ಪರಿಧಾವಿ

ಪುಸ್ತಕ ವಿಮರ್ಶೆ

ಪರಿಧಾವಿ

ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ.

ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ  ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. ಹಾಗಾಗಿ ಇತ್ತೀಚಿನ ಕಥೆಗಳು ಏಡ್ಸ ಎಂಬ ಭೀಕರ ಕಾಯಿಲೆಯ ಕುರಿತೋ, ವಿವಾಹ ವಿಚ್ಛೇದನದ ಕುರಿತೋ, ಇಲ್ಲವೇ ಆತ್ಮರತಿಯ ಕುರಿತೋ ಆಗಿದ್ದರೂ ಅವು ಬದಲಾದ ಕಾಲಘಟ್ಟದ ಮಾನವನ ಬದುಕಿನ ರೀತಿಗಳೇ ಆಗಿವೆ. ಇಂತಹ ಸಂಗತಿಗಳು ನಮ್ಮ ಬದುಕಿನಲ್ಲೋ ಇಲ್ಲವೇ ನಮ್ಮ ಸುತ್ತಲಿನ ಜಗತ್ತಿನಲ್ಲಿ ಕಂಡಾಗ ಸಂವೇದನಾಶೀಲವ್ಯಕ್ತಿ ಅದನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಾನೆ. ಸ್ಪಂದನೆಯ ಅಥವಾ ಅಭಿವ್ಯಕ್ತಿಯ ಹತ್ತಾರು ಬಗೆಗಳಲ್ಲಿ ಕಥಾ ಲೋಕ ಹೆಚ್ಚು ಪರಿಣಾಮಕಾರಿಯಾಗಿ, ವಿಸ್ತೃತವಾಗಿ ಘಟನೆಯ ಓರೆಕೋರೆಗಳನ್ನು ಸೂಕ್ಷ್ಮ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಡಲು ಸಹಾಯಮಾಡುತ್ತದೆ. ಹಾಗಾಗಿ ಸಣ್ಣಕಥೆಗಳು ಇಂದಿಗೂ ಸಹೃದಯ ಓದುಗರ ಅಚ್ಚುಮೆಚ್ಚಿನ ಪ್ರಕಾರ.

ಸಂಕಷ್ಟದ ಬದುಕನ್ನು ಸವೆದ ಜೀವನ, ಇಲ್ಲವೇ ಸುತ್ತಮುತ್ತಲಿನ ಜನರ ಪಡಿಪಾಟಲಿಗೆ ತೆರೆದ ಕಣ್ಣಿನಿಂದ ವೀಕ್ಷಿಸುವ ಚಿಕಿತ್ಸಕ ಮನೋಗುಣ ಯಾರಲ್ಲಿ ಇರುವುದೋ ಆ ವ್ಯಕ್ತಿಯ ಜೀವನಾನುಭವ ಗಾಢ ಎಂಬುದನ್ನು ನಮ್ಮ ಹಿರಿಯರು ಒಪ್ಪಿಕೊಂಡಿರುವ ಸಿದ್ಧಾಂತ. ಡಾ.ಅಜಿತ ಹೆಗಡೆಯವರ ಕಥಾ ಸಂಕಲನ ಪರಿಧಾವಿ ಅ ನಿಟ್ಟಿನಲ್ಲಿ ಪ್ರತಿಬಿಂಬಿತವಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅಜಿತ್ ತಮ್ಮ ಚಿಕಿತ್ಸಕ್ ನೋಟದಿಂದ ಇಲ್ಲಿಯ ಕಥೆಗಳನ್ನು ಹಣೆದಿರುವುದು ವೇದ್ಯವಾಗುತ್ತದೆ.

ಸಂಕಲನದಲ್ಲಿ ಮೂರನೇ ಕಥೆ ತಾಯಿ  ಆಶಯದಲ್ಲಿ ಬಹು ಮೌಲಿಕವಾಗಿದೆ. ನಮ್ಮ ಸಂಪ್ರದಾಯಸ್ಥ ಸಮಾಜದ ಗೊಡ್ಡು ಆಚರಣೆಗಳಿಂದ ಕಟ್ಟಿದ ಸಂಬಂಧಗಳಿಗಿಂತ ಹೃದಯಗಳೆರಡು ಒಪ್ಪಿಕೊಂಡ ಪರಿಶುದ್ಧ  ಸಂಬಂಧದ ದೀಘರ್ಾಯುಷ್ಯವನ್ನು ಪ್ರಶ್ತುತ ಪಡಿಸಿದ ರೀತಿ ಬಹಳ ಆಪ್ತವಾಗುತ್ತದೆ. ತಾಯ್ತನ ಎನ್ನುವುದು ಕೂಡಾ ಕೇವಲ ಹೇರುವುದರಿಂದ ಮಾತ್ತ ಬರುವುದು ಎಂಬುದಕ್ಕೆ ತಾಯಮ್ಮ ಅಪವಾದವಾಗುತ್ತಾರೆ. ಅವರ ತಾಯ್ತನ ಅಂತಃಕರಣದ್ದು. ಅವಿವಾಹಿತರಾದ ಪಂಪಯ್ಯ ಮೇಷ್ಟ್ರ ಜೀವನದ ಅನಿವಾರ್ಯತೆಗೆ ಮನೆಗೆಲಸದ ಹೆಂಗಸಾಗಿ ಬಂದ ತಾಯಮ್ಮ ಮಾಗಿದ ಜೀವನದ ಹಾದಿಯಲ್ಲಿ ಮೇಷ್ಟ್ರ ಜೊತೆಯಾಗಿ, ಆನಂತರ ಅವರಿಬ್ಬರಲ್ಲಿ ಬೆಸೆವ  ಬಂಧ  ಜಾತಿಯಲ್ಲಿಯೇ ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೆ ಒಳಗಾದ ಸದಾಶಿವ ಮತ್ತು ಆತನ ಪತ್ನಿಯ ವಿಘಟಿತ ಬದುಕಿನ ರೀತಿಯನ್ನು  ತುಲನಾತ್ಮಕವಾಗಿ  ವಿವೇಚಿಸುವಂತೆ ಮಾಡುತ್ತದೆ. ಮಕ್ಕಳನ್ನು ಹೆಡೆಯದಿದ್ದರೂ ತಾಯಮ್ಮ ತಾಯಿ ಪದಕ್ಕೆ ಅನ್ವರ್ಥಕವಾಗಿ ಕಥೆಯಲ್ಲಿ ಪ್ರತಿಬಿಂಬಿತವಾಗಿರುವುದು ಕೂಡಾ ಗಮನಾರ್ಹ ಸಂಗತಿ. ಗಟ್ಟಿ ಸಂಬಂಧಗಳು ಹುಟ್ಟುವುದು ಹೃದಯಂತರಾಳದಲ್ಲಿ ಹೊರತೂ, ಬಾಹ್ಯ ಚಹರೆ ಅಥವಾ ಒಪ್ಪಂದಗಳ ಮೇಲಲ್ಲ. ಮಾನಸಿಕ ಒಪ್ಪಂದವೇ ನಿಜವಾದ ವಿವಾಹ. ಹಾಗೇ ತಾಯ್ತನವೂ ಕೇವಲ ಶರೀರಜನ್ಯ ಸಾಮಥ್ರ್ಯದಿಂದ ಹುಟ್ಟುವ ಪದವಲ್ಲ ಎಂಬುದನ್ನು ಮನಗಾಣಿಸುತ್ತದೆ ಕಥೆ

ಸಂಕಲನ ಮೊದಲ ಕಥೆ ಆಶ್ಲೇಷ ಈಶ ಎಂಬ ಹೆಸರಿನಿಂದಲೇ ಕಥೆಯುದ್ದಕ್ಕೂ ಮೂಡುವ ಪಾತ್ರ.  ಆಧುನಿಕ ಜಗತ್ತಿನ ಐಶಾರಾಮಿ ಖಾಯಿಲೆಯಲ್ಲಿ ಒಂದಾದ ಏಡ್ಸಗೆ ಒಳಗಾಗಿ ಬದುಕಿದ್ದೂ ಸತ್ತು, ಸತ್ತರೂ ಎರವಾಗಿ ಹೋಗುವ ಪಾತ್ರ.  ಜೀವನದಲ್ಲಿ ಎದುರಾಗುವ ಅದೆಷ್ಟೋ ಬದಲಾವಣೆಗಳು, ಮಾಡುವ ಅಪರಾಧಗಳು ನಮ್ಮ ಸ್ವಯಂಕೃತವಾಗಿರುತ್ತವೆ. ಕೆಲವೊಮ್ಮೆ ಅದೃಷ್ಟ ಕೈ ಹಿಡಿದಂತೆ ಮಾಡಿ ಮಾಯಾಜಾಲದ ಸುಳಿಗೆ ಸಿಕ್ಕಿಸಿ, ಕೊನೆಗೊಮ್ಮೆ ಯಾರಿಗೂ ಬೇಡವಾದ ಜೀವನವನ್ನು ಬಳುವಳಿಯಾಗಿ ನೀಡಿಬಿಡುವುದು. ಹಣದ ಹರಿವು ಅದು ತಂದುಕೊಡುವ ಸವಲತ್ತು  ಸುಖದ ಸುಪ್ಪತ್ತಿಗೆ ಜೊತೆಗೆ ಆಪತ್ತು  ಮತ್ತು ಚಟ್ಟದ ಹಾಸಿಗೆ ಎಲ್ಲವನ್ನೂ ಮನೋಜ್ಞವಾಗಿ ಚಿತ್ರಿಸಿರುವರು. ಅದೂ ಕೂಡಾ ಆಧುನಿಕ ಈ ಜಗತ್ತಿನ ಮಹಾಮಾರಿ ಏಡ್ಸ್ ಎಂಬ ಭೀಕರ ಕಾಯಿಲೆಯೂ ಆಗಿರಬಹುದು. ವೈದ್ಯ ವೃತ್ತಿಯ ಡಾ. ಅಜಿತರಿಗೆ ಇಂತಹ  ನೈಜ ಘಟನೆಗಳು ದಿನದ ಅನುಭವಗಳಾಗಿರುತ್ತವೆ. ಅವುಗಳಿಗೆ ಸಂವೇದನಾಶೀಲ ವೈದ್ಯನೊಬ್ಬನ ಶಬ್ದ ರೂಪದ ಪ್ರತಿಕೃತಿಯಂತಿದೆ ಈ ಕಥೆ.

ಶೀರ್ಷಕಾ ಕಥೆ  ಪರಿಧಾವಿ ಶುದ್ಧ ನೈಸಗರ್ಿಕ ನೆಲೆಗಳನ್ನು ನಾಶ ಮಾಡುತ್ತಿರುವ ಕಾಪರ್ೋರೆಟ್ ಜಗತ್ತಿನ ಕೈವಾಡವನ್ನು ಬಿಂಬಿಸುತ್ತಾ  ಸಾಮಾಜೀಕರಣದ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಹಳೆಯ ಸಂಪ್ರದಾಯ, ಗೊಡ್ಡು ಆಚಾರಗಳನ್ನು ಕಿತ್ತು ಹಾಕಬೇಕೆಂಬ ಸಂದೇಶವಿದೆ. ಜಾತೀಯತೆಯ ಕರಿನೆರಳಿಂದ ಮುಕ್ತಗೊಂಡ ಸಮಾಜ, ಬಂಡವಾಳಶಾಹಿ ಜಗತ್ತಿನ ಕಪಿಮುಷ್ಟಿಯಿಂದ ದೂರನಿಂತು ಸಹಜ ಬದುಕಿಗೆ ತೆರೆದುಕೊಂಡ ಜೀವನ ಖುಷಿಗೆ ಕಥೆಯಲ್ಲಿ ಸ್ಥಾನವಿದೆ. ಕಥಾ ಅಂತ್ಯ ಅದನ್ನೆ ಸ್ಪಷ್ಟಿಕರಿಸುತ್ತದೆ. ಕಾನೇರಿಯ ನಾರಾಯಣ ಹೆಗಡೆಯವರ ಮೊಮ್ಮಗ ಪವನ ಹೆಸರಿಗೆ ತಕ್ಕಂತೆ ಈ ಎಲ್ಲ ಬದಲಾವಣೆಯ ಗಾಳಿ ಹೊತ್ತು ತರುತ್ತಾನೆ. ಇದು ಸಾಮಾಜಿಕ ವ್ಯವಸ್ಥೆಯ ಪುನನರ್ಿಮಾಣದ ಬಹುದೊಡ್ಡ ಆಶಯ ಹೊಂದಿರುವ ಕಥೆ ಎಂದೆನ್ನಿಸುತ್ತದೆ

ಆತ್ಮರತಿ ಕಥೆ ಭಾರತೀಯ ಸಮಾಜ ಇಂದಿಗೂ ಸಹಜವಾಗಿ ಒಪ್ಪಿಕೊಳ್ಳದ, ಅಸಹ್ಯದಿಂದ ಮೂಗುಮುರಿಯುವ ಸಲಿಂಗ ಕಾಮ ಮತ್ತು ಆತ್ಮರತಿಗಳ ಕುರಿತು ಮಾತನಾಡುತ್ತದೆ. ಹೊಸ ಜಗತ್ತಿನ ಬದುಕಿನ ಶೈಲಿಯನ್ನು ಸ್ವಾಗತಿಸುವ ಆಧುನಿಕ ಮನೋಭಾವದ ಕಥೆಗಾರರು ಈ ವಿಷಯದಲ್ಲಿ ಮಾತ್ರ ಕಥೆಯಲ್ಲಿ ನೀಲಾಳನ್ನು  ದುರಂತದ ಪಾತ್ರವಾಗಿ ಚಿತ್ರಿಸಿದಂತಿದೆ. ನೈಸಗರ್ಿಕ ಜಗತ್ತು ಒಪ್ಪಿದ ಗಂಡು ಹೆಣ್ಣುಗಳ ಮಿಲನ ನೀಡಿದ ಸುಖಾನುಭೂತಿಗೂ,ತೃಪ್ತಿಯನ್ನು ನೀಡದ ಆತ್ಮರತಿ ಅಥವಾ ಸಲಿಂಗ ಕಾಮ ನೈಸಗರ್ಿಕ ವಿರೋಧಿ ಎಂಬ ತತ್ವವನ್ನು ಕಥೆ ಹೇಳುತ್ತದೆ. ವಿಕ್ಷಿಪ್ತ ಮನಸ್ಥಿತಿಯನ್ನು ಬಹುಚೆನ್ನಾಗಿ ನಿರ್ವಹಿಸಿದ ಕಥೆ.

ಟೊಮೆಟೋ ಕೆಚಪ್ ಎಂಬ ಕಥೆಯಂತೂ ವಿವಾಹಕ್ಕೆ ಪರಸ್ಪರ ಸಿದ್ಧವಾದ   ಹೃದಯಗಳೆರಡು ನಡೆಸುವ ಸಂಭಾಷಣೆಯಿಂದಲೇ ಸಿದ್ಧಗೊಂಡಿದೆ. ಇದು ಕಥೆಗಾರರ ನೈಜ ಪ್ರತಿಭೆಗೆ ಸಾಕ್ಷಿ. ಹಿಂದಿನ ಕಾಲದಲ್ಲಿ ವಿವಾಹಗಳು ಗುರುಹಿರಿಯರ ಒಪ್ಪಿಗೆಯಿಂದ ವಿವಾಹ ಮಧ್ಯವತರ್ಿಗಳ ನೆರವಿನಿಂದ ನಡೆಯುತ್ತಿದ್ದರೆ ಇಂದು ಆಧುನಿಕ ವೈವಾಹಿಕ ವ್ಯವಸ್ಥೆಯಲ್ಲಿ ಅಂತಜರ್ಾಲದಲ್ಲಿ ಮೆಟ್ರಿಮೋನಿಯಲ್ ಪ್ರೋಫೈಲ್ಗಳ ಮೂಲಕ ಕುದುರುವ ವಿವಾಹಗಳು, ಭವಿಷ್ಯದಲ್ಲಿ ಗಂಡು ಹೆಣ್ಣು ಪರಸ್ಪರ  ಹೊಂದಿಕೊಳ್ಳುವ ಸಂದರ್ಭದಲ್ಲಿ ಗಂಡು ಹೆಣ್ಣು ವಿವಾಹಪೂರ್ವ ಒಬ್ಬರನ್ನೊಬ್ಬರು ಅರಿತುಕೊಳ್ಳಲು ನಡೆಸುವ ಏಕಾಂತದ ಭೇಟಿಗಳು, ವ್ಯಕ್ತಿತ್ವವನ್ನು ಟೊಮೆಟೋ ಕೆಚಪ್ ಮೂಲಕ ಅಥರ್ೈಸಲು ಬಳಸುವ ಉಪಮೆಗಳು, ಹೊಟೆಲ್ಲಿನಲ್ಲಿ ಮೆನು ಆಯ್ಕೆಯ ಮೂಲಕ ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಯಸುವ ಗಂಡು ಹೀಗೆ ವಿನೂತನ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ಆದರೆ ಹೆಣ್ಣನ್ನು ಆರಿಸುವ ಪೂರ್ಣ ಸ್ವಾತಂತ್ರ್ಯವನ್ನು ಗಂಡಿಗೆ ಮಾತ್ರ ನೀಡಿ ಆಧುನಿಕ ಜಗತ್ತು ಸಮಾನತೆಯ ತಳಹದಿ ಅಲ್ಲ ಎಂದು ಬಿಂಬಿಸುವಂತೆ ಗಂಡಿಗೆ ಮಾತ್ರ ಆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದು ಸ್ತ್ರೀ ದೃಷ್ಟಿಕೋನದಿಂದ  ನೋಡಿದಾಗ ಕೊಂಚ ನಿರಾಶೆ ಮೂಡಿಸುತ್ತದೆ.

ಹನ್ನೆರಡು ಕಥೆಗಳ ಈ ಸಂಕಲನದಲ್ಲಿಯ ಸಂಧಾನ ಆಯ ‘ಸಮೀಕರಣ’ ‘ವ್ಯವಚ್ಛೇದ’ ಮುಂತಾದ ಕಥೆಗಳು ಬದುಕಿನ ವೈರುಧ್ಯಗಳನ್ನು ಸಮರ್ಥವಾಗಿ ಹಿಡಿದಿಟ್ಟ ಕಥೆಗಳೆಂದೇ ಹೇಳಬೇಕು.  ವೈವಿಧ್ಯಮಯ ವಿಷಯ ವಸ್ತುಗಳಿಂದ ಗಮನ ಸೆಳೆಯುವ ಇಲ್ಲಿಯ ಕಥೆಗಳು ಕಥನ  ಶೈಲಿಯಲ್ಲಿ ಕೊಂಚ ಅತಿಯಾದ ವಿವರಣೆಗಳು  ಅನಗತ್ಯ ಎನಿಸಿಕೊಳ್ಳುತ್ತವೆ. ಮುನ್ನುಡಿಯಲ್ಲಿ ಖ್ಯಾತ ಕಥೆಗಾರರಾದ ಶ್ರೀಧರ ಬಳಿಗಾರರ ಅಭಿಪ್ರಾಯದಂತೆ ಪಾತ್ರ ಹಾಗೂ  ಕಥಾ ಹಂದರದ ಬೆಳವಣಿಗೆಯಲ್ಲಿ ಆಗಾಗ ಉದ್ದೇಶಪೂರ್ವಕ ಇತಿಮಿತಿಗಳನ್ನು ಹಾಗೂ ಕೆಲವೊಮ್ಮೆ  ಅತೀ ಪ್ರಜ್ಞಾಪೂರ್ವಕವಾಗಿ ಪಾತ್ರಗಳ ಬಳಸಿಕೊಳ್ಳುವುದರಿಂದ ಕೆಲವು ಕಥೆಯ ನಿರೂಪಣೆಯಲ್ಲಿ ಒಂದಿಷ್ಟು ಕೃತಕತೆ. ಹೀಗಿದ್ದೂ ಡಾ. ಅಜಿತರ ಕಥೆಗಳು ಆಪ್ತವಾಗಲು ಕಾರಣ ಅವರು ಆದರ್ಶ ಪಾತ್ರಗಳ ಸೃಷ್ಟಿಗಿಂತ  ವಾಸ್ತವಿಕ ತಮ್ಮ ಸುತ್ತಮುತ್ತಲಿನ ಪಾತ್ರಗಳನ್ನು ಕಥೆಯಲ್ಲಿ ನಿರ್ವಹಿಸುವ ಪ್ರಯತ್ನ ಮಾಡಿದ್ದು. ಇಲ್ಲಿಯ ಕಥೆಗಳು ಇಂದಿನ  ಸಾಮಾಜಿಕ ಲೋಕದ ಮಾನಸಿಕ ವಿಕೃತಿಗಳನ್ನು ಎತ್ತಿ ತೋರಿಸುತ್ತಾ ಕೊನೆಯಲ್ಲಿ ಕನಿಕರದ ಅಂತಃಕರಣಕ್ಕೆ ಸಾಕ್ಷಿಯಾಗುವಂತಹ ಕ್ಲೈಮಾಕ್ಸ ನೀಡುತ್ತವೆ.

**********

ನಾಗರೇಖಾ ಗಾಂವಕರ

One thought on “ಪರಿಧಾವಿ

Leave a Reply

Back To Top