ಹಮ್ಮು
ಬಿ.ಎಸ್.ಶ್ರೀನಿವಾಸ್
ಬಲ್ಲವನೆಂಬ ಭ್ರಾಮಕ ಹಮ್ಮು
ತಲೆತಿರುಗಿಸುವ ಅಮಲು
ಏನೂ ಅರಿಯದ ಪಾಮರನ
ಪ್ರಾಮಾಣಿಕ ಅಳಲು
ಅಮಾಯಕತ್ವವೆ ಮೇಲು
ಅಗ್ಗದ ಉಪದೇಶಕ್ಕಿಂತ
ನಡೆದು ತೋರಿಪುದು ಮೇಲು
ನಿಜಸಾಧಕರಿಗೆ ಸವಾಲು
ಸಲ್ಲದು, ನಾ ಕಂಡಿದ್ದೇ
ಸತ್ಯವೆಂಬುದು ಅಹಮಿಕೆ ಡೌಲು
ಬಲ್ಲವರು ಹೇಳುವರು
ಸತ್ಯ ಒಂದೇ ಆದರೂ
ಧೃಷ್ಟಿಕೋನ ನೂರಾರು
ಹಿಮಾಲಯದ ಶಿಖರಕ್ಕೂ
ಏರುವ ದಾರಿ ಹಲವಾರು
ಮಾತಿನೀಟಿಯಲಿ
ಪರರ ಘಾತಿಸುತ
ಸಮನಾರಿಲ್ಲ ಎನಗೆಂದು
ಬಿಂಕದಿ ಮೆರೆದು ಬೀಗಿದರೆ
ಮೆಚ್ಚುವನೆ ಪರಮಾತ್ಮನು
ಮೇಲೇರಿದರೆ ಕೆಳಗಿನದು
ಕುಬ್ಜವಾಗುವುದು ಸಹಜ
ಕೆಳಗಿರುವವರ ಕೈಹಿಡಿದು
ಧನ್ಯತೆ ಪಡೆವವ
ನಿಜ ಮನುಜ
*********
ಹೃತ್ಪೂರ್ವಕ ಧನ್ಯವಾದಗಳು ಶ್ರೀ.ಮಧುಸೂದನ್ ಮತ್ತು ಸಂಗಾತಿ ಬಳಗ
ನಿಜಸಂಗತಿ ಹಮ್ಮು ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ
ಶ್ರೀನಿವಾಸ್ ಅವರೇ
ಉತ್ತಮ ಅಭಿವ್ಯಕ್ತಿ….ಸುಲಲಿತ ಪದ ಬಳಕೆ…ಸಹಜ /ಸರಳ ನಿರೂಪಣೆ ಯಿಂದ ಮನಮುಟ್ಟುವ ಯತ್ನ.ಅಭಿನಂದನೆ ಶ್ರೀ ನಿವಾಸ್…