ಕವಿತೆ
ಕತೆಯೊಂದ ಹೇಳಮ್ಮ…
ಡಾ.ಗೀತಾ ಪಾಟೀಲ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಆ ರಾಜನರಮನೆಯ ವೈಭವದ ವರ್ಣನೆಯು
ಬೇಡೆನಗೆ ಹೂವಂತೆ ಬೆಳೆದವಳ ಕತೆಯು
ನಮ್ಮಂಥ ಸಾಮಾನ್ಯರ ಕತೆ ಹೇಳು ನನಗೆ
ಅದ ಕೇಳಿ ಅರಳುವೆ ನಾ ಮುಳ್ಳುಗಳ ನಡುವೆ II೧II
ನನ್ನ ಬಾಳ ದಾರಿಯಿದು ಹೂಗಳ ಹಾಸಿಗೆಯಲ್ಲ
ಕಲ್ಲೆಷ್ಟೋ ಮುಳ್ಳೆಷ್ಟೋ ನಾ ಸವೆಸಬೇಕಲ್ಲ
ನಿನ್ನನುಭಾವದ ಕತೆಗಳು ಕೈಹಿಡಿದು ನಡೆಸಲು
ಆ ಬೆಳಕ ಪಥದಲ್ಲಿ ಮುನ್ನಡೆವೆ ನಾನು….. II೨II
ಕತೆಯೊಂದ ಹೇಳಮ್ಮ ನಿನ್ನೊಡಲ ಕುಡಿಗೆ
ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ….
ನಿಜ್ವಾಗ್ಲೂ ಅದ್ಭುತ ಕವಿತೆ ಮೇಡಂ ಜೀ.
ಗೀತಕ್ಕ, ನಿಮ್ಮ ಬರವಣಿಗೆ ಯಾವಾಗಲು ಅತ್ಯುತ್ತಮವಾಗಿರುತ್ತೆ
ಸುಂದರ! ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ