ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ […]

ಯಾತ್ರೆ

ಕವಿತೆ ಯಾತ್ರೆ ರಾಜೇಶ್ವರಿ ಚನ್ನಂಗೋಡು ಮುಗಿವಾಗ ನೀನುನನ್ನೆದೆ ಧುತ್ತಂದುನಿಂದುಮುನ್ನಡೆದಿದೆ.ಎದೆಗಿನ್ನೇನು ದಾರಿ?ಇನ್ನೆಷ್ಟು ಮಂದಿ ನನ್ನವರುನನ್ನ ನಾನಾಗಿಸಿದವರುಹೋದಾಗಲೂ ಹೀಗೇ ಮುನ್ನಡೆಯುತಿರುವುದು…ಅರ್ಥಹೀನವೀ ಯಾತ್ರೆಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆಅಂದವ ಹುಡುಕಿ ಚಂದವ ಹುಡುಕಿನಡೆದಷ್ಟೂ ಹಿಂದಿನಂದುಗಳೇನೀನಿದ್ದಾಗಿನ ಅವರಿದ್ದಾಗಿನಂದುಗಳೇಸೊಗಸೆಂದರಿತೂಮುಂದಡಿಯಿಡುವ ಯಾತ್ರೆನಾಳೆ ಇವನೂ ಅವಳೂ ಇಲ್ಲದಕಂದರಗಳಿಹವೆಂದರಿತೂನಿಲ್ಲಿಸಲಾಗದ ಯಾತ್ರೆಬೆಳಕಿತ್ತ ನೀನಾರಿದಾಗಇನ್ನಾರೂ ಆರುವ ಮುನ್ನನಾನಾರಿದರೇ ಚೆನ್ನವೆಂದನಿಸುವ ಯಾತ್ರೆಹೇಗೆ ಕಲ್ಪಿಸಿಕೊಳಬೇಕು?ಯಾಕೆ ನಡೆಯಲೆ ಬೇಕೀ ಯಾತ್ರೆ?

ವಸುಂಧರಾ

ವಸುಂಧರಾ ಕಾದಂಬರಿ ಕುರಿತು ಬಾಳೆಯ ಹಣ್ಣನ್ನು ತಿಂದವರೆಸೆವರು, ಸಿಪ್ಪೆಯ ಬೀದಿಯ ಕೊನೆಗೆ ಕಾಣದೆ ಕಾಲಿಟ್ಟು ಜಾರುವರು ಅನ್ಯರು,_ ಕಷ್ಟವು ಬರುವುದೇ ಹೀಗೆ. ಎನ್ನುವುದೊಂದು , ಅನುಭವದ ನುಡಿಮುತ್ತು. ನಂಬಿಕೆ ಮತ್ತು ಮೂಡ ನಂಬಿಕೆಯ ನಡುವೆ ಅಪಾರ ವ್ಯತ್ಯಾಸವಿದೆ ಹಿಂದಿನಿಂದಲೂ ಈಗಲೂ ಜನ ಸಮುದಾಯದೊಳಗೆ ಮೂಢನಂಬಿಕೆಯ ಕಾರಣದಿಂದಾಗಿ ಆಗಿ ಹೋಗಿರುವ ಅನಾಹುತಗಳೇನೂ , ಕಡಿಮೆ ಇಲ್ಲ. ಮೊನ್ನೆ ಮೊನ್ನೆ ತಾನೆ ಕೇಳಿದ್ದು , ದೆವ್ವ ಬಿಡಿಸುವೆನೆಂದು  ಹೆಣ್ಣುಮಗಳೊಬ್ಬಳ  ಪ್ರಾಣವನ್ನೇ ಬಲಿತೆಗೆದುಕೊಂಡ ಜ್ವಲಂತ ಉದಾಹರಣೆ ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಜಯಂತಿ […]

“ಬೆಳಕಾಗಲಿ ಬದುಕು”

ಕವಿತೆ ಬೆಳಕಾಗಲಿ ಬದುಕು ಪ್ರೊ.  ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ  ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ  ಕತ್ತಿಯಂಚಿನಲಿ ಕತ್ತರಿಸಿಕೊಂಡು  ಹೆಣವಾಗಿರುವ ಜೀವಕೋಶಗಳ ಮೇಲೆ  ಸಾವೊಂದು ಬದುಕಾಗಿದೆ ನನಗೆ ಬದುಕೊಂದು ಸಾವಾಗಿದೆ ಕೊನೆಗೆ ಪಯಣವಿನ್ನು ಯಾರದೋ ಮನೆಗೆ ನೇತುಹಾಕಿರುವ ಅಂಗಡಿಯೊಳಗೆ  ಒಡಲುಗೊಂಡದ್ದೆಲ್ಲವೂ ಬಿಕರಿಗೆ ಕಾಲು ಕೈ ಕಣ್ಣು ತೊಡೆಗಳೆಲ್ಲ ಮಾಗಿದ ಹಣ್ಣುಗಳ ಬನದ ಬೆಲ್ಲ ತನುವ ತುಂಬಿಕೊಳ್ಳಿ […]

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು […]

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ […]

ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..!

ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್‌ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್‌ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್‌ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ […]

ಗಜಲ್

ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ […]

ದನ ಕಾಯೋದಂದ್ರ ಏನ ಮ್ಮ

ಕಿರುಗಥೆ ದನ ಕಾಯೋದಂದ್ರ ಏ‌ನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್‌ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್‌… ಆಸಮ್‌…ನಾ ಎಮ್ಮೀ […]

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ […]

Back To Top