ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ
ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ ಹಾರಿದ್ದುಹೂವು ನಕ್ಕಿದ್ದುಗಾಳಿಗಷ್ಟೇ ತಿಳಿದ ಸತ್ಯಸಾಬೀತು ಪಡಿಸುವುದಕ್ಕೆಪುರಾವೆ ಒದಗಿಸುವುದುಎಷ್ಟು ಕಷ್ಟ?! ಭೂಮಿ ತೂಗುವ ಹಕ್ಕಿ ಈ ಬೆಳ್ಳಾನೆ ಬೆಳಗಿನಲ್ಲಿಮುಂಬಾಗಿಲ ಅಂಗಳದಲ್ಲಿಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾಭೂಮಿಯನ್ನೇ ತೂಗುತ್ತಿದೆಯಲ್ಲಾಎಲಾ! ಪುಟಾಣಿ ಚುರುಕು ಹಕ್ಕಿಯಾರಿಟ್ಟರೋ ಹೆಸರು?ಭೂಮಿ ತೂಗುವ ಹಕ್ಕಿ. ಮೇಲಕ್ಕೊಮ್ಮೆ ಕೆಳಕ್ಕೊಮ್ಮೆತೂಗಿದಷ್ಟೂ ತೂಗಿದಷ್ಟೂಮೇಲಕ್ಕೂ ಏರುವುದಿಲ್ಲ;ಕೆಳಕ್ಕೂಇಳಿಯುವುದಿಲ್ಲ.ಸಮತೋಲನದ ಸಮಭಾರವಂತೂಸಧ್ಯಕ್ಕೆ ಸಾಧ್ಯವೇ ಇಲ್ಲವಾ..?ಅತ್ತೊಮ್ಮೆ ಇತ್ತೊಮ್ಮೆ ಮುಗಿಯದಶತಪಥ. ಪಾತಾಳಕ್ಕಿಳಿದ ಇಲ್ಲಿಯ ದು:ಖಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲುಹಿಡಿತಕ್ಕೆ ದಕ್ಕುವುದಿಲ್ಲ. ಹಠಕಟ್ಟಿ ಉಸಿರೊತ್ತಿಬಿರುಸಿನಲ್ಲಿ ಒಯ್ದಷ್ಟೇರಭಸದಲ್ಲಿ ರಪಕ್ಕನೆ ಪ್ರತಿಭಾರಿನೆಲಕ್ಕಾತು ಹೋಗುವ ವಿಫಲ ಪ್ರಯತ್ನನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂಅರೆಗಳಿಗೆ ಕಂಪಿಸಿಕೊಂಡರೂ.. ಹಕ್ಕಿ ಬಾಲ ಕುಣಿಸುತ್ತಲೇ ಇದೆಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿಪುಕ್ಕದಲ್ಲಿಟ್ಟು ತೂಗುತ್ತಲೇ ಇದೆನಿರುಕಿಸುತ್ತಾ ನಿಂತ ಅಂಗಳದೆದೆಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ. ದಕ್ಕಿದ ನಿರಾಳತೆಗೆಅತ್ತ ಇತ್ತ ನುಲಿಯುತ್ತಾಪರ‍್ರನೆ ಹಾರಿದೆ ಹಕ್ಕಿತೂಗಿಕೊಳುವ ಕಾತರತೆಯಲ್ಲಿಮತ್ತೆ ರಚ್ಚೆ ಹಿಡಿದಿದೆ ಭೂಮಿ ಅರಿಕೆಗಳು 1.ಅರಳಿ ಸರಿದ ಹಗಲುಗಳೆಷ್ಟೋಆವರಿಸಿ ಕವಿದು ಕನಲಿದಇರುಳುಗಳೆಷ್ಟೋ..ಒಂದಂತೂ ದಿಟಕವಿತೆಯೇ..ನಿನ್ನ ಅನುಪಸ್ಥಿಯಲ್ಲಿಈ ಎರಡು ಕ್ರಿಯೆಗಳೂಸಂಭವಿಸುತ್ತಿವೆ ನಿರಂತರಹಾಗೂ ಕಾಯುವಿಕೆಯಲ್ಲೇ ನಾ ಕರಗಿಕಳೆದು ಹೋಗುತ್ತಿದ್ದೇನೆ ಸತತ. ಪ್ರಭುವೇ..ಹಗಲು ಇರುಳುಹಾಗೇ ಬಂದು ಹೋಗುತ್ತಿರಲಿಕಾಯುವಿಕೆಯ ಸುಖ ಹೀಗೇಅನಂತವಾಗಿರಲಿ. 2. ಪ್ರಭುವೇ..ನನಗೆಪೂರ್ವ ಜನ್ಮದ ಬಗ್ಗೆ ಅರಿವಿಲ್ಲಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲಅತ್ತ ಇತ್ತ ಸುಳಿದಾಡಿಸತಾಯಿಸುವ ಕವಿತೆಯನ್ನೊಮ್ಮೆಇದೇ ಜನುಮದಲ್ಲಿ ನನ್ನ ಇದಿರುಎಳೆದು ತಂದು ನಿಲ್ಲಿಸಿ ಬಿಡು ಸಾಕು. 3. ಮೊದಲು ಕಣ್ಣು ಬಿಟ್ಟಾಗ ಜೋರಾಗಿಶಬ್ದ ಹೊರಡಿಸಿ ಅತ್ತ ನೆನಪುಈಗಲೂ ಹಾಳು ಅಳು ನಿಲ್ಲುವುದಿಲ್ಲಗುದ್ದಿ ಗುದ್ದಿ ಹೊರ ಬಂದರೂಶಬ್ದ ಮಾತ್ರ ಕೇಳಿಸುತ್ತಿಲ್ಲ. 4. ದಯೆ ತೋರು ಕವಿತೆಯೇ..ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡುಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡಕಾರಣವಾಗುವುದ ತಪ್ಪಿಸಿಕೋ.. ಅತ್ತಷ್ಟು ಬಾರಿ ನಗಲಿಲ್ಲಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲನಕ್ಕಿದ್ದು ಗುಲ್ಲೋ ಗುಲ್ಲುಕವಿತೆಯೇ..ನೀ ಎಚ್ಚರವಾಗಿರುವುದಷ್ಟೇಮುಖ್ಯ ಇಲ್ಲಿಆಗ ನಾನೂ ನಿಶ್ಚಿಂತೆಯಾಗಿರಬಲ್ಲೆ ****************************************
ಪುಸ್ತಕ ಸಂಗಾತಿ
ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ ಎನ್ನದೇ ಈ ಕರೆಂಟ್ ನೊಂದಿಗೆ ಸರಸವಾಡುವ ಮತ್ತು ದುಡಿಯುವ ‘ಲೈನ್ ಮನ್’ ಗಳೆಂದರೆ ಈ ಸತೀಶ್ ಕುಲಕರ್ಣಿ ಅವರಿಗೆ ಅಪಾರ ಪ್ರೀತಿ ಮತ್ತು ಕಾಳಜಿ. ನಾನು ಮೊನ್ನೆ ಈ ಹೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿಯ ಬಗೆಗೆ ಒಂದು ಲೇಖನ ಬರೆದಾಗ, ಅವರು ಕೋಪ ಮಾಡಿಕೊಂಡು ಅಧಿಕಾರಿಗಳು ಇರಲಿ, ಈ ಸಾವಿನೊಂದಿಗೆ ಸರಸವಾಡುವ ನಮ್ಮ ‘ಲೈನ್ ಮನ್’ ಗಳನ್ನು ಮೊದಲು ಗುರುತಿಸು ಶಿವು ಅಂತ ಹೇಳಿದರು ಇದೇ ಸತೀಶ್ ಕುಲಕರ್ಣಿಯವರು. ಅಧಿಕಾರಿಗಳನ್ನು ಬಿಡಿ, ಮೊದಲು ಈ ನಮ್ಮ ‘ಲೈನ್ ಮನ್’ಗಳ ಬಗೆಗೆ ಮೊದಲು ಬರೆ ಶಿವು ಅಂತ ಹಕ್ಕಿನಿಂದ ಮತ್ತು ಪ್ರೀತಿಯಿಂದ ಪದೇ ಪದೇ ಹೇಳಿದರು. ಅಂದಂತೆಯೇ ಈ ‘ಲೈನ್ ಮನ್’ಗಳು ಮನೆ-ಮಠವನ್ನೆದೇ, ಚಳಿ-ಮಳೆ ಎನ್ನದೇ ದುಡಿಯುವ ಪರಿಯನ್ನು ನನ್ನಿಂದ ಬರೆಸಿದರು. ಇದನ್ನೇಕೆ ಈ ‘ಸಮಯಾಂತರ’ ಕವನ ಸಂಕಲನದ ಬಗೆಗೆ ನನ್ನ ವಿಮರ್ಶೆ(ತೀರಾ ವಯಕ್ತಿಕ ಅಭಿಪ್ರಾಯ) ಬರೆಯುವ ಮೊದಲು ಹೇಳಿದೆನೆಂದರೆ ಇವರು ತಾವು ಕೆಲಸ ಮಾಡುತ್ತಿದ್ದ ಈ ಹೆಸ್ಕಾಂ ಒಟ್ಟಾರೆ ಕೆಇಬಿಯ ಕೆಳ ದರ್ಜೆಯ ನೌಕರರ ಅದರಲ್ಲೂ ಈ ‘ಲೈನ್ ಮನ್’ಗಳ ಬಗೆಗೆ ಸತೀಶ್ ಕುಲಕರ್ಣಿಯವರಿಗೆ ಎಷ್ಟೊಂದು ಪ್ರೀತಿ, ಕಾಳಯ ಮತ್ತು ತಮ್ಮ ಕೆಲಸದಲ್ಲೂ ಶ್ರದ್ಧೆ ಇತ್ತು ಎಂದು ತಿಳುಸಲು ಈ ಪೀಠೀಕೆ ಹಾಕಿದೆ ಅಷ್ಟೇ. ಇನ್ನೂ ‘ಸಮಯಾಂತರ’ ‘ಕವನ ಸಂಕಲನ’ದ ಬಗೆಗೆ ನೋಡೋಣ… ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ್ ಕುಲಕರ್ಣಿಯವರೂ ಪ್ರಮುಖರು. ಐದು ದಶಕಗಳಿಗೂ ಹೆಚ್ಚು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿ ಅವರು ಸುಮಾರು ಇನ್ನೂರೈವತ್ತಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವರ “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಕವನ ಸಂಕಲನಗಳು. “ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ. ಸತೀಶರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ. ಸತೀಶರನ್ನು ಸಾಮಾನ್ಯವಾಗಿ ದಲಿತ–ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ. ಅವರನ್ನು “ಬಂಡಾಯ ಕವಿ”ಯೆಂದೂ ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ‘ಸಹಜ ಮಾನವತಾವಾದಿ ಕವಿಯೆಂದು ಕರೆಯಬಹುದು. ಪ್ರಸ್ತುತ “ಸಮಯಾಂತರ” ಸಂಕಲನದಲ್ಲಿ ಅವರ ಒಲವು ನಿಲುವುಗಳನ್ನು ಪ್ರತಿನಿಧಿಸಬಲ್ಲ ವೈವಿಧ್ಯಮಯ ಕವಿತೆಗಳಿವೆ. “ಅಜ್ಞಾತ ಪರ್ವದಲ್ಲಿ” ಕವಿತೆ ತುರ್ತು ಪರಿಸ್ಥಿತಿ ಉಂಟು ಮಾಡಿದ ಅವಾಂತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. “ಸ್ಮಶಾನ ಮೌನ ಬಾಗಿಲುಗಳು ಬಂದಾಗಿದ್ದವು. ನಾಲಿಗೆಗಳು ಕತ್ತರಿಸಿ ಹೋಗಿದ್ದವು. ಬೆಳಕಿಲ್ಲ, ಗಾಳಿಯಿಲ್ಲ. ಭದ್ರ ಕೀಲಿಗಳು. ಬಾಯಿ ಬಂದು ಮಾಡಿದ ಚಿಲಕಗಳು. ಜನ ಬರಿ ಸತ್ತ ಜನ……” # ಅಜ್ಞಾತ ಪರ್ವದಲ್ಲಿ… ನೂರಾರು ವರ್ಷಗಳಿಂದ ನೊಂದು ಬೆಂದು ಹೋದ ಶೋಷಿತರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು “ಒಡಲಾಳ ಕಿಚ್ಚು” ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. “ಹಟ್ಟಿಯಲ್ಲಿ ಬಟ್ಟೆ ಬಿಚ್ಚಿ ಸಾಹುಕಾರನಿಗೆ ಮೈ ಕೊಟ್ಟವರ, ಗದ್ದೆಯಲ್ಲಿ ಜರತಾರಿ ರುಮಾಲಿನ ರಾಕ್ಷಸರಿಗೆ ಹಮಾಲರಾಗುವವರ……” “ಕಿತ್ತು ತಿನ್ನುವವರ ಕೂತು ತಿನ್ನುವವರ ಕರಾಮತ್ತು ಉರಿ ಹಚ್ಚಿ ಎಲ್ಲ ಸುಟ್ಟು ಹಾಕಿ ಹೊಸ ಹಸಿರು ಚಿಗುರುವ ಮುನ್ನ ದನಿ ಎತ್ತಿ…… ” # ಒಡಲಾಳ ಕಿಚ್ಚು’ವಿನಲ್ಲಿ ಕಾಣಬಹುದು… ಸತೀಶ ಕುಲಕರ್ಣಿ ಅವರ “ಒಂದು ಅತ್ಯಾಚಾರದ ಹಂತಗಳು” ದೈಹಿಕವಾಗಿ ಜರ್ಜರಿತವಾದ ಅತ್ಯಾಚಾರ ಸಂತ್ರಸ್ತೆ ಕಾನೂನಿನ ಮೂಲಕ ಮಾನಸಿಕ ಅತ್ಯಾಚಾರಕ್ಕೊಳಗಾಗುವುದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹೀಗೆಯೇ ಮುಂದುವರಿದು… “ಅವರು ಬಂದು ತಡೆದವರಳನ್ನು ಮೇಲೆ ಗಿಡಗಳ ದಳದಳ – ಗಾಳಿಗುಲುಕುವ ಎಲೆಗಳು ಕೀವು ತುಂಬಿ ಸೋರುವ ಹುಣ್ಣು ನಕ್ಷತ್ರಗಳು ಇಷ್ಟು ಅವಳ ಕೊನೆಯ ನೆನಪುಗಳು……” “ಅತ್ಯಾಚಾರವಾಗಿಲ್ಲ – ತೀರ್ಪು ಬಂದಿತ್ತು ಒಂದು ದಿನ ಅವಳು ಹೆರಿಗೆ ನೋವಿಗೆ ನರಳುತ್ತಿದ್ದಳು……” # ಒಂದು ಅತ್ಯಾಚಾರದ ಹಂತಗಳು… “ಕಾಗದ ಕ್ರಾಂತಿಕಾರಿಗಳ ನಡುವೆ”, “ಸಿದ್ಧ ಸವಾರರು” ಹುಸಿ ಕ್ರಾಂತಿಕಾರರ ಕುರಿತ ಕವಿತೆಗಳಾದರೆ, “ಸತ್ತ ಮೇಲೆ” ನಿಜವಾದ ಹೋರಾಟಗಾರರ ಸ್ವಗತದಂತಿದೆ. “ನಾನು ಬೂದಿಯಾಗಿರುವೆ ಈ ನೆಲದ ಮಣ್ಣಾಗಿರುವೆ ನಾನು ಸ್ಮೃತಿಯಾಗಿರುವೆ ಜೀವನದ ಗತಿಯಾಗಿರುವೆ ನಿಲ್ಲದ ಸತ್ಯವಾಗಿರುವೆ ಆಗಿರುವೆ ನಾನು ಬೂದಿ ಎಲ್ಲರೂ ನಡೆದ ಹಾದಿ… ” # ನಾನು ಸತ್ತ ಮೇಲೆ… “ಬಂಡಾಯ” ಮತ್ತು “ಸ್ವಾಭಿಮಾನದ ಹಾಡು” ಬಂಡಾಯ ಚಳುವಳಿಯಿಂದ ಸ್ಫೂರ್ತಿ ಪಡೆದ ಕವಿತೆಗಳು. “ದಮನಕ್ಕೆ ಉತ್ತರ ಧಿಕ್ಕಾರ ಬಂಡಾಯ ದಬ್ಬಾಳಿಕೆಗೆ ಉತ್ತರ…” # ಬಂಡಾಯ… “ನೀ ಚೆಲ್ಲಿದ ಹಾದಿ ಮುಳ್ಳುಗಳ ನಿನ್ನೆಂಜಲ ನಿಗಿನಿಗಿ ಕೆಂಡದುಂಡೆಗಳ ತುಳಿದು ನಾ ದಾಟಬಲ್ಲೆ ನನ್ನ ಗುರಿ ನಾ ಮುಟ್ಟಬಲ್ಲೆ… ” # ಸ್ವಾಭಿಮಾನದ ಹಾಡು… ವಿಷಾದಯೋಗ ಹಿಂಸೆ ಮತ್ತು ಗಲಭೆಯ ದುಷ್ಪರಿಣಾಮದ ಕುರಿತ ಉತ್ತಮ ಕವಿತೆ. “ನಲವತ್ತೇಳರ ನರಕದ ನಾಡು ’ಹೇರಾಮ’ ಆರ್ತನದ ನಾಡು ಪುಡಿ ಪುಡಿಗೊಂಡ ಗೋಪುರದ ನಾಡು… ” # ವಿಷಾದಯೋಗ… “ಅಲಿಖಿತ ಕಾದಂಬರಿ ನಾಯಕನ ಕವಿತೆ” ಮತ್ತು “ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ” ಕವಿತೆಗಳು ಸಾಮಾನ್ಯರ ಅಸಮಾನ್ಯತೆಯನ್ನು ಗುರುತಿಸಿದೆ. ಈ ‘ಲೈನ್ ಮನ್ ಮಡಿವಾಳ ಬೀಮಪ್ಪ’ ಕವಿತೆ ನನಗಂತೂ ಇವರು ತಮ್ಮ ಸಹೋದ್ಯೋಗಿಗಳು ಮತ್ತು ಒಟ್ಟಾರೆ ಕೆಇಬಿಯ ಅಧಿಕಾರ ರಹಿತ ಕೆಲಸಗಾರರ ಬಗೆಗೆ ಸತೀಶ ಕುಲಕರ್ಣಿರಿಗೆ ಇದ್ದ ಮಾನವೀಯ ಮಮಕಾರ ಮತ್ತು ಕೆಇಬಿ ಕೆಲಸಗಾರರ ಮೇಲಿನ ಅಭಿಮಾನವನ್ನು ತೋರಿಸಿತು. “ಮೂಡಿಲ್ಲ ಅಕ್ಷರಕ್ಷರಗಳಲಿ, ಬದುಕಿಲ್ಲ, ಸತ್ತಿಲ್ಲ ಅನನ್ಯದವತಾರವೆ ಓ ಶ್ರೀ ಸಾಮಾನ್ಯ, ಸತ್ಯದ ಸೂತ್ರ ನಾಯಕ ನೀನು… ” # ಅಲಿಖಿತ ಕಾದಂಬರಿಯ ನಾಯಕ… “ಹಾದಿ ಹೆಣವಾದ ಬೀದಿ ದೀಪಗಳ ದೊರೆಯೆ ಬೆಳಕು ಕೊಟ್ಟು, ಕತ್ತಲೆಯ ನೀ ಸೇರಿದಿಯೆ?….. ” # ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ… ಇದು ತಮ್ಮ ಕಾಯಕವನ್ನು ಇಷ್ಟಪಡುವ ಮತ್ತು ಕೆಳಹಂತದ ನೌಕರರ ಬಗೆಗಿನ ಮಾನವೀಯ ಪ್ರೀತಿ, ಕಾಳಜಿ ಮತ್ತು ಸಹಜ ‘ಲೈನ್ ಮನ್’ಗಳ ಕಷ್ಟದ ಕೆಲಸದ ಅನುಕಂಪವನ್ನು ಎತ್ತಿ ತೋರಿಸುತ್ತದೆ. “ನನ್ನಪ್ಪ”, “ಉಳಿದ ನೆನಪು” ಮತ್ತು “ಗುರುಗಳು ಸತ್ತ ಮುಂಜಾನೆ” ಮಾನವೀಯ ಸಂಬಂಧಗಳ ಕುರಿತ ಕವಿತೆಗಳಾಗಿದ್ದು, ಆ ನೆನಪುಗಳೇ ಕವಿತೆಗಳಾಗಿವೆ. “ನಾಲ್ಕು ಮಕ್ಕಳಿಗೆ ನೂರು ಕನಸು ಕೊಟ್ಟ ಸಾವು ಬರುವತನಕ ಬಿಳಿ ಅಂಗಿ ಪೈಜಾಮು ತೊಟ್ಟ ನನ್ನ ಆ ಬಡ ಅಪ್ಪ…” # ನನ್ನಪ್ಪ… “ಕೆಂಬೆಂಕಿ, ಸುಡುವ ಒಲೆಯ ಮುಂದೆ ಕೂತ ಅವ್ವನ, ಅದೆಷ್ಟು ಕನಸುಗಳು ಹಾಗೆಯೆ ಉರಿದು ಬೂದಿಯಾಗಿ ಹೋಗಿರಲಿಕ್ಕಿಲ್ಲ…… ” # ಉಳಿದ ನೆನಪು… “ಛಡಿ ಏಟಕೊಟ್ಟ ಮಾಸ್ತರು, ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು, ಸಾಲಿ ಗ್ರೌಂಡಿನ್ಯಾಗ ಮೂಲಿಗೆ ನಿಂತು ನಮ್ಮಾಟಾ ನೋಡಿದ ಮಾಸ್ತರು, ಅಕ್ಷರ ಏಣಿ ಹತ್ತಿಸಿ ಜೀವನದ ದೂರ ತೋರಿಸಿದ ಮಾಸ್ತರು, ಮನಿ ಮರ್ತು, ಮಕ್ಕಳ ಮರತು ನಮ್ಮನ್ನ ಮಕ್ಕಳಂತ ತಿಳಕೊಂಡ ಮಾಸ್ತರು ಎಲ್ಲಾ ನೆನಪಾದವು ದೂರದಿಂದ ನೋಡಿದೆ. ಮಾಸ್ತರ ಮನಿ ತುಂಬ ಮಂದಿ ಬಾಳಿತ್ತು, ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು…” # ಗುರುಗಳು ಸತ್ತ ಮುಂಜಾನೆ… “ನಗರ ಮೈ ಮುರಿಯುತ್ತಿದೆ” ನಗರೀಕರಣದ ಪೈಶಾಚಿಕತೆ ಯಾವ ಮಟ್ಟಕ್ಕೆ ಬದುಕನ್ನು ದುಸ್ತರ ಮಾಡಿದೆಯೆಂಬುದರ ಕುರಿತ ಕವಿತೆ. “ಅಮೇರಿಕಾ” ಬಂಡವಾಳಶಾಹಿ ರಾಷ್ಟ್ರಗಳ ದುರಾಸೆಯನ್ನು ಅಭಿವ್ಯಕ್ತಿಸಿದೆ. “ಕಂಪನಿ ಸವಾಲ್”, “ಎಲ್ಲಿಯೋ ದೂರದಲ್ಲಿ”, “ಮತ್ತೊಂದು ಬೆಳಕು”, “ಬೆಳ್ತನಕಾ” ಮತ್ತು “ಯುದ್ಧ ಶುರು ಆತೇನು? ಇವು ಸತೀಶ ಕುಲಕರ್ಣಿಯವರ ವಿಶಿಷ್ಟವಾದ ಮಾನವೀಯ ಸಹಜ ಕವಿತೆಗಳು. “ಮಹಾಭಾರತದ ಆ ಹಕ್ಕಿ ”ಬಹುಹಿಂದಿನಿಂದ ಬಂದ ಅರ್ಜುನ, ಏಕಲವ್ಯರ ರೂಪಕದೊಂದಿಗೆ ಗೆದ್ದವರ ಕಥೆಯನ್ನು ಸಂಭ್ರಮದಿಂದ ಹೇಳುವುದನ್ನು ಪ್ರಶ್ನಿಸುತ್ತದೆ. “ಕವಿಯಾಗಿ ನಾನೇಕೆ ಒಂದು ಪ್ರಶ್ನೆ ಕೇಳಬಾರದು ಯಾಕೆ, ಆ ಪುಟ್ಟ ಹಕ್ಕಿ ಆಕಾಶಕ್ಕೆ ಗಕ್ಕನೆ ಹಾರಿಹೋಗಬಾರದು ಯಾಕೆ, ಆ ಬಾಣದ ಗುರಿ ತಪ್ಪಬಾರದು ಹೇಳಿ ನೀವೇ ಹೇಳಿ…” # ಮಹಾಭಾರತದ ಆ ಹಕ್ಕಿ… “ಕಟ್ಟತೇವ ನಾವು” ಮತ್ತು “ಗಾಂಧೀಗಿಡ” ಕವಿತೆಗಳಲ್ಲಿ “ಕಟ್ಟತೇವ ನಾವು” ಬಂಡಾಯದ ಕ್ರಾಂತಿಗೀತೆಯಾಗಿದೆ. ಅದರಂತೆಯೇ ಆ ಕ್ರಾಂತಿಯಯನ್ನು ಬಯಸುವ ಕವನವಾಗಿದೆ. “ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ. ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ ನಾವು ಕನಸ ಕಟ್ಟತೇವ ನಾವು ಮನಸು ಕಟ್ಟತೇವ…” # ಕಟ್ಟತೇವ ನಾವು… “ಈಗ ನೆರಳಿಲ್ಲ ನೆಲಕ್ಕೆ ಅರಳಿಲ್ಲ ಹೂವುಗಳು ಸತ್ತ ನೆಲದ ಸತ್ವ ಕುಡಿದ ಗಿಡ ಹಣ್ಣು ಕೊಟ್ಟಿಲ್ಲ ಮೂಕ ಕಾವ್ಯದ ಪ್ರತೀಕದ ಗಿಡ ನಿತ್ಯ ಕೊಡಲಿಗೆ ಬಡವರಿಗೆ ಚಕ್ಕೆ ಕೊಡುವ ಗಾಂಧೀಗಿಡ ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗುಹುದೆ ಹೇಳು ಗಾಂಧೀಗಿಡ…” # ‘ಗಾಂಧೀಗಿಡ’… ಆಧುನಿಕ ಕನ್ನಡ ಕಾವ್ಯಕ್ಕೆ ಅನೇಕ ವಿಶಿಷ್ಟ ಕವಿತೆಗಳನ್ನು ನೀಡಿರುವ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಈ ವರೆಗೂ ಸೂಕ್ತ ವಿಮರ್ಶೆ ಸಂದಿಲ್ಲ. ಆದರೂ ಅವರ ಕಾವ್ಯ ಜನಮನದಲ್ಲಿ ಹಾಸುಹೊಕ್ಕಾಗಿಯೇ ಇದೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ತಮ್ಮ ಮುನ್ನುಡಿಯ ಮೂಲಕ ಒಟ್ಟಾರೆ ಈ ಕವನ ಸಂಕಲನವಾದ ‘ಸಮಯಾಂತರ’ ನ್ಯಾಯ ಒದಗಿಸಿದ್ದಾರೆ. ನಂಗಲಿಯವರು ಹೇಳಿದಂತೆ ಸತೀಶ ಕುಲಕರ್ಣಿಯವರು ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂವೇ ಸರಿಯೆಂಬುದು ನನ್ನದೂ ಅಭಿಪ್ರಾಯ..! ********************* ಕೆ.ಶಿವು.ಲಕ್ಕಣ್ಣವರ
ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್ ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು. ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು. ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ ವ್ಯವಸ್ಥೆಯನ್ನು ಒಡೆದು ಬೇರೆ ದಾರಿ ಹಿಡಿಯುವುದು ಹೇಗೆ ಮತ್ತು ಅದರ ಪರಿಣಾಮಗಳೇನಾಗಬಹುದು ಎಂಬುದರ ಕುರಿತಾದ ಸಂವಾದವನ್ನು ಈ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ. ಅದರ ಜತೆಗೆ ಜನಪದ ಬದುಕು ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ವ್ಯವಸ್ಥೆಯೊಳಗೇನೇ ಕಂಡುಕೊಂಡ ಪರಿಹಾರವೂ ಇಲ್ಲಿದೆ. ಗ್ರಾಮೀಣ ಬದುಕಿನ ಚಿತ್ರಣ, ಗಂಡ-ಹೆಂಡಿರ ನಡುವಣ ಆತ್ಮೀಯ ಸಂಬಂಧದ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಹೋಲುವ ಸುಂದರ ಚಿತ್ರಣವು ಕೃತಿಯ ಸೌಂದರ್ಯಕ್ಕೆ ಮೆರುಗನ್ನಿತ್ತಿದೆ. ಕಾಳಿ ಮತ್ತು ಪೊನ್ನಿಯರ ದಾಂಪತ್ಯ ಜೀವನವು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು’ ಆನಂದಮಯವಾಗಿತ್ತು. ಗಂಡ-ಹೆಂಡಿರು ಒಬ್ಬರನ್ನೊಬ್ಬರು ಎಂದೂ ಬಿಟ್ಟಿರಲಾರದವರೂ ಬಿಟ್ಟು ಕೊಡಲಾರದವರೂ ಆಗಿದ್ದರು. ಅವರಿಬ್ಬರ ನಡುವಣ ಲೈಂಗಿಕ ಸಂಬಂಧದ ಬಿಸುಪು ಹತ್ತು ವರ್ಷ ಕಳೆದರೂ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಆದರೆ ಒಂದೇ ಒಂದು ಕೊರತೆಯೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೆಣ್ಣು ತನ್ನ ವ್ಯಕ್ತಿತ್ವದ ಮೂಲಕ ಎಷ್ಟೇ ಯಶಸ್ವಿಯಾದರೂ ಆಕೆ ತಾಯಿಯಾಗದಿದ್ದರೆ ಸಮಾಜವು ಆಕೆಯನ್ನು ಸದಾ ಚುಚ್ಚಿ ನೋಯಿಸುತ್ತಿರುತ್ತದೆ. ಕಾಳಿ-ಪೊನ್ನಿಯರಿಬ್ಬರೂ ಈ ದುಃಖವನ್ನು ಎದುರಿಸುತ್ತಾರೆ. ಕೊನೆಗೆ ಕಾಳಿಯ ಅಮ್ಮ ಮತ್ತು ಪೊನ್ನಿಯ ಅಮ್ಮ ಇಬ್ಬರೂ ಅವಳನ್ನು ತಿರುಚೆಂಗೋಡು ಜಾತ್ರೆಯ ಹದಿನಾಲ್ಕನೇ ದಿವಸದಂದು ಊರಿನ ಪದ್ಧತಿಯಂತೆ ಮದುವೆಯಾದ ಹೆಣ್ಣು ಮಕ್ಕಳನ್ನು ಅವರು ಇಷ್ಟಪಟ್ಟವರ ಜತೆ ಕೂಡಲು ಕಳುಹಿಸುವ ಯೋಜನೆ ಹಾಕುತ್ತಾರೆ. ತನ್ನ ಪೊನ್ನಿ ತನ್ನ ಕೈಜಾರಿ ಹೋಗುತ್ತಾಳೆಂಬ ಭಯದಿಂದ ಕಾಳಿ ಇದಕ್ಕೆ ಸಮ್ಮತಿಸುವುದಿಲ್ಲ. ಆದರೆ ತಾಯ್ತನದ ಸಹಜ ಬಯಕೆ ಪೊನ್ನಿಯಲಿ ಎಷ್ಟು ಬಲವಾಗುತ್ತದೆ ಅಂದರೆ ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕಾಳಿಯ ವಿರೋಧವನ್ನು ಲೆಕ್ಕಿಸದೆ ಬೇರೊಬ್ಬ ಯುವಕನನ್ನು ಆರಿಸಿಕೊಂಡು ಪೊನ್ನಿ ಹೋಗುತ್ತಾಳೆ. ಕೊನೆಯಲಿ ಕಾಳಿ ಅವಳ ಮೇಲೆ ಸಿಟ್ಟಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಒಬ್ಬ ಹೆಣ್ಣು ಹೇಗೆ ಸ್ವಾರ್ಥಿ ಪುರುಷನ ಸ್ವಂತ ಸೊತ್ತಾಗಿ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ.ಅನುವಾದದ ಭಾಷೆ ಚೆನ್ನಾಗಿದೆ. ಮೂಲದಲ್ಲಿರುವ ಆಡುಭಾಷೆಗೆ ಪರ್ಯಾಯವನ್ನು ಕೊಡಲು ಅನುವಾದಕರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಮತ್ತು ಯಶಶ್ವಿಯಾಗಿದ್ದಾರೆ ************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಕೊಂಕಣಿ ಕವಿಗಳ ಪರಿಚಯ
ಕೊಂಕಣಿ ಕವಿಗಳ ಪರಿಚಯ ಪರಿಚಯಿಸಿದವರು ಶ್ರೀಯುತ ಗುರುದತ್ ಬಂಟ್ವಾಳಕಾರ್.(ಗುರು ಬಾಳಿಗಾ) ಕರ್ನಾಟಕದ ಕೊಂಕಣಿ ಕವಿಗಳನ್ನು ಪರಿಚಯಿಸುವ ಒಂದು ಜವಾಬ್ದಾರಿಯನ್ನು ಸಂಗಾತಿ ಪತ್ರಿಕೆ ನನಗೆ ಕೊಟ್ಟಿದೆ. ಮೊದಲಿಗೆ ನಾನು ಪರಿಚಯಿಸಲು ಇಚ್ಛಿಸುವ ಕವಿ ಶ್ರೀಯುತ ಗುರುದತ್ ಬಂಟ್ವಾಳಕಾರ್. ಗುರು ಬಾಳಿಗಾ ಎಂಬ ಕಾವ್ಯನಾಮದಿಂದ ಬರೆಯುವ ಇವರ ಕವಿತೆಗಳು ಸರಳ ಶಬ್ದಗಳಲ್ಲಿ ಆಳವಾದ ವಿಚಾರಗಳನ್ನು ಮಂಡಿಸುವುದರಲ್ಲಿ ಯಶಸ್ವಿಯಾಗುತ್ತವೆ. ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿರುವ “ವಿಶ್ವ ಕೊಂಕಣಿ ಕೇಂದ್ರ” ದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರುದತ್ ಬಂಟ್ವಾಳಕಾರ್ ಅವರು ಅಲ್ಲಿನ ಕೊಂಕಣಿ ಭಾಷಾ ಸಂಶೋಧನಾ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಅವರ ಆಯ್ದ ಎರಡು ಕೊಂಕಣಿ ಕವಿತೆಗಳನ್ನು ನಿಮ್ಮ ಓದಿಗಾಗಿ ಕನ್ನಡದಲ್ಲಿ ಅನುವಾದಿಸಿದ್ದೇನೆ. ———— ಫುಲಾಂ ಪಾವ್ಸ್ ಫುಲಾಂ ಪಾವ್ಸ್ದಿವಳೆ ಪರಬೇಚೊತುಮಿ ಜಾಣಾಫುಲಾಂಚೊ ನ್ಹಯ್ಉಜ್ಯಾಚೊಉಜ್ಯಾ ಫುಲಾಂಚೊ ಜೆನ್ನಾ ತೆರಾವೆಳಾರ್ಕಸ್ತೂರ್ ಮೊಗ್ರ್ಯಾಕ್ಮೋಲ್ ಚಡತಾತೆನ್ನಾ ಮ್ಹಜೀ ಆವಯ್ ಮ್ಹಣತಾಹಾತ್ ಲಾಸತಾ! ಬೊದಿಲೇರಾಚಿ ಪ್ರೇಮಿಕಾಜೀನ್ ದುವಾಲ್ಆನಿಮ್ಹಜೀ ಬಾಯಲ್:ಏಕಲಿ ಉಜ್ಯಾಂತೂಲಿ ಫೂಲ್ದುಸರಿಫುಲಾಚೊ ಉಜೊ. — ಗುರು ಬಾಳಿಗಾ. ——– ಹೂ ಮಳೆ. ಮತಾಪಿನ ಹೂಮಳೆದೀಪಾವಳಿಯದುಹೂವಿನದಲ್ಲಬೆಂಕಿಯದುಬೆಂಕಿಯ ಹೂಗಳದು. ನಮ್ಮೂರ ತೇರಿಗೆ..ದುಬಾರಿ ಹೂಚಂಡುಕೈ ಸುಡುತ್ತೆಂದುಅಮ್ಮನ ಅಲವತ್ತು. ಬೋದಿಲೇರನ ಪ್ರೇಯಸಿಜೀನ್ ದುವಾಲ್ಹಾಗೂ ನನ್ನ ಮಡದಿ..ಅವಳು ಬೆಂಕಿಯ ಹೂವುಇವಳು ಹೂವಿನ ಬೆಂಕಿ. — ಶೀಲಾ ಭಂಡಾರ್ಕರ್. ——– ವೇಳ್ ಮೆಗೆಲೆ ಘರಾಚೆಚಾರ ಕುಡಾಂತೂಯ್ಏಕೇಕ್ ಘಡಿಯಾರ ಆಸಾ.ಏಕ ಪಾಂಚ ಮಿನಿಟ ಮುಖಾರ್ ಆಸಾದುಸರೆ ತೀನ ಮಿನಿಟ ಮಾಕಶಿಉರಲೆ ದೋನಿ ಬ್ಯಾಟರಿ ಸರ್ನ್ಬಂದ್ ಪಡಲಾ.ದೆಕೂನ ಆಮಿ ಬಾಯಲ ಬಾಮೂಣದೊಗಾನಯ್ಆಮಚೆ ಮೊಬಾಯಲಾಂತೂಚ್ವೇಳ ಚೊವಪ. ಆಮಚೆ ದೊಗಾಂಚೇಯ್ ಮೊಬಾಯಲ್ಎಕಾಮೆಕಾಂಕ ಪಾಂಚ ಮಿನಿಟಾಂಮಾಕಶಿ ಮುಖಾರ ಆಸಾತ.ತೇ ದೆಕೂನಆಮಿ ಎಕಾಮೆಕಾಂಕ ಕೆನ್ನಾಯ್ಸಾರಕೆ ವೆಳಾರ ಮೆಳಚೇಚ್ ನಾ. ಮ್ಹಜೆ ಆವಯ್ ಬಾಪಯ್ಆಮಚೆ ಲಾಗಶಿಲ್ಯಾ ಘರಾಂತವಸ್ತಿ ಕರೂನ ಆಸಾತ್.ಮ್ಹಜೆ ಬಾಪಯ್ ಕಂಪ್ಯೂಟರಾಂತ್ವೇಳ ಪಳಯತಾಮ್ಹಜೆ ಆವಯ್ ಟೀವೀಂತ್ಆಮಿ ಸಾಂಜೆರ್ ಗೆಲ್ಯಾರ್ತಾಂಚೆ ಸೀರಿಯಲ್ ಆಸತಾನಾಸತಾನಾ ಆಮಕಾವೇಳ ಮೇಳನಾ ಆಮಚೊ ಸ ವರಸಾ ಪೂತಆಮಚೆ ದೋನ ಘರಾಂಚೆ ಮಧೇಂತ್ಯೇವನ ವಚೂನ ವೇಳ ಖೆಳಯತಾ.ದೆಕೂನ್ಆಮಿ ಸಕಡಾನಯ್ತಾಕಾ ಚೋಯತಚ್ ವೇಳ ಸಮಜೂವಚೆ.ಆನಿ ಆಖೇರೀಕ್ ತಾಕಾಚ್ಬೆಸ್ಟಾವಚೆ ತೋವೇಳ ಪಾಡ ಕರತಾ ಮ್ಹಣೂನ. -ಗುರು ಬಾಳಿಗಾ ——- ಸಮಯ ನಮ್ಮ ಮನೆಯ ನಾಲ್ಕೂಕೊಣೆಯೊಳಗಿನಒಂದೊಂದು ಗಡಿಯಾರಗಳು.ಒಂದು ಐದು ನಿಮಿಷಮುಂದಿದ್ದರೆ.. ಇನ್ನೊಂದುಮೂರು ನಿಮಿಷ ಹಿಂದೆ.ಇನ್ನೆರಡು ಬ್ಯಾಟರಿ ಮುಗಿದುನಿಂತು ಹೋಗಿವೆ.ಹಾಗಾಗಿ ನಾವಿಬ್ಬರೂಗಂಡ ಹೆಂಡತಿಸಮಯ ನೋಡಿಕೊಳ್ಳುವುದುನಮ್ಮ ನಮ್ಮ ಮೊಬಾಯಿಲ್‍ಗಳಲ್ಲೇ. ನಮ್ಮಿಬ್ಬರ ಮೊಬೈಲ್‍ನಸಮಯ ಐದು ನಿಮಷಹಿಂದೆ ಮಂದೆ ಇರುವುದರಿಂದನಾವಿಬ್ಬರೂಒಂದೇ ಸಮಯದಲ್ಲಿಎಂದೂ ಸಿಗುತ್ತಿಲ್ಲ. ನಮ್ಮ ತಂದೆ ತಾಯಿನಮ್ಮ ಪಕ್ಕದಲ್ಲಿರುವಮನೆಯಲ್ಲಿ ವಾಸವಾಗಿದ್ದಾರೆ.ಅಪ್ಪ ತನ್ನ ಕಂಪ್ಯೂಟರ್ ಲ್ಲಿಸಮಯ ನೋಡಿಕೊಂಡರೆಅಮ್ಮ ಟಿವಿಯೊಳಗೆ.ನಾವು ಸಂಜೆಯ ಹೊತ್ತುಅವರ ಬಳಿ ಹೋದಾಗಅವರಿಗೆ ಸೀರಿಯಲ್ ಗಳಿರುತ್ತವೆ.ಅದಿಲ್ಲದಾಗ ನಮಗೆಸಮಯವಿರುವುದಿಲ್ಲ. ನಮ್ಮ ಆರು ವರ್ಷದ ಮಗಎರಡೂ ಮನೆಗಳಲ್ಲಿಓಡಾಡುತ್ತಾ ಸಮಯ ಕಳೆಯುತ್ತಾನೆ.ಅವನನ್ನು ನೋಡುತ್ತಲೇನಾವು ಸಮಯವನ್ನುತಿಳಿಯುತ್ತೇವೆ. ಕೊನೆಯಲ್ಲಿ..ಸಮಯ ಹಾಳುಮಾಡುತ್ತಾನೆಂದುಅವನನ್ನೇ ಬೈಯುತ್ತೇವೆ. *********************************************
ಕ್ಷಮಯಾ ಧರಿತ್ರೀ …
ಕ್ಷಮಯಾ ಧರಿತ್ರೀ … ಲಕ್ಷ್ಮಿ ನಾರಾಯಣ ಭಟ್ ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ ಶರಾವತಿ ನದಿ ನಮಗೆ ಅತ್ಯಾವಶ್ಯಕವಾದ ವಿದ್ಯುಚ್ಛಕ್ತಿಯನ್ನು ಕೊಡುವ ಅಪಾರ ಸಂಪನ್ಮೂಲವಾಗಿ ಬದಲಾಗುತ್ತಾಳೆ. ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಪರಿಷ್ಕರಣವಿಲ್ಲದೇ ಹೋಗುತ್ತಿದ್ದರೆ ಶರಾವತಿ ಹಾಗೆ ಹರಿದು, ಹೀಗೆ ಧುಮ್ಮಿಕ್ಕಿ ಸಾಗರವನ್ನು ಸೇರಿ ನಿರ್ಲಿಪ್ತ ಭಾವದಿಂದಿರುತ್ತಿದ್ದಳಲ್ಲವೇ? (ಮಹಾತ್ಮಾ ಗಾಂಧೀಜಿ ಶಿವಮೊಗ್ಗಕ್ಕೆ ಬಂದೂ ಜೋಗ ಜಲಪಾತ ನೋಡಲು ಹೋಗಿರಲಿಲ್ಲ! ಕಲೆ ಮತ್ತು ಪ್ರಕೃತಿ ಸೌಂರ್ಯದ ಬಗ್ಗೆ ಅವರ ನಿಲುವು ಬೇರೆಯೇ ಇತ್ತು; ಅದನ್ನು ವಿವರವಾಗಿ ಪ್ರಸ್ತಾಪಿಸಲು ಇದು ಸೂಕ್ತ ವೇದಿಕೆಯಲ್ಲ, ಅಷ್ಟೇ.) ಮನುಷ್ಯನ ಸ್ವಭಾವವೂ ಇದಕ್ಕೆ ವ್ಯತಿರಿಕ್ತವಾಗಿಲ್ಲ! ‘ಮಂಗನಿಂದ ಮಾನವ’ ಎಂಬ ಮಾತೊಂದಿದೆಯಲ್ಲವೇ? ಇದು ಸ್ಥೂಲವಾಗಿ ನಮ್ಮ ಬದುಕಿನ ರೀತಿಯನ್ನೇ ನರ್ದೇಶಿಸುತ್ತದೆ. ಬಾಲ್ಯದಿಂದ ತೊಡಗಿ ಹರೆಯದ ವರೆಗೂ – ಕೆಲವೊಮ್ಮೆ ಕೊನೆಗಾಲದ ವರೆಗೂ – ಚಿತ್ತ ಚಾಂಚಲ್ಯ, ಜಿಹ್ವಾ ಚಾಪಲ್ಯ, ಇಂದ್ರಿಯ ದೌರ್ಬಲ್ಯಗಳನ್ನು ಹದ್ದುಬಸ್ತಿನಲ್ಲಿಡದೇ ಹೋದರೆ ನಾವು ‘ಮರ್ಕಟ’ ಹಂತದಿಂದ ‘ಮಾನ’ವುಳ್ಳ – ಅಂದರೆ ಹದವರಿತು ಬಾಳಬಲ್ಲ ಮನುಷ್ಯತ್ವವನ್ನು ಪಡೆಯುವುದು ಅಸಾಧ್ಯ ಎಂದು ನನ್ನ ನಂಬಿಕೆ. ಇದು ಮಾನವೀಯತೆಯೆಡೆಗೆ ನಮ್ಮ ಮೊದಲ ದೃಢ ಹೆಜ್ಜೆ. ಮಾನವೀಯತೆಯ ಲಕ್ಷಣಗಳೆಂದರೆ ಪಕ್ವತೆ ಮತ್ತು ಆರ್ದ್ರತೆ. ಇದನ್ನೇ “ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು” ಎಂದು ಸರ್ವಜ್ಞ ಹೇಳಿದ್ದು. ಆದರೆ ಇದು ಬಡಪೆಟ್ಟಿಗೆ ಸಾಧಿತವಾಗುವುದಿಲ್ಲ. ಜೀವನದಲ್ಲಿ ಅನೇಕ ಅನುಭವಗಳ ಮೂಲಕ, ಪ್ರಾಯ ಸಂದಂತೆ ನಿಧಾನವಾಗಿ ಬರಬೇಕಾದದ್ದೇ ಹೊರತು ರಾತ್ರಿ ಬೆಳಗಾಗುವುದರೊಳಗೆ “ಓ ನಾನು ಈಗ ಪರಿಪಕ್ವತೆಯನ್ನು ಪಡೆದೆ” ಎಂದಂತಲ್ಲ. ಅದು ಅಕಾಲಿಕವಾಗಿ ಬರಲೂ ಬಾರದು. ಅದು ಲೋಕ ವ್ಯವಹಾರಕ್ಕೆ ವಿರುದ್ಧವಾದದ್ದು ಮತ್ತು ಜನಸಾಮಾನ್ಯರಾದ ನಮ್ಮ ನಿಮ್ಮಂತಹವರಿಗಲ್ಲ. ವಿರಳಾತಿವಿರಳವಾಗಿ ಮಹಾತ್ಮರಿಗೆ ಮಾತ್ರ ದಕ್ಕುವಂತದ್ದು. ಉದಾಹರಣೆಗೆ ಬುದ್ಧ: “ಜಗವೆಲ್ಲ ಮಲಗಿರುವಾಗ ಅವನೊಬ್ಬ ಎದ್ದ” ಅದಕೆಂದೇ ಅವನು “ಬುದ್ಧ”. ಎಲ್ಲರೂ ಹಾಗೆ ಮಾಡಕೂಡದು. ಹಾಗಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ಸನ್ಯಾಸಿಯಾಗಬೇಕಾದರೆ ಮದುವೆಯ ಮೊದಲು ತಾಯಿಯ ಒಪ್ಪಿಗೆ, ಮದುವೆಯ ಬಳಿಕವಾದರೆ ಹೆಂಡತಿಯ ಒಪ್ಪಿಗೆ ಕಡ್ಡಾಯ. ಒಬ್ಬನೇ ಮಗ ಸನ್ಯಾಸಿಯಾಗುವುದು ಶಂಕರರ ತಾಯಿಗೆ ಇಷ್ಟವಿರಲಿಲ್ಲ; ಆ ತಾಯಿಯ ಒಪ್ಪಿಗೆಯನ್ನು ಪಡೆಯಲು ಒಂದು ಮೊಸಳೆಯ ಕಥೆ ಬರುತ್ತದೆ. ಇದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಮೊಸಳೆ ಶಂಕರರ ಕಾಲನ್ನು ಹಿಡಿದಿದೆ ಎಂಬಾಗ ಶಂಕರರು ತಾಯಿ ಆರ್ಯಾಂಭ ಅವರಲ್ಲಿ “ತಾಯೇ, ನಾನು ಸನ್ಯಾಸಿಯಾಗಲು ನೀನು ಒಪ್ಪಿಗೆ ಕೊಟ್ಟರೆ ಈ ಮೊಸಳೆ ನನ್ನನು ಬಿಟ್ಟು ಬಿಡುವುದಂತೆ” ಎಂದಾಗ ತಾಯಿ ಕರುಳು ಚುರುಕ್ ಅಂದಿರಬೇಕು. ಮಗ ಬದುಕಿದರೆ ಸಾಕು ಎಂದ ತಾಯಿ ಒಪ್ಪಿಗೆ ಕೊಟ್ಟರಂತೆ. ಈ ಕಥೆಯ ಸತ್ಯಾಸತ್ಯತೆ ಇಲ್ಲಿ ಪ್ರಸ್ತುತವಲ್ಲ. ‘ಸನ್ಯಾಸತ್ವಕ್ಕೆ ತಾಯಿಯ ಒಪ್ಪಿಗೆ’ ಎಂಬ ತಾತ್ವಿಕತೆ ಮುಖ್ಯ, ಅಷ್ಟೇ. ಈ ಪದ್ಧತಿಯನ್ನು ಮಾಡಿದ ಉದ್ದೇಶವೆಂದರೆ ಯಾರೂ ಉಡಾಳರಾಗಿ ಸಂಸಾರದ ಜವಾಬ್ದಾರಿಯಿಂದ ಸುಖಾ ಸುಮ್ಮನೆ ಓಡಿ ಹೋಗಬಾರದು ಎನ್ನುವುದಷ್ಟೇ ಎಂದು ನನ್ನ ಅಭಿಪ್ರಾಯ. ಇರಲಿ. ಅದಕ್ಕೆ ಹೇಳಿದ್ದು ಅಕಾಲಿಕವಾಗಿ ವೈರಾಗ್ಯ ಬರಬಾರದು. ವಾತ್ಸಾಯನನನ್ನು ಓದುವ ಪ್ರಾಯದಲ್ಲಿ ವೇದಾಂತ, ಭಗವದ್ಗೀತೆ ಸಲ್ಲ. ಅಂದರೆ ಅದನ್ನು ಓದಲೇ, ಕಲಿಯಲೇ ಬಾರದು ಎಂಬ ನಿರ್ಬಂಧವಿಲ್ಲ; ಆದರೆ ಅದರಲ್ಲೇ ಮುಳುಗಿ ಹೋಗಬಾರದು ಎನ್ನುವ ಭಾವ. ಹಾಗಾದರೆ ಪಕ್ವತೆ, ಆರ್ದ್ರತೆಯನ್ನು ಸಾಧಿಸುವ ಬಗೆ ಹೇಗೆ? ಮನುಷ್ಯನ ಜೀವನದಲ್ಲಿ ಬಹುಶಃ ಕ್ಷಮಾಗುಣಕ್ಕಿಂತ ದೊಡ್ಡ ಮಾನವೀಯತೆ ಇಲ್ಲವೇನೋ! ಹಾಗಾಗಿ ವ್ಯಕ್ತಿತ್ವದ ಪಕ್ವತೆ,ಆರ್ದ್ರತೆಗಳ ಒಂದು ವಿಶೇಷ ಲಕ್ಷಣ ಅಂದರೆ ಕ್ಷಮಾಗುಣ ಎಂದು ನಾವು ತಿಳಿಯಬಹುದು. ತನ್ನ “ಶ್ರೀ ರಾಮಾಯಣ ದರ್ಶನಂ” ನಲ್ಲಿ ಕವಿ ಕುವೆಂಪು ಅವರು ಈ ಮಾತು ಹೇಳುತ್ತಾರೆ: “ಪಾಪಿಗುದ್ಧಾರಮಿಹುದೌ ಸೃಷ್ಟಿಯ ಈ ಮಹದ್ವ್ಯೂಹದೋಳ್” ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳದೆ ಕ್ಷಮಾಗುಣವನ್ನು ರೂಢಿಸಿಕೊಳ್ಳಲು ಅಸಾಧ್ಯ. ಶಿರಚ್ಛೇಧದ ಮೂಲಕ ಮರಣದಂಡನೆಯನ್ನು ಜಾರಿಗೊಳಿಸುವ ದೇಶದಲ್ಲೂ ಕ್ಷಮಾಗುಣಕ್ಕೆ ಆದ್ಯತೆ ಇದೆಯೆಂಬುದನ್ನು ನಾವು ಮರೆಯಬಾರದು. ಮತ್ತು ಈ ಕ್ಷಮಾದಾನದ ಪರಮಾಧಿಕಾರ ಕೊಡಲ್ಪಟ್ಟಿರುವುದು ಪ್ರಭುತ್ವಕ್ಕಲ್ಲ, ಬದಲಾಗಿ ಅನ್ಯಾಯಕ್ಕೊಳಗಾದ ವ್ಯಕ್ತಿ ಅಥವಾ ಆತನ ನಿಕಟ ಕುಟುಂಬ-ಸಂಬಂಧಿಗೆ ಮಾತ್ರ. [ಇದನ್ನು ಈಗ ಅಪರಾಧ ಶಾಸ್ತ್ರ ದಲ್ಲಿ ಎಂಬ ಹೆಸರಿನಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಇದು ಈ ಅಧ್ಯಯನ ಕ್ಷೇತ್ರವೊಂದರ ಇತ್ತೀಚಿಗಿನ ಹೊಸ ಬೆಳವಣಿಗೆ.] ಇದೊಂದು ಸತ್ಯ ಘಟನೆ. ಕೊಲ್ಲಿ ರಾಷ್ಟ್ರವೊಂದರಲ್ಲಿ ಒಂದು ಕುಟುಂಬದ ನಾಲ್ಕೈದು ಮಂದಿಯನ್ನು ಬರ್ಬರವಾಗಿ ಹತ್ಯೆಗೈದುದಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಗಿತ್ತು. ಆ ದೇಶದ ಪದ್ಧತಿಯಂತೆ ಸಾರ್ವಜನಿಕವಾಗಿ ಅಪರಾಧಿಯ ತಲೆ ಕಡಿದು ಮರಣದಂಡನೆಯನ್ನು ವಿಧಿಸುವುದು ರೂಢಿ. ಅಲ್ಲಿ ನೆರೆದಿದ್ದವರಲ್ಲಿ ಆ ಕುಟುಂಬದ ನಿಕಟ ಸಂಬಂಧಿಯೂ ಇದ್ದ. ಆತನಿಗೆ ಅಪರಾಧಿಯ ಬಗ್ಗೆ ಅತ್ಯಂತ ದ್ವೇಷ, ತಿರಸ್ಕಾರ, ಜಿಗುಪ್ಸೆ ಎಲ್ಲವೂ ಇತ್ತು. ಇದು ಸಹಜ ತಾನೇ? ಇನ್ನೇನು ಶಿಕ್ಷೆ ಜಾರಿಯಾಗಬೇಕೆನಿಸುವಷ್ಟರಲ್ಲಿ ಅಪರಾಧಿ ಆ ಕುಟುಂಬ ಸದಸ್ಯನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸುವಂತೆ ಬಗೆ ಬಗೆಯಾಗಿ ಬೇಡಿಕೊಂಡ. ಯಾಕೋ ಏನೋ ಆ ಕ್ಷಣದಲ್ಲಿ ಆತನ ಮನ ಕರಗಿ ಕ್ಷಮಾದಾನ ಮಾಡಿದನಂತೆ. ಆ ಬಳಿಕ ಆತ ಹೇಳಿದ ಮಾತು ತುಂಬಾ ಅರ್ಥಪೂರ್ಣ ಮಾರ್ಮಿಕವಾಗಿತ್ತು: “ನನ್ನ ಹೃದಯದ ಕಹಿಯೆಲ್ಲಾ ಈಗ ಬತ್ತಿ ಹೋಗಿದೆ. ನನ್ನೊಳಗೆ ಅನಿರ್ವಚನೀಯ ಶಾಂತಿ ತುಂಬಿದ ಧನ್ಯತಾ ಭಾವ ಅರಳಿದೆ. ಕ್ಷಮಾಗುಣಕ್ಕೆ ಇಂತಹ ಶಕ್ತಿ ಇದೆಯೆಂದು ನನಗೆ ಈ ವರೆಗೂ ತಿಳಿದಿರಲಿಲ್ಲ! ಅಪರಾಧಿಯನ್ನು ಕ್ಷಮಿಸಲು ನನಗೆ ಪ್ರೇರಣೆ ನೀಡಿದ ಪರಮ ದಯಾಳು ದೇವರಿಗೆ ನಾನು ಚಿರಋಣಿ.” ಈ ತೃಪ್ತ ಭಾವವನ್ನು ಕಿಂಚಿತ್ ಪ್ರಮಾಣದಲ್ಲಾದರೂ ಅರ್ಥೈಸಿಕೊಳ್ಳಬೇಕಿದ್ದರೆ ನಾವೂ ಯಾರನ್ನಾದರೂ ಕ್ಷಮಿಸಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಪ್ರಾಮಾಣಿಕವಾಗಿ ವಿನಮ್ರತೆಯಿಂದ, ಸ್ವಾನುಭವದಿಂದ ನಾನು ಹೇಳಬಲ್ಲೆ. (ನನ್ನ ಅನುಭವ ಬಹಳ ದೊಡ್ಡ ಮಟ್ಟದ್ದು ಎಂದಾಗಲಿ, ನಾನು ಕ್ಷಮಾಗುಣದ ಸಾಕಾರಮೂರ್ತಿ ಎಂಬ ಅಹಂಕಾರವಾಗಲಿ ಒಂದಿಷ್ಟೂ ಇಲ್ಲದೆ ಈ ಮಾತನ್ನು ಬಹಳ ಸಂಕೋಚದಿಂದ ಹೇಳುತ್ತಿದ್ದೇನೆ. ಆ ಘಟನೆಯ ವಿವರಗಳನ್ನು ಮಾತ್ರ ಇಲ್ಲಿ ಈಗ ಹೇಳುವ ಸ್ಥಿತಿಯಲ್ಲಿ ನಾನಿಲ್ಲ, ಕ್ಷಮಿಸಿ.) ತನಗೆ ಕೇಡು ಬಗೆದವರಿಗೂ ಮನಸಾರೆ ಒಳಿತನ್ನು ಹಾರೈಸುವುದು ಮಾನವೀಯತೆಯ ಪರಾಕಾಷ್ಠೆಯಲ್ಲದೆ ಮತ್ತಿನ್ನೇನು? ನನಗೆ ತಿಳಿದಿರುವ ಎರಡು ಬದ್ಧ ದ್ವೇಷಿ ಕುಟುಂಬದ ಓರ್ವ ಹಿರಿಯ ಮರಣ ಹೊಂದಿದಾಗ ಜೀವನದುದ್ದಕ್ಕೂ ಆತನ ಕಡು ವೈರಿಯಾಗಿದ್ದಾತ ಶವ ಸಂಸ್ಕಾರಕ್ಕೆ ಬಂದು ಬಿಕ್ಕಿ ಬಿಕ್ಕಿ ಅತ್ತು (ಅದು ನಾಟಕವಾಗಿರಲಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ) ಕುಗ್ಗಿ ಹೋದ ಘಟನೆ ನನ್ನ ಮನಸ್ಸಿನಲ್ಲಿದೆ. ಅದನ್ನು ಆ ಸತ್ತ ವ್ಯಕ್ತಿ ಜೀವಂತವಾಗಿರುವಾಗಲೇ ಮಾಡಿದ್ದರೆ ಒಳಿತಿತ್ತು ಎನ್ನುವ ವ್ಯಾವಹಾರಿಕ ಮಾತು ಬೇರೆ. ಅದು ವ್ಯಕ್ತಿ ಬಹಳ ಆಳವಾಗಿ ಯೋಚಿಸಿ ಮಾಡಿದ ಕೆಲಸವಾದ್ದರಿಂದ ಮಹತ್ವದ್ದು ಎಂದು ನನ್ನ ಭಾವನೆ. ಸಾಯಿಸಲೆತ್ನಿಸಿದ ರಾಕ್ಷಸಿ ಪೂತನಿಗೂ ಶ್ರೀ ಕೃಷ್ಣ ಮೋಕ್ಷವನ್ನು ಕರುಣಿಸಿದ. ಆಕೆಯದು ತೋರಿಕೆಯ ಕಪಟ ಮಾತೃತ್ವವಾಗಿದ್ದರೂ ಕೃಷ್ಣ ಅದನ್ನು ನೋಡಿದ ಬಗೆ ಬೇರೆ. ಹಾಗೆಯೇ ತನ್ನನ್ನು ಶಿಲುಬೆಗೇರಿಸಿದವರ ಬಗ್ಗೆ “ಮರಣವೃಕ್ಷದೊಳಮೃತ ಫಲದಂತೆ” (‘ಗೊಲ್ಗೊಥಾ’ – ಮಂಜೇಶ್ವರ ಗೋವಿಂದ ಪೈ) ಕಾಣುತ್ತಿದ್ದ ಯೇಸುಸ್ವಾಮಿಯೂ “ತನ್ನ ಕಡಿರ್ಗೆ ತಣ್ಣೆಳಲೀವ ಮರದಂತೆ” (‘ಗೊಲ್ಗೊಥಾ’) ಈ ಮಾತನ್ನು ಹೇಳಿದ: “ತಂದೆಯೇ, ಅವರ ಅಪರಾಧಗಳನ್ನು ಕ್ಷಮಿಸು; ತಾವೇನು ಮಾಡುತ್ತಿದ್ದೇವೆ ಎಂಬುದನ್ನರಿಯರು” ಕ್ಷಮಾಗುಣದ ಚರಮ ಸೀಮೆ ಇದು ಎಂಬುದಕ್ಕೆ ಬೇರೆ ಉದಾರಹರಣೆ ಬೇಕೇ? ನೀವು ಹೇಳಬಹುದು ಇದು ಅಂತಹ ದೈವಾಂಶ ಸಂಭೂತರಿಗೆ ಮಾತ್ರ ಸಾಧ್ಯ. ನಮ್ಮಂತಹ ಹುಲು ಮಾನವರಿಗಲ್ಲ. ಒಪ್ಪಿದೆ. ನನ್ನ ಯೋಚನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಇನ್ನೊಂದು ಸತ್ಯ ಘಟನೆಯನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಆ ಘಟನೆ ಹೀಗಿದೆ: ಒಮ್ಮೆ ನಮ್ಮ ಕಾಲೇಜಿಗೆ ಓರ್ವ ಅಮೇರಿಕನ್ ಮಹಿಳೆ ಬಂದಿದ್ದರು. ಇದು ನಮ್ಮ ಕಾಲೇಜಿಗೆ ವಿಶೇಷವೇನೂ ಅಲ್ಲ. ಅವರ ಭಾಷಣ ಪೂರ್ವಸೂಚನೆ ಇಲ್ಲದೆ ನಿಗದಿಯಾಯಿತು. ಎಲ್ಲರೊಂದಿಗೆ ನಾನೂ ಆ ಭಾಷಣ ಕೇಳಲು ಹೋಗಿದ್ದೆ. ಅವರು ಒಂದು ಘಟನೆಯನ್ನು ವಿವರಿಸಿದರು. ಅಮೇರಿಕಾದಲ್ಲಿ ಸಾಮಾನ್ಯವಾಗಿ ಎಲ್ಲರೂ ವಾರಾಂತ್ಯದಲ್ಲಿ ಸಕುಟುಂಬವಾಗಿ ಅವರು ಮನೆಯಿಂದ ದೂರ ಸಂಚಾರಕ್ಕೆ ಹೋಗುತ್ತಾರೆ. ಹಾಗೆಯೇ ಒಂದು ಕುಟುಂಬ ತನ್ನ ಐವರು ಮಕ್ಕಳೊಂದಿಗೆ ಊರ ಹೊರಗೆ ಹೋಗಿ ರಾತ್ರಿ ಕಾಲದಲ್ಲಿ ತೆರೆದ ಬಯಲಲ್ಲಿ ತಮ್ಮ ತಮ್ಮ ಸ್ಲೀಪಿಂಗ್ ಬ್ಯಾಗ್ ನಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದರು. ಬೆಳಗ್ಗೆ ಎದ್ದು ನೋಡುವಾಗ ಅವರ ಕೊನೆಯ ಮಗಳು ಸುಮಾರು ಹದಿಮೂರು ವಯಸ್ಸಿನ ಹುಡುಗಿ ಕಾಣೆಯಾಗಿದ್ದಳು. ಎಲ್ಲೆಲ್ಲೋ ಹುಡುಕಿ ಸೋತ ಅವರಿಗೆ ಕೊನೆಗೆ ಆ ಹುಡುಗಿಯ ಮೃತ ದೇಹ ಒಂದು ಪೊದೆಯಲ್ಲಿ ಎರಡು ದಿನಗಳ ಬಳಿಕ ಸಿಕ್ಕಿತು. ಆಕೆಯನ್ನು ಅಮಾನುಷವಾಗಿ ಬಲಾತ್ಕರಿಸಿ ಕೊಂದು ಬಿಟ್ಟಿದ್ದ ಓರ್ವ ಪಾತಕಿ. ಆ ಕುಟುಂಬ ತನ್ನ ಶಾಂತಿ, ನೆಮ್ಮದಿಯನ್ನು ಕಳೆದುಕೊಂಡು ದು:ಖದಲ್ಲಿ ಮುಳುಗಿತ್ತು. ಆ ಮೇಲೆ ಗೊತ್ತಾಯಿತು ಇದು ಓರ್ವ ವಿಕೃತ ಕಾಮಿಯ ಕೆಲಸ; ಆತ ಈಗಾಗಲೇ ಸುಮಾರು ಹದಿನೈದು ಮಂದಿ ಅಮಾಯಕ ಹೆಣ್ಣುಮಕ್ಕಳನ್ನು ಇದೇ ರೀತಿ ಬಲಾತ್ಕರಿಸಿ ಕೊಂದು ಹಾಕಿದ್ದ. ಸರಿ! ಕಾನೂನಿನ ಕೈಗಳಿಂದ ಅಪರಾಧಿ ಧೀರ್ಘ ಕಾಲ ತಪ್ಪಿಸಿಕೊಳ್ಳಲಾರ ಎಂಬುದು ಅಪರಾಧ ಶಾಸ್ತ್ರದ ಒಂದು ಪ್ರಮೇಯ. ಸ಼ುಮಾರು ಇಪ್ಪತ್ಮೂರು ವಯಸ್ಸಿನ ಓರ್ವ ಯುವಕ ಈ ಕೃತ್ಯ ಮಾಡಿದವನು ಎಂದು ಪೊಲೀಸರು ಸಾಕ್ಷ್ಯಾಧಾರಗಳ ಮೂಲಕ ಕಂಡು ಹಿಡಿದು ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಇತ್ತ ಮಗಳನ್ನು ಕಳೆದುಕೊಂಡ ಆ ತಾಯಿ ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಯಿತು. ಚಿಕಿತ್ಸೆಯ ಭಾಗವಾಗಿ ನೊಂದು, ಬೆಂದ ಆ ಮಹಿಳೆಗೆ ಮಾನಸಿಕ ತಜ್ಞರು ಆ ಅಪರಾಧಿಯನ್ನು ಕ್ಷಮಿಸಿದರೆ ಆಕೆಗೆ ಮಾನಸಿಕ ನೆಮ್ಮದಿ ಸಿಕ್ಕರೂ ಸಿಗಬಹುದು ಎಂದು ಹೇಳಿದರು. ಹಾಗೆ ಆಕೆಯ ಪತಿ ಆಕೆಯನ್ನು ಇದಕ್ಕೆ ಒಪ್ಪಿಸಿದರಂತೆ. ಆಗ ಆ ಮಹಿಳೆ ಆ ಬಗ್ಗೆ ಯೋಚಿಸಿ, “ನೋಡೋಣ. ಪ್ರಯತ್ನ ಪಡುವೆ” ಎಂಬ ಪ್ರಾಮಾಣಿಕತೆಯಿಂದ ಆ ಯುವಕನನ್ನು ಜೈಲಿನಲ್ಲಿ ಭೇಟಿಯಾಗುತ್ತಾಳೆ. ಮೊದಲಿಗೆ ಅವಳ ಮನವಿಯನ್ನು ತಿರಸ್ಕರಿಸಿದ ಅಪರಾಧಿ ಕೊನೆಗೂ ಮನಸ್ಸು ಬದಲಿಸಿ ಆಕೆಯನ್ನು ಭೇಟಿಯಾಗಲು ಒಪ್ಪುತ್ತಾನೆ. ಈ ಮಹಿಳೆ ಅಲ್ಲಿಗೆ ಹೋಗಿ ಆತನಲ್ಲಿ ಮಾತನಾಡಿ “ನಾನು ನಿನ್ನನ್ನು ಮನ:ಪೂರ್ವಕವಾಗಿ ಕ್ಷಮಿಸಿದ್ದೇನೆ” ಎಂದು ಹೇಳಿದರೂ ಆತ ಅದನ್ನು ನಿರ್ಭಾವುಕವಾಗಿ ಕೇಳಿಸಿಕೊಂಡನಂತೆ. ಅವನಲ್ಲಿ ಯಾವ ಬದಲಾವಣೆಯನ್ನೂ ಆ ತಾಯಿ ಕಾಣಲಿಲ್ಲವಂತೆ. ಆದರೆ ಆಕೆ ಆತನನ್ನು ಮನ:ಪೂರ್ವಕವಾಗಿ ಕ್ಷಮಿಸಿ ಹಿಂತಿರುಗಿ ಬಂದ ಮೇಲೆ ನಿಧಾನವಾಗಿ ಆಕೆಯ ಮಾನಸಿಕ ಸ್ವಾಸ್ಥ್ಯ ಮರುಕಳಿಸಿತಂತೆ. ಇಷ್ಟು ಹೇಳಿ ಆ ಅಮೇರಿಕನ್ ಮಹಿಳೆ ತನ್ನ ಮಾತು ಮುಗಿಸಿ “ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಸ್ಸಂಕೋಚವಾಗಿ ತಿಳಿಸಿ: ಎಂದಾಗ ಸಭೆಯಲ್ಲಿ ಒಂದು ಮೌನ ಆವರಿಸಿತ್ತು. ಆಗ ನಾನು ಹೇಳಿದೆ: “ಇದು ಕೇಳಲಿಕ್ಕೇನೋ ಬಹಳ ಚೆನ್ನಾಗಿದೆ. ಆದರೆ ನಿಜ ಜೀವನದಲ್ಲಿ ಹೀಗಾಗುವುದು ಸಾಧ್ಯವೇ ಎಂಬ ಬಗ್ಗೆ ನನಗೆ ಸಂದೇಹವಿದೆ” ಆ ಅಮೇರಿಕನ್ ಮಹಿಳೆ ತಕ್ಷಣ ಯಾವ ಉತ್ತರವನ್ನೂ ಕೊಡದೆ ಉಳಿದವರ ಅಭಿಪ್ರಾಯಗಳನ್ನು ಕೇಳತೊಡಗಿದರು. ವಿದ್ಯಾರ್ಥಿಗಳೂ, ಅಧ್ಯಾಪಕರೂ
ಪುಸ್ತಕ ಪರಿಚಯಗಳು
ನಮ್ಮೂರ ಮಣ್ಣಿನಲಿ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಶಾಂತೇಶ ಪ್ರಕಾಶನ, ಧಾರವಾಡ ಪುಟ : ೧೦೨ ಬೆಲೆ : ₹ ೮೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB000400 “ಕೊರೊನಾ ಜೊತೆಗೆ ಶಾಲಾಬದುಕು” ಲೇಖಕರು: ಡಾ.ಪ್ರಸನ್ನ ಹೆಗಡೆ ಮೈಸೂರುಪುಟಗಳು 176ಬೆಲೆ 150/ಪ್ರಕಾಶಕರ ಹೆಸರು: ಲೇಖಕ ಪ್ರಕಾಶಕರುವಿಳಾಸ. ನಂಬರ್ ೨೦. ಐದನೇ ಕ್ರಾಸ್. ಬ್ಯಾಂಕರ್ಸ ಕಾಲೋನಿ.ಬೋಗಾಧಿ ಮೈಸೂರು 570026.ಪೋನ್ ನಂಬರ್ 9844355941ಬ್ಯಾಂಕ್ ಅಕೌಂಟ್ ನಂಬರ್.Bank account detailsPrasanna HegdeSyndicate bank.marimallappa college BranchAccount number 17152200003319Ifsc code SYNB0001715 ಮುಸ್ಸಂಜೆಯ ನೋಟ ಪ್ರಕಾರ : ಕವನ ಸಂಕಲನಲೇಖಕರು : ಅರುಣ ರಾವ್ಬೆಲೆ : ೬೦ ರೂಪಾಯಿಗಳುಪುಟಗಳು : ೬೦ ಕೃತಿಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ Aruna RaoNo. 22, ‘kanakadhara’,Sourobha orchard,Thigalarapalaya main road,Andrahalli main road,Land mark: Near kalikamba timbers & plywoods.Bangalore 560091 ph: 9901075235, 9449133457 ಹಣ ಜಮಾವಣೆ ಮಾಡಬೇಕಾದ ಖಾತೆಯ ವಿವರ:Aruna T.GA/c no. 1174131000134IFSC code: CNRB0001174 ಮೈರಾ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಚೇತನ ಪ್ರಕಾಶನ, ಹುಬ್ಬಳ್ಳಿ ಪುಟ : ೯೮ ಬೆಲೆ : ₹ ೧೦೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB0004006
ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ ಶ್ರೀ ವಸಂತ ಬನ್ನಾಡಿ. ಬನ್ನಾಡಿಯವರಿಗೆ ಗುಣ ಮತ್ತು ಶಬ್ದದ ಬಗೆಗೆ ಪೂರ್ಣ ಗಮನ. ನಾಟಕ ನಿರ್ದೇಶಕರೂ ರಂಗ ಕರ್ಮಿಯೂ ಆಗಿರುವ ಬನ್ನಾಡಿ ತಮ್ಮ ಕವಿತೆಗಳ ಮೂಲಕ ನಮಗೆ ಫೇಸ್ಬುಕ್ಕಿನ ಮೂಲಕ ಪರಿಚಿತರೂ ಹೌದು. ಈ ಇಂಥ ಕವಿ ಪ್ರಕಟಿಸಿರುವ ಸಂಕಲನಕ್ಕೆ ಖ್ಯಾತ ಕವಿ ಮತ್ತು ವಿಮರ್ಶಕ ಡಾ.ಎಸ್.ಜಿ.ಸಿದ್ಧರಾಮಯ್ಯ ಮುನ್ನುಡಿ ಒದಗಿಸಿರುವ “ನೀಲಿ ನಕ್ಷತ್ರ” ೨೦೧೬ರಲ್ಲಿ ಪ್ರಕಟವಾಯಿತು. ಅಲ್ಲಿ ಇಲ್ಲಿ ಒಂದಷ್ಟು ಚರ್ಚೆಗಳೂ ಆದವು. ನೀಲಿ ಎಂದರೆ ನಿರಾಳ. ನೀಲಿ ಎನ್ನುವುದು ಆಕಾಶದ ಬಣ್ಣ. ನೀಲಿ ಎನ್ನುವುದು ಕೃಷ್ಣನ, ರಾಮನ ಚರ್ಮದ ಬಣ್ಣ. ಕಡು ನೀಲಿ ಎನ್ನುವುದನ್ನು ಕಪ್ಪು ಎಂದೂ ಬಳಕೆ ಮಾಡುವುದಿದೆ. ಜೊತೆಗೇ ಸಾಮಾಜಿಕ ಕಟ್ಟುಪಾಡಿನ ಶಿಷ್ಟಾಚಾರವನ್ನು ಮುರಿದ ಎಲ್ಲೆ ಮೀರಿದ ಲೈಂಗಿಕತೆಗೂ “ನೀಲಿ” ಎನ್ನುವುದುಂಟು. ಲಂಕೇಶರ “ನೀಲು” ಸಾಲು ನೆನಪಾದರೆ ಈ ಪದದ ಅರ್ಥ ಶ್ರೀಮಂತಿಕೆಗೆ ಸಾಕ್ಷಿ. ಈ ಸಂಕಲನದ ನಂತರವೂ ಈ ಕವಿಯು ಇಂಥದೇ ರಚನೆಗಳಲ್ಲೇ ಇರುವಂತೆ ಕಾಣುತ್ತಾರಾದರೂ ಇದುವರೆಗೂ ಬಳಕೆಯಲ್ಲಿದ್ದ, ಪ್ರೀತಿಯನ್ನು ವರ್ಣಿಸುವ ಸಾಂಪ್ರದಾಯಿಕ ರೀತಿಯನ್ನು ಬಿಟ್ಟುಕೊಟ್ಟ ಇಲ್ಲಿನ ಪದ್ಯಗಳು ಲೈಂಗಿಕ ಪ್ರತಿಮೆಗಳಾಚೆಗಿನ ಸೌಂದರ್ಯ ಮತ್ತು ಅನುಭೂತಿಯನ್ನು ವಿಸ್ತರಿಸುವ ಧೈರ್ಯ ಮಾಡಿರುವುದರ ಕುರುಹಾಗಿದೆ. ಸಂದರ್ಭಗಳ ಮರುಸೃಷ್ಟಿಗೆ ಇಲ್ಲಿ ಪದಗಳನ್ನು ಹಿತಮಿತವಾಗಿ ಬಳಸುವ ಈ ಕವಿ, ಅರ್ಥಗಳ ಹೊಳಪು ಕೊಟ್ಟು ದಿಗ್ಮೂಡಗೊಳಿಸುತ್ತಾರೆ. ನೀಲಾಕಾಶದ ದಿಟ್ಟಿಗೆ ನಿಲುಕುವ ಸಂಗತಿಗಳಿಗಿಂತ ಗಮನಕ್ಕೆ ಸಿಗದೇ ಉಳಿವ ಸಂಗತಿಗಳನ್ನು ಈ ಪದ್ಯಗಳ ಆಳದ ಓದು ಮಾತ್ರ ಕೊಡಬಲ್ಲದು. ಮೇಲ್ನೋಟಕ್ಕೆ ಹೆಣ್ಣೊಬ್ಬಳ ಗಂಡಿನ ಮೇಲಣ ಆಕರ್ಷಣೆಯಂತೆ ಈ ಪದ್ಯಗಳ ನೇಯ್ಗೆ ಇದ್ದರೂ ಆಳದಾಳದಲ್ಲಿ ಇರುವುದು ವ್ಯಕ್ತದಾಚೆಗೂ ಉಳಿವ ಅವ್ಯಕ್ತ ಭಾವನೆಗಳ ಮಹಾಪೂರ. ನಿಜಕ್ಕೂ ಚರ್ಚಿಸಲೇ ಬೇಕಾದ ಕಾವ್ಯ ಕೃಷಿ ವಿನಿಶಾ ಗೋಪಿನಾಥರ ಪದ್ಯಗಳಲ್ಲಿವೆ. ಮೊದ ಮೊದಲ ಓದಿಗೆ ಪ್ರೇಮದ ನೈರಾಶ್ಯವೇ ಬಹುತೇಕ ಕವಿತೆಗಳ ಮೂಲ ಎಂದು ಮೇಲ್ನೋಟಕ್ಕೆ ಅನ್ನಿಸುವುದಾದರೂ ಅದು ಸತ್ಯವಲ್ಲ. ವಿಷಾದ ಮತ್ತು ಬದುಕಿನ ಗಾಢ ಕ್ರೂರತೆ ಇಲ್ಲಿನ ಬಹುತೇಕ ಪದ್ಯಗಳ ಅಸ್ತಿವಾರ. ಆ ಕಾರಣಕ್ಕೇ ಇವರ ಮೊದಲ ಸಂಕಲನ “ನೀಲಿ ನಕ್ಷತ್ರ”ಕ್ಕೆ ಮುನ್ನುಡಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯನವರ ಮಾತನ್ನು ಮುಂದುವರೆಸಲೇಬೇಕು. “ಒಂದು ದಿನ ತಿರಸ್ಕರಿಸುವ ಮತ್ತೊಂದು ದಿನ ಪುರಸ್ಕರಿಸುವ ಒಮ್ಮೆ ನನ್ನನ್ನು ಹಾಲಿನಲ್ಲಿ ಅದ್ದುವ ಒಮ್ಮೆ ನನ್ನನ್ನು ನೀರಿನಲ್ಲಿ ಅದ್ದುವ ಬಹುರೂಪತೆಯನ್ನು ಇನ್ನಾದರೂ ಬಿಡು ನಲ್ಲ ಏನು ನಿನ್ನ ಒಳಗಿನ ನಿಗೂಢ? ಎಲ್ಲವನ್ನೂ ಬಿಚ್ಚಿಡು”. – (ಬಾಳಿನ ಹೊಸ ಪುಟ) ಈ ಪದ್ಯ ಸುರುವಾಗುವುದೇ “ನನ್ನ ಮನೆಯೆಂಬ ಚಿಕ್ಕ ಗೂಡು ಕಾಯುತ್ತಿದೆ ನಿನ್ನ ಬರವಿಗಾಗಿ ಎದೆ ಒಸಗೆ ತುಂಬಿ” ಎನ್ನುವ ಸಾಲಿನಿಂದ. “ಅವನ” ಬರವಿಗಾಗಿ ಕಾಯುವ “ಅವಳು” ಅವನ ನಿಗೂಢ ನಡೆಯನ್ನು ಪ್ರಶ್ನಿಸುತ್ತಲೇ ಅವನನ್ನು ಸ್ಪಷ್ಟ ಪಡಿಸಲು ಕೋರುವ ಕಡೆಯ ಸಾಲು ಬರಿಯ ಪ್ರೀತಿಯ ಮಾತನ್ನಲ್ಲದೆ ಸಂಗಾತಿ ಅನುರೂಪವಾಗಿಯೇ ಇರಬೇಕೆಂಬ ಬಯಕೆ. “ನಾವಿಬ್ಬರು ದೇವ ದೇವಿಯರಾಗಿ ಉಳಿಯುವೆವು ಸೂರ್ಯ ಚಂದ್ರ ನಕ್ಷತ್ರ ನದಿ ಹಳ್ಳ ಕೊಳ್ಳಗಳಿರುವ ತನಕ ಪ್ರೇಮಿಗಳ ಧಮನಿಗಳಲಿ ಪ್ರೀತಿಯ ರಕುತ ಹರಿದಾಡುತ್ತಿರುವ ತನಕ” (ದೇವಿ ದೇವರ ಪ್ರೇಮ ಗಾಥೆ) ಈ ಪದ್ಯದ ಸುರುವಿನ ಸಾಲು ಹೀಗಿದೆ; ಯಾವ ಹೆಣ್ಣೂ ಪ್ರೇಮಿಸಿರಲು ಸಾಧ್ಯವಿಲ್ಲ ನಿನ್ನನು ನನ್ನಷ್ಟು ತೀವ್ರ ಈ ಭೂಮಂಡಲದಲಿ ಅಕ್ಕ ಚೆನ್ನ ರಾಧೆ ಕೃಷ್ಣರು ಧಡ್ಡನೆ ತಮ್ಮ ಬಾಗಿಲುಗಳ ಮುಚ್ಚಿದರು ಕ್ಷಣಹೊತ್ತು ತಮ್ಮ ಪ್ರೇಮಗಾಥೆಯ ಚೌಕಾಶಿ ಮಾಡಿದರು. ಈಗ ಪದ್ಯದ ಓದನ್ನು ಈಗ ಹೇಳಿದ ಎರಡನೇ ಕಂದದಿಂದ ಆರಂಭಿಸಿ ಮೊದಲ ಸಾಲನ್ನು ನಂತರ ಓದಿದರೆ ಹುಟ್ಟುವ ಯಾಚ(ತ)ನೆಯ ಪರಿಗೆ ಸೋಲದೇ ಉಳಿಯುವುದಾದರೂ ಹೇಗೆ? ಇಷ್ಟೆಲ್ಲ ಹೇಳಿದರೂ ಮತ್ತೆ ಗೊಂದಲ ನಿರೂಪಕಿಗೆ, ಅವಳು ಹೇಳುತ್ತಾಳೆ; ಎಲ್ಲ ಗಂಡಸರೂ ಒಂದೇ ಏನು? ಅಕ್ಕನ ಮೊರೆಗೆ ಕಿವಿಗೊಟ್ಟನೇ ಚೆನ್ನ? ಕೊಳಲಿನ ಜೊತೆಗೆ ರಾಧೆಯನೂ ಹಿಂದೆ ಬಿಟ್ಟು ನಡೆದೇ ಬಿಟ್ಟನಲ್ಲ ಕೃಷ್ಣ? ಮುಂದುವರೆದ ಅವಳು ಹೀಗೂ ಹೇಳುತ್ತಾಳೆ; ನೀನು ರೂಹಿಲ್ಲದ ಚೆಲುವನಲ್ಲ ನನ್ನ ಕಣ್ಣಿನ ಮುಂದಿನ ಸಾಕ್ಷಾತ್ಕಾರ ಬಳಿ ಇದ್ದಿದ್ದರೆ ಈಗ ನೀನು ನಿನ್ನ ಕೈತುಂಬಾ ಮೆತ್ತಿಕೊಳ್ಳುತ್ತಿದ್ದೆ ನನ್ನ ಬೆತ್ತಲೆ ಚೆಲುವನು …………. ನೋಡಲಿ ಜಗತ್ತು ನಮ್ಮಿಬ್ಬರ ಪ್ರಣಯದ ಕೊನೆಯಿರದ ಪಯಣವನ್ನು ಈ ಟಿಪ್ಪಣಿಯಲ್ಲಿ ಮೊದಲು ಬಳಸಿದ “ನೀಲಿ” ಶಬ್ದದ ಅರ್ಥವನ್ನು ಈ ಪದ್ಯದ ಓದಿನಲ್ಲಿ ಗ್ರಹಿಸಲು ಯತ್ನಿಸಿ, ಆಗ ಮಾತ್ರ ಈಕೆ ಹೇಳ ಹೊರಟ ಆಳದಾಳದ ಕೊಳದ ನೀಲ ನಿಮಗ್ನ ನಗ್ನ ಸತ್ಯ ಅದ್ಭುತವಾಗಿ ಹೊಳೆಯುತ್ತದೆ. ಇನ್ನು “ಸಂಶಯ” ಎನ್ನುವ ಕವಿತೆಯಲ್ಲಿ ತೇಲಿಹೋಗುವೆ ನಾನು ನಿನ್ನ ಅಗಾಧ ಪ್ರೀತಿಯ ಹೊಳೆಯಲ್ಲಿ ಮರೆತುಬಿಡುತ್ತಾ ನೀನು ಚುಚ್ಚಿದ ಕಂಠಿ ಮುಳ್ಳುಗಳನ್ನು ತಯಾರಾಗಿಬಿಡುತ್ತೇನೆ ನೀನು ತೋರಿಸಿದ ದಾರಿಯಲ್ಲಿ ನಡೆಯಲು ನನಗೆ ಗೊತ್ತಿದೆ; ಆಡಿದ್ದೇನೆ ನಾನೂ ನಿನಗೆ ಘಾಸಿಮಾಡುವ ಮಾತುಗಳನ್ನು ಎಲ್ಲ ಮರೆತು ನೀನು ಕೇಳುವುದು ನನ್ನ ಮಾತುಗಳನ್ನೇ!” -ಎಂದು ಕೊನೆಯಾದಂತೆ ಕಂಡರೂ, ಈ ಮೊದಲು ಅವಳು ಅಂದುಕೊಂಡಿದ್ದೇನು ಎಂದು ಗಮನಿಸಿದರೆ; “ನಿನ್ನ ಎದೆಯಲ್ಲಿ ಸಂಶಯದ ಬೆಕ್ಕೊಂದು ಚಂಗೆಂದು ನಗೆಯುವುದು ನನಗೆ ಕೇಳಿಸುತ್ತದೆ ಆಗೆಲ್ಲಾ ಎಲ್ಲರ ಹಾಗೆ ನೀನೂ ಒಬ್ಬ ಗಂಡಸು ಎಂಬುದನ್ನು ತೋರಿಸಿ ಬಿಡುತ್ತೀಯ ನಿನ್ನ ಸಿಡಿ ನುಡಿಗಳು ಕ್ಯಾಕ್ಟಸ್ ಮುಳ್ಳುಗಳಂತೆ ನನ್ನ ಮನಸ್ಸನ್ನು ಇರಿಯತೊಡಗುತ್ತವೆ ನನ್ನ ಅಸಹಾಯಕತೆ ನಿನ್ನ ಕ್ರೂರ ಬಾಯಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಸುಮ್ಮನೆ ಕಾಯುತ್ತೇನೆ ನಾನು ನೀನು ಎಂದಿನ ಮಧುರ ನುಡಿಗಳಲಿ ಮಾತನಾಡುವ ಗಳಿಗೆಗೆ” ಇವು ಬರಿಯ ವ್ಯಾಮೋಹದ, ಕಾಮನೆಯ ಅಥವ ಪ್ರಣಯದ ಆಹ್ವಾನದ ಅಂದಾದುಂದಿನ ಸವಕಳಿ ಸಾಲುಗಳಲ್ಲ, ಬದಲಿಗೆ ಸಂಗಾತಿಯ ನಿಷ್ಠೆ ಮತ್ತು ತನ್ನ ಹೊರತು ಅನ್ಯವನ್ನು ಕಾಣುವ ಸಂಗಾತಿಯ ಮೇಲಣ ಸಂಶಯಕ್ಕೆ ಸ್ವತಃ ಕೊಟ್ಟುಕೊಂಡ ಉತ್ತರವೂ ಆಗಿದೆ. “ರೆಡ್ ವೈನ್ ವಿಷಾದ” ಕವಿತೆ ಬರಿಯ ಪದ್ಯವಲ್ಲದ ಒಂದು ಬಗೆಯ ಗಪದ್ಯವೂ ಹೌದು. ಸಣ್ಣಕತೆಯೂ ಹೌದು. ಒಂದು ರಾತ್ರಿ ಅವನ ಬರುವಿಗೆ ರೆಡ್ ವೈನಿನ ಜೊತೆ ಕಾಯ ತೊಡಗುವ ಅವಳು ಬೆಳಗ ಎಚ್ಚರದಲ್ಲಿ ಖಾಲಿ ಬಾಟಲನ್ನು ಕಾಣುತ್ತಾಳೆ. ಆದರೆ ರಾತ್ರಿ ನಡೆದುದೇನು ಎನ್ನುವ ಪ್ರಶ್ನೆಗೆ ಪದ್ಯದ ಓದು ಮಾತ್ರ ನಿಮಗೆ ಉತ್ತರಿಸಬಹುದು (ಎಲ್ಲ ಸ್ವಾರಸ್ಯವನ್ನೂ ಟಿಪ್ಪಣಿಕಾರನೇ ಹೇಳಿಬಿಟ್ಟರೆ ರಸಿಕನಿಗೆ ಬೇಸರ ಎನ್ನಿಸದೇನು?) ಆದರೆ “ನಿರಾಳತೆ” ಎನ್ನುವ ಕವಿತೆ ಮಾತ್ರ ಈವರೆವಿಗೂ ಹೇಳಿದ ಕಾವ್ಯಕೃಷಿಗಿಂತ ಕೊಂಚ ಹೊರಳು ಹಾದಿಯಲ್ಲಿ ಹಾಯುತ್ತದೆ. ಮಧ್ಯಾಹ್ನದ ನಿರಾಳತೆಯ ಒಂದು ಮಳೆ ಕಾಲದಲ್ಲಿ ಅವಳನ್ನು ಕಾಣಬಂದ ಅವನನ್ನು ಬಲವಂತ ಮಾಡಿ ಹೊರ ಪ್ರಪಂಚದ ಸಂಗತಿಗಳಿಗೂ ಒಡ್ಡ ಬಯಸಿ ಕರೆದೊಯ್ಯುವ ಅವಳು, ಕಾಮನ ಬಿಲ್ಲ ಬಣ್ಣವನ್ನು ಕಾಣಿಸುತ್ತಾಳೆ. ಅವಳು ಮರದ ಕೊಂಬೆಯ ಮೇಲೆ ಕೂತಿದ್ದ ಹಕ್ಕಿಯೊಂದನ್ನು ಹಿಡಿಯ ಹೋಗಿ ಆ ಪಕ್ಷಿ ತಪ್ಪಿಸಿಕೊಂಡು ನೀರಿಗೆ ಬಿದ್ದೂ ಮತ್ತೆ ಛಕ್ಕನೆ ರೆಕ್ಕೆ ಫಡಫಡಿಸಿ ಹಾರಿದ್ದನ್ನು ಕಂಡಾಗ ಆ ಅವನ ಮನದ ಆಸೆಯನ್ನು ಅರಿಯುತ್ತಾಳೆ ಎನ್ನುವಾಗ ಯಾಕೋ ಮತ್ತೆ ಮೇಲ್ನೋಟದ ಪ್ರಣಯಕ್ಕೇ ಈ ಕವಿಯ ನಾಯಕಿಯೂ ಅರಸುತ್ತಾಳಾ ಅನ್ನಿಸುತ್ತದೆ. ಆದರೆ “ಮೌನದ ನೆರಳು” ಪದ್ಯದಲ್ಲಿ ಪುನಃ “ನಿನ್ನ ಮಾಂತ್ರಿಕ ಬೆರಳಿನ ಸ್ಪರ್ಶಕ್ಕೆ ತಹತಹಿಸುತಿರುವೆನು ಒಂದೇ ಮಾತಿನಲಿ ಉಲಿದು ಬಿಡು ನನ್ನೀ ಆತ್ಮದಲಿ ಒಂದಾಗಿದ್ದೇನೆಂದು ಆದಿ ಅಂತ್ಯಗಳಿಲ್ಲದ ಒಲುಮೆಯಾಗಿ ನಿನ್ನೊಳಗೆ ಕರಗಿಬಿಡುವೆನು” ಅನ್ನುವಾಗ ಮತ್ತೆ ಸ್ಪುರಿಸಿದ ಆ ಅದೇ ಗಂಧಕ್ಕೆ ಮೂಗು ಅರಳುವುದು ಸಹಜ ಮತ್ತು ಸ್ವಾಭಾವಿಕ ಕೂಡ. “ಏಕಾಂತದಲ್ಲಿದ್ದಾಗಲೇ ನಿನ್ನ ಹಾಜರಿ ಹೃದಯದೊಳಗೆ ಅಗ್ನಿಕುಂಡ ಹೊತ್ತಿಕೊಂಡಂತೆ ನಿನ್ನೊಂದಿಗೆ ಕಳೆದ ದಿನಗಳು ಯಾಕೆ ಕಾಡುತ್ತಿವೆ ಇಂದಿಗೂ…” ಎಂದು ಸುರುವಾಗುವ “ಅಮಾಯಕ” ಎನ್ನುವ ಕವಿತೆ,ಮುಗಿಯುವುದು ಹೀಗೆ; “ಕಣ್ಣೆದುರೇ ಇದ್ದರೂ ಗುರುತು ಹಿಡಿಯಲಾರ ಅವನು ಕೋಪ ತಾಪ ಸಿಟ್ಟು ಸೆಡ ಬದಿಗಿಟ್ಟ ಗಳಿಗೆ ನಾನವನ ತೋಳಸೆರೆ ಎಂಬುದನ್ನು ಅರಿಯದ ಅಮಾಯಕ” ಇಲ್ಲಿ ಕವಿ ಬದುಕಿನಲ್ಲಿ ಅನಿವಾರ್ಯ ಬರುವ ಸಂಗತಿಗೆ ತಲೆಬಾಗುತ್ತಿದ್ದಾರೋ, ತಲೆ ಎತ್ತಿ ಪ್ರೀತಿ ಮತ್ತು ನಿಷ್ಠೆಗೆ ಬದ್ಧವಾಗದೇ ಬದುಕಿನ ಹಳವಂಡಗಳಲ್ಲಿ ಮರೆಯಾಗಿ ತನ್ನನ್ನು ಗುರುತಿಸದ ಇನಿಯನಿಗೆ ಬದುಕಿನಾಚೆಯ ಬದುಕ ಕಾಣಿಸುತ್ತಿದ್ದಾಳೋ ಅದು ಓದುಗನ ಗ್ರಹಿಕೆಗೆ ಬಿಟ್ಟ ಕಾಣ್ಕೆ. “ರೂಹು ಅರಳಿದ ಕಾಲ” ಎಂಬ ವಿಶಿಷ್ಠ ರಚನೆಯಂತೂ ನನ್ನ ಓದಿನ ಪರಿಯನ್ನೇ ಕ್ಷಣಕಾಲ ಕಂಗೆಡಿಸಿತೆಂದರೆ ನೀವು ನಂಬಲೇ ಬೇಕು. ಏಕೆಂದರೆ ಇಂಥ ಪದ್ಯಗಳ ಅಸ್ತಿವಾರವೇ ಇದುವರೆಗೂ ಕನ್ನಡದ ಮಹಿಳಾ ಅಸ್ಮಿತೆಗೆ ತೆರೆದುಕೊಂಡ ಅಕ್ಕಮಹಾದೇವಿಯ ” ರೂಹು” ಎಂಬ ಶಬ್ದದ ಅಧ್ಬುತ ಮಾಂತ್ರಿಕತೆ ಮತ್ತು ಆ ಪದಕ್ಕಿರುವ ಅತಿ ವಿಶಿಷ್ಠ ಪ್ರಜ್ಞೆಯ ಪುರಾವೆ. “ಮುಂಗಾರು ಮಳೆಯ ಕಾಲಕೆ ಅವಳ ಮನದ ಅಂಗಳದಲಿ ಅವನ ನೆನಪು ನುಗ್ಗಿ ಬರುತ್ತದೆ” ಎನ್ನುವ ಸಾಮಾನ್ಯ ಗ್ರಹಿಕೆಯಿಂದ ಮೊದಲಾಗುವ ಪದ್ಯ, ದಾರಿ ಸರಿದಂತೆ ದಾಟುತ್ತ ದಾಟುತ್ತ, ಕೊನೆಯಾಗುವುದು ಹೀಗೆ; “ಈಗ ಮತ್ತೆ ಮುಂಗಾರಿನ ಒಂದು ದಿನ ಗೊತ್ತು ಅವಳಿಗೆ ನಿರಾಸೆಗೊಳಿಸಿದ್ದಿಲ್ಲ ಎಂದೂ ಅವನು ಬರಬಹುದು ಈಗವನು ಯಾವ ಗಳಿಗೆಗೂ” ಎನ್ನುವಾಗ ಪದ್ಯ ಮುಗಿದೇ ಹೋಯಿತಲ್ಲ ಎನ್ನುವ ಭಾವಕ್ಕಿಂತಲೂ ಬಹಳ ಕಾಲ ಉಳಿಯುವ ಕಡೆಯ ಸಾಲುಗಳು ಕಾಡುತ್ತಲೇ ಇರುತ್ತವೆ, ಥೇಟು ಅವಳ ಬಯಕೆಯ ಅವನಂತೆಯೇ! ಈ ಪದ್ಯಕ್ಕೆ ಫೇಸ್ಬಿಕ್ಕಿನ ಪುಟದಲ್ಲಿ ಖ್ಯಾತ ನಾಟಕಕಾರ ಡಿ ಎಸ್ ಚೌಗುಲೆ ಹೇಳಿದ ಮಾತನ್ನು ಇಲ್ಲಿ ನೆನೆಯದೇ ಇದ್ದರೆ ಅದು ಕೂಡ ತಪ್ಪಾಗುತ್ತದೆ. ಅವರು ಹೇಳುತ್ತಾರೆ: “ಬಹು ಸಂಕೀರ್ಣವಾದ ಕವಿತೆ. ಇದರ ರಚನೆಯ ಸಂವಿಧಾನ ಸುಲಭ ಸಾಧ್ಯವಲ್ಲ. ಹೆಣ್ಣು- ಗಂಡು ನೇಹಿಗರಾಗಿ ಅನುರಾಗಿಗಳಾಗಿ ಕಳೆವ ಪ್ರಕೃತಿ ದತ್ತ ಸಂಗ,ನಿಸ್ಸಂಗದ ರೂಪಗಳು ರೂಹುಗಳಾಚೆ ಒಂದು ಗಾಢ ಅನುಭೂತಿ ಯನ್ನು ಕೊಡುತ್ತವೆ. ಪ್ರತಿಮೆ,ರೂಪಕಗಳು ಹೊಸರಚನೆ ಅನಿಸುತ್ತವೆ. ಆಧ್ಯಾತ್ಮಿಕ ಗುಂಗನ್ನು ಮಸ್ತಕದಲ್ಲಿ ಇರಿಸುತ್ತದೆ. ಕನ್ನಡದಲ್ಲಿ ಒಂದು ಅಪರೂಪದ ಕಾವ್ಯಾಭಿವ್ಯಕ್ತಿ ಅಭಿನಂದನೆಗಳು”. “ಬುದ್ಧನ ಪ್ರೀತಿ” ಎನ್ನುವ ಪದ್ಯ ಅಧ್ಯಾತ್ಮದ ನೆಲೆಯಲ್ಲಿ ಬುದ್ಧನನ್ನು ಧೇನಿಸಿದರೂ ಕೊನೆಯಲ್ಲಿ ಹೀಗೆ ಆಗುತ್ತೆ; “ಉಳಿದ ಯಾರೂ ಮುಖ್ಯವಾಗದೆ ನಾನು ಮತ್ತು ಅವನು ಮಾತ್ರ ಇರುವ ಲೋಕವದು” ಎನ್ನುವಾಗ ಈಕೆಯ ಅಧ್ಯಾತ್ಮವೆಂದರೆ ಕೃಷ್ಣ ರಾಧೆಯರ, ಅಕ್ಕ ಚೆನ್ನನ, ಮೀರ ಮತ್ತು ಗಿರಿಧರನ ಪ್ರೀತಿಯಂತೆ ಕಾಮವಿಲ್ಲದ, ಪ್ರಣಯದ ಉನ್ಮಾದಕ್ಕಿಂತಲೂ ಮಿಗಿದಾದ ಧ್ಯಾನವಲ್ಲದೆ ಮತ್ತೇನು? “ಇದೆಲ್ಲ ಯಾಕೋ ಅತಿಯಾಯಿತು” ಅನ್ನುತ್ತಾರೆ ರಾಮಾನುಜಮ್ ಒಂದು ಕಡೆ. ಇನ್ನು ಈ ಅಂಕಣದ ಓದುಗರು ಹಾಗೆ ಎನ್ನುವ ಮೊದಲು ಮತ್ತೊಂದು ಪದ್ಯದ ಕೆಲವು ಸಾಲುಗಳನ್ನು ಮತ್ತೆ ಹೇಳುತ್ತ ಈ ಟಿಪ್ಪಣಿ ಮುಗಿಸುತೇನೆ. ನಮಸ್ಕಾರ. “ಮಧ್ಯಾಹ್ನದ ಚುಮು ಚುಮು ಚಳಿಗೆ ಬೆಚ್ಚಗಿನ ಹೊದಿಕೆ ಹುಡುಕುತ್ತಿದ್ದೇನೆ ನಿನ್ನ ಸ್ಪರ್ಶ ತಬ್ಬಿ ಮಲಗಲು” (ಬೆಳಕಿನ ತುಣುಕು) ವಿನಿಶಾ ಗೋಪಿನಾಥ್. ಮೂಲ ಕೋಲಾರ ಜಿಲ್ಲೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಬಿ.ಎ
ನೀ ಒಂದು ಸಾರಿ ನನ್ನ ಮನ್ನಿಸು
ನೀ ಒಂದು ಸಾರಿ ನನ್ನ ಮನ್ನಿಸು ಜಯಶ್ರೀ ಜೆ.ಅಬ್ಬಿಗೇರಿ ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು ಸಾಲು ಸಾಲು ಮುತ್ತಿಕ್ಕಿದರೆ ಸಾಕು. ಹೃದಯದಲ್ಲಿ ನೀ ಮಾಡಿದ ಆಳವಾದ ಗಾಯ ಮಾಯ. ಹರಿಯುವ ನೀರಿನಂತೆ ಸುಡುವ ಬೆಂಕಿಯಂತೆ ಅರಳಿದ ಪ್ರೀತಿಯನ್ನು ಬಚ್ಚಿಡುವುದು ಅಸಾಧ್ಯ. ಪ್ರೀತಿಯಲ್ಲಿ ಸಾವು ಬಂದರೂ ಲೆಕ್ಕಕ್ಕಿಲ್ಲ. ಸಾವಿನ ಭಯವೂ ನನಗಿಲ್ಲ.ಭಯದ ನೆರಳಲ್ಲಿ ಬದುಕುವುದು ಒಂದು ಬದುಕೇ? ಪ್ರೀತಿಯಿಲ್ಲದ ಜೀವನ, ಜೀವನವೂ ಅಲ್ಲ. ನೀನು ಒಲಿದಾಗ ಇಷ್ಟಿಷ್ಟೇ ಬದಲಾಗಿದ್ದೆ. ತಡೆ ಹಿಡಿದ ಮನದ ಎಲ್ಲ ಬಯಕೆಗಳನು ಮೆರವಣಿಗೆಗೆ ಸಜ್ಜುಗೊಳಿಸಿದ್ದೆ. ನಾನು ಮಾತಿನಲ್ಲಿ ಒರಟ ಎಂದು ಎಲ್ಲರಿಗೂ ಗೊತ್ತು ಆದರೆ ಹೃದಯ ಮೆತ್ತನೆಯ ಹತ್ತಿಯಂತೆ ಬಲು ಮೃದುವಾಗಿದೆ ಕಣೆ. ಕಾವ್ಯ ಸಾಲಿನಲಿ ಧುಮ್ಮಿಕ್ಕಿ ಹರಿಯುವ ಜಲಧಾರೆಯಂತೆ. ನನ್ನ ಪ್ರೀತಿಗೆ ಮನಸೋತು ನನ್ನ ಬಲಿಷ್ಟ ತೋಳುಗಳಲ್ಲಿ ನಿನ್ನ ನೀನೇ ಬಂಧಿಸಿಕೊಂಡು ಸುಖಿಸಿದ ಪರಿಯನು ಬಣ್ಣಿಸಲು ಪದಕೋಶದ ಪದಗಳು ಸಾಲವು. ನಾನು ನೀನು ಜೊತೆ ಸೇರಿ ಓಡಾಡುತ್ತಿದ್ದಾಗ ಕ್ಷಣ ಕ್ಷಣವೂ ಲವ ಲವಿಕೆ ಪುಟಿದೇಳುತ್ತಿತ್ತು. ಎದೆ ಸೇರಿದ ಹಿತಾನುಭವ ಗುಪ್ತವಾಗಿ ಇರುಳಿನಲ್ಲಿ ಎದ್ದು ನಲಿಯುತ್ತಿತ್ತು. ಅದರಲ್ಲೇ ಮೈ ಮರೆಯುತ್ತಿದ್ದೆ. ಈಗ ನಿನ್ನ ಮುಂದೆ ನನ್ನ ಮನದ ತೊಳಲಾಟ ಹೇಳದಿದ್ದರೆ ಉಳಿಗಾಲವಿಲ್ಲವೆಂದು ಈ ಓಲೆ ಬರೆಯುತಿರುವೆ. ಪ್ರೇಮ ನಿವೇದನೆಯ ಸಂದರ್ಭದಲ್ಲಿ ನಾನು ಒರಟಾಗಿ ನಡೆದುಕೊಂಡೆ ಎಂಬುದು ನನಗೂ ಅನ್ನಿಸಿದೆ ಗೆಳತಿ. ಅಷ್ಟೊಂದು ಆಪ್ತಳಾದ ನಿನ್ನ ಮುಂದೆ ಇನ್ನೇನು ಮುಚ್ಚು ಮರೆ ಎಂದು ಹಾಗೆ ನಡೆದುಕೊಂಡೆ ಹೊರತು, ಮತ್ತೆ ಬೇರೆ ಯಾವ ಕಾರಣಗಳೂ ಇಲ್ಲ. ಪ್ರೇಮ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿ ನಡೆದದ್ದು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಿನ್ನನ್ನು ನನ್ನ ಜೀವದಂತೆ ಕಂಡ ನನಗೆ ಈ ರೀತಿ ಶಿಕ್ಷಿಸುವುದು ತರವೇ? ನೀನೇ ಪ್ರಶ್ನಿಸಿಕೋ ಗೆಳತಿ. ನನ್ನುಸಿರಲ್ಲಿ ಉಸಿರಾಗಿ ನೀನಿರುವಾಗ, ಉಸಿರಿನ ಕೊನೆಯವರೆಗೂ ಜೊತೆಯಲ್ಲೇ ಜೊತೆಗಿರುವೆ. ಈಗಷ್ಟೇ ಕಲೆತಿರುವ ನವಿರಾದ ಮನವನು ಒರಟಾದ ಮಾತುಗಳಿಂದ ಘಾಸಿಗೊಳಿಸಿರುವೆ. ನಿನ್ನೆದೆಯ ಮೃದು ಭಾವಗಳ ಸಂತೈಸಬೇಕು. ಹೃದಯಾಳದಿಂದ ಆರಾಧಿಸುವ ನಿನ್ನನು ನೆನೆದರೆ ಸಾಕು ಭಾವ ಕೋಶವೆಲ್ಲ ಬೆಚ್ಚಗಾಗುವುದು. ನೀನೇ ನಿನ್ನ ಕೈಯಾರೆ ಹೆಣೆದ ಸ್ವೆಟರ್‌ನ್ನು ನನ್ನ ಜನುಮ ದಿನದಂದು ಉಡುಗೊರೆಯಾಗಿ ನೀಡಿದೆ. ಅದರ ಮೇಲಿರುವ ಕೆಂಗುಲಾಬಿ ನನ್ನನ್ನು ಮುದ್ದಿಸಲು ಕೆದಕಿ ಕರೆಯುತ್ತದೆ. ಈ ಬಿರು ಬೇಸಿಗೆಯಲ್ಲೂ ನಿನ್ನೊಲವಿನ ಉಡುಗೊರೆ ಮೈಗಂಟಿಸಿಕೊಂಡೇ ಹೊರ ಬೀಳುವೆ. ಗೆಳೆಯರೆಲ್ಲ ಕಾಲೆಳೆದರೂ ಕಿವಿಗೊಡುವುದಿಲ್ಲ. ನೀನೇ ನನ್ನನ್ನು ಗಟ್ಟಿಯಾಗಿ ತಬ್ಬಿದ ಭಾವ ನನ್ನನ್ನು ಸಣ್ಣನೆಯ ನಶೆಗೊಳಗಾದವನಂತೆ ಆಡಿಸುತ್ತದೆ. ಅದೊಮ್ಮೆ ಇಡೀ ದಿನ ಕಾಡು ಮೇಡು ಬೆಟ್ಟ ಗುಡ್ಡ ಕೈ ಕೈ ಹಿಡಿದು ತಿರುಗಿ ಇಬ್ಬರಿಗೂ ಸುಸ್ತಾಗಿತ್ತು. ಸುಂದರ ಹೂದೋಟದ ಪುಟ್ಟ ಗುಡಿಲಿನ ಮುಂದೆ ಸಂಜೆ ಬಾನಿನ ರಂಗಿಗೆ ಮೈ ಮರೆತಿದ್ದೆ. ಹೃದಯದಲ್ಲಿ ಅವಿತಿದ್ದ ಪ್ರೇಮವು ಕಾರ್ಮೋಡಗಳ ನಡುವೆ ಝಗ್ಗನೇ ಬೆಳಗುವ ಮಿಂಚಂತೆ ನಿನ್ನ ಕಂಗಳಲ್ಲಿ ಮಿಂಚಿದ್ದನ್ನು ಕಂಡೆ. ಜಗದ ಪ್ರೇಮವನ್ನೆಲ್ಲ ನಿನ್ನ ಹೃದಯಕ್ಕಿಳಿಸಿಹರೇನೋ ಎನ್ನುವಂತೆ ಮುಖಭಾವ. ಅಲ್ಲಿರುವ ಕಲ್ಲು ಬಂಡೆಯ ಮೇಲೆ ಸುಖಾಸೀನನಾದೆ. ನನ್ನ ಬೆರಳುಗಳನು ನವಿರಾಗಿ ಸವರಿದೆ. ಮೊದಲ ಸಲ ಇಂಥ ಒಲವ ಪರಿ ಕಂಡು ಅಚ್ಚರಿಗೊಂಡೆ. ಒಲುಮೆಯಿಂದ ನನ್ನ ಬೆನ್ನಿಗೆ ನಿನ್ನ ಎದೆಯನು ತಾಗಿಸಿದೆ. ಮೈ ನರ ನಾಡಿಗಳೆಲ್ಲ ಒಮ್ಮೆಲೇ ರೋಮಾಂಚನಗೊಂಡವು. ನನ್ನ ಭುಜದ ಮೇಲೊರಗಿ ಕೆನ್ನೆಗೆ ಮುತ್ತಿಕ್ಕಿದೆ.ಅದ್ಯಾವಾಗ ನಿನ್ನ ಕೋಮಲ ಬೆರಳುಗಳ ಸಂದುಗಳನು ನನ್ನ ಒರಟಾದ ಬೆರಳುಗಳು ತುಂಬಿದವೋ ಅರಿವಿಗೆ ಬರಲೇ ಇಲ್ಲ. ಆಲಿಂಗನದಲ್ಲಿ ತುಟಿಗೆ ತುಟಿ ಸೇರಿಸಿ ದೀರ್ಘವಾಗಿ ಚುಂಬಿಸಿದ ಹಿತ ಒಂದು ಅದ್ಭುತ ಕಾವ್ಯ ಓದಿದ ರೀತಿಯಂತಿತ್ತು. ಬಲು ಹುಮ್ಮಸ್ಸಿನಿಂದ ಕಾಮದ ಕುದುರೆಯನು ಓಡಿಸಲು ಉತ್ಸುಕನಾದೆ. ಪ್ರೇಮೋತ್ಸವದ ಸಂಭ್ರಮದಲ್ಲಿ ಮೀಯಲು ಅಣಿಯಾಗಿದ್ದೆ. ಪ್ರೀತಿಯ ಮಳೆಗರೆದು ದಾಹ ತೀರಿಸಲು ಮುಂದಾಗಿದ್ದೆ ಎಷ್ಟಾದರೂ ಹೆಣ್ಣು ಜೀವವಲ್ಲವೇ? ಬಯಲಲ್ಲಿ ಬೆತ್ತಲಾದರೆ ಮುಂದಾಗುವ ಆಗು ಹೋಗುಗಳಿಗೆ ಈ ಮಿಲನವೇ ಮುಳುವಾಗುವ ಯೋಚನೆ ಕಾಡಿದಾಕ್ಷಣ ನಿನ್ನ ನಡುವಲ್ಲಿ ಸಣ್ಣಗೆ ನಡುಕ ಶುರುವಾಯಿತು. ಗುಡಿಸಲಿನಿಂದಾಚೆ ಹೆಜ್ಜೆಯಿಟ್ಟು ಹುಲಿಯಿಂದ ತಪ್ಪಿಸಿಕೊಂಡ ಹರಿಣಿಯಂತೆ ಕಾಡನ್ನು ದಾಟಿ ಊರು ತಲುಪಿದೆ.ಅಂದಿನಿಂದ ನನ್ನ ಈ ಬದುಕಿಗೆ ಮಳೆ ಚಳಿ ಬಿಸಿಲಿನ ಲೆಕ್ಕವೇ ಇಲ್ಲ. ದೇಹ ಸಮೀಪಿಸಿದರೂ ಮನಸ್ಸು ಗೆಲ್ಲಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ಅರಿಯದೇ ಮಾಡುತ್ತಿದ್ದ ತಪ್ಪಿಗೆ ತೆರೆ ಎಳೆದು ದೊಡ್ಡ ತಪ್ಪನು ತಪ್ಪಿಸಿದೆ. ನಿನಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನೀನು ನನ್ನಿಂದ ದೂರವಾದ ಮೇಲೆ ಬದುಕು ಅದೆಷ್ಟೋ ಅನುಭವಗಳನು ಹೇಳಿ ಕೊಟ್ಟಿದೆ. ಬಯಲಲ್ಲಿ ಬೆತ್ತಲೆಯ ಕೋಟೆ ಏರಿದ್ದರೆ ಬದುಕಿನ ಹಳಿ ತಪ್ಪಿ ಹೋಗುತ್ತಿತ್ತು ಎನ್ನುವ ಅರಿವು ಬಂದಿದೆ. ಹೀಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿಕೊಂಡು ನಿನಗೆ ನೀನು ಶಿಕ್ಷಿಸಿಕೊಳ್ಳದಿರು. ರಾಜ ಬೀದಿಯಲ್ಲಿ ನನ್ನ ಪಟ್ಟದ ರಾಣಿಯಾಗಿ ನಿನ್ನ ಸ್ವೀಕರಿಸುವ ಕಾಲ ಬಂದಿದೆ. ‘ನೀ ಒಂದು ಸಾರಿ ನನ್ನ ಮನ್ನಿಸು. ನನ್ನ ಮೇಲೆ ದಯೆ ತೋರಿಸು ಓ ಚಿನ್ನ ರನ್ನ ನನ್ನ ಪ್ರೀತಿಸು.’ ಎಂದು ಹಾಡುತ್ತ ಅದೇ ಗುಡಿಸಲಿನ ಮುಂದೆ ಕಾದು ಕುಳಿತಿರುವೆ. ನಮ್ಮೀರ್ವರ ಹೆತ್ತವರನೂ ಒಪ್ಪಿಸಿರುವೆ. ನನ್ನೊಂದಿಗೆ ಜೀವನ ಪಯಣ ಬೆಳೆಸಲೋ ಬೇಡವೋ ಎನ್ನುವ ಹೊಯ್ದಾಟದಲ್ಲಿ ಬೀಳಬೇಡ. ನಿನ್ನ ಮನಸ್ಸನ್ನು ಗೆದ್ದ ಮೇಲೆಯೇ ಮೈಗೆ ಮೈ ತಾಗಿಸುವೆ ಗೆಳತಿ. ಮೋಡ, ಮಳೆ, ಹಗಲು, ರಾತ್ರಿ, ಮುಸ್ಸಂಜೆ, ಮುಂಜಾವು, ಸಾಗರ, ನದಿ, ತೊರೆ, ಹಳ್ಳ, ಕೊಳ್ಳದ ದಂಡೆಗಳು ಇನ್ನು ಮೇಲೆ ನಮ್ಮ ಪ್ರೀತಿ ತುಳುಕಾಡಿ ಹೊರಚೆಲ್ಲುವುದಕ್ಕೆ ಸಾಕ್ಷಿಯಾಗಿಸೋಣ. ***************************************
ಪುಸ್ತಕ ಪರಿಚಯ
ನಲಿವಿನ ನಾಲಗೆ (ಪ್ರಬಂಧ ಸಂಕಲನ) ನಲಿವಿನ ನಾಲಗೆ ಪುಸ್ತಕದ ಹೆಸರು:ನಲಿವಿನ ನಾಲಗೆ(ಪ್ರಬಂಧ ಸಂಕಲನ)ಲೇಖಕರ ಹೆಸರು:ಸುಮಾವೀಣಾಪುಟಗಳ ಸಂಖ್ಯೆ:128–ಬೆಲೆ-120ರೂಪ್ರಕಾಶಕರ ಹೆಸರು:ಪರಶಿವಪ್ಪ,ಸ್ನೇಹ ಬುಕ್ ಹೌಸ್, ಬೆಂಗಳೂರುಪುಸ್ತಕ ದೊರೆಯುವ ಸ್ಥಳ:www.mybookadda.netಅಂಚೆಯಲ್ಲಿಪುಸ್ತಕ ತರಿಸಿಕೊಳ್ಳಲು ಹಣ ಹಾಕಬೇಕಾದ ಬ್ಯಾಂಕ್ ಖಾತೆ ವಿವರ;Ac No3211142353,IFSC code SBIN0011259
ಪುಸ್ತಕ ಪರಿಚಯ
ಮೌನ ಮಂದಾರ ಮೌನ ಮಂದಾರ ಕರ್ತೃ_ ವಾಣಿಮಹೇಶ್ಪ್ರಕಾಶಕರು_ ಜ್ಞಾನಮುದ್ರ ಪ್ರಕಾಶನಲಿಂಗರಾಜು ಬಿ.ಎಲ್.ಹೊಳಲುಮಂಡ್ಯ_571402 ಪುಸ್ತಕದಬೆಲೆ-85ರೂಪಾಯಿ ಸ್ವ ವಿಳಾಸ_ವಾಣಿಮಹೇಶ್w/oಮಹೇಶ್ ಹೆಚ್. ಆರ್.ನಂ. ಎ.ಆರ್.613 ಮೊದಲನೇ ಮುಖ್ಯ ರಸ್ತೆ ನಾಲ್ಕನೇ ಅಡ್ಡ ರಸ್ತೆ ಸಾಲಗಾಮೆ ಗೇಟ್ ಸರಸ್ವತಿ ಪುರಂ ಹಾಸನ_573201 PH: 7975353693 ಬ್ಯಾಂಕ್ ಖಾತೆ ನಂ_37614898049IFSC_SBIN0040956 ಇದು ಸಾಧನೆಯ ಸಂಗಮದ ಅನವರತ. ಬೇಕಾದ್ದವು ಭಾವನೆಯಾಗಿ , ಸೋತು ನಿಂತ ನೆನಪುಗಳು ಮೌನ ಮಂದಾರವಾಗಿದೆ. ಕವಯತ್ರಿ ವಾಣಿಮಹೇಶ್ ಅವರ ಬರಹಗಳನ್ನು ಅಧ್ಯಯನ ಮಾಡಿದಾಗ ಸರಳ ಅಕ್ಷರಗಳಿಂದ ಜನನಾಡಿಗೆ ಸರಾಗವಾಗಿ ಹಂಚುವುದರ ಮೂಲಕ ಹೊಸ ಅನುಭವವೂ ಆಯ್ತು. ಹೇಗೆಂದರೆ ಸರಳ ಅನ್ನುವುದನ್ನು ಸರಿಸಿ ಆಳವಾಗಿ ಹೋದಂತೆ ಹಲವಾರು ಕವಲೊಡೆಯಲು ಶುರುವಾಯಿತು. ನಾ ಕಂಡೆ ಆ ಮನವ , ಮಿಡಿವ ಹೂವಂತೆ , ನಾ ಕಂಡೆ ಆ ಮನವ ಆಳದ ಕಡಲಂತೆ. ನಲಿವ ಸ್ಪರ್ಷದಿಂದ ಹೊಸ ಅನುಭವ ಯಾನದಲ್ಲಿ ಮುಳುಗಿ ಹೋದೆ. ಸಾಹಿತ್ಯ ಜಗತ್ತನ್ನು ಸರಳವಾಗಿ ಪರಿಚಯಿಸುವ ಮೂಲಕ ಹೊಸ ಸಂಶೋಧನೆ ಮಾಡಿದ್ದಾರೆ. ಆಳವಾಗಿ ಮುಳುಗಿ ನೋಡಿದಾಗ ಸರಳ ಭಾವನೆಯಲ್ಲೂ ಸಾವಿರ ಸಾರ ತುಂಬಿದ ಅನುಭವ ಸಂದೇಶ ಉಕ್ಕಿ ಬಂತು. ಅವರ ಕವನಗಳಿಂದ ಕಣ್ತುಂಬಿ ಬಂದದ್ದಂತೂ ನಿಜ. ಬದುಕಿನ ತ್ಯಾಗ ವೈರಾಗ್ಯ ಮರೆಯಲು ಮನಸ್ಸು ಮೂಕ ಪ್ರಶ್ನೆಯಾದಾಗ ಮಿಡಿದ ಹೂವೇ ಮೌನ ಮಂದಾರ. ಓದುಗರಿಗೆ ಉತ್ತಮ ಅಭಿರುಚಿಕರವಾಗಿದೆ ಎಂದು ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ. ——————————————————–
