ಕವಿತೆ
ಹೊಂಗನಸು
ಶಂಕರಾನಂದ ಹೆಬ್ಬಾಳ
ರಾತ್ರಿ ಹೊತ್ತು ದೀಪ
ಹಚ್ಚದೆ ಕುಳಿತಿದ್ದೇನೆ
ನಿನ್ನ ಕಣ್ಣ ಬೆಳಕಿನಲ್ಲಿ
ಜಗ ನೋಡಬೇಕೆಂದು
ಹಪಹಪಿಸುವ ಮನದಲ್ಲಿ
ಮೂಲೆಗೊರಗಿದ್ದೇನೆ
ನೀ ಸಾಂತ್ವನ ಹೇಳಲು
ಬಂದೆ ಬರುವೆಯೆಂದು
ಕಣ್ಣು ಕಾಣಿಸದಿದ್ದರೂ
ನಡೆಯುತ್ತಿದ್ದೇನೆ
ನೀನು ಈ ಕುರುಡನ
ಕೈಹಿಡಿಯುವೆಯೆಂದು
ಸ್ತಬ್ಧ ಹೃದಯದ ಬಡಿತದಲಿ
ನಿನ್ನ ಅರಸಿ ನಿಂತಿದ್ದೇನೆ
ಒಳಗೆ ನೀ ರಾಣಿಯಾಗಿ
ಜೊತೆಯಿರುವೆಯೆಂದು
ಕನಸುಗಳನು ಕಾಣುವದನ್ನೆ
ಬಿಟ್ಟಿದ್ದೇನೆ
ನೀನೆ ಬಾಳಿನ ಹೊಂಗನಸಾಗಿ
ಬಂದಿರುವೆಯೆಂದು…
ಜೀವವನ್ನು ಅಂಗೈಯಲ್ಲಿ
ಹಿಡಿದಿದ್ದೇನೆ
ನೀನೆ ನನ್ನ ಜೀವವಾಗಿ
ಇರುವೆಯೆಂದು
|*************
Super sir