ವಿಶೇಷ ಲೇಖನ
ಗಜಲ್ ಕ್ಷೇತ್ರದ ಮೇರು ಪರ್ವತ ಗಾಲಿಬ್
ಸಿದ್ಧರಾಮ ಹೊನ್ಕಲ್
.
ಇತ್ತೀಚಿನ ದಿನಗಳಲ್ಲಿ ನನಗೆ ಬಹುವಾಗಿ ಕಾಡಿ ನನ್ನಿಂದ ಮೂರು ಗಜಲ್ ಕೃತಿಗಳು ಹೊರಬರಲು ಕಾರಣ ಆದ ಗಜಲ್ ಸಾಹಿತ್ಯಕ್ಕೆ ಸಂಬಂಧಿಸಿದ ಗಜಲ್ ಸಾಹಿತ್ಯದ ಮೇರು ಪರ್ವತ ಗಾಲಿಬ್ ಕುರಿತ ನನ್ನ ಪುಟ್ಟ ಬರಹ. . ಗಾಲಿಬ್ ಹುಟ್ಟಿನಿಂದ ಸಾವಿನವರೆಗೆ ಆತನ ಬದುಕು ಬರಹ ಹವ್ಯಾಸ ಸುಖ ದುಃಖ ಸಾಲ ಸೋಲ ನೋವು ಅವಮಾನ ಸ್ವಾಭಿಮಾನ ಎಲ್ಲ ತಿಳಿದಾಗ ಅಂತಹ ಮಹತ್ವದ ಕಾವ್ಯ ಹುಟ್ಟಲು ಇದೇ ಭೂಮಿಕೆ ಕಾರಣ ಅನಿಸುತ್ತದೆ. ಗಜಲ್ ಕ್ಷೇತ್ರದ ಮೇರು ಪರ್ವತ ಅನ್ನುವಷ್ಟರ ಮಟ್ಟಿಗೆ ಬೆಳೆದ ಆತನ ಅಪ್ರತಿಮ ಗಜಲ್ ಕಾವ್ಯವನ್ನು, ಆತನ ವ್ಯಕ್ತಿತ್ವವನ್ನು ನಾವು ಅರಿಯಬಹುದಾಗಿದೆ.
ನೂರು ತಲೆಮಾರಿನಿಂದ ನಡೆದು ಬಂದಿದೆ ಸೈನಿಕ ವೃತ್ತಿ
ಕೀರ್ತಿ ಸ್ಥಾನ ಪಡೆಯಲೋಸುಗ ನಾನು ಕಾವ್ಯ ರಚಿಸಬೇಕಾದುದಿಲ್ಲ!
ಮಹಾ ಆತ್ಮಾಭಿಮಾನಿಯಾದ ಗಾಲಿಬ್ ನ ಈ ಸಾಲುಗಳ ಮೂಲಕ ಆತನ ಕಾವ್ಯ ಧೋರಣೆಯ ಆಶಯದ ಅರಿವಾಗಬಹುದಾಗಿದೆ.
ನಿನ್ನ ನೋಡಲೆಂದು ನನ್ನ ಕಣ್ಣೀರು ಸ್ವ ಪ್ರತಿಷ್ಠೆಯ ಚಿನ್ನವನ್ನು ಸಂಪೂರ್ಣ ತೊಳೆದು ಹಾಕಿದೆ!
ಈಗ ಮಂಜು ಹನಿಯಂತಿರುವ ಪವಿತ್ರ ದೃಷ್ಟಿಯೊಂದು ಮಾತ್ರ ಉಳಿದಿದೆ! – ಗಾಲಿಬ್
@@@@
ನಿನ್ನ ಚೆಲುವಿನ ಮಿಂಚಿನ ಹೊಳಪಿನಿಂದಾಗಿ ನನ್ನ ದೃಷ್ಟಿ ಸುಟ್ಟು ಕೇವಲ ರೆಪ್ಪೆಯ ಕೂದಲು ಮಾತ್ರ ಉಳಿಯಿತು
ಎಲ್ಲ ಸುಟ್ಟು ಬೂದಿಯುಳಿಯುವ ಹಾಗೆ… – ಗಾಲಿಬ್
@@@@
ಆಶೆಗಳ ತೋಟ ಬೇಸಿಗೆಯ ಬೇಟೆಯಾಗಿದೆ
ಮತ್ತೆ ವಸಂತ ಬರಬಹುದು;ಆದರೆ ನನ್ನ ನಿರಾಶೆಗಳ ಸಿಟ್ಟು ಸಿರಿನೊಲು!
ಗಾಲಿಬ್
ಉಳಿದಿಲ್ಲ ಪ್ರೆಯಸಿಯ ನೋಟದಚ್ಚರಿ,ಇಲ್ಲ ಸುರೆಯ ಸಹವಾಸ
ಕೇಳು ಗಾಲಿಬ್ ನನ್ನ ಮಹಫಿಲ ದಿ ಉಳಿದಿಹದು ಬರಿ ಭಾಗ್ಯ ಚಕ್ರ –
ಗಾಲಿಬ್
ಹೀಗೆ ಅನಂತ ಗಜಲ್ ಗಳ ಮೂಲಕ ಇಂದಿಗೂ ಗಜಲ್ ಅಂದ್ರೆ ಗಾಲಿಬ್ ಎನ್ನುವಂತೆ ಗಜಲ್ ಸಾಹಿತ್ಯ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಗಾಲಿಬ್ ರ ರೋಚಕ ಬದುಕು ಅವರ ಬರಹದ ವೈವಿಧ್ಯಮಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಗಾಲಿಬ್ ಒಂದು ಹಂತದಲ್ಲಿ ಕಡು ಕಷ್ಟದಲ್ಲಿ ಇದ್ದಾಗ ಆತನ ಅಭಿಮಾನಿಗಳು ದೆಹಲಿಯ ಕಾಲೇಜು ಒಂದರಲ್ಲಿ ಬೋಧಕ ವೃತ್ತಿ ಖಾಲಿ ಇದೆ.ಅದನ್ನು ನೀವು ಮಾಡಿ.ನಿಮ್ಮ ಜೀವನ ನಿರ್ವಹಣೆಗೆ ಸಹಾಯ ಆಗುತ್ತದೆ ಎಂದು ತುಂಬಾ ಒತ್ತಾಯಿಸಿ ಆ ಆಡಳಿತ ಮಂಡಳಿಯವರ ಮನ ಒಲಿಸಿ ಆ ಹುದ್ದೆಗೆ ನೇಮಕಾತಿ ಕೊಡಿಸುತ್ತಾರೆ.
ಒಂದು ದಿನ ಆ ಹುದ್ದೆಗೆ ಸೇರಲು ತಮ್ಮ ಮೇನೆಯಲ್ಲಿ ಕುಳಿತು ಕಾಲೇಜು ಮುಂದೆ ಹೋಗಿ ಇಳಿಯುತ್ತಾರೆ.ಸ್ವಲ್ಪ ಹೊತ್ತು ಕಾಯುತ್ತಾರೆ. ಇವರನ್ನು ಒಳ ಕರೆದೊಯ್ಯಲು ಯಾರು ಬರುವದಿಲ್ಲ. ಬೇಸತ್ತ ಗಾಲಿಬ್ ಅದೇ ಮೇನೆಯಲ್ಲಿ ಕುಳಿತು ಮನೆಗೆ ಮರಳುತ್ತಾರೆ.
ಮರುದಿನ ಇವರನ್ನು ಹುಡುಕಿಕೊಂಡು ಬಂದ ಅಭಿಮಾನಿಗಳು ನಿನ್ನೆ ನೀವು ಕೆಲಸಕ್ಕೆ ಏಕೆ ಜ್ವಯಿನ್ ಆಗಲಿಲ್ಲ.ಹೋಗಲಿಲ್ಲವೇ? ಆಡಳಿತ ಮಂಡಳಿಯವರು ನಿಮಗಾಗಿ ಕಾದಿದ್ದರು ಅನ್ನುತ್ತಾರೆ.ಆಗ ಗಾಲಿಬ್ ರು ನನ್ನನ್ನು ಸ್ವಾಗತಿಸಲು ಯಾರು ಬಾಗಿಲಿಗೆ ಬರಲಿಲ್ಲ.ಹಾಗಾಗಿ ನಾ ಅಲ್ಲಿಯವರೆಗೆ ಹೋದವ ಹಿಂದೆ ಬಂದೆ ಅನ್ನುತ್ತಾರೆ.
ನಿಮ್ಮನ್ನು ಸ್ವಾಗತಿಸಲು ನೀವು ಆ ಕಾಲೇಜಿಗೆ ಅತಿಥಿಯಾಗಿ ಹೋಗಿಲ್ಲ.ಕೆಲಸ ಮಾಡಲು ಹೋಗಿದ್ದು. ಕೆಲಸಗಾರನಿಗೆ ಯಾರು ಸ್ವಾಗತಿಸುವದಿಲ್ಲವೆಂದು ಸಹಜವಾಗಿ ಹೇಳುತ್ತಾರೆ.ನಾ ಮಾಡುವ ಕೆಲಸದಿಂದ ಅಲ್ಲಿ ನನಗೆ ಗೌರವ ಸಿಗುವದಿಲ್ಲವೆಂದರೆ ನಾನೇಕೆ ಅಂತಹ ಕೆಲಸ ಮಾಡಲಿ.ನನಗೆ ಗೌರವ ಸಿಗದ ಕೆಲಸ ಬೇಡ ಅಂತ ಆ ಕೆಲಸವೇ ಬೇಡ ಅಂತ ಬಿಟ್ಟುಕೊಟ್ಟು ತಮ್ಮ ಕಡುಕಷ್ಟದ ಜೀವನವೇ ಆಯ್ಕೆ ಮಾಡಿಕೊಳ್ಳುತ್ತಾರೆ.ಇದು ಗಾಲಿಬ್.
ಇದು ಅವರ ಬದುಕಿನ ಒಂದು ನಡೆದ ಘಟನೆ ಅಂತ ಅವರ ಕುರಿತು ಬರೆದವರು ಉಲ್ಲೇಖಿಸುತ್ತಾರೆ.ಮೋಜು, ಮಸ್ತಿ,ರಸಿಕತೆ, ಕವಿತೆ ಸಾಲ ಸೋಲ ಸಾವುಗಳು ಹೀಗೆ ಅನೇಕ ಜಂಜಡಗಳಿಗೆ ಬಲಿಯಾದರು ಸಹ ಗಾಲಿಬ್ ತಮ್ಮ ಗಜಲ್ ರಚನೆಗಳ ಮೂಲಕ ಎಲ್ಲವನ್ನೂ ಮರೆತು ಹಗುರಾಗಿ ಅದ್ಭುತವಾದ ಗಜಲ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ನಮ್ಮ ಕಣ್ಣ ಮುಂದಿದೆ.ಇದು ಗಾಲಿಬ್ ಕುರಿತು ಕೃತಿಗಳಲ್ಲಿ ಗಮನಿಸಿದಾಗ ನನಗನಿಸಿದ ಒಂದು ಪುಟ್ಟ ಬರಹ ಅಷ್ಟೇ. ಇನ್ನೂ ಬಹಳ ಅವರ ಬಗ್ಗೆ ಓದಲಿದೆ.ಓದಿದಾಗ ಮತ್ತೆ ಹಂಚಿಕೊಳ್ಳುವೆ.
(ಡಾ.ಪಂಚಾಕ್ಷರಿ ಹಿರೇಮಠ ಅವರು ೫೦ ವರ್ಷಗಳ ಹಿಂದೆ ಪ್ರಕಟವಾದ ಸಾಹಿತ್ಯ ಸೌಗಂಧ ಕೃತಿಯಲ್ಲಿ ಬರೆದ ಯುಗ ಪುರುಷ ಗಾಲಿಬ್ ಲೇಖನದ ಓದಿನಿಂದ ನನಗೆ ದಕ್ಕಿದ್ದು ಇದು)
ಇದು ನನಗೂ ಅನ್ವಯಿಸುತ್ತದೆ.
ಹತ್ತಾರು ತಲೆಮಾರಿನಿಂದ ನಡೆದು ಬಂದಿದೆ ಬಹುದೊಡ್ಡ ವ್ಯಾಪಾರಿ, ಒಕ್ಕಲುತನದ ವೃತ್ತಿ.
ಕೀರ್ತಿ ಸ್ಥಾನ ಮಾನ ಪಡೆಯಲೋಸುಗ ನಾನು ಕಾವ್ಯರಚಿಸಬೇಕಾದುದಿಲ್ಲ!
ಆತ್ಮತೃಪ್ತಿಗಾಗಿಯಷ್ಟೆ
ಹೊನ್ನಸಿರಿ
************************************
ಬಹಳ ಚಂದದ ಲೇಖನ ಬಹಞಲಮಹತ್ವದ ಸಂಗತಿ ಹೊಂದಿದ್ದು ಉಪಯುಕ್ತವಾಗಿದೆ .ಅಭಿನಂದನೆ ಸರ್