂಡು“ಕಾಲೇಜಿದ್ಯಾತಕೋ ವಿದ್ಯಾರ್ಥಿಗಳೇ ಇರದ|ಶಿಕ್ಷಣದೊಳಗೆ ಮುಖ್ಯ ಮೂರುತಿ […]

Back To Top