ಗಝಲ್
ಸುಜಾತಾ ರವೀಶ್

ಏಕೋ ತಿಳಿಯೆ ವಿಷಾದದಲೆಗಳಲಿ ಮುಳುಗಿಬಿಟ್ದಿದೆ ಕವಿತೆ
ಏನೋ ಅರಿಯೆ ಅಂತರಂಗದಾಳದಲಿ ಹುದುಗಿಬಿಟ್ಠಿದೆಕವಿತೆ
ಸ್ಪರ್ಧೆಗಳ ಪ್ರವಾಹದ ಹುಚ್ಚುಹೊಳೆಯಲಿ ಕೊಚ್ಚಿಹೋಯ್ತೇಕೆ ಕವಿತೆ ?
ಪರಸ್ಪರ ಪ್ರಶಂಸೆ ಮೆಚ್ಚುವಬ್ಬರದಲಿ ಮುಚ್ಚಿಬಿಟ್ಟಿದೆ ಕವಿತೆ
ಮನದಾಳದ ಭಾವಾಭಿವ್ಯಕ್ತಿ ಎಂಬುದೇ ಮರೆಸಿಬಿಟ್ಟಿದೆ ಕವಿತೆ
ಸವಾಲುಗಳ ಎದುರಿಸುತ ಯಶವನೇ ಮೆರೆಸಿಬಿಟ್ಟಿದೆ ಕವಿತೆ
ಪರರ ನಿರ್ಣಯಗಳೆಂಬ ರಾಜಕೀಯದಲಿ ಸೋತುಬಿಟ್ದಿದೆ ಕವಿತೆ
ಪಕ್ಷಪಾತಗಳ ಸ್ಮಶಾನದಲಿ ಹೂತು ಹೋಗಿಬಿಟ್ಟಿದೆ ಕವಿತೆ
ವಿಜಯವ ಅರಸುತಲಿ ಬಂಧನಗಳ ಮೀರಿಬಿಟ್ಟಿದೆ ಕವಿತೆ
ಸುಜಿಹೃದಯವ ಉರಿಸುತಲಿ ಚೈತನ್ಯ ಹೀರಿಬಿಟ್ಟಿದೆ ಕವಿತೆ
************
ಸುಂದರ ಗಝಲ್