ಮರಗಳ ಸ್ವಗತ ಸಾಂತ್ವಾನ

ಮರಗಳ ಸ್ವಗತ ಸಾಂತ್ವಾನ

ಕವಿತೆ ಮರಗಳ ಸ್ವಗತ ಸಾಂತ್ವಾನ ಅಭಿಜ್ಞಾ ಪಿಎಮ್ ಗೌಡ ಹೇ ಮನುಜ.! ನಿನ್ನ ಸ್ವಾರ್ಥಕಾಗಿಪ್ರಕೃತಿಯನ್ನೆ ವಿಕೃತಿಗೈದುಇಳೆಯೊಡಲ ಬರಿದುಗೊಳಿಸಿಮಾರಣ ಹೋಮ ಮಾಡುತಧರೆಯ ಬಂಜರಾಗಿಸಿದ್ದು ನ್ಯಾಯವೆ.?ನಿನಗರಿವಿಲ್ಲದೆ ಅವಳೊಡಲನುಅಳಿವಿನಂಚಿನಲಿ ನಿಲ್ಲಿಸಿತರುಲತೆಗಳ ಕತ್ತನು ಹಿಚುಕಿಮಾರಾಟಕಿಳಿಸಿರುವೆಯಲ್ಲನೀನೆಂತಹ ಗೋಮುಖ ವ್ಯಾಘ್ರಿ.!! ಮೊಳಕೆಯಿಂದಿಡಿದು ಮರದವರೆಗೂಗಾಳಿ ನೆರಳು ನೀಡಿ ಮಳೆಯಲ್ಲಿಆಸರೆಯಾದರೆ ನನ್ನೆ ಕೊಂದುಅಹಂನ ಗದ್ದುಗೆಯಲಿ ತೇಲುತಿರುವೆಒಮ್ಮೆ ಯೋಚಿಸು ಓ.! ಮನುಜ…ಮಳೆಯಿಲ್ಲದೆ ಇಳೆ ಇರುವುದೆ.?ಇಳೆಯಿಲ್ಲದೆ ನೀನಿರುವೆಯಾ.?ನಿನ್ನ ಲಲಾಟಕೆ ನನ್ನೆ ಗುರಿಮಾಡಿರುವೆನಿನ್ನಾಟಿಕೆಯ ಅಲಂಕಾರಕೇಕೆನನ್ನ ಕಡಿದು ಮಾರಾಟಕಿಟ್ಟಿರುವೆ.? ಹವಾಮಾನ ವೈಪರಿತ್ಯಗಳುಂಟಾಗುವುದೆನಮ್ಮಿಂದ ಹೇ.!ಮನುಜ ನೀ ತಿಳಿಮಳೆ ಗಾಳಿ ನೀರಿನ ಉತ್ಪಾನ್ನದ ಮೂಲನಾವಲ್ಲವೇ.? ,ನಮ್ಮಿರುವಿಕೆಯಪ್ರಭಾವ ಮಳೆ […]

ತೆವಳುವುದನ್ನುಮರೆತ ನಾನು

ಕವಿತೆ ತೆವಳುವುದನ್ನುಮರೆತ ನಾನು ವಿಶ್ವನಾಥಎನ್. ನೇರಳಕಟ್ಟೆ ನಾನು ತೆವಳುತ್ತಾ ಸಾಗುತ್ತಿದ್ದೆ‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು ಎದ್ದು ನಿಂತೆಅವರ ಬಾಯಿಗಳು ಸದ್ದು ಮಾಡಿದವು‘ನಿಂತರೆಸಾಲದು, ನಡೆಯಬೇಕು’ ನಡೆಯುತ್ತಾ ಹೊರಟೆ ಮತ್ತುಎಡವಿದೆ‘ಎಡವದೆಯೇನಡೆ’ ಎಂಬ ಸಲಹೆ ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’ ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು ಮೀನಿನ ಅಪ್ಪನಂತೆ ಈಜಿದೆಮತ್ತು ಅವರ ಮುಖ ನೋಡಿದೆಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು‘ಹಾರಲಾರೆ ನೀನು’ ಸವಾಲೇ ರೆಕ್ಕೆಗಳಾದವು ನನಗೆಹಾರತೊಡಗಿದೆ ಮತ್ತುಹಾರುತ್ತಲೇ ಇದ್ದೆ ಕೆಳಗನ್ನು ನೋಡಿದರೆಮತ್ತೆ ತುಟಿಗಳ ಪಿಟಿಪಿಟಿ-‘ಈಗ ತೆವಳುನೀನು, ಸಾಧ್ಯವಾದರೆ’ ತೆವಳ ಹೊರಟ ನಾನೀಗ […]

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-8 ಸ್ಕೂಬಾ ಡೈವಿಂಗ್ ಬಗ್ಗೆ ಓದಿ ಮಾತ್ರ ಗೊತ್ತು. ಸತೀಶ್ ಅವರನ್ನು ಬಿಟ್ಟು ನಾನು ಡೈವ್ ಮಾಡಲು ಹೋಗುವುದು ಸಾಧ್ಯವಿರಲಿಲ್ಲ. ಮಕ್ಕಳಿಬ್ಬರೂ ಗಣೇಶಣ್ಣನ ಕುಟುಂಬದ ಜೊತೆ ಸ್ಕೂಬಾ ಡೈವಿಂಗ್ ನ ಅನುಭವವನ್ನು ಪಡೆಯಲು ಹೋದರು. ಅಂಡಮಾನ್ ಗೆ ಹೊರಡುವಾಗ ಮಾಡಿದ ತಯಾರಿಯಲ್ಲಿ ಸಾಕಷ್ಟು ಚಿಲ್ಲರೆ ದುಡ್ಡು ಐವತ್ತು, ನೂರು, ಇನ್ನೂರರ ನೋಟುಗಳನ್ನು ಇಟ್ಟುಕೊಂಡಿದ್ದೆವು. ಹತ್ತು ಇಪ್ಪತ್ತರ ನೋಟುಗಳು ಕೂಡಾ. ಆದರೆ […]

ಜೀವದಾತೆ ಪ್ರಕೃತಿ ಮಾತೆ

ಕವಿತೆ ಜೀವದಾತೆ ಪ್ರಕೃತಿ ಮಾತೆ ಸುವಿಧಾ ಹಡಿನಬಾಳ ಹೇ ಪ್ರಭು , ಋತುರಾಜ ವಸಂತನೀ ಬಂದೆ ನಸುನಗುತ‌ಪ್ರಕೃತಿಗೆ ಹೊಸ ಕಳೆಯ ನೀಡುತ್ತಆದರೆ ಕಳೆದಿಲ್ಲ ಮನುಕುಲದದುಗುಡ ದುಮ್ಮಾನ ನಿನ್ನ ಆಗಮನದಿಂದ ! ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟುಹೂ ಹಣ್ಣು ಕಾಯಿ ತೊಟ್ಟುಕೋಗಿಲೆ ಗಿಳಿ ಗೊರವಂಕಗಳುಲಿವಾಗಮನುಜನಿಗೇಕೆ ಈ ವಿಯೋಗ ? ಜೀವಸಂಕುಲವೆ ತಿಂದುಂಡು ನಲಿದುಹಾಯಾಗಿ ಇರುವಾಗ ನಿನ್ನದೆಒಂದು ಭಾಗ ಹುಲು ಮಾನವನಿಗೇಕೆಜೀವಭಯ ತಳಮಳ ತುಮುಲ? ಹೇ ಕಾಮಧೇನು ಕರುಣಾಮಯೀಪ್ರಕೃತಿ ಮಾತೆ ಜೀವದಾತೆನಿನ್ನ ಮೇಲೆ ಅಟ್ಡಹಾಸಗೈವಸ್ವಾರ್ಥ ನರನ ಮೇಲೆ ಕೋಪವೆಅಥವಾ ನಿನ್ನ […]

ಸುಂದರ ರಾವಣ

ಕಥೆ ಸುಂದರ ರಾವಣ ವಿಶ್ವನಾಥ ಎನ್ ನೇರಳಕಟ್ಟೆ ಸಂಬಂಧಿಕರ ಮನೆಯಲ್ಲೊಂದು ಪೂಜೆ. ಪರಿಚಯಸ್ಥರಲ್ಲಿ ಮಾತನಾಡುತ್ತಾ ನಿಂತಿದ್ದೆ. “ತಗೋ ಮಾಣಿ ಹಲಸಿನ ಹಣ್ಣು” ಎನ್ನುವ ಮಾತಿನ ಜೊತೆಜೊತೆಗೇ ಬೆನ್ನ ಮೇಲೊಂದು ಗುದ್ದು. ಯಾರೆಂದು ತಿರುಗಿದರೆ ನಲುವತ್ತು- ನಲುವತ್ತೈದರ ಒಬ್ಬ ವ್ಯಕ್ತಿ. ಕಾಣುವಾಗಲೇ ವಿಕ್ಷಿಪ್ತ. ಹಲಸಿನ ಎರಡು ಸೊಳೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ವಿಚಿತ್ರವಾಗಿ, ಭಯ ಹುಟ್ಟಿಸುವಂತೆ ನಗುತ್ತಾ ನಿಂತಿದ್ದ. ಕೊಳಕಾದ ಹಲ್ಲು, ಮಣ್ಣು ಮೆತ್ತಿಕೊಂಡ ಕೈ, ಕೊಳಕು ಬಟ್ಟೆ. ಅವನು ಕೊಟ್ಟ ಹಣ್ಣು ತೆಗೆದುಕೊಳ್ಳುವುದು ಸರಿ ಕಾಣಲಿಲ್ಲ. ಹಾಗೆಂದು ತೆಗೆದುಕೊಳ್ಳದೇ […]

ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್

ವಿಶೇಷ ಲೇಖನ ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್ ಸಿದ್ಧರಾಮ ಹೊನ್ಕಲ್ . ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್ ಸಾಹಿತ್ಯದ ಮೇರು ಪರ್ವತ  ಗಾಲಿಬ್ ಕುರಿತ ನನ್ನ ಪುಟ್ಟ ಬರಹ. . ಗಾಲಿಬ್ ಹುಟ್ಟಿನಿಂದ  ಸಾವಿನವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಎಲ್ಲ ತಿಳಿದಾಗ ಅಂತಹ ಮಹತ್ವದ ಕಾವ್ಯ ಹುಟ್ಟಲು […]

‘ಅಮ್ಮನ ನಿರಾಳತೆ’

ವಸುಂಧರಾ ಕದಲೂರು ಬರೆಯುತ್ತಾರೆ

ಒಟ್ಟಿನಲ್ಲಿ ಹೊಟ್ಟೆ ತುಂಬಿದ ಮಗು ಒಂದಷ್ಟು ಹೊತ್ತು ತರಲೆ ಮಾಡದೇ ಆಡಿಕೊಂಡೋ, ಮಲಗಿಕೊಂಡೋ ಇದ್ದರೆ ಅಮ್ಮನಿಗೆ ಸಿಗುವ ನಿರಾಳತೆ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲಾಗದು.

ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ

ಪ್ರಬಂಧ ಒಳ್ಳೆಯದು ಬಾಡದ ಹೂವಿನಂತೆ ನಗುತಿರಲಿ ಜಯಶ್ರೀ.ಜೆ. ಅಬ್ಬಿಗೇರಿ    ಇಸ್ಲಾಂ ಧರ್ಮದ ಪ್ರಖ್ಯಾತ ಗುರು ‘ಸಾದಿ’ ಸಣ್ಣವರಿದ್ದಾಗ ತನ್ನ ತಂದೆಯೊಂದಿಗೆ ಮಸೀದಿಗೆ ಹೋಗಿದ್ದರು. ತಂದೆ ಮಕ್ಕಳು ಮಸೀದಿಯ ಮೇಲ್ವಿಚಾರಣೆ ನೋಡಿಕೊಳ್ಳಬೇಕಿತ್ತು. ಅಲ್ಲಿ ಪ್ರಾರ್ಥನೆಗೆ ಬಂದವರೆಲ್ಲ ನಿದ್ದೆಗೆ ಜಾರಿದ್ದರು. ಅದನ್ನು ಕಂಡ ಸಾದಿಗೆ ಆಶ್ಚರ್ಯವಾಯಿತು. ಆತ ತಂದೆಗೆ ತಿಳಿಸಿದ. ‘ನಮ್ಮಿಬ್ಬರನ್ನು ಬಿಟ್ಟು ಬಾಕಿಯವರೆಲ್ಲ ಮಲಗಿ ಬಿಟ್ಟಿದ್ದಾರೆ. ಆತನ ತಂದೆಗೆ ಕೋಪ ಬಂದಿತು.’ನಿನ್ನ ಕೆಲಸ ನೀನು ಮಾಡು. ಬೇರೆಯವರು ಏನು ಮಾಡುತ್ತಿದ್ದಾರೆಂದು ನೋಡುವುದು ನಿನ್ನ ಕೆಲಸವಲ್ಲ. ‘ಬೇರೆಯವರಲ್ಲಿ ತಪ್ಪು […]

“ಅನ್ನದಾತನ ಸ್ವಗತ “

“ಅನ್ನದಾತನ ಸ್ವಗತ “ ಗೀತಾ ಅನಘ ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!ಬೆಳೆ ಬಿತ್ತಲು,,,,,,,,,,,,,ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ,ಸಂಭ್ರಮಿಸುವ ಸಮಯದಿಯಾಕೆ ನಿನ್ನಯ ರುದ್ರನರ್ತನ?! ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, […]

Back To Top