ಗಜಲ್

ಗಜಲ್

ಶಶಿಕಾಂತೆ

Drop Of Water

ಬಿಟ್ಟು ಹೋಗಲು ಬೇಕಿಲ್ಲ ಕಾರಣ ನಿನಗೆ
ಬಂದು ಸೇರಲು ಬೇಕಿಲ್ಲ ಕಾರಣ ನಿನಗೆ

ಕಣ್ಣೀರು ನೆಪವಾಗಿದೆ ನನ್ನನು ಕರಗಿಸಲು
ಪ್ರೀತಿ ತೋರಲು ಬೇಕಿಲ್ಲ ಕಾರಣ ನಿನಗೆ

ಕರಗಿದೆನೆಂದರೆ ಮತ್ತದೇ ಒತ್ತಡ ನಿನ್ನಿಂದ
ನನ್ನ ಹೊಗಳಲು‌ ಬೇಕಿಲ್ಲ ಕಾರಣ ನಿನಗೆ

ಮೊಸಳೆ ಕಣ್ಣೀರಿಗೆ ಕಲ್ಲೂ ಕರಗುತ್ತದೆ
ಸುಳ್ಳು ಹೇಳಲು ಬೇಕಿಲ್ಲ ಕಾರಣ ನಿನಗೆ

ಕುರುಡರ ರಾಜ್ಯಕೆ ಶಶಿಯ ಹೊಂಬೆಳಕೇ?
ಸೋತು ಬರಲು ಬೇಕಿಲ್ಲ ಕಾರಣ ನಿನಗೆ

****************************

Leave a Reply

Back To Top