“ಅನ್ನದಾತನ ಸ್ವಗತ “
ಗೀತಾ ಅನಘ


ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,
ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,
ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,
ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!
ಬೆಳೆ ಬಿತ್ತಲು,,,,,,,,,,,,,
ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,
ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,
ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,
ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,
ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ
,ಸಂಭ್ರಮಿಸುವ ಸಮಯದಿ
ಯಾಕೆ ನಿನ್ನಯ ರುದ್ರನರ್ತನ?!
ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, ಮಾಧ್ಯಮಗಳಿಗೆ ಆಹಾರ, ನನಗೆ!
ನನ್ನ ಗೂಡು,ಗುಡಿಸಲು, ಬೆಳೆ ಎಲ್ಲವನ್ನು ಕಳೆದುಕೊಂಡು
ಅನಾಥನಾಗಿ ಗಂಜಿಕೇಂದ್ರ ಸೇರಿದನೆಲ್ಲ,
ಆಗ ನಮ್ಮಯ ಸ್ಥಿತಿ ಕಂಡು ಶ್ರೀಮಂತ ವರ್ಗದವರು ಮರುಗಿದರು.!!!!!!!!
“ಛೇ ,,,,,ಪಾಪ”
“ಅಯ್ಯೋ ಪಾಪ”
“ಅಯ್ಯೋ ಬಿಡಿ ಪ್ರತಿವರ್ಷವೂ ಇವರದು ಇದೇ ಗೋಳು”
ಅದ್ಯಾಕೋ ಅರಿವಾಗಲಿಲ್ಲ ಅವರಿಗೆ,
ಅವರ ಕುಟುಂಬವು ಸವಿಯುತ್ತಿರುವ ಮೃಷ್ಟಾನ್ನ ಭೋಜನಕ್ಕೆ ಕಾರಣಕರ್ತರು ನಾವೆಂದು!!!
ಎಲ್ಲವೂ ಸರಿ ಎನಿಸಿ, ಮಳೆ ಸಕಾಲದಲ್ಲಿ ಸಹಕರಿಸಿ ,
ನಾನು ನನ್ನವರು, ನನ್ನ ಬಾಂಧವರು ಬೆವರು ಸುರಿಸಿ,
ಬೆಳೆ ಬೆಳೆಸಿ,
ದೂರದ ಕಂಡು ಕಾಣದ ಪ್ಯಾಟೆಗೆ ಬಂದರೆ,
ಬೆಲೆ ಕುಸಿತ, ದಲ್ಲಾಳಿಗಳಿಂದಲೆ ತೊಂದರೆ,
ಬ್ಯಾಂಕಿನ ಸಾಲ ವಿರಲಿ,
“ಬೇಸಾಯ ಮನೆ ಮಂದಿಯೆಲ್ಲ ಸಾಯ”
ಎಂಬ ಗಾದೆಮಾತಿನಂತೆ ಪರಿಶ್ರಮಕ್ಕೆ ಬೆಲೆ ಇಲ್ಲ,
ಕೈಗಳು ಕಾಣಲಿಲ್ಲ ಕಾಂಚಾಣದ ಕಂತೆ,
‘ದಲ್ಲಾಳಿಗಳೇಕೇ’ ನಾನೇ ಮಾರಿ ಬರುವೆ ಎಂದು ಬಂದ ನನಗೆ ದಿಕ್ಕು ತೋಚದಾಯಿತು.
ಹೇಳಿದ ಬೆಲೆಗೆ ಅರ್ಧಕ್ಕೆ ಕೇಳುವ ಚೌಕಾಸಿ ಮಾಡುವ ಜನರಿಗೆ ನನ್ನ ನೋವು ಅರ್ಥವಾಗಲಿಲ್ಲ.
ನನ್ನ ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲಿಲ್ಲ ,
ಹಾಗಾಗಿ ಅವನ ಮಾತೃಭಾಷಾ ಪ್ರೇಮಕ್ಕೆ ದ್ರೋಹವಿಲ್ಲ ಅದುಮಾತ್ರವಲ್ಲ ನಮ್ಮನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಲಿಲ್ಲ,
ಗುರು- ಹಿರಿಯರ ಬಗ್ಗೆ ಭಕ್ತಿ
ಸಂಸ್ಕಾರ
,
ಶಾಲೆ ಕಲಿಕೆಗಿಂತ
, ನಮ್ಮನ್ನು ನೋಡಿ ಕಲಿಯುತ್ತಾರೆ.
ಎಂಬುದು ನಿಮಗೆ ಅರ್ಥವಾಗುವುದೇ ಇಲ್ಲ.
.
ಇನ್ನೂ ನನ್ನಾಕೆ ಪೌಡರ್ ಪಾರ್ಲರ್ ಕಾಣದಾಕೆ ,
ನನ್ನ ಮುನಿಸು, ನನ್ನ ನೋವು ಸಹಿಸು ವಾಕೆ.
ಚಿಕ್ಕ ಚಿಕ್ಕ ವಿಚಾರಕ್ಕೆ ವಿಚ್ಛೇದನ ಕೇಳುವ ನಿಮ್ಮ ವಿಚಾರ ದಡಿಯಲ್ಲಿ ಸುಸಂಸ್ಕೃತಳು ಈಕೆ.
ಇನ್ನು ವರ್ಷಕ್ಕೊಮ್ಮೆ ಬರುವ ಜಾತ್ರೆಯ ಸಡಗರ, ಸದ್ದಿಲ್ಲದೇ ಸಾಗುತ್ತಿದೆ ನಿರೀಕ್ಷಿಸದೆ ಆಡಂಬರ.
ಹಾಗೆ, ಐದು ವರ್ಷಕ್ಕೊಮ್ಮೆ ಠಾಕುಠೀಕಾಗಿ ಬಂದು ಇಳಿಯುವಿರಿ ಕಾರಿನಲಿ,
ಒಂದಷ್ಟು ಮುಗ್ಧ, ಒಂದಷ್ಟು ಪುಡಾರಿಗಳು
ಮಿಂದೇಳುವ ರು ನಿಮ್ಮ ಮೋಸದ ಜಾಲದಲ್ಲಿ.
ಓಟು, ನೋಟು ,ಬಿರಿಯಾನಿ ಮೋಹದ ಬರಾಟೆ, ನುಚ್ಚುನೂರಾಗಿಸಿ ನಮ್ಮಯ ನೆಮ್ಮದಿಯ ಕೋಟೆ .
ನಿಮ್ಮಲ್ಲಿ ಯಾರೊಬ್ಬರಿಗೋ ಜಯಭೇರಿ,
ತದನಂತರ ಯಾರಿಲ್ಲ ನಮ್ಮ ತಿಳಿಯಲು ನೋವಿನ ಪರಿ.
ಒಮ್ಮೆ ಬಾರದ ಮಳೆಗಾಗಿ ಬೆಳೆ ಕಳೆದುಕೊಂಡೆ ,
ಇನ್ನೊಮ್ಮೆ ಬೆಳೆದ ಬೆಳೆಗೆ ಬೆಲೆ ಕಾಣದೆ ಬಳಲಿದೆ ,
ಮಗದೊಮ್ಮೆ ಅತಿವೃಷ್ಟಿ ತೀವ್ರತೆಗೆ ನಲುಗಿದೆ
.
ಕೊನೆಗೊಮ್ಮೆ ನಿರ್ವಿಕಾರ ದಿ,
ಸಾಲದ ಬಾಧೆ ತಾಳಲಾರದೆ,
ನನ್ನ ನೆಲದ, ಒಂಟಿ ಮರದ ರಂಬೆಗೆ,
ನಾನೇ ತಂದ ಹಗ್ಗಕ್ಕೆ ,ನನ್ನ ಕರುಳಮಂದಿ ಮರೆತು ಕೊರಳ ಕೊಡ ಬಯಸುವೆ.
ಯಾರನ್ನು ದೂಷಿಸಲಿ?
****************************