ನನ್ನಾತ್ಮದ ಕನ್ನಡಿಯಲ್ಲಿ

ನನ್ನಾತ್ಮದ ಕನ್ನಡಿಯಲ್ಲಿ

ಇರಬೇಕಿತ್ತು ನೀನುನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳುಗುನುಗದಂತೆ ನೋಡಿಕೊಳ್ಳಲು. ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವಅಸಹನೀಯ ಕ್ಷಣಗಳ ಪಯಣದಲಿ. ಎಂದೂ ಮಳೆಯಾಗದಬೀಜ ಸಸಿಯಾಗದಸಸಿ ಮರವಾಗಿಮರ ಹೂವರಳಿಸಿ ಹಣ್ಣುಗಳ ಫಲಿಸಿತಾಯಾಗಲಾರದಂತಹ ತೀರಗಳಿರದರುದ್ರಭೀಕರ ಮರಳುಭೂಮಿಯನಡುವಲ್ಲೂ ಹಸಿರು ಚಿಗುರಿಸುವಛಲದೊಡತಿ ನೀನಿರಬೇಕಿತ್ತು ಮುಗಿದ ನನ್ನಿಷ್ಟಕಾಲದ ಜೊತೆಗೆಆರಂಭಗೊಂಡ ಕಷ್ಟಕಾಲದಲಿನೀನಿರಬೇಕಿತ್ತು ನನ್ನಾತ್ಮದ ಕನ್ನಡಿಯಲ್ಲಿ! ****** ಕು.ಸ.ಮಧುಸೂದನ್

ಪರಿಧಾವಿ

ಪುಸ್ತಕ ವಿಮರ್ಶೆ ಪರಿಧಾವಿ ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ. ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ  ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. […]

ಬಿತ್ತಿದ ಬೆಂಕಿ

ಬಿತ್ತಿದ ಬೆಂಕಿ ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ. ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ! ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು […]

ದ್ವೇಷ

ಇಂಗ್ಲೀಷ್ ಮೂಲ: ಸ್ಟೀಪನ್ಸ್ ಕನ್ನಡಕ್ಕೆ: ವಿ.ಗಣೇಶ್ ವಿ.ಗಣೇಶ್ ಕಗ್ಗತ್ತಲ ಆ  ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ […]

ದಡ

ಫಾಲ್ಗುಣ ಗೌಡ ಅಚವೆ ಮತ್ತೆ ಅದೇ ಏಕಾಂಗಿತನಮರಿ ಮಾಡುತ್ತಲೇ ಇದೆಕಾವು ಕೊಡದಿದ್ದರೂ ಮೊನ್ನೆ ನಡೆದ ಅಸಂಗತ ನಾಟಕದನಾಯಕ ಅವನ ಪಾತ್ರದಲ್ಲಿಯೇನೆಲೆಗೊಂಡಂತಿದೆ ಇನ್ನೂಧಾವಂತಗಳ ದಾಟದೇದಗದಿ ದಳ್ಳುರಿಯ ಎದುರಿಸಲಾಗದೇಹೊಸ ಹುಡುಕಾಟಗಳ ಲೆಕ್ಕಿಸದೇತಡಕಾಡಿಸುತ್ತಲೇ ಇದೆಚುಕ್ತಾ ಮಾಡಲಾಗದಬಡತನದ ಕನಸುಗಾರಿಕೆ ಇಲ್ಲಿಯೇ ಇದ್ದು ಅಲ್ಲಿ ಹೊರಟಂತೆದಾಪುಗಾಲಿಟ್ಟವರುಮನವಿ ಕೊಟ್ಟಂತಿದೆಗೈರು ಹಾಜರಾದ ಕುರಿತು ಸಾವು ಸಮನಿಸುವಂತಸವಾಲುಗಳಿವೆ ಇನ್ನೂಅಂಟಿಕೊಂಡಿವೆ ಅರವತ್ತರನಂತರದ ಆಹ್ವಾನಗಳು ಕಾಲದ ಹೆಜ್ಜೆಗಳಿಗೆ ಒಂದಷ್ಟುಬಣ್ಣ ಬಳಿದರೂಹಿಂದೆ ಬಳಿದ ಸುಣ್ಣವೇಇಣುಕುತ್ತಿದೆ ಅಲ್ಲಲ್ಲಿ ಸಹಜ ನಿಯಮವೇ ಬದಲಾವಣೆಸ್ತಬ್ಧಗೊಂಡಿದೆ ಹರಿವುನಿದ್ದೆಯ ಮಂಪರಿದೆಅಲೆಯದ ಕಡಲಿಗೆಹೊಸ ಅಲೆಯುಕ್ಕಿಸೋಸುನಾಮಿ ಅದೆಲ್ಲಿದೆಯೋ? ಆಧುನಿಕ ಅವಾಂತರಗಳುಮತ್ತೆ ಮತ್ತೆ ಆವರಿಸಿಗುಂಗೆ […]

ಖಾದಿ ಮತ್ತು ಕಾವಿ

ಎಮ್. ಟಿ. ನಾಯ್ಕ.                         ಜನ ಸೇವಕನೆಂದಿತು ಖಾದಿ ಧರ್ಮ ರಕ್ಷಕನೆಂದಿತು ಕಾವಿ ಇಂಚಿಂಚಾಗಿ ಮಾನವ ಕುಲವ ನುಂಗಿ, ನೀರು ಕುಡಿಯುತ್ತಿರುವ ಗೋಮುಖ ವ್ಯಾಘ್ರಗಳು     ವಿಷಯ ಲಂಪಟತೆಗೆ     ಇನ್ನೊಂದು ಹೆಸರು     ಖಾದಿ ಮತ್ತು  ಕಾವಿ ಇವುಗಳ ಹೆಸರೆತ್ತಿದರೆ ಸಾಕು ಬೀದಿ ನಾಯಿಗಳೂ ಕೂಡ ಮೂಗು ಮುಚ್ಚುತ್ತವೆ ಹಸಿ ಹಾದರದ ಕತೆಗೆ ನಸು  ನಾಚುತ್ತವೆ! ಹೊನ್ನು ಹೆಣ್ಣು ಮಣ್ಣಿನ ವಾಸನೆ […]

ಪುಸ್ತಕ ಸಂಗಾತಿ

ಅಲೆಮಾರಿಯ ದಿನದ ಮಾತುಗಳು ಅನುದಿನದ ಅನುಭಾದ ನುಡಿಗಳು(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”) ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ‌ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು […]

ಮತ್ತೆ ಮತ್ತೆ ಹೇಗೆ ಹಾಡಲಿ

ಸಂತೆಬೆನ್ನೂರು ಫೈಜ್ನಟ್ರಾಜ್ ಹಾಡಿದ ಹಾಡನೆ ಮರಳಿ ನಾನುಮತ್ತೆ ಮತ್ತೆ ಹೇಗೆ ಹಾಡಲಿಕಡಲೊಳಗೆ ಬೆರೆತ ಆ ನದಿಯಯಾವ ಕಣ್ಣಿನಿಂದ ನಾನು ನೋಡಲಿ೧ ಬಂದವರು ಹೋದವರು ಇದನೆ ತಾನೆಹಾಡಿ ಹೋದರು ಬಿದಿರ ಸೀಳಿದಂತೆತೂತ ಕೊರೆದು ಎದೆಯ ತೆರೆದುಹಾಡಿದರೂ ನಾ ಹೋದರು ಕೇಳದಂತೆ೨ ಕಾಡ ಕರುಣೆ ಹೂವ ಪ್ರೀತಿಜೋಲಿಯ ಲಾಲಿ ಪಿಸ ಮಾತಿನೊಲುಮೆಒಲ್ಲೆನೆಂದರು ಮತ್ತೆ ಮನಕಿಳಿದುತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ೩ ನಮ್ಮವರು ನಿಮ್ಮವರು ಎಂದಿಗೂಹಾಡಿದುದನೆ  ಹಾಡಿ ದಣಿದ ಕಥೆಯೂಹಾಡೊಂದೆ ಇಲ್ಲಿ ಭಾವ ಬೇರೆಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ! […]

ರುಬಾಯಿ

ಶಾಲಿನಿ ಆರ್. ೧.  ಮುಂಗಾರಿನ ಮಳೆಹನಿ      ಇಳೆಗೆ ಇಳಿದ ದನಿ      ನನ್ನ ರಮಿಸುವ ಪ್ರೀತಿ,      ಒಡಲ ಸೋಕಿ ಜೇನ್ಹನಿ… ೨.   ಮಳೆ ಬಂತು ನಾಡಿಗೆ       ತೆನೆ ತಂತು ಬೀಡಿಗೆ       ಅಚ್ಚ ಪಚ್ಚ ಪಯರು,       ಹೊನ್ನೂತ್ತಿ ಸೊಬಗಿಗೆ… ೩.   ಮಳೆಯಿದು ಮಮತೆ ಸೆರಗು       ಭುವಿಯಲೆಲ್ಲ ಹಾಸಿ ಬೆರಗು       ಧಾತ್ರಿ ತಂದಿತು ಒಸೆದು ಪ್ರೀತಿ,       ಮೊಗೆದು ತುಂಬಿ ಸಿರಿ ಸೊಬಗು… ೪.   ಮುಂಗಾರು ಮಳೆ ತಂದ ಒಲವ       ಭಾವ       ಒಡಮೂಡಿದೆ ಇಳೆಯಲೆಲ್ಲ ಜೀವ       ಸುತ್ತಮುತ್ತ ಹಸಿರ ಹೊನಲ ಗಾಳಿ,       ಮೂಡಿತಲ್ಲಿ […]

ಅವನು ಗಂಡು

ಚೇತನಾ ಕುಂಬ್ಳೆ ಬೆಳಕು ಹರಿದೊಡನೆ ಹೊಸ್ತಿಲ ದಾಟುವನುಕತ್ತಲಾವರಿಸಿದೊಡನೆ ಮನೆಯ ಕದವ ತಟ್ಟುವನುಉರಿವ ಬಿಸಿಲು, ಕೊರೆವ ಚಳಿ, ಸುರಿವ ಮಳೆಯನ್ನದೆಹಗಲಿರುಳೂ ದುಡಿಯುವನುಯಾಕೆಂದರೆ, ಅವನು ಗಂಡು…ಜವಾಬ್ದಾರಿಗಳ ಭಾರವನ್ನು ಹೆಗಲಲ್ಲಿ ಹೊತ್ತವನು ಮಡದಿಯ ಪ್ರೀತಿಯಲ್ಲಿ ಅಮ್ಮನ ವಾತ್ಸಲ್ಯವನ್ನರಸುವನುಮಕ್ಕಳ ತುಂಟಾಟಗಳಲ್ಲಿ ಕಳೆದ ಬಾಲ್ಯವನ್ನು ಕಂಡು ಸಂಭ್ರಮಿಸುವನುಮುಗಿಯದ ಹಾದಿಯುದ್ಧಕ್ಕೂ ಕನಸ ಬಿತ್ತುತ್ತಾ ನಡೆಯುವನುಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಾಯಾಕೆಂದರೆ,ಅವನು ಗಂಡುಬೆವರ ಹನಿಯ ಬೆಲೆ ಎಷ್ಟೆಂದುಅರಿತವನು ಸ್ವಭಾವ ಸ್ವಲ್ಪ ಒರಟು,ಆದರೂ ಮೃದು ಹೃದಯಮಾತು ಬಲ್ಲವನೇ ಆದರೂ ಮಿತಭಾಷಿಎದೆಯೊಳಗೆ ಹರಿವ ಒಲವ ಝರಿಕೋಪದೊಳಗೆ ಪ್ರೀತಿಯ ಬಚ್ಚಿಟ್ಟವನುಮನದೊಳಗೆ ಮಧುರ ಭಾವನೆಗಳಿದ್ದರೂಮೌನದಲ್ಲಿಯೇ […]

Back To Top