ಗಝಲ್
ಮರುಳಸಿದ್ದಪ್ಪ ದೊಡ್ಡಮನಿ
ಲೋಕದ ಏಕಾಂತದಲಿ ನಿನ್ನ ಹುಡುಕಾಡಿದ್ದೇನೆ ನಾನು
ಬಯಸಿ ನೋವನುಂಡರು ಕಾಣಲು ತಿರುಗಿದ್ದೇನೆ ನಾನು
ನೋವಿನ ಹಾಸಿಗೆಯಲಿ ಮಲಗಿ ದಿನ ಕಳೆದಿದ್ದೇನೆ
ಮೌನವ ಅಪ್ಪಿಕೊಂಡು ಕಾಲು ಹಾದಿ ನಡೆದಿದ್ದೇನೆ ನಾನು
ಬದುಕು ಹತಾಶೆಯಲಿ ಮಿಂದಿರುವುದು ನೋಡು
ಇರುವ ತನಕ ಜೀವಗಳೆರಡು ಹೊಂದಿ ನಡೆಯಲೆಂದಿದ್ದೇನೆ ನಾನು
ಬಯಸಿದ ಗಳಿಗೆಯಿಂದ ಬರಿ ಚಿಂತೆ ಮೌನಗಳೆ ಆವರಿಸಿವೆ
ಹೊರಗಿನ ಚಂದಕಿಂತ ಒಳಗಿರುವ ಅಂದವ ಬಯಸಿದ್ದೇನೆ ನಾನು
ನಗುವ ಚೆಲ್ಲಿ ಬಾ ಖಾಲಿಯಾದ ನನ್ನೆದೆಯ ತುಂಬಿಸು
ಈ ಮರುಳ ಚೆಂದಾಗಿ ಬದುಕಲು ದೇವರಿಗೆ ಬಿದ್ದು ಬೇಡುತ್ತೇನೆ ನಾನು
*******