ದುಬಾರಿಯಾಗಲಿರುವ ದಿನಗಳು
ಅರುಣ್ ಕೊಪ್ಪ
*ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ*
ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ?
ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ.
ನಾವಿಷ್ಟು ದಿನ ಮಾಡಿದ ವ್ರತ ಕೆಡಲೂಬಹುದು. (ಸಾಮಾಜಿಕ ಅಂತರ ಕಾಪಾಡುವ ಹಾಗೂ ಆರೋಗ್ಯ ಕೋವಿಡ್ ಕ್ರಮಗಳು) ಕ್ಷಣಕ್ಕೂ ಮುಟ್ಟಿದ್ದೆಲ್ಲಾ ವಿಷವೆಂಬಂತೆ ಇಂದು ಬರಬರುತ್ತಾ ಕಾಳಜಿ ಕ್ಷೀಣಿಸುತ್ತಿದೆ. ಇದು ಯಾರ ಕಾಳಜಿ ಅಂತೀರಾ ನಮ್ಮದೇ..
ಮತ್ತೆ ಯಥಾ ಸ್ಥಿತಿಗೆ ಬರುವಾಗ ನಮ್ಮ ಸಾಮಾಜಿಕ ಅಂತರದ ಬದುಕು, ಕೆಲವಷ್ಟು ತ್ಯಾಗಗಳಿಗೆ, ಪಾಲನೆಗೆ ಬದ್ದವಾಗಿಯೇ ಇರಬೇಕು ಎನ್ನೋದನ್ನ ನಾವು ಮರೆಯುವಂತಿಲ್ಲ.
ಮುಂದೇನು ಜನಸಾಮಾನ್ಯರ ಸ್ಥಿತಿ
———————————————
ಇದೊಂದು ದೊಡ್ಡ ಸಮೂಹ ಇಲ್ಲಿ ದೊಡ್ದವರಿಂದ ಹಿಡಿದು ಕಾರ್ಮಿಕ ಕುಳಿಗಾರರೊರೆಗೆ ಎಲ್ಲರೂ ಜನ ಸಾಮಾನ್ಯರೇ… ಅಂದ ಮೇಲೆ ಇವರ ಅವಲಂಬನೆಯ ಕ್ಷೇತ್ರಗಳ ,ಕಾರ್ಯಗಳ ಪಾಡಿನ ಮೇಲೆ ಎಲ್ಲವೂ ನಿರ್ಧರಿತ.
ಕುಟುಂಭ, ಬೇಡಿಕೆಗಳು, ಸಾಲಗಳು,ಸವಲತ್ತುಗಳಿಗೆ ಹುಟ್ಟಿನಿಂದಲೇ ಒಗ್ಗಿ ಕೊಂಡ ಜನಸಾಮಾನ್ಯರ ಜೀವನ ಶೈಲಿಗೆ ಇನ್ನೂ ಕೂಡ ಯಾವಾಗಲೂ ಈ ರೀತಿಯ ಅನುಭವಗಳು ಆಗಲೇ ಇಲ್ಲ. ಇದೊಂದು ಹೊಸ ದುರ್ ಬೆಳವಣಿಗೆ. ಅನಿರೀಕ್ಷಿತ ವಿಪತ್ತು ಬಂದೊದಗಿದೆ. ಬಹುಪಾಲು ಜನಜೀವನ ದೂರದರ್ಶಿತ್ವದ ವಿಮರ್ಶೆಯೊಂದಿಗೆ ನಡೆಯುತ್ತಿದ್ದ ಈ ಆಧುನಿಕ ಜನ ಜೀವನ ಇಂದು ಸೋತು ಸುಣ್ಣಗಿದೆ. ವನ್ಯಮೃಗಗಳ ಹಾಗೆ ನಡೆದದ್ದೇ ದಾರಿಯಾಗಿ ಗೋಚರಿಸುತ್ತಿದೆ.
——————————————————-
ಹೌದು ಅನೇಕ ಅಸಂಘಟಿತ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಎಷ್ಟೋ ದಿನಗಳ ಹಿಂದೆ ಮನೆ, ಮಠ ಬಿಟ್ಟು ಪದವಿ ಹಾಗೂ ಹೆಚ್ಚಿನ ಓದಿಲ್ಲದೆ ಬೇಕಾದದ್ದನ್ನು ಸಾಧಿಸಿ ಸ್ವಾವಲಂಬಿಗಳಾದವರು ಊರತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಮುಂದೇನು…?
ಎಸ್, ಎಸ್, ಎಲ್, ಸಿ, ಮೊದಲೇ ಮುಂದೇನು?
ನಂತರ ಮುಂದೇನು ಅನ್ನೋ ಲೇಖನಗಳನ್ನು ಈ ಮೊದಲೆಲ ಓದುತ್ತಾ ಇದ್ವಿ… ಈಗದೇ ವಿರುದ್ಧವಾಗಿದೆ. ಭವಿಶ್ಯದ ಕನಸುಗಳು ಕಮರಿಹೋಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ.
ಮುಂದೇನು?
——————-
ಸರ್ಕಾರದ ಚಿಂತನೆಗಳಾದ ಅಂತರ್ಜಾಲ ಕಲಿಕಾ ವ್ಯವಸ್ಥೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಿ ,ಪರೀಕ್ಷೆಗೆ ಪೂರಕ ಅಭ್ಯಾಸದ ಮರು ಅವಲೋಕನ ಒಂದೆಡೆಯಾದರೆ ಮುಂದಿನ ಶೈಕ್ಷಣಿಕ ವರ್ಷ ಅಂದರೆ ಇದೇ ಜೂನ್ ಒಂದರ ಆರಂಭದ ಪ್ರಾಥಮಿಕ ,ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಹಂತಗಳ ಆರಂಭ ಅಥವಾ ಮುಂದುಡಿಕೆಯ ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆದರೂ ಈ ಎಲ್ಲ ಮೇಲಿನ ಸನಸ್ಯಗಳಿಗೆ, ಅಂತ್ಯ ಹಾಗೂ ಸ್ಪಷ್ಟ ಉತ್ತರ ಸಿಗೋದು ಕಷ್ಟವೇ ಆಗಿದೆ.
ತೀರ ಕಳವಳ ಕಕ್ಕಾ -ಬಿಕ್ಕಿಯಲ್ಲಿ ಸಾಗಿತ್ತಿರುವ ಈ ಪ್ರಮುಖ ಸಾಮಾಜಿಕ ಹಂತಗಳಾದ, ವ್ಯಾಪಾರ, ವಹಿವಾಟು, ಶಿಕ್ಷಣ ,ಉದ್ಯೋಗಗಳ ಪುನಶ್ಚೇತನ ಹಾಗೂ ಮರು ಹುಟ್ಟು ಆಗಬೇಕಿದೆ. ದೇಶದಲ್ಲಿ ಜಿ ಡಿ ಪಿ ಯ ಕುಸಿತ ಹಾಗೂ ನಿರುದ್ಯೋಗದ ಮಟ್ಟ ಹಾಕುವ ಪ್ರಕ್ರೀಯೆ ಈಗ ಹೇಗೆ ಕೋವಿಡ್ ವಿರುದ್ಧ ನಡೆಯುವ ಸರ್ಕಾರದ ವೇಗದ ಕ್ರಮಗಳ ಮಾಧರಿಯಲ್ಲೇ ಆಗಬೇಕಿದೆ.
ಕೃಷಿ ಚಟುವಟಿಕೆಯೊಂದಿಗೆ ಕರೊನಾ ಕಾಲದ ರೈತನ ಬದುಕು
ಹೌದು ದೇಶದ ಬೆನ್ನೆಲುಬು ಅನ್ನ ನೀಡುವ ಅನ್ನದಾತ ರೈತ ಈ ಮುಂಗಾರಲ್ಲಿ ತನ್ನ ಕೆಲಸದ ಕೈ ಚುರುಕುತನ ಪ್ರಾರಂಭಿಸುತ್ತಾನೆ. ಹದ ಮಳೆ, ಸಮರ್ಪಕ ಬೆಳೆಯ ಇಳುವರಿಗಾಗಿ ಗೊಬ್ಬರ ಹತ್ತಲವು ಕೀಟನಾಶಕ, ಬೀಜ ನಾಶಕಗಳನ್ನೊಳಗೊಂಡಂತೆ ತೀರ ಬಂಡವಾಳ ಹಾಕುವ ಸಕಾಲವಿದು. ಸರ್ಕಾರ ಈ ಬಗ್ಗೆ ಗಮನ ಹರಿಸುವದು ಸೂಕ್ತ.
ವಿಶೇಷವಾಗಿ ಬತ್ತದ ಬೆಳೆಯ ತಯಾರಿ ,ಅಂದರೆ ಕೆಲ ಭಾಗದಲ್ಲಿ ಈ ಮೊದಲು ಬಿತ್ತುವ ಕಾರ್ಯ ಹೆಚ್ಚಿನದ್ದಾಗಿತ್ತು ಈಗ ಅದು ವಿರಳವಾಗಿ ಹೆಚ್ಚಿನ ರೈತರು ನಾಟಿಯನ್ನೆ ಅವಲಂಭಿಸಿದ್ದಾರೆ. ಇದಕ್ಕೆ ಪೂರಕ ಮಳೆ ಹಾಗೂ ಕೆಲಸಗಾರರ ಲಭ್ಯತೆ ಕೂಡ ಒಂದು ಮುಖ್ಯ ವಿಚಾರ.
ಹೀಗೆ ಹತ್ತು ಹಲವು ಸಾಮಾಜಿಕ ವ್ಯವಸ್ಥೆಯ ಕ್ಷೇತ್ರಗಳು ಅಸಮತೋಲನದ ಹಂತ ತಲುಪಿರುವದು ಕರೋನವೇ ಪ್ರಮುಖ ಕಾರಣವಾಗಿದೆ ಎಂದು ಪ್ರತ್ಯಕ್ಷವಾಗಿ ಕಾಣುವ ವಸ್ತು ಸ್ಥಿತಿ. ಭೂತಕಾಲ, ಭವಿಷ್ಯತಕಾಲ ಹಾಗೂ ವರ್ತಮಾನದ ತುಲನೆಗೆ ಹೋದಾಗ ನೇರವಾಗಿ ದುಬಾರಿ ಕಾಲ ಅನುಭವವಾಗುತ್ತದೆ. ಕಾದು ನೋಡೋಣ ಕರೊನಾ ಬದುಕಿನ ಸಂಕ್ಷಿಪ್ತ ಕಲ್ಪನೆಯೊಂದಿಗೆ ಬರೆದ ಈ ಲೇಖನ ಹೋಲುವ ದಿನಗಳು ಹೌದೋ ಅಲ್ಲವೋ ಎಂದು…
*****
ತುಂಬಾ ಚೆನ್ನಾಗಿದೆ ಅರುಣ್