ಇತರೆ
ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಬಿದಲೋಟಿ ರಂಗನಾಥ್ ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಅದು ಎಂಬತ್ತರ ದಶಕ ಬಂದ ಫಸಲನ್ನು ಕೂಡಿಟ್ಟು ಮನೆಗೊಯ್ದು ಅವರೆ ಸೊಗಡನು ಬಿಡಿಸುವ ಕಾಲ, ಇನ್ನೂ ಕ್ಯಾಮೇನಹಳ್ಳಿ ಜಾತ್ರೆ ತಿಂಗಳಿರುವಾಗಲೇ , ಕೂಲಿ ನಾಲಿ ಮಾಡಿ ಬಂದ ಸಣ್ಣ ಕಾಸಿನಲ್ಲೇ ಮಕ್ಕಳಿಗೆ ಬಟ್ಟೆ ತರುವ ಅಪ್ಪನ ಇರಾದೆ. ವಾರದ ಮುಂಚೆಯೇ ಸಂತೆ ಬಟ್ಟೆ ತಂದು ಪೆಟಾರಿಯಲ್ಲಿ ಬಚ್ಚಿಡುವ ಪ್ರೀತಿ.ಅದರಲ್ಲು ಮೂವರು ಮಕ್ಕಳಿಗೂ ಒಂದೆ ತರಹದ ಬಣ್ಣ ಬಣ್ಣದ […]
ಕಾವ್ಯಯಾನ
ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಎದೆಕದದ ಅಗುಳಿ ತೆಗೆದಂತೆ ಅದೊಂದು ಹಾಡು ಮತ್ತಕಡಲಲಿ ಮುಳುಗಿದಂತೆ ಅದೊಂದು ಹಾಡು ಚಿಟ್ಟೆಗಳ ಹಿಂಬಾಲಿಸುತ್ತ ಪರವಶ ಹುಡುಗ ಪುಲಕಗಳೆ ಬೊಗಸೆಗಿಳಿದಂತೆ ಅದೊಂದು ಹಾಡು ಸಂತೆಯ ಝಗಮಗಗಳಿಗೆ ಕಣ್ಣು ತೆತ್ತು ಪೋರಿ ಬಯಕೆಗಳಿಗೆ ಹರಯ ಬಂದಂತೆ ಅದೊಂದು ಹಾಡು ಕೋಲೂರಿ ತಡವರಿಸಿ ನಡೆದು ಇಳಿಸಂಜೆಗೆ ನೆನಪಮಡುವಲಿ ಮಿಂದಂತೆ ಅದೊಂದು ಹಾಡು ಸವೆದ ಜಾಡುಗಳ ಸವೆಸಿ ತಿರುಗಣಿ ಬದುಕು ‘ವಿಶು’ ನಡುವೆ ಕಾಡುವ ಕೊಳಲುಲಿಯಂತೆ ಅದೊಂದು ಹಾಡು ************
ಕಾವ್ಯಯಾನ
ಗಝಲ್ ಸುಜಾತಾ ರವೀಶ್ ಏಕೋ ತಿಳಿಯೆ ವಿಷಾದದಲೆಗಳಲಿ ಮುಳುಗಿಬಿಟ್ದಿದೆ ಕವಿತೆ ಏನೋ ಅರಿಯೆ ಅಂತರಂಗದಾಳದಲಿ ಹುದುಗಿಬಿಟ್ಠಿದೆಕವಿತೆ ಸ್ಪರ್ಧೆಗಳ ಪ್ರವಾಹದ ಹುಚ್ಚುಹೊಳೆಯಲಿ ಕೊಚ್ಚಿಹೋಯ್ತೇಕೆ ಕವಿತೆ ? ಪರಸ್ಪರ ಪ್ರಶಂಸೆ ಮೆಚ್ಚುವಬ್ಬರದಲಿ ಮುಚ್ಚಿಬಿಟ್ಟಿದೆ ಕವಿತೆ ಮನದಾಳದ ಭಾವಾಭಿವ್ಯಕ್ತಿ ಎಂಬುದೇ ಮರೆಸಿಬಿಟ್ಟಿದೆ ಕವಿತೆ ಸವಾಲುಗಳ ಎದುರಿಸುತ ಯಶವನೇ ಮೆರೆಸಿಬಿಟ್ಟಿದೆ ಕವಿತೆ ಪರರ ನಿರ್ಣಯಗಳೆಂಬ ರಾಜಕೀಯದಲಿ ಸೋತುಬಿಟ್ದಿದೆ ಕವಿತೆ ಪಕ್ಷಪಾತಗಳ ಸ್ಮಶಾನದಲಿ ಹೂತು ಹೋಗಿಬಿಟ್ಟಿದೆ ಕವಿತೆ ವಿಜಯವ ಅರಸುತಲಿ ಬಂಧನಗಳ ಮೀರಿಬಿಟ್ಟಿದೆ ಕವಿತೆ ಸುಜಿಹೃದಯವ ಉರಿಸುತಲಿ ಚೈತನ್ಯ ಹೀರಿಬಿಟ್ಟಿದೆ ಕವಿತೆ ************
ಕಾವ್ಯಯಾನ
ಆಯುಧಕ್ಕಿಂತ ಹರಿತ ರಾಜು ದರ್ಗಾದವರ ಮೊನ್ನೆತಾನೆ ಗೊತ್ತಾಯ್ತು ಕವಿತೆಗಳು ಆಯುಧಕ್ಕಿಂತ ಹರಿತವೆಂದು! ಸಮಾಜಕ್ಕೆ ಅಪಾಯಕಾರಿಯೆಂದೀಗ ಘೋಷಿಸಿ ಜೈಲಿಗಟ್ಟಿದ್ದಾರೆ ಕವಿತೆಗಳನ್ನು ಬರೆದವನ. ಕವಿ ಸಿಕ್ಕಿರಬಹುದು ಆದರೆ ಆ ಕವಿತೆ ಅದೆಲ್ಲಿಯವರೆಗೂ ತಲುಪಿದಿಯೋ? ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ ಪಸರಿಸಬೇಡಿ. ಸುಟ್ಟುಬಿಡಿ…! ಅವರಿಗೂ ಬೇಕಾಗಿದ್ದು ಅದೇ..!! ************
ಪ್ರಸ್ತುತ
ಅಕ್ಷರಸಂತ ಹಾಜಬ್ಬ ಕೆ.ಶಿವು ಲಕ್ಕಣ್ಣವರ ಸ್ವಂತ ದುಡುಮೆಯಿಂದ ಶಾಲೆ ಕಟ್ಟಿಸಿದ ಹರೆಕಳ ಹಾಜಬ್ಬರು ಪದ್ಮಶ್ರೀ ಪಡೆದ ಸಾಹಸಗಾಥೆ..! ಆ ವ್ಯಕ್ತಿ ಕೋಟ್ಯಾಧಿಪತಿಯಲ್ಲ. ಸ್ವಂತಮನೆಯೂ ಅವನಿಗೆ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹರೆಕಳ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು… ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ […]
ಕಾವ್ಯಯಾನ
ಗಝಲ್ ಸುಜಾತಾ ಲಕ್ಮನೆ ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ […]
ಕಾವ್ಯಯಾನ
ಹಮ್ಮು ಬಿ.ಎಸ್.ಶ್ರೀನಿವಾಸ್ ಬಲ್ಲವನೆಂಬ ಭ್ರಾಮಕ ಹಮ್ಮು ತಲೆತಿರುಗಿಸುವ ಅಮಲು ಏನೂ ಅರಿಯದ ಪಾಮರನ ಪ್ರಾಮಾಣಿಕ ಅಳಲು ಅಮಾಯಕತ್ವವೆ ಮೇಲು ಅಗ್ಗದ ಉಪದೇಶಕ್ಕಿಂತ ನಡೆದು ತೋರಿಪುದು ಮೇಲು ನಿಜಸಾಧಕರಿಗೆ ಸವಾಲು ಸಲ್ಲದು, ನಾ ಕಂಡಿದ್ದೇ ಸತ್ಯವೆಂಬುದು ಅಹಮಿಕೆ ಡೌಲು ಬಲ್ಲವರು ಹೇಳುವರು ಸತ್ಯ ಒಂದೇ ಆದರೂ ಧೃಷ್ಟಿಕೋನ ನೂರಾರು ಹಿಮಾಲಯದ ಶಿಖರಕ್ಕೂ ಏರುವ ದಾರಿ ಹಲವಾರು ಮಾತಿನೀಟಿಯಲಿ ಪರರ ಘಾತಿಸುತ ಸಮನಾರಿಲ್ಲ ಎನಗೆಂದು ಬಿಂಕದಿ ಮೆರೆದು ಬೀಗಿದರೆ ಮೆಚ್ಚುವನೆ ಪರಮಾತ್ಮನು ಮೇಲೇರಿದರೆ ಕೆಳಗಿನದು ಕುಬ್ಜವಾಗುವುದು ಸಹಜ ಕೆಳಗಿರುವವರ ಕೈಹಿಡಿದು […]
ಪುಸ್ತಕ ವಿಮರ್ಶೆ
ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು. ಅವರ ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ […]
ಕಾವ್ಯಯಾನ
ಗಝಲ್ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ ಸಮಾನ ಆಶೋತ್ತರಗಳು ಸುರಾಜ್ಯದ ಕನಸು ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ […]