ಪ್ರಸ್ತುತ

ಸಮಯ

White Rabbit Holding Gold Frame Pocket Watch Statue

ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ?

ಜಯಶ್ರೀ.ಜೆ.ಅಬ್ಬಿಗೇರಿ.



ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ ಸಮಯದ ಅಪವ್ಯಯದ ಬಗ್ಗೆ ಹೆಚ್ಚು ಒತ್ತನ್ನು ನೀಡುವುದೇ ಇಲ್ಲ. ಬಹಳ ಸಲ ಮನೋರಂಜನೆಗಳಲ್ಲಿ ಅಮೂಲ್ಯ ಸಮಯ ಹಾಳುಮಾಡುತ್ತೇವೆ. ಇದು ಮನಸ್ಸಿಗೆ ಮುದ ನೀಡುತ್ತದೆಯಾದರೂ ದೀರ್ಘ ಸಮಯದ ನಂತರ ಇದರ ದುಷ್ಪರಿಣಾಮ ಆಗದೇ ಇರದು. ಸಮಯದ ಅಪವ್ಯಯವನ್ನು ತಡೆಯುವ ಮುನ್ನ ನಾವೇಕೆ ವ್ಯರ್ಥ ಸಮಯ ಕಳೆಯುತ್ತಿದ್ದೇವೆಂದು ತಿಳಿಯುವುದು ಮುಖ್ಯ.


ಸೋಲಿನ ಭಯ
ಪರಿಣಾಮಕಾರಿ ಕೆಲಸಗಳ ಆಧಾರದ ಮೇಲೆ ಸಮಾಜವು ಕೆಲವು ಉನ್ನತ ಸ್ತರಗಳನ್ನು ಗುರುತಿಸಿರುತ್ತದೆ. ಸೋತ ಹೆಸರನ್ನು ಪಡೆದುಕೊಳ್ಳುವ ನೋವು ಯಾರಿಗೂ ಬೇಕಿಲ್ಲ. ಹೀಗಾಗಿ ಏನೂ ಮಾಡದೇ ಇರುವುದು ಒಳಿತು ಎಂದೆನಿಸಿಬಿಡುತ್ತದೆ. ಸೋಲಿನ ಭಯ ಇರುವವರಿಗೂ ವ್ಯರ್ಥ ಸಮಯ ಕಳೆಯುವಿಕೆ ಮತ್ತು ಕೆಲಸ ಮುಂದೂಡುವಿಕೆಯು ಅದರೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಇದು ಬದುಕಿನಲ್ಲಿ ಸಂಪರ‍್ಣ ವೈಫಲ್ಯತೆಯನ್ನು ಮನೆ ಮಾಡಿಸುವಷ್ಟು ಅಪಾಯಕಾರಿ. ಭವಿಷ್ಯವನ್ನು ನಿರೀಕ್ಷಿಸುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಕರ‍್ಯದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ನೀಡಿದರೆ ಸೋಲಿನ ಭಯ ಕಡಿಮೆಯಾಗುವುದು. ಪರಿಪರ‍್ಣತೆಯ ಮುಂದಾಲೋಚನೆಯಲ್ಲಿ ತಡೆ ಹಿಡಿದುಕೊಳ್ಳದಿರಿ.’ಯಶಸ್ವಿ ವ್ಯಕ್ತಿಯು ವಿಫಲರು ಮಾಡಲು ಇಷ್ಟಪಡದದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರೆ.’ಎನ್ನುವ ಇ.ಎಂ.ಗ್ರೇ ಮಾತುಗಳನ್ನು ಅರ್ಥೈಸಿಕೊಳ್ಳಬೇಕು..


ನಿರುತ್ಸಾಹ
ಅನಾರೋಗ್ಯ ಜೀವನ ಶೈಲಿಯುಳ್ಳವರಲ್ಲಿ ಕಡಿಮೆ ಶಕ್ತಿ ಹೆಚ್ಚು ನಿರುತ್ಸಾಹ ಕಂಡು ಬರುತ್ತದೆ. ಸಾಧಿಸಲು ಮನಸ್ಸೇ ಆಗುವಂಥ ಮನೋಭಾವದಲ್ಲಿ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಇದು ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿಯು ದಣಿವನ್ನು,ಜಡತ್ವನ್ನು ಹೆಚ್ಚಿಸುವುದಲ್ಲದೇ ನಿಷ್ಕಿçÃಯರನ್ನಾಗಿಸುತ್ತದೆ.ನಿರುತ್ಸಾಹದ ಹಿಂದಿನ ಮೂಲ ಕಾರಣವನ್ನು ಹುಡುಕಲೇಬೇಕು. ಅಂದಾಗ ಮಾತ್ರ ಮುಂದೆ ಹೆಜ್ಜೆ ಇಡಲು ಅನುವಾಗುತ್ತದೆ. ಇದಕ್ಕೆ ಯಶಸ್ವಿ ವ್ಯಕ್ತಿಗಳು ಕಂಡು ಕೊಂಡಿರುವ ದಾರಿಯೆಂದರೆ ಮುಂಜಾನೆ ಹೊತ್ತಿನಲ್ಲಿ ವಾಕಿಂಗ್ ಜಾಗಿಂಗ್ ಮಾಡುವುದು. ಇದು ದಿನವೆಲ್ಲ ಉತ್ಸಾಹ ಭರಿತರನ್ನಾಗಿಸುತ್ತದೆ. ದೈಹಿಕ ಚೈತನ್ಯ ಕಡಿಮೆಯಾದರೆ ನಿರುತ್ಸಾಹ ಜಪ್ಪಯ್ಯ ಅಂದರೂ ಬಿಟ್ಟು ಹೋಗಲ್ಲ. ಆದ್ದರಿಂದ ವ್ಯಾಯಾಮಗಳಲ್ಲಿ ತೊಡಗಿಸುಕೊಳ್ಳುವುದು ಅಗತ್ಯ.


ದೃಷ್ಟಿ ಕೋನದ ಅಭಾವ


‘ಆಲಿಸ್ ಇನ್ ವಂಡರ್ ಲ್ಯಾಂಡ್’ ಕೃತಿಯಲ್ಲಿಯ ಘಟನೆಯೊಂದು ನನಗೆ ನೆನಪಾಗುತ್ತಿದೆ. ಆಲಿಸ್ ಕಾಡಿನಲ್ಲಿ ಹೋಗುತ್ತಿರುವಾಗ ಮುಂದಿನ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಬೆಕ್ಕನ್ನು ಕೇಳುತ್ತಾಳೆ. ಅದಕ್ಕೆ ಬೆಕ್ಕು ‘ನಿನಗೆಲ್ಲಿ ಹೋಗುವುದಿದೆ?’ ಎಂದು ಕೇಳುತ್ತದೆ.’ಎಲ್ಲೂ ಹೋದರೂ ನಡೆಯುತ್ತದೆ.’ ಎನ್ನುತ್ತಾಳೆ ಖಚಿತವಾಗಿ ಎಲ್ಲಿಗೆ ಹೋಗಬೇಕೆನ್ನುವುದು ನಿನಗೆ ಗೊತ್ತಿಲ್ಲವೆಂದರೆ ದಾರಿ ಎಲ್ಲೋ ಒಂದು ಕಡೆ ಕರೆದೊಯ್ಯುತ್ತದೆ ಹೋಗು.’ಖಚಿತ ಗುರಿ ಇಲ್ಲದಿದ್ದಾಗ ಹೀಗೆ ಎಲ್ಲಿ ಬೇಕಾದಲ್ಲಿ ಅಲೆದಾಡಿ ಸಮಯ ವ್ಯರ್ಥವಾಗುತ್ತದೆ..ಆದ್ದರಿಂದ ಖಚಿತ ಗುರಿ ಹೊಂದಬೇಕು.


ಸಮಯದ ಅಪವ್ಯವ ತಡೆಯಲು ಮೂರು ‘ಸಿ’ಗಳನ್ನು ಅಳವಡಿಸಿಕೊಳ್ಳಿ.


ಸೆರೆ ಹಿಡಿಯುವಿಕೆ.


ಮಾಡ ಬೇಕಾದ ಕೆಲಸಗಳನ್ನು ಸೆರೆ ಹಿಡಿಯುವುದರಿಂದ ಉತ್ಪಾದಕತೆ, ಕಾರ‍್ಯಕ್ಷಮತೆ, ದಕ್ಷತೆ ಗುಣಿಸಿದಷ್ಟು ಹೆಚ್ಚುತ್ತವೆ. ಮೆದುಳು ನಮ್ಮ ದೇಹದ ಒಂದು ಚುರುಕಾದ ಅವಯವವಾದರೂ ಅದು ಸ್ವಭಾವದಲ್ಲಿ ಸೋಮಾರಿಯಾಗಿದೆ. ಬೇಕಾದದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಾಗೊಂದಿಷ್ಟು ನೆನಪಿಗೆ ಬರುತ್ತದೆ. ನೆನಪಾಗದಿದ್ದರೆ ನಮಗೆ ಒತ್ತಡ ಉಂಟಾಗುತ್ತದೆ.ಇದರಿಂದ ನಮ್ಮ ಮೆದುಳಿಗೆ ನಾವೇ ಘಾಸಿ ಮಾಡಿಕೊಳ್ಳುತ್ತೇವೆ ಎಂದು ಅನೇಕ ಸಂಶೋಧನೆಗಳ ವರದಿಗಳು ಹೇಳಿವೆ. ಅಷ್ಟೇ ಅಲ್ಲ ಕಾರ‍್ಯಕ್ಷಮತೆ ಮತ್ತು ಉತ್ಪಾದಕತೆಯ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅತ್ಯಗತ್ಯವಾಗಿ ಬೇಕಾದ ವಿಚಾರಗಳನ್ನು ಬರೆದಿಡಲು ನೋಟ್ ಪ್ಯಾಡ್ ಒಂದನ್ನು ಬಳಿಸಿ. ಇಲ್ಲದಿದ್ದರೆ ಮೊಬೈಲ್‌ನಲ್ಲಿರುವ ನೋಟ್‌ನ್ನು ಬಳಸಿ.ಮೆದುಳಿನಿಂದ ತೆಗೆದು ಇದರಲ್ಲಿ ದಾಖಲಿಸಬೇಕು. ಯಾವುದು ಯಾವಾಗ ನೆನಪಾದರೂ ಅದರಲ್ಲಿ ಬರೆಯಲು ಸಾಧ್ಯ.ಮಾಡದೇ ಉಳಿದ ಕೆಲಸಗಳ ಪಟ್ಟಿಯೂ ಅದರಲ್ಲಿ ಗೊತ್ತಾಗುತ್ತದೆ. ಜಗತ್ಪçಸಿದ್ಧ ವರ್ಜಿನ್ ಗ್ರೂಪ್‌ನ ಮಾಲಿಕ ರಿಚರ್ಡ್ ಬ್ರಾನ್ಸನ್ ಯಾವಾಗಲೂ ತಮ್ಮ ಹತ್ತಿರ ಒಂದು ನೋಟ್ ಪ್ಯಾಡ್‌ನ್ನು ಇಟ್ಟುಕೊಳ್ಳುತ್ತಾರೆ.ಇದೊಂದು ತರ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ತರಾ. ಡಿಸ್ಕ್ ನಮ್ಮ ಮೆದುಳಿನ ಜಾಗವನ್ನು ಖಾಲಿ ಮಾಡಲು ಅನುಕೂಲವಾಗುತ್ತದೆ. ಮೆದುಳು ಮತ್ತೆ ಹೊಸದಾಗಿ ಆಲೋಚಿಸಲು ಉತ್ತೇಜನ ನೀಡಿದಂತಾಗುತ್ತದೆ. ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇವೆಲ್ಲ ಕರ‍್ಯಕ್ಷಮತೆಯ ಮೇಲೆ ಅತ್ಯಧಿಕವೆನಿಸುವಷ್ಟು ಸುಧಾರಣೆ ತರುತ್ತವೆ.


ಕ್ಯಾಲೆಂಡರ್
ಈ ಸಂಜೆ ನನಗೆ ಇಂಥ ಲೇಖನವನ್ನು ಓದುವುದಿದೆ. ನನ್ನ ಗೆಳೆಯ/ತಿಯ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುವುದಿದೆ. ಇದು ಕಾಲೇಜ್ ಫೀ ತುಂಬಲು ಕೊನೆಯ ದಿನಾಂಕ. ಇವೆಲ್ಲವಕ್ಕೆ ನಿಗದಿತ ದಿನಾಂಕವನ್ನು ಗುರುತಿಸುವುದು.ಹೀಗೆ ಮಾಡುವುದರಿಂದ ಮೆದುಳು ರಿಲ್ಯಾಕ್ಸ್ ಆಗಿರುತ್ತದೆ. ಮತ್ತು ಮಾಡಲೇ ಬೇಕಾದ ಕೆಲಸಗಳು ಮಾಡಲಾಗದೇ ಉಳಿಯುವುದಿಲ್ಲ. ಸೆರೆಹಿಡಿಯುವರಿಂದ ಮತ್ತು ಕ್ಯಾಲೆಂಡರ್ ಬಳಿಸಿದ್ದರಿಂದ ಯಾವ ಕೆಲಸ ಯಾವಾಗ ಮಾಡುವುದಿದೆ ಎನ್ನುವುದರ ಬಗೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಿಗ್ಗೆದ್ದು ಕ್ಯಾಲೆಂಡರ್ ನೋಡಿದರೆ ಸಾಕು ಇಂದು ನಾನು ಯಾವ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ರಾತ್ರಿ ಮಲಗುವಾಗ ಅಂದು ನಿಗದಿಪಡಿಸಿದ್ದ ಕೆಲಸಗಳೆಲ್ಲ ಮಾಡಿ ಆಯಿತೇ? ಎಂದು ಚೆಕ್ ಮಾಡಿಕೊಳ್ಳಬೇಕು. ಉಳಿದಿದ್ದರೆ ಮತ್ತೆ ಅದನ್ನು ಎಂದು ಮಾಡಲಾಗುವುದು ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿಕೊಳ್ಳುವುದು. ಇದರಿಂದ ಸಮಯ ನರ‍್ವಹಣೆಯೂ ಆಗುತ್ತದೆ ಮತ್ತು ಮಾಡುವ ಕೆಲಸಗಳಿಗೆ ಸರಿಯಾದ ದಿಕ್ಕು ಸಿಗುತ್ತದೆ.


ಏಕಾಗ್ರತೆ
ಮೊದಲನೆಯ ‘ಸಿ’ ಕ್ಯಾಪ್ಚರ್ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎರಡನೇ ‘ಸಿ’ ಕ್ಯಾಲೆಂಡರ್ ಯಾವ ಯಾವ ಕೆಲಸ ಯಾವಾಗ ಎನ್ನುವ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಸರಿಯಾದ ಫಲಿತಾಂಶ ಪಡೆಯಲು ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಬೇರೆ ಬೇರೆ ವಿಚಾರಗಳು ಮನಸ್ಸಿನೊಳಗೆ ಸದ್ದು ಮಾಡತೊಡಗಿದರೆ ಅವುಗಳನ್ನು ನೋಟ್ ಪ್ಯಾಡಿನಲ್ಲಿ ಬರೆದರೆ, ಮೆದುಳು ಮತ್ತೆ ಕಾರ‍್ಯದತ್ತ ಕೇಂದ್ರೀಕರಿಸಿ ಅಡೆತಡೆಗಳಿಲ್ಲದ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಏಕಾಗ್ರತೆ ಮುಂಜಾನೆ ಹೆಚ್ಚಿರುತ್ತದೆ. ಮುಖ್ಯವಾದ ಕೆಲಸಗಳನ್ನು ಮುಂಜಾನೆಯೇ ಮಾಡಿ ಮುಗಿಸುವುದು ಸೂಕ್ತ. ಇದರಿಂದ ಮುಖ್ಯವಾದ ಕೆಲಸಗಳನ್ನು ಚೆನ್ನಾಗಿ ಬೇಗ ಮುಗಿಸಲು ಸಾಧ್ಯವಾಗುವುದು. ‘ಸಿಂಹವೂ ಸಹ ಮೊದಲು ಎರಡು ಹೆಜ್ಜೆ ಹಿಂದೆ ಹೋಗಿ ಬೇಟೆ ಆಡುತ್ತದೆ.’ ಹಾಗೆಯೇ ನಾವೂ ಸಹ ಏಕಾಗ್ರತೆ ಆಗುತ್ತಿಲ್ಲವೆಂದರೆ ಸ್ವಲ್ಪ ಹೊತ್ತು ವಿರಾಮ ಪಡೆದು ಕೆಲಸಕ್ಕೆ ಮರಳುವುದು ಒಳ್ಳೆಯದು. ಈ ಎರಡು ಹೆಜ್ಜೆಗಳ ವಿರಾಮ ಪಡೆಯುವುದರಿಂದ ಪುನಃಶ್ಚೇತನ್ಯ ಉಂಟಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನು ಸುಸಂಘಟಿತವಾಗಿ, ಉತ್ಪಾದನಶೀಲ, ಶಿಸ್ತು ಬದ್ಧ ಮಾಡಬೇಕೆಂದರೆ ಈ ಮೂರು ‘ಸಿ’ ಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ. ಈ ರೀತಿಯ ಕರ‍್ಯ ನರ‍್ವಹಣೆಯು ಸಮಯದ ಅಪವ್ಯವನ್ನು ತಡೆಯುವುದಲ್ಲದೇ ಕಾರ‍್ಯಕ್ಷಮತೆ ಮತ್ತು ಫಲಿತಾಂಶವನ್ನು ಅಧಿಕಗೊಳಿಸುತ್ತದೆ. ‘ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಆಶಿಸುವ ಬದಲಾವಣೆ ನೀವಾಗಿ.’ ಎನ್ನುವ ಗಾಂಧೀಜಿಯವರ ಮಾತನ್ನು ಅಳವಡಿಸಿಕೊಂಡರೆ ಸಮಯದ ಸವಿ ಸವಿಯಲು ಸಾಧ್ಯ.

********

4 thoughts on “ಪ್ರಸ್ತುತ

Leave a Reply

Back To Top