ಗಝಲ್
ಉಮೇಶ ಮುನವಳ್ಳಿ
ಬೇಡಿದಾಗ ನೀ ಕೊಡದೇ ಹೋದರೆ, ಹುಡುಕುವಾಗ ನಿನಗೆ ಸಿಗದೇ ಇರಬಹುದು.
ನೀಡಿದಾಗ ನೀ ಸ್ವೀಕರಿಸದೇ ಹೋದರೆ, ಬೇಡುವಾಗ ನಿನಗೆ ಸಿಗದೇ ಇರಬಹುದು.
ಹಲುಬಿದಾಗ ನೀ ಹೊರಳಿ ನೋಡದಿರೆ, ಮರಳಿ ಬಂದಾಗ ನಿನಗೆ ಸಿಗದೇ ಇರಬಹುದು.
ಕೊಡಲು ಬಂದಾಗ ನೀ ಕೊಸರಿಕೊಂಡರೆ, ಕನವರಿಸಿದಾಗ ನಿನಗೆ ಸಿಗದೇ ಇರಬಹುದು.
ಬಯಸಿದಾಗ ನೀ ಬಿಗುಮಾನ ಬಿಡದಿರೆ, ಬೇಕೆಂದಾಗ ನಿನಗೆ ಸಿಗದೇ ಇರಬಹುದು.
ಸನಿಹ ಬಂದಾಗ ನೀ ಮುನಿಸಿಕೊಂಡರೆ, ಸಹಿಸಿ ಬಂದಾಗ ನಿನಗೆ ಸಿಗದೇ ಇರಬಹುದು.
ರೀತಿ ಬಿಟ್ಟಾಗ ನೀ ಪ್ರೀತಿ ಕೊಡದಿರೆ, ರಿವಾಜು ಬಿಟ್ಟು ಬಂದಾಗ ನಿನಗೆ ಸಿಗದೇ ಇರಬಹುದು.
ಇಷ್ಟಪಟ್ಟು ಬಂದ ಪ್ರೀತಿ ನೀ ಸ್ವೀಕರಿಸದಿರೆ, ಕಷ್ಟಪಟ್ಟು ಬಂದಾಗ ನಿನಗೆ ಸಿಗದೇ ಇರಬಹುದು.
ತ್ಯಾಗಿಯಾದಾಗ ನೀ ತ್ಯಜಿಸಿ ಹೋದರೆ, ಭೋಗಿ ಉಮಿ ನಿನಗೆ ಸಿಗದೇ ಇರಬಹುದು,
ಜೋಗಿ, ಪ್ರೇಮ ಭಿಕ್ಷೆ ಬೇಡಿ ಬಂದಾಗ ನೀ ನೀಡದರೆ, ಯೊಗಿನಿಯಾಗಿ ಬಂದಾಗ ನಿನಗೆ ಸಿಗದೇ ಇರಬಹುದು.
**********
ಕೊನೆಯ ಎರಡು ಸಾಲುಗಳು
ಇಡೀ ಗಝಲ್ ನ ಜೀವಾಳದಂತಿವೆ
ಮನ ಮುಟ್ಡಿತು
ಗಝಲ್ ನ ಆಶಯ.
ಪ್ರಕಟಿಸಿದ
ಪತ್ರಿಕಾ ಸಂಪಾದಕರಿಗೆ ಹಾಗೂ
ಪತ್ರಿಕಾ ಬಳಗಕ್ಕೆ
ಕವಿ ಉಮೇಶ ಅವರಿಗೆ ಅಭಿನಂದನೆಗಳೊಂದಿಗೆ
ಧನ್ಯವಾದಗಳು
ಧನ್ಯವಾದಗಳು ತಮ್ಮ ಮೆಚ್ಚುಗೆಗೆ.
ತುಂಬಾ ಚೆನ್ನಾಗಿದೆ.
Thank you