ಆಯುಧಕ್ಕಿಂತ ಹರಿತ
ರಾಜು ದರ್ಗಾದವರ

ಮೊನ್ನೆತಾನೆ ಗೊತ್ತಾಯ್ತು
ಕವಿತೆಗಳು ಆಯುಧಕ್ಕಿಂತ ಹರಿತವೆಂದು!
ಸಮಾಜಕ್ಕೆ ಅಪಾಯಕಾರಿಯೆಂದೀಗ
ಘೋಷಿಸಿ ಜೈಲಿಗಟ್ಟಿದ್ದಾರೆ
ಕವಿತೆಗಳನ್ನು ಬರೆದವನ.
ಕವಿ ಸಿಕ್ಕಿರಬಹುದು
ಆದರೆ ಆ ಕವಿತೆ ಅದೆಲ್ಲಿಯವರೆಗೂ
ತಲುಪಿದಿಯೋ?
ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ
ಪಸರಿಸಬೇಡಿ.
ಸುಟ್ಟುಬಿಡಿ…!
ಅವರಿಗೂ ಬೇಕಾಗಿದ್ದು ಅದೇ..!!
************