ಕಾವ್ಯಯಾನ

ಕಾವ್ಯಯಾನ

ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ […]

ಲಹರಿ

ಹೀಗೊಂದು ಕಾಲಕ್ಷೇಪ ರಾಮಸ್ವಾಮಿ ಡಿ.ಎಸ್. ಹೀಗೊಂದು ಕಾಲಕ್ಷೇಪ ಕಾಲ ಚಲಿಸುತ್ತಲೇ ಇದೆ. ಭೂಮಿ ಚಪ್ಪಟೆಯಾಗಿರದೆ ದುಂಡಗಿರುವ ಕಾರಣ, ಸಮಯ ಅನ್ನೋದು ಪೂರ್ವದಿಂದ ಸುರುವಾಗಿ ಪಶ್ಚಿಮಕ್ಕೆ ಹೋದ ಹಾಗೆ ಸೂರ್ಯನ ಚಲನೆಗೆ ತಕ್ಕಂತೆ ವ್ಯತ್ಯಾಸವಾಗುವುದು ಸಹಜ. ಪೂರ್ವದ ದೇಶಗಳನ್ನು ಬೆಳಗಿದ ಬೆಳಕಿನ ಎಂಜಲು ನಿಧಾನವಾಗಿ ಪಶ್ಚಿಮದ ದೇಶಗಳಿಗೆ ಬೀಳುತ್ತೆ. ಆದರೆ ಪಾಶ್ಚಿಮಾತ್ಯರ ಪ್ರಭಾವ ಅದ್ಯಾಕೋ ಪೂರ್ವದ ದೇಶಗಳ ಮೇಲೆ ಹೆಚ್ಚಾಗುತ್ತಿರುವ ಕಾರಣ ಪೂರ್ವದ ಕಾಲದಲ್ಲೇ ಹೊಳೆದ ಜ್ಞಾನವನ್ನು ಪೂರ್ವ ದೇಶದ ಜನ ಮರೆತು ಪಾಶ್ಚಿಮಾತ್ಯರ ರೀತಿ ರಿವಾಜು ಅನುಕರಿಸಿದ […]

ಕಾವ್ಯಯಾನ

ನಮ್ಮ ನಡುವಿನ ಅಂತ ವೀಣಾ ರಮೇಶ್ ಎಲ್ಲಾ ದಿನಗಳೂ ಖಾಲಿ ಇದ್ದರೂ ಮನಸಿನ ದಾರಿಯಲಿ ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು ಕಲ್ಲುಗಳಿಲ್ಲ ಎಡವಲು ಬರವಿರದಿದ್ದರೂ ನಿನ್ನ ನೆನಪಿಗೆ ಬೇಸರವೆನಿಸಿದೆ ಮನಸಿಗೆ ಗೆಳತೀ ಎಲ್ಲೆಲ್ಲೂ ನೀ ಸಿಗದೆ … ಯಾಕೆ ಸಮಾನಾಂತರ ರೇಖೆಗಳಾಗಿದ್ದೇವೆ ನಡುವೆ ಎಷ್ಟೊಂದು ಅಂತರದ ಅರಿವು, ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ, ಮಾತು, ಮೌನಗಳಲೂ ಬಿಗಿಅಂತರವೇ ಗೆಳತೀ….. ಮನಸಿನಲಿ ಭಾವನೆಗಳ ಕುಟ್ಟಿ ಪುಡಿ ಮಾಡಿರುವೆ ಆದರೆ ಮೊಳಕೆಯೊಡೆದ, ಹೃದಯ ತಟ್ಟುವ , ಉಸಿರು ಕಟ್ಟುವ, ನಿನ್ನದೆ […]

ಕಾವ್ಯಯಾನ

ನಗುವ ತೊಡಿಸಲೆಂದು ಶಾಲಿನಿ ಆರ್. ತಾಳ್ಮೆ ಕಳಕೋತಿದಿನಿ ದಿನದಿಂದ ದಿನಕ್ಕೆ, ಮರೆತೆನೆಂದರು ನೆನಪ ನೋವ ಎಳೆಯ ನೂಲುತಿದೆ ಗೆಳೆಯ, ಬೇಡ ಎನಗಿದು ಬೇಸರದ ಹೊದಿಕೆ ಸ್ವಚ್ಛಂದ ಹಕ್ಕಿಯಿದು ನಭದ ನೀಲಿಯಲಿ ಹಾರುವ ಬಯಕೆ, ಒಲವ ಮಳೆಯಿದು ನನಗಾಗಿ ಕಾಯುತಿದೆ, ಬಣ್ಣದ ಕುಂಚಗಳು ತುಂಟನಗೆ ಬೀರುತಿದೆ, ಅಂಕುಡೊಂಕಿನ ನವಿಲು, ಬಿಂಕ ತೋರಿಅಣಕಿಸುತಿದೆ, ಮನದ ಸಾರಂಗ ಮನಸಾರೆ ತಪಿಸುತಿದೆ, ಕಳೆದ ನೆನ್ನೆಗಳು ನಾಳೆಗಳ ಹುಡುಕುವಂತೆ ಬಾಗಿದ ಬೆನ್ನಿಗಿದು ನೋವಿನ ಕುಣಿಕೆ, ನಾ ಒಲ್ಲೆ ಗೆಳೆಯ ನಾಳೆಯ ಸೂರ್ಯನಿಗೆ ಸುಪಾರಿ ಕೊಟ್ಟು […]

ಮಕ್ಕಳ ಹಾಡು

ನಮ್ಮಯ ಬದುಕು ಮಲಿಕಜಾನ ಶೇಖ ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರಿವೆ ಎಂದಳು ಮಕ್ಕಳ-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತೆಲೆಯಲಿ ಫುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರಿವೆ ಎಂದನು, ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರಿವೆ ಎಂದನು, ಬಂಧು-ಬಳಗವನು. ಗುಬ್ಬಕ್ಕಾ ಬಂದಳು […]

ಕಾವ್ಯಯಾನ

ಶ್ವೇತಾಂಬರಿ ಸಿಂಧು ಭಾರ್ಗವ್ ಕನಸು ಕಂಗಳ ಚೆಲುವೆ ನಾನು ಬರುವೆನೆಂದು ಹೋದೆ ನೀನು ಮುಗಿಲು ತುಂಬ ಬೆಳ್ಳಿ ಮೋಡ ಕರಗಿ ಬೀಳೋ ಹನಿಯ ನೋಡ ಕಂಬನಿಯ ಒರೆಸುವವರಿಲ್ಲ ಮನದ ಮಾತಿಗೆ ಕಿವಿಗಳಿಲ್ಲ ಹಾರೋ ಹಕ್ಕಿಗೂ ಇದೆ ಗೂಡು ಪ್ರೀತಿ ಹಕ್ಕಿಗಿಲ್ಲಿ ಗೂಡು ಇಲ್ಲ ಒಂಟಿ ಮನಕೆ ಜೊತೆಯಾದೆ ನೀನು ನಗುವ ನೀಡಿ ಹೋದೆಯೇನು ಮಾತು ಮರೆತ ಮನವು ನನ್ನದು ಮಾತು ಕಲಿಸಿ ನಡೆದೆ ನೀನು ಹತ್ತು ಹದಿನಾರು ಕನಸುಗಳು ಮತ್ತೆ ಮೂರು ನನಸುಗಳು ಸುತ್ತ ನಗುವ ಸುಮಗಳು […]

ಕಾವ್ಯಯಾನ

ಗಝಲ್ ವಿನಿ ಬೆಂಗಳೂರು ಪ್ರಕೃತಿಯೇ ತಾನಾಗಿ ಸೌಂದರ್ಯ ತುಂಬಿದವಳು ತಾಯಿ ಭೂಮಿಯೇ ಅವಳಾಗಿ ಭಾರವನು ಹೊತ್ತವಳು ತಾಯಿ ಸಾವಿಗೂ ಹೆದರದೆ ಹೆರಿಗೆ ನೋವ ನುಂಗುವಳು ತಾಯಿ ಸಾವಿರ ಕನಸು ಕಂಡು ಮಗುವಿನ ಒಳಿತ ಬಯಸುವವಳು ತಾಯಿ ಭವಿಷ್ಯದ ಉತ್ತಮ ವ್ಯಕ್ತಿಯಾಗಲು ಶ್ರಮಿಸುವಳು ತಾಯಿ ಅಕ್ಷರೆ ಪ್ರೀತಿ ಮಮತೆಯ ಧಾರೆ ಎರೆದು ಬೆಳೆಸುವಳು ತಾಯಿ ತನ್ನೆಲ್ಲ ನೋವ ಮರೆತು ನಗುತ ಮುದ್ದು ಮಾಡುವವಳು ತಾಯಿ ಕಷ್ಟವೆಲ್ಲವನು ತಾನೆ ಅನುಭವಿಸುತ ತನ್ನ ಕುಡಿಗಾಗಿ ದುಡಿದವಳು ತಾಯಿ ತನ್ನೆಲ್ಲ ವಾತ್ಸಲ್ಯವನು ಉಣಿಸಿ […]

ಕಾವ್ಯಯಾನ

ವೈರಾಣು-ಪರಮಾಣು ಉಮೇಶ್ ಮುನವಳ್ಳಿ ಕೆಟ್ಟು ಕೆರವಾದ ಮನಸ್ಥಿತಿಯ ಗುಟ್ಟು, ರಟ್ಟು! ಜತನಮಾಡಿ ಇಟ್ಟಿದ್ದು, ಹಿಡಿ ಹಿಟ್ಟು, ಹಾಲು, ಔಷಧಿ, ಸೋಪು, ಸ್ಯಾನಿಟೈಸರು. ಬೀದಿಗೆ ಬಿದ್ದಿದ್ದು, ಲಿಪ್‌ಸ್ಟಿಕ್, ಪೌಡರ, ಪೇಂಟು, ಫ್ರೆಶ್ನರು! ಗುಡಿ-ಗುಂಡಾರ, ಮಸೀದಿ, ಚರ್ಚು ಸ್ಥಬ್ದ ಅರಿವಿನ ಆಸ್ಧಾನದಲಿ ಮನಸ್ಸು ನಿಶ್ಶಬ್ದ! ತಪ್ಪಿನ ಅರಿವು, ಒಪ್ಪಿನ ಹುಡುಕಾಟ, ಒಪ್ಪತ್ತಿನ ಊಟದ ಹೊಂದಾಣಿಕೆ. ಬೆಳೆದವನ ಮಾಲು, ಮನೆ ಬಾಗಿಲಿಗೆ! ದಲ್ಲಾಳಿಗಳ ಗಲ್ಲಾಪೆಟ್ಟಿಗೆ ಲೂಟಿ. ದೂರದ ಪಯಣ, ದೂರ, ಒಬ್ಬರಿಗೊಬ್ಬರು ದೂರ ದೂರ. “ನಮ್ಮ ಹಳ್ಳಿ ಊರ ನಮಗ ಪಾಡ, […]

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಜುಲ್ ಕಾಫಿ಼ಯಾ ಗಜ಼ಲ್………….. ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ? ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ […]

ಕಾವ್ಯಯಾನ

ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ […]

Back To Top