ಪುಟ್ಟಪಾದ

ಕವಿತೆ

ಪುಟ್ಟಪಾದ

ಡಾ. ನಿರ್ಮಲಾ ಬಟ್ಟಲ

Baby Feet Newborn Leg - Free photo on Pixabay

ಪುಟ್ಟ ಪಾದಗಳ
ಮಾಯೆಯಲ್ಲಿ ಜಗತ್ತೇ ಮರೆತಿದ್ದೆ….!!
ಈ ರಾಮನಾಗಿ…..
ನಾನು ಕೌಸಲ್ಯೆಯಾಗಿ….!!

ಅರಮನೆ…. ,ಅಂಗಳದಲ್ಲೆಲ್ಲಾ
ಓಡಾಡುವಾಗ ಅಡಿಗಡಿಗೆ ಅಂಗೈಯನ್ನೇ ಹಿಡಿದು ನಡೆಸಿದ
ನಾನು ಮರೆತೆಬಿಟ್ಟೆ…
ಬೆತ್ತಲೆ ಪಾದಗಳಲ್ಲಿ ಹದಿನಾಲ್ಕು
ವರುಷ ಕಾನನದ ಕಲ್ಲುಮುಳ್ಳುಗಳಲ್ಲಿ
ಸುತ್ತುವಾಗ ನಿನ್ನ ಕೊಮಲ ಪಾದ
ನೊಯುವುದೆಂದು….!!

ಈ ಪಾದಗಳು …
ಗರ್ಭ ಬಿಟ್ಟು ಭೂಮಿಸೊಕಲು
ಮರೆತೆಬಿಟ್ಟೆ ಸೆರೆಮನೆಯನ್ನಾ….!!
ಈ ಶಾಮನಿಗಾಗಿ
ನಾ ದೇವಕಿಯಾಗಿ…..!!

ಕರುಳಿಗಷ್ಟೆ ಅಲ್ಲಾ ಮಮತೆಗೂ ಕತ್ತರಿಹಾಕಿ…..!!
ಸಾವಿನ ಸೆರೆಮನೆಯಿಂದ ಹೊರನೂಕಿ
ನಿನ್ನ ಬಾಲ ಲೀಲೆಗಳನೆಲ್ಲಾ
ಯಶೋಧೆಯ ಮಡಿಲಿಗೆ ಹಾಕಿ
ನೀ ಮತ್ತೆ ಬರುವ ದಾರಿಯನ್ನೇ
ಕಾಯುತ್ತ ಕುಳಿತೆನಲ್ಲಾ….
ನೀನೆ ದೈವವೆಂದು…..!!

ಈ ಪುಟ ಪಾದದ ಮಯೆಯಲ್ಲಿ
ಮತ್ತೆ ಕಳೆದು ಹೊಗಿದ್ದೇನೆ….!
ನೆನಪುಗಳ ಆಳದಲ್ಲಿ….
ನೀನೆ ರಾಮ, ನೀನೆ ಶಾಮಯೆಂದು
ನಾನೆ ಕೌಸಲ್ಯ ದೇವಕಿಯಂದು
ಭ್ರಮಿಸಿ ಸಂಭ್ರಮಿಸಿ….!!
ಮರೆತು ಬಿಟ್ಟೆ ನಾನು
ಶೋಕದ ಹೊರತು ಕೊಟ್ಟರೆನವರು ಮಮತೆಗೆ….?!!!!
ನೀನು ಹೊರತಾಗಿಲ್ಲ ಅದಕೆ….!!
ಮುಸಂಜೆಯ ಈ ಮಬ್ಬು ಗತ್ತಲಿನಲಿ
ಕಾಯುತಿರುವೆ ನಿನಗಾಗಿ….!!!

***********

4 thoughts on “ಪುಟ್ಟಪಾದ

Leave a Reply

Back To Top