ಅಂಜಿಕೆ

ಅಂಜಿಕೆ

ನದಿ ತಾ ಪಯಣಿಸಿದ ಹಾದಿಯತ್ತ ಹಿಂತಿರುಗಿ ನೋಡುತ್ತದೆ
ಪರ್ವತದ ಶಿಖರಗಳಿಂದ
ಉದ್ದನೆಯ ಅಂಕುಡೊಂಕಾದ ರಸ್ತೆ ದಾಟಿದೆ ಕಾಡು ಮತ್ತು ಹಳ್ಳಿಗಳನು

ಅಂಕಣ ಬರಹ ಸವಡಿಯಾಗುವ ಸವತಿಯರು ಭಾರತ ಬಹುಸಂಸ್ಕೃತಿ ನಾಡು. ಅಂತೆಯೆ ಬಹು ಪತ್ನಿತ್ವ ಸಮಾಜವುಳ್ಳ ಕೇಂದ್ರಸ್ಥಾನವೂ ಹೌದು.ಒಬ್ಬ ಪುರುಷನನ್ನು ಇಬ್ಬರು ಮಹಿಳೆಯರು ಮದುವೆಯಾದರೆ ಅವರು ಒಬ್ಬರಿಗೊಬ್ಬರು ಸವತಿಯಾಗುವರು. ‘ಸವತಿ’ ಎನ್ನುವ ಈ ಶಬ್ದ ಮೂಲತಃ ಸಹವರ್ತಿ ಎನ್ನುವ ಪದದಿಂದ ಬಂದಿದ್ದು. ಇದರ ಅರ್ಥ ಇಬ್ಬರೂ ಸಮಾನ ಹಕ್ಕು ಹೊಂದಿರುವುದು ಎಂದಾಗುತ್ತದೆ. ಸಮಾನ ಹಕ್ಕುಗಳು, ಸಮಾನ ಸಕಲ ಸವಲತ್ತುಗಳನ್ನು ಸಮಾನವಾಗಿ ಪಡೆಯುವರನ್ನು ಸವತಿ ಎಂದು ಕರೆಯುವರು‌. ಈ ಸವತಿ ಎನ್ನುವ ಪದ ಹೊಟ್ಟೆಕಿಚ್ಚು, ಮತ್ಸರ, ವೈರಿ, ಅಸಹನೆ ಎಂಬ […]

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು‌. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. […]

ಕವಿತೆಯ ಜೀವನ

ಕವಿತೆ ಕವಿತೆಯ ಜೀವನ ಟಿಪಿ.ಉಮೇಶ್ ಅಸಹಾಯಕ ಅಕ್ಷರದ ಕಾಲುಗಳ ಊರುತ್ತಾಪೇಲವ ಮುಖ ಚಿಹ್ನೆಗಳ ಹೊತ್ತು ಬಂದವುಪ್ರೇಯಸಿಯ ಮನೆಗೆ;ಭಿಕ್ಷಾಂದೇಹಿ!ಕೆದರಿದ ಕೂದಲು ಕೆಸರಾದ ಕೈಕಾಲು ಹರಿದ ಬಟ್ಟೆಗಳ ಮುಗ್ಗಲು ನಾರುತ್ತಿರುವಕವಿತೆಗಳ ಕಂಡೊಡನೆ;ಪ್ರೇಯಸಿ ಅನ್ನ ಹಾಕುವುದಿರಲಿಒಂದು ಹಸನಾದ ಮಾತುಹಸನ್ಮುಖ ನಗುವನ್ನು ತೋರದೆದಡಾರನೆ ಕದವಿಕ್ಕಿಗೊಂಡು ಒಳ ಹೋದಳು!ಮರುದಿನಕವಿತೆಪತ್ರಿಕೆಯಲ್ಲಿ ರಾರಾಜಿಸುತ್ತಿದೆ!!ಬಹುಖ್ಯಾತಿಗೊಂಡು ಮನೆ ಮನ ಬೀದಿ ಓಣಿಗಳಲ್ಲಿ ಕುಣಿಯುತ್ತಿದೆ!ಪ್ರೇಯಸಿ ದಾರಿಗಿಳಿದು ಬಂದವಳೇ;ಕವಿತೆಯ ಬೆನ್ನ ನೇವರಿಸಿದಂತೆ ಮಾಡಿಜುಟ್ಟು ಹಿಡಿದುಕೊಂಡುದರದರನೆ ಮನೆಯ ಒಳಗೆ ಎಳೆದೊಯ್ದಳು! ಬೀದಿಯಲ್ಲಿ ನಿಶ್ಯಬ್ಧ!ಮನೆಯಲ್ಲಿ ಸಶಬ್ಧ! ಅವರ ಮನೆ ಕತೆ ನಮಗೆ ನಿಮಗೇಕೆಲೋಕದ ಡೊಂಕು ಕೊಂಕು […]

ಚೆಗುವೆರ ಎಂಬ ಮುಗಿಯದ ಪಯಣ

ಕವಿತೆ ಚೆಗುವೆರ ಎಂಬ ಮುಗಿಯದ ಪಯಣ ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಇವರು ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.  ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ.  ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು […]

ಅಮೃತಾ ಮೆಹಂದಳೆ ಹೊಸ ಕವಿತೆ

ಕವಿತೆ ಅಮೃತಾ ಮೆಹಂದಳೆ ಹೊಸ ಕವಿತೆ ಕೋಮುದಂಗೆಗೆಆಕ್ರೋಶಗೊಳ್ಳುವ ನಾನುಸಹಿಷ್ಣುತೆಯ ಕವಿತೆ ಬರೆವೆಸಾಮಾಜಿಕ ಕಾಳಜಿಯಬಗ್ಗೆ ಬರೆವ ನಾನುಇಂದು ನೋಡಬೇಕಾದಹೊಸ ಚಿತ್ರದ ಪಟ್ಟಿ ಮಾಡುವೆಸೀರೆ ಚಾಲೆಂಜ್ ಗೆಸಿಡಿಮಿಡಿಗೊಳ್ಳುವ ನಾನುಸೆಲ್ಫೀಯಲ್ಲಿ ಮೈಮರೆವೆಹಸಿದವರ ವಿಡಿಯೋಗೆಕಣ್ಣೀರ್ಗರೆಯುವ ನಾನುಪಾನಿಪುರಿಗೆ ಪುದಿನಾ ಜೋಡಿಸುವೆರಾಜಕೀಯ ದೊಂಬರಾಟಕ್ಕೆಅಸಹ್ಯಿಸಿಕೊಳ್ಳುವ ನಾನುಭಾಷಣಕ್ಕೆ ಕೈತಟ್ಟುವೆಉಚಿತ ಭಾಗ್ಯಗಳ ಬಗ್ಗೆಮೆಚ್ಚುಗೆ ತೋರುವ ನಾನುಪರಿಣಾಮಗಳಿಗೆ ಕುರುಡಳಾಗುವೆಬೇಕಿಂಗ್ ನ್ಯೂಸ್ಹಂಚಿಕೊಳ್ಳುವ ನಾನುಹಕ್ಕಿಗಾಗಿ ನೀರಿಡಲು ಮರೆವೆಆರ್ಥಿಕ ಮುಗ್ಗಟ್ಟಿಗೆಚಿಂತಿತಳಾಗುವ ನಾನುಬಾರದ ಪಾರ್ಸೆಲ್ಲಿಗೆ ಮರುಗುವೆನಾಳಿನ ಭವಿಷ್ಯಕ್ಕೆಸಿನಿಕಳಾಗುವ ನಾನುಹಪ್ಪಳಕ್ಕೆ ಅಕ್ಕಿ ನೆನೆಸುವೆಆಧುನಿಕ ಜೀವನಶೈಲಿಗೆಹಿಡಿಶಾಪ ಹಾಕುವ ನಾನುಪಿಜ್ಜಾ ಆಫರಿಗೆ ಕಣ್ಣರಳಿಸುವೆದೇಶಪ್ರೇಮದ ರೀಮೇಕ್ ಹಾಡಿಗೆಲವ್ ಇಮೋಜಿ ಒತ್ತುವ ನಾನುಮೆಚ್ಚಿನ ನಟನ […]

ಒಲವಿನ ಭೇಟಿ

ಕವಿತೆ ಒಲವಿನ ಭೇಟಿ ಆಸೀಫಾ ಮಂದಹಾಸದ ಮುಖವೇನೋ ಶಾಂತವಿತ್ತುಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತುಮನದ ತಲ್ಲಣಗಳು ಮುಖವಾಡ ಧರಿಸಿತ್ತುಅಸಹಾಯಕತೆ ನನ್ನಲಿ ತಾಂಡವಾಡುತಿತ್ತು ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತುಅಧರದ ಸಕ್ಕರೆ ಸವಿವ ಬಯಕೆಯುಇರಿದಿರಿದು ತಿವಿದು ಕೊಲ್ಲುವಂತಿತ್ತುಮತ್ತದೇ ಅಸಹಾಯಕತೆ ಕಾಡುತಿತ್ತು ನೋಡಿದಷ್ಟೂ ನೋಡಬೇಕೆನಿಸುವ ನೋಟಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟಸನಿಹ ಸರಿದುಹೋದಾಗ ಹೆಚ್ಚಿದ ಪುಳಕಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ ಬಹುದಿನಗಳ ನಂತರದ ಮುಖಾಮುಖಿ ಭೇಟಿಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿಅಂತೂ ಒಲವಿಗೆ ಆಯಿತು ಒಲವಿನ ಭೇಟಿ **********

ಗಜಲ್

ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************

ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ     ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ […]

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ […]

Back To Top